ರಾಜಕುಮಾರ್ ನಿಧನಾರಾದಾಗ ನಡೆದ ರೀತಿಯ ಘಟನೆಗಳೇ ಮತ್ತೆ ವಿಷ್ಣು ಸಾವಿನ ಸಂದರ್ಭದಲ್ಲಿ ನಡೆದಿವೆ. ಯಾರೂ ಪ್ರಾಣಕಳೆದುಕೊಂಡಿಲ್ಲ ಎಂಬುದೊಂದು ಮಾತ್ರ ಸಮಾಧಾನ. ಆದರೆ ಆಸ್ತಿಪಾಸ್ತಿ ಹಾನಿ ಯಾರಪ್ಪನ ಹೊಣೆ? ನಿಜವಾದ ಅಭಿಮಾನಿಗಳು ಹೀಗೆ ಮಾಡಲು ಸಾಧ್ಯವೆ? ರಜೆ ಸಿಕ್ಕ ಕೂಡಲೇ ಸಿಕ್ಕಾಪಟ್ಟೆ ಕುಡಿದು ತೂರಾಡುತ್ತ ಅಸಹ್ಯವಾಗಿ ಕಿರುಚಾಡುತ್ತ ಅಂಗಡಿಗಳಿಗೆ ಕಲ್ಲು ಹೊಡೆಯುವ ಇವರು, ಈಗ ಮಾಡಿರುವುದು ರಾಜ್ಯದ ಅಪಮಾನ.
ಇವರನ್ನು ಅಭಿಮಾನಿಗಳೆಂದು ಯಾಕಾದರೂ ಕರೆಯಬೇಕು?
December 31, 2009
ಅವರೇನು ಮಾಡಿದರು?, ವಿಚಾರ miscrents, vishnuvardhan death violence Leave a comment
see ಅಶ್ವತ್ಥ್…
December 30, 2009
ಹಿಂದಿನ ಕಾಲದ ಲೆಟರ್ ಗಳು
December 29, 2009
ಐತಿಹಾಸಿಕ, ಫೋಟೋ ಫಿನಿಶ್, ಬಹುಪರಾಕ್ 1970 letter, amma, grandpa, hand writing, kannada, language Leave a comment
ಅಂದಕಾಲತ್ತಿಲ್ ಬೆಂಕಿಪೊಟ್ಟಣಗಳನ್ನು ನೋಡಿದ್ದೀರಾ?
December 26, 2009
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಫೋಟೋ ಫಿನಿಶ್, ಬಹುಪರಾಕ್ collection, high school, hobby, match box 2 Comments
ಮಿಡ್ಲ್ ಸ್ಕೂಲ್ ಹಾಗೂ ಹೈಸ್ಕೂಲ್ ನಲ್ಲಿರುವಾಗ ಬೆಂಕಿಪೊಟ್ಟಣಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಸುಮಾರು 1000 ಬೆಂಕಿಪೊಟ್ಟಣಗಳನ್ನು ಸಂಗ್ರಹಿಸಿದ್ದೆ. ತಿಪ್ಪೆಗುಂಡಿಯಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್ ವರೆಗೂ ಎಲ್ಲವನ್ನೂ ಶೋಧಿಸಿ ಬೆಂಕಿಪೊಟ್ಟಣಗಳನ್ನು ಹುಡುಕುತ್ತಿದ್ದೆ. ಮೊನ್ನೆ ಅಟ್ಟದ ಮೇಲಿನ ಸಾಮಾನು ತೆಗೆಯುತ್ತಿದ್ದಾಗ ನನ್ನ ಹೈಸ್ಕೂಲು ದಿನದ ಬೆಂಕಿ ಪೊಟ್ಟಣಗಳು ಮತ್ತೆ ಕಣ್ಣಿಗೆ ಬಿದ್ದವು. ನಿಮಗೂ ಇವು ನೆನಪಿರಬಹುದು.
ವಜ್ರದ ರಸವನ್ನು ಎರಕ ಹೊಯ್ದ ಮೈಕಟ್ಟು
December 25, 2009
ರೆಫರೆನ್ಸ್ ashwaghosha, satyakama 4 Comments
ಅಶ್ವಘೋಷ, ಸತ್ಯಕಾಮರ ಕೃತಿ. ಅದರಲ್ಲಿನ ಮೊದಲ ಪುಟದ ಸಾಲುಗಳು ನನ್ನನ್ನು ತೀರ ಕಾಡಿದವು. ಅವು ಹೀಗಿವೆ.
ವಜ್ರದ ರಸವನ್ನು ಎರಕ ಹೊಯ್ದ ಮೈಕಟ್ಟು.
ಅಗಲವಾದ ಎದೆ, ನೀಳ ತೋಳುಗಳು.
ಎತ್ತರದ ನಿಲುವು, ಎಷ್ಟು ನೋಡಿದರೂ ಸಾಲದ ಚೆಲವು…
ತಮಗೆ ಕಣ್ಣಿದ್ದುದು ಸಾರ್ಥಕವಾಯಿತು,
ಇದು ನೋಡಿದ ಹಲವರ ಉಲ್ಲೇಖ.
ದಾರಿ ನಡೆಯುವವರೆಲ್ಲ ತಡೆದು ನಿಂತು ನೋಡುತ್ತಾರೆ. ನೋಡಿದ ಜನರ ತಲೆಯೊಳಗಿನ ಚಕ್ಕಕ್ಕೆ ಹೊಸಗತಿ. ನೋಡದ ಹಲವರಿಗೆ ಕುತೂಹಲ. ಹುಡುಗಿಯರಿಗೆ ಇವನೊಬ್ಬ ಇಮ್ಮಡಿ ರತಿಪತಿ.
ಈ ಹಾದಿಗೆ ಇವನು ಬಂದದ್ದು ಇಂದೇ. ಯಾರ ಕಣ್ಣೂ ಈ ಪುರುಷಸಿಂಹನನ್ನು ಹಿಡಿದು ನಿಲ್ಲಿಸುವುದಿಲ್ಲ. ಹಾಗೆಯೇ ಮುಂದೆ ಮುಂದೆ ಸಾಗಿದ್ದಾನೆ. ಈಗತ ಈತ ನಡೆದದ್ದು ನಗರದ ಒಂದು ಅಂಚಿನಲ್ಲಿ, ಅಲ್ಲ, ಸೆರಗಿನಲ್ಲಿ.
ಇದು ನಿಜವಾಗಿಯೂ ಸಾಕೇತದ ಸೆರಗು. ಸಾಕೇತದ ಆಕರ್ಷಕ ವಸ್ತುಗಳು ಇಲ್ಲಿವೆ. ನಗರದ ಸೌಂದರ್ಯದ ಭಂಡಾರವೇ ಇಲ್ಲಿದೆ. ಆತ ನಡೆಯುತ್ತಿದ್ದಂತೆಯೇ ಗಕ್ಕನೆ ನಿಂತ. ಸಿಂಹ ಚಕಿತವಾಗಿತ್ತು. ನಿಂತ ಎನ್ನುವುದರೊಳಗಾಗಿಯೇ ಮುಂದೆ ಬಂದಿದ್ದ. ಹಿಂದೆ ನೋಡಿದ. ಅದು ಸಿಂಹಾವಲೋಕನ.
ಅವನೇ ಶ್ರುತಿಸ್ತೋಮ, ಅಶ್ವಘೋಷ.
ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….
December 24, 2009
Media breaking news, death news, journalist's challenge 3 Comments
ಇದು ಪ್ರತಿಯೊಬ್ಬ ಪತ್ರಕರ್ತನ ಬದುಕಿನ ಅನಿವಾರ್ಯ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ….ಸಾವಿನ ಸುದ್ಧಿಯನ್ನು ಖಚಿತಪಡಿಸುವುದು. “ಇಂತಿಂಥವರು, ಇಂತಿಂಥ ಸಮಯಕ್ಕೆ ಹಿಂಗಿಂಗಾಗಿ, ಹೆಂಗೆಂಗ್ ಇದ್ರೋ, ಹಂಗಂಗೆ ಸಾವನ್ನಪ್ಪಿದ್ದಾರೆ” ಎಂಬ ಢಂ ಢಂ ಸುದ್ದಿ ಬಂದುಬಿಡುತ್ತದೆ. ಚೀಫ್ ಗೆ ಬಂದ ಯಾವುದೋ ಫೋನ್ ಕರೆ, ಪತ್ರಕರ್ತನ ಗೆಳೆಯ ದೂಕಿದ ಪ್ರಶ್ನಾರ್ಥಕ ಚಿಹ್ನೆಯಿರುವ ಎಸ್ಎಂಎಸ್, ಆಫೀಸಿನ ಸೆಕ್ಯುರಿಟಿ ಗಾರ್ಡ್ ಉದುರಿಸಿದ ಅಣಿಮುತ್ತು, “ಆ ಚಾನಲ್ ನಲ್ಲಿ ಈಗಾಗಲೇ ಅದನ್ನು ಬ್ರೇಕಿಂಗ್ ಹೊಡೆಯುತ್ತಿದ್ದಾರಂತೆ” ಎಂಬ ಗಾಳಿ ಸುದ್ದಿ – ಹೀಗೆ ಯಾವುದಾದರೊಂದು ರೂಪದಲ್ಲಿ ಈ ಸಾವಿನ ಸುದ್ದಿಯೆಂಬುದು ಪತ್ರಕರ್ತನ ಕೊರಳಿಗೆ ಬೀಳುತ್ತದೆ. ನಂತರ ನಡೆಯುವುದೇ ಅದನ್ನು ಖಚಿತಪಡಿಸಿಕೊಳ್ಳುವ ದೊಂಬರಾಟ. ಪ್ರಿಂಟ್ ಮೀಡಿಯಾಗಿಂತ ಟಿವಿ ಮೀಡಿಯಾ ಪತ್ರಕರ್ತನಿಗೆ ಇದು ಹೆಚ್ಚಿನ ಸವಾಲು. ಯಾಕೆಂದರೆ “ಈಗಾಗಲೇ ಆ ಚಾನಲ್ ನಲ್ಲಿ ಬ್ರೇಕಿಂಗ್ ಹೊಡೆಯುತ್ತಿದ್ದಾರೆ” ಎಂಬ ಗಾಳಿ ಸುದ್ದಿ ಬೇರೆ ಬಂದಿರುತ್ತದ್ದಲ್ಲ…ಅದನ್ನು ಖಚಿತಪಡಿಸಿಕೊಳ್ಳೋಣವೆಂದರೆ ಈತ ಯಾವುದೋ ಸಂತೆಯಲ್ಲಿದ್ದಾನೆ. ಅವರು ಬ್ರೇಕಿಂಗ್ ಹೊಡೆಯುತ್ತಿದ್ದಾರೋ ಇಲ್ಲವೋ ಅನ್ನುವುದನ್ನು ಖಚಿತಪಡಿಸುತ್ತ ಕೂರುವುದಕ್ಕಿಂತ, ಸಾವಿನ ಸುದ್ದಿಯನ್ನೇ ಖಚಿತಪಡಿಸಿಕೊಂಡರೆ ಉತ್ತಮ ಎಂಬ ಪರಿಸ್ಥಿತಿ. ಒಮ್ಮೊಮ್ಮೆಯಂತೂ ಐಶ್ವರ್ಯ ರೈ, ಸಲ್ಮಾನ್ ಖಾನ್ ಮುಂತಾದ ಅತೀ ಅತೀ ಅತೀ ಇಂಪಾರ್ಟಂಟ್ ವ್ಯಕ್ತಿಗಳ ಸುದ್ದಿಯೇ ಹೀಗೆ ಬಂದು ಬಿಡುತ್ತದೆ. ಅದು ಎಷ್ಟರಮಟ್ಟಿಗೆ ಹಬ್ಬಿರುತ್ತದೆಂದರೆ ಅದನ್ನು ಕೇಳಿ ಕೇಳಿ ಒಂದು ಹಂತದಲ್ಲಿ ಪತ್ರಕರ್ತನಾದವನು ಸುದ್ದಿಯನ್ನು ಖಚಿತಪಡಿಸಿಕೊಳ್ಳುವದರ ಬದಲಾಗಿ ಆಯಾ ವ್ಯಕ್ತಿಗಳ ಬಯೋಡೇಟಾ ಸಂಗ್ರಹದಲ್ಲಿ ತೊಡಗಿಕೊಂಡು ಬಿಡುತ್ತಾನೆ.
ಇನ್ನು ಸಾವಿನ ಸುದ್ದಿಯನ್ನು ಖಚಿತಪಡಿಸಿಕೊಳ್ಳುವಾಗಲಂತೂ ತೀರ ಕೇರ್ ಫುಲ್ ಇರಬೇಕಾಗುತ್ತದೆ. “ಇಂತಹವರು ಸತ್ತರಂತೆ, ಹೌದೆ?” ಎಂದು ಫೋನಿನಲ್ಲಿ ಪತ್ರಕರ್ತ, ತನ್ನ ಸೋರ್ಸ್ ಗೆ ಕೇಳಿದ್ದರೆ, ಆ ಸೋರ್ಸ್ ಗೆ ‘ಹೌದೆ?’ ಕೇಳಿರುವುದೇ ಇಲ್ಲ. ಕೇವಲ “ಇಂತಹವು ಸತ್ತರಂತೆ” ಎಂದಷ್ಟೇ ಕೇಳಿರುತ್ತದೆ. ಆ ಸೋರ್ಸೋ, ಈ ಮರಣವಾರ್ತೆಯನ್ನು ತಾನೇ ಮೊದಲು ತನ್ನ ಪರಿಚಯದವರಿಗೆ ತಿಳಿಸಿಸಬೇಕು ಎಂಬ ಉತ್ ಉತ್ ಉತ್ ಉತ್ಸಾಹದಲ್ಲಿ ಪತ್ರಕರ್ತನ ಫೋನ್ ಕಟ್ ಮಾಡಿದವನೇ, so and so expired. ಎಂದು ಮೇಸುಜು ಕುಟ್ಟಿ ಸೆಂಡ್ ಟು ಆಲ್ ಆಪ್ಶನ್ ಒತ್ತಿಬಿಟ್ಟಿರುತ್ತಾನೆ. ಬರಗಾಲದಲ್ಲಿ ಅಧಿಕಮಾಸ ಅಂತ ಇದಕ್ಕೇ ಹೇಳುತ್ತಾರೆ.
ಒಮ್ಮೆ ಹೀಗಾಯಿತು. ಕೆಲ ವರ್ಷಗಳ ಹಿಂದಿನ ಮಾತು. ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಖ್ಯಾತನಾಮರೊಬ್ಬರು ತೀರಿಕೊಂಡಂರಂತೆ ಎಂಬ ಸುದ್ಧಿ ನ್ಯಾಷನಲ್ ಮೀಡಿಯಾದ ಪತ್ರಕರ್ತೆಯೊಬ್ಬಳಿಗೆ ಬಂತು. ಈ ನ್ಯಾಷನಲ್ ಮೀಡಿಯಾದವರಿಗೆ ಯಾವಾಗಲೂ ಸುದ್ದಿಯ ಮೂಲವನ್ನೇ ಹುಡುಕುವ ಹಂಬಲ. ಹೀಗಾಗಿ ಈ ಪತ್ರಕರ್ತೆ ಸೀದಾ ಆ ಖ್ಯಾತನಾಮರ ಮನೆಯ ಲ್ಯಾಂಡ್ ಲೈನಿಗೆ ಫೋನಾಯಿಸಿ ಬಿಟ್ಟಿದ್ದಾಳೆ. ಅಲ್ಲಿ ಯಾರೋ ಒಬ್ಬರು ಫೋನ್ ರಿಸೀವ್ ಮಾಡಿದ್ದಾರೆ. ಈಕೆ ತಾನು ಹಿಂಗಿಂಗೆ, ತನ್ನ ಹೆಸರು ಹಂಗಂಗೆ, ತಾನು ಇಲ್ಲಿಲ್ಲಿ ಕೆಲಸ ಮಾಡುತ್ತಿರುವ ಜರ್ನಲಿಸ್ಟು ಅಂದ ತಕ್ಷಣ ಆ ಕಡೆಯ ಧ್ವನಿ, ಯದ್ವಾ ತದ್ವಾ ಬಯ್ಯಲು ಆರಂಭಿಸಿದೆ. “ಹೌದಮ್ಮ, ನಾನು ಬದುಕಿರುವಾಗಲೇ ನೀವೆಲ್ಲ ನನ್ನ ಕೊಂದುಬಿಡ್ತಾ ಇದೀರಲ್ಲ…ನನ್ನ ಸಾವಿನ ಸುದ್ದಿ ನನಗೂ ಬಂದಿದೆ. ಇಂತಹ ಸುದ್ದಿಗಳನ್ನು ಹರಿಯ ಬಿಡೋರು ನೀವೇ….ಮತ್ತೆ ಫೋನ್ ಮಾಡಿ ಕನ್ ಫರ್ಮಾ ಅಂತ ಕೇಳೊರೂ ನೀವೇ… ಯಾಕೆ ನಂಗೆ ಹಿಂಗೆಲ್ಲ ತೊಂದ್ರೆ ಕೊಡ್ತಾ ಇದೀರಾ?” ಎಂದು ಎಗರಾಡಿದೆ. ಈಕೆ ಸಮಾ ಉಗಿಸಿಕೊಂಡು ಫೋನ್ ಇಟ್ಟಿದ್ದಾಳೆ.
ಇನ್ನು ಬೇರೆ ರೀತಿ ಎಡವಟ್ಟುಗಳಾಗುವ ಸಂಭವವೂ ಇರುತ್ತದೆ. ಪತ್ರಕರ್ತನಿಗೆ ಶೇ. 99 ಪ್ರತಿಶತ ಗೊತ್ತಿರುತ್ತದೆ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ ಎಂದು. ಆದರೆ ಆ ಒಂದು ಪ್ರತಿಶತ ಚಾನ್ಸ್ ಆದರೂ ಯಾಕೆ ತೆಗೆದುಕೊಳ್ಳಬೇಕು ಎಂದುಕೊಂಡು ಮತ್ತಷ್ಟು ಕ್ರಾಸ್ ಚೆಕ್ ಮಾಡ್ತಾ ಕೂತುಬಿಟ್ಟಿರುತ್ತಾನೆ. ಅದರಲ್ಲಿ ಐದು ನಿಮಿಷ ಕಳೆದುಹೋಗಿಬಿಟ್ಟಿರುತ್ತದೆ. ಅಷ್ಟರಲ್ಲಿ ವೈರಿ ಚಾನಲ್ ನಲ್ಲಿದ್ದ ಹುಡುಗ ಹಿಂದೆ ಮುಂದೆ ನೋಡದೆ ಸುದ್ದಿ ಏರ್ ಮಾಡಿಬಿಟ್ಟಿರುತ್ತಾನೆ. ಈ ಪತ್ರಕರ್ತನಿಗೆ ಚೀಫ್ ನ ಕೆಂಗಣ್ಣೇ ಗತಿಯಾಗುತ್ತದೆ.
ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….
ಅಂಕಿತ ಪುಸ್ತಕ ದ ಪಾಕೆಟ್ ಡೈರಿ
December 23, 2009
ಫೋಟೋ ಫಿನಿಶ್, ಬಹುಪರಾಕ್ 2010 pocket diary, ankita pustaka Leave a comment
1971 ನೇ ಇಸ್ವಿಯ ದಿನಸಿ ರೇಟ್ ಹೀಗಿತ್ತು…
December 22, 2009
ವಿಚಾರ 1971, chickmagalore, grocery list, koppa 4 Comments
ಊರಿನಲ್ಲಿ ಮೊನ್ನೆ ಮನೆ ಕ್ಲೀನ್ ಮಾಡುತ್ತಿರಬೇಕಾದರೆ ಅಮ್ಮನಿಗೆ ಅವಳೇ ಬರೆದ ದಿನಸಿ ಸಾಮಾನಿನನ ಲಿಸ್ಟ್ ಸಿಕ್ಕಿದೆ. ಡೇಟ್ ನೋಡಿ ಅವಳೇ ಬೆಚ್ಚಿಬಿದ್ದಿದ್ದಾಳೆ. ಕಾರಣ ಅದು ಜೂನ್ 12, 1971 ರ ಡೇಟ್ ತೋರಿಸುತ್ತಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಯಾವುದೋ ಅಂಗಡಿಯಿಂದ ಸಾಮಾನು ತರಿಸಲಾಗಿದೆ. ವಿಶೇಷವೆಂದರೆ ಈಗ ಶತಕದ ಸುತ್ತಮುತ್ತ ಗಿರಕಿ ಹೊಡೆಯುತ್ತಿರುವ ತೊಗರಿಬೇಳೆ, ಉದ್ದಿನ ಬೇಳೆ ರೇಟ್ ಗಳು ಪೈಸೆಯ ಲೆಕ್ಕದಲ್ಲಿವೆ. ಜೊತೆಗೆ ಇತರ ವಸ್ತುಗಳ ಬೆಲೆಗಳೂ ಬೆರೆಗುಗೊಳಿಸುವಂತಿವೆ. ನಿಮಗಾಗಿ ದಿನಸಿ ಲಿಸ್ಟ್ ಇಲ್ಲಿದೆ.
©ನಾನು
ಹಾಗೆ ಮಾತನಾಡಿದ್ದಕ್ಕೆ ನನಗೆ ವಿಷಾದವಿದೆ…
December 21, 2009
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ವಿಚಾರ call centre, net bill, reliance net connect 4 Comments
ಎರಡು-ಮೂರು ತಿಂಗಳ ಹಿಂದೆ ರಿಲಯನ್ಸ್ ನೆಟ್ ಕನೆಕ್ಟ್ ಟರ್ಮಿನೇಟ್ ಮಾಡಿ ಬಿಎಸ್ಎನ್ಎನ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಸುಮಾರು ಮೂರು ವರ್ಷಗಳ ಕಾಲ ರಿಲಯನ್ಸ್ ನೆಟ್ ಕನೆಕ್ಟ್ ಬಳಸಿದ್ದೆ. ಸರ್ವಿಸ್ ತುಂಬಾ ನಿಧಾನವಾಗಿತ್ತಲ್ಲದೆ, ಸಿಕ್ಕಾಪಟ್ಟೆ ಬಿಲ್ ಬರುತ್ತಿತ್ತು. ಹೀಗಾಗಿ ಕೊನೆಗೂ ಬೇಸತ್ತು ಅದನ್ನು ಟರ್ಮಿನೇಟ್ ಮಾಡಿದೆ. ಈ ಮೂರು ವರ್ಷಗಳಲ್ಲಿ ಒಂದೆರಡು ಬಾರಿ ಬಿಟ್ಟರೆ ಎಂದಿಗೂ ಬಿಲ್ ತುಂಬಲು ತಡಮಾಡಿದವನಲ್ಲ. ಟರ್ಮಿನೇಟ್ ಮಾಡುವಾಗ ಕೂಡ ಆ ತಿಂಗಳ ಬಿಲ್ ಸೇರಿದಂತೆ ಅಲ್ಲಿಯವರೆಗೆ ಬಳಸಿದ್ದ ಬಿಲ್ ಮೊತ್ತ ತುಂಬಿ ಟರ್ಮಿನೇಟ್ ಮಾಡಿದೆ. ಟರ್ಮಿನೇಟ್ ಮಾಡುವ ಸಂದರ್ಭದಲ್ಲಿ ರಿಲಯನ್ಸ್ ಸಿಬ್ಬಂದಿ, ಟರ್ಮಿನೇಟ್ ಆಗಲು ಒಂದು ದಿನ ಹಿಡಿಯುತ್ತದೆಂದೂ, ಮತ್ತೆ ನೆಟ್ ಕನೆಕ್ಟ್ ಬಳಸಬಾರದೆಂದು ಮನವಿ ಮಾಡಿದ್ದರು. ಅದರಂತೆ ಸುಮಾರು ಎರಡೂವರೆ ಸಾವಿರ ಬಿಲ್ ತುಂಬಿ ಮತ್ತೆ ನೆಟ್ ಕನೆಕ್ಟ್, ಕನೆಕ್ಟ್ ಮಾಡಲಿಲ್ಲ. ಆಮೇಲೆ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡೆ.
ಅಲ್ಲಿಂದ ಆರಂಭವಾಯಿತು ನೋಡಿ ಕರೆಕರೆ ಕಿರಿಕಿರಿ. ಸುಮಾರು ಒಂದು ತಿಂಗಳ ಬಳಿಕ ರಿಲಯನ್ಸ್ ಕಾಲ್ ಸೆಂಟರ್ ನಿಂದ ಫೋನ್ ಬಂತು. “ಸರ್ ನಿಮ್ಮದು 164 ರೂಪಾಯಿ ಡ್ಯೂ ಇದೆ. ಬಿಲ್ ತುಂಬಿ” ಎಂದು ನುಲಿಯಿತು ಧ್ವನಿ. ನಾನಾಗಲೇ ಕನೆಕ್ಷನ್ ಟರ್ಮಿನೇಟ್ ಮಾಡಿರುವುದಾಗಿಯೂ, ನಂತರ ನೆಟ್ ಕನೆಕ್ಟ್ ಬಳಸಿಲ್ಲವೆಂದೂ ಹೇಳಿದೆ. ಸರಿ ಸರ್ ಎಂದ ಅತ್ತ ಕಡೆ ಹುಡುಗಿ ಫೋನ್ ಇಟ್ಟಳು. ಮತ್ತೆ ಮಾರನೇ ದಿನ ಫೋನು. ಮತ್ತದೇ ಸರ್ ನಿಮ್ಮದು 164 ಡ್ಯೂ ಇದೆ…ನನ್ನದ್ದು ಮತ್ತದೇ ಉತ್ತರ. ಬಹುಶಃ ಡಾಟಾಬೇಸ್ ಏನೋ ಪ್ರಾಬ್ಲಂ ಇರಬೇಕು ಎಂದುಕೊಂಡು ತುಂಬಾ ಸಂಯಮದಿಂದಲೇ ನಾನು ವರ್ತಿಸಿದೆ. ಆದರೆ ಹದಿನೈದು ದಿನವಾದರೂ ಈ ಕರೆಕರೆ ನಿಲ್ಲನಿಲ್ಲ. ಅತ್ತ ಕಡೆಯ ಹುಡುಗಿ ಡ್ಯೂ ಡ್ಯೂ ಎಂದು ಉಲಿಯುವುದೂ, ನಾನು ಟರ್ಮಿನೇಟ್, ಟರ್ಮಿನೇಟ್ ಎಂದು ನಲಿಯವುದೂ ನಡೆಯಿತು. ಕಡೆಗೊಮ್ಮೆ ನನ್ನ ಸಹನೆಯ ಕಟ್ಟೆಯೊಡೆಯಿತು. “ರ್ರೀ ನೋಡ್ರಿ, ನಿಮ್ಮ ಸರ್ವಿಸ್ ಬಳಸಿಲ್ಲ ಅಂದ್ಮೇಲೆ ಯಾಕ್ರೀ ನಾನು ಬಿಲ್ ಪೇ ಮಾಡ್ಬೇಕು? ಏನೋ ಸ್ವದೇಶದ್ದು, ನಮ್ ಕಂಪ್ನಿ ಅಂತ ಪೇಷನ್ಸ್ ಇಟ್ಕೊಂಡು ಇಷ್ಟು ದಿನ ಹೇಳಿದ್ದನ್ನೇ ಹೇಳಿದ್ದೀನಿ. ಮತ್ತೆ ಮತ್ತೆ ಫೋನ್ ಮಾಡಿ ಯಾಕ್ರೀ ಡಿಸ್ಟರ್ಬ್ ಮಾಡ್ತೀರಿ?” ಎಂದು ಸಮಾಧಾನವಾಗಿಯೇ ಕೇಳಿದೆ. ಬಾಣ ತಾಗಬೇಕಾದ ಜಾಗದಲ್ಲಿಯೇ ತಾಗಿದೆ ಅಂದುಕೊಂಡೆ. “ಸರಿ ಸರ್… ಸರಿ ಸರ್” ಅಂದ ಕನ್ಯಾಮಣಿ ಫೋನ್ ಇಟ್ಟಿದ್ದಳು. ಎರಡು ದಿನ ಫೋನ್ ಇರಲಿಲ್ಲ. ಮತ್ತೆ ಮೊಬೈಲ್ ರಿಂಗಾಗಿತ್ತು. ನಾನು ರಾಂಗಾಗಿದ್ದೆ.
“ಸರ್ ಸುಘೋಷ್ ನಿಗಾಲೆ ಅವರಲ್ವ?”
“ಹೌದು”
“ಸರ್… ನಾವು ರಿಲಯನ್ಸ್ ನಿಂದ ಕಾಲ್ ಮಾಡ್ತಾ ಇದೀವಿ. ನಿಮ್ಮದು 164 ರೂಪಾಯಿ ಡ್ಯೂ ಇದೆಯಲ್ವ ಸರ್…”
“ನೀವು ರಿಲಯನ್ಸ್ ನವರು ಹೊಟ್ಟೆಗೆ ಅನ್ನ ತಿಂತಿರೋ, ಶಗಣಿ ತಿಂತಿರೋ..?”
ಫೋನ್ ಕಟ್ಟಾಯಿತು.
ಅದಾಗಿ ಎರಡು ತಿಂಗಳು ಕಳೆದಿದೆ. ಇಲ್ಲಿಯವರೆಗೆ ಯಾವುದೇ ಫೋನ್ ಇಲ್ಲ. ಹಾಗೆ ಮಾತನಾಡಿದ್ದರ ಬಗ್ಗೆ ನನಗೆ ವಿಷಾದವಿದೆ. ಆ ಹುಡುಗಿಯ ಬಳಿ ಹಾಗೆ ಮಾತನಾಡಬಾರದಿತ್ತು ಎಂದು ಅನಿಸುತ್ತದೆ. ಆದರೆ ಜಾಣಂಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆ ಪೆಟ್ಟು ಅಂದುಕೊಂಡು ಸುಮ್ಮನಾಗುತ್ತೇನೆ.
ಟ್ವಿಟರ್ ಬಗ್ಗೆ ಮತ ಚಲಾಯಿಸಿ
December 20, 2009
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು poll, twitter Leave a comment
ಹೊಸ ಪೋಲ್ ಬಂದಿದೆ.
ಟ್ವಿಟರ್ ಬಗ್ಗೆ.
ನಿಮಗೆ ಟ್ವಿಟರ್ ಬಗ್ಗೆ ಏನೆನ್ನಿಸುತ್ತದೆ ಎಂಬ ಕುರಿತು ಮತ ಚಲಾಯಿಸಿ.
ಇಲ್ಲಿ ನೀಡಿರುವ ಆಯ್ಕೆಗಳನ್ನು ಹೊರತು ಪಡಿಸಿ ಬೇರೆ ಅಭಿಪ್ರಾಯವಿದ್ದರೆ ಕಮೆಂಟ್ ಮಾಡಿ.
ಇತಿ
ಪ್ರೀತಿಪೂರ್ವಕವಾಗಿ
ಸುಘೋಷ್ ಎಸ್. ನಿಗಳೆ
“ರಾಜ್ಯದಲ್ಲಿ ಮಾಧ್ಯಮಗಳ ಪರಿಸ್ಥತಿ ಹೇಗಿದೆ?” ರಿಸಲ್ಟ್ ಅನೌನ್ಸ್ ಆಗಿದೆ….
December 19, 2009
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು media situation, poll, result 2 Comments
“ರಾಜ್ಯದಲ್ಲಿ ಮಾಧ್ಯಮಗಳ ಪರಿಸ್ಥತಿ ಹೇಗಿದೆ?” ಎಂಬ ಬಗ್ಗೆ ಪೋಲ್ ನಡೆಸಿದ್ದೆ. ಅದನ್ನು ಈಗ ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಶ್ನಗೆ ನಾಲ್ಕು ಆಯ್ಕೆಗಳನ್ನು ಕೊಟ್ಟಿದ್ದೆ.
1. ಅತ್ಯುತ್ತಮವಾಗಿದೆ.
2. ಉತ್ತಮವಾಗಿದೆ.
3. ಪರವಾಗಿಲ್ಲ.
4. ದೇವರೇ ಕಾಪಾಡಬೇಕು.
ಇದರಲ್ಲಿ ಒಟ್ಟು ಚಲಾವಣೆಯಾದ ಮತಗಳು 28. ಮಾಧ್ಯಮಗಳ ಪರಿಸ್ಥಿತಿ ರಾಜ್ಯದಲ್ಲಿ ಅತ್ಯುತ್ತಮವಾಗಿದೆ ಎಂದೂ ಯಾರೂ ಅಭಿಪ್ರಾಯಪಟ್ಟಿಲ್ಲ. ಶೇ. 7 ರಷ್ಟು ಮಂದಿ ಅಂದರೆ ಇಬ್ಬರು ಪರಿಸ್ಥಿತಿ ಉತ್ತಮವಾಗಿದೆ ಎಂದಿದ್ದಾರೆ. ಪರವಾಗಿಲ್ಲ ಎಂದು ಹೇಳಿದವರ ಶೇಕಡಾ ಸಂಖ್ಯೆ 32 ಅಂದರೆ 9 ಜನ. ಆದರೆ ಮಾಧ್ಯಮಗಳನ್ನು ದೇವರೇ ಕಾಪಾಡಬೇಕು ಎಂದು ಹೇಳಿದವರು ಶೇ. 61 ರಷ್ಟು ಜನ ಅಂದರೆ 17 ಮಂದಿ.
ಹೇಗಿದೆ ರಿಸಲ್ಟ್?
ಡ್ಯಾನ್ಸ್ ಜಾತ್ರೆಗೆ ಬನ್ನಿ
December 18, 2009
ನಿಮಗಿದೋ ಆಮಂತ್ರಣ dance jatre, mukta mukta, vyjayanti kashi Leave a comment
ವೈಜಯಂತಿ ಕಾಶಿ ಖ್ಯಾತ ನೃತ್ಯಗಾರ್ತಿ. ಮುಕ್ತ ಮುಕ್ತ ದಲ್ಲಿ ನನ್ನ ತಾಯಿಯ ಪಾತ್ರ ಮಾಡುತ್ತಾರೆ. ಅವರ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಡಿಸೆಂಬರ್ 19 ಹಾಗೂ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಡ್ಯಾನ್ಸ್ ಜಾತ್ರೆ ಆಯೋಜಿಸಿದೆ. ಬನ್ನಿ ಭಾಗವಹಿಸಿ. ಹೆಚ್ಚಿನ ಮಾಹಿತಿಗೆ ಡ್ಯಾನ್ಸ್ ಜಾತ್ರೆ
ಫೇಲ್ ಆದವರು, ಹಾಲು ಮಾರುವುದು, ಎಂ80, ಇತ್ಯಾದಿ….
December 16, 2009
ಮುದ್ರಣ ಮಾಧ್ಯಮ, ವಿಚಾರ fail, M80 3 Comments
ಓ ಮನಸೆಯಲ್ಲಿ ಪ್ರಕಟವಾಗಿದ್ದ ನನ್ನ ಪತ್ರಕ್ಕೆ ಅವಿನಾಶ್ ತೀರ್ಥಹಳ್ಳಿ ಅವರು ಈ ಕೆಳಗಿನ ಪ್ರತಿಕ್ರಿಯೆ ನೀಡಿದ್ದರು. ಅವರ ಪ್ರತಿಕ್ರಿಯೆ ಹಾಗೂ ಅದಕ್ಕೆ ನನ್ನ ಅನಿಸಿಕೆ ಇಲ್ಲಿ ನೀಡಿದ್ದೇನೆ.
ಸ್ವಾಮಿ M80 ಯಲ್ಲಿ ಹಾಲು ಮಾರೋದು ಸುಲಭ … ಪಲ್ಸರ್ ಲ್ಲಿ ಕಷ್ಟ …. ಅದಕ್ಕೆ M80 ಕೊಡಿಸ್ತಿರೋದು …… ಹೀಗೆ ಎಲ್ಲದರಲ್ಲೂ ತಪ್ಪು ಹುಡುಕುತ್ತ ಕೂತರೆ ಹಾಸ್ಯನೆ ಇರಲ್ಲ. ಫೈಲ್ ಆದವರು ಜೀವನದ ದಾರಿಗೆ ಒಂದು ಕೆಲಸ ಮಾಡೋದು ಬೇಡ್ವ …?
-ಅವಿನಾಶ್ ತೀರ್ಥಹಳ್ಳಿ.
ನನ್ನ ಪ್ರತಿಕ್ರಿಯೆ………
ಆತ್ಮೀಯ ಅವಿನಾಶ್ ಅವರೆ,
ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಲು ಖೇದವೆನಿಸುತ್ತದೆ. ಎಂ80 ಯಲ್ಲಿ ಹಾಲು ಮಾರುವುದು ಸುಲಭ…ಪಲ್ಸರ್ ನಲ್ಲಿ ಕಷ್ಟ ಎಂಬ ತಮ್ಮ ಅನಿಸಿಕೆ ಒಪ್ಪತಕ್ಕದ್ದೇ. ಅದರ ಜೊತೆಗೆ ಸೈಕಲ್, ಟಿವಿಎಸ್ ಹೆವಿ ಡ್ಯೂಟಿ, ಟಿವಿಎಸ್ ಚ್ಯಾಂಪ್, ಬಜಾಜ್ ಚೇತಕ್, ಬಜಾಜ್ ಪ್ರಿಯಾ, ಆಟೋ, ಮಹೀಂದ್ರಾ ಜೀಪ್, ವಿಲ್ಲೀಸ್ ಜೀಪ್ ಮುಂತಾದ ವಾಹನಗಳಲ್ಲಿ ಕೂಡ ಹಾಲು ಮಾರುತ್ತಾರೆ. ಅದು ತಮಗೆ ಕೂಡ ಗೊತ್ತಿರಬಹುದು. ಇಲ್ಲಿ ವಾಹನ ಯಾವುದೆಂಬದುದು ಮುಖ್ಯವಲ್ಲ.
ತಾವು ‘ಓ’ ದಲ್ಲಿ ಪ್ರಕಟವಾಗಿರುವ ಜೋಕ್ ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಬರೆದಂತೆ ಆ ಜೋಕ್ ನಲ್ಲಿ ‘ಫೇಲ್ ಆದವರು ಮಾತ್ರ ಹಾಲು ಮಾರಲು ಲಾಯಕ್ಕು’ ಎಂಬಂತಹ ಅಂಶ ಧ್ವನಿತವಾಗಿದೆ. ಇದೇ ನನಗೆ ಸರಿ ಅನ್ನಿಸದೇ ಇದ್ದಿದ್ದು. ಬಿ.ಎಸ್. ಸಿ. ಎಗ್ರಿ, ಎಂ.ಎಸ್.ಸಿ ಎಗ್ರಿ ಮುಂತಾದವುಗಳನ್ನೆಲ್ಲ ಮಾಡಿಕೊಂಡು ಹಾಲು ಮಾರುವ ಕಾಯಕದಲ್ಲಿ ತೊಡಗಿಕೊಂಡರುವ ಲಕ್ಷಾಂತರ ಯುವಕರಿದ್ದಾರೆ, ಕೇವಲ ಫೇಲ್ ಆದವರಷ್ಟೇ ಅಲ್ಲ. ಕೃಷಿ ಡಿಪ್ಲೋಮಾ ಮಾಡಿಕೊಂಡು, ಹೈನುಗಾರಿಕೆಯಲ್ಲಿ ವಿಶೇಷ ತರಬೇತಿ ಪಡೆದು, ಹೊಸ ಹೊಸ ತಾಂತ್ರಿಕತೆಯ ಸಹಾಯದಿಂದ ಹೈನುಗಾರಿಕೆ ನಡೆಸುತ್ತಿರುವ ಜನರಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ರುಡ್ ಸೆಟ್ ಸಂಸ್ಥೆ ಕೃಷಿಕರಿಗೆ ಹೈನುಗಾರಿಕೆಯಲ್ಲಿ ತರಬೇತಿ ನೀಡಿ, ಸಾಲ ಸೌಲಭ್ಯ ನೀಡಿ ಹೈನುಗಾರಿಕೆ ನಡೆಸಲು ಪ್ರೋತ್ಸಾಹ ನೀಡುತ್ತಿದೆ. ಗಮನಿಸಿ. ಇವರ್ಯಾರೂ ಫೇಲ್ ಆಗಿ, ಜೀವನದ ದಾರಿಗೆಂದು ಹಾಲು ಮಾರುತ್ತಿರುವವರಲ್ಲ. ಪ್ರಜ್ಞಾಪೂರ್ವಕವಾಗಿ, ಸ್ವ ಇಚ್ಟೆಯಿಂದ ಹಾಲು ಮಾರುತ್ತಿರುವವರು. ಫೇಲ್ ಆದವರು ಜೀವನದ ದಾರಿಗೆ ಒಂದು ಕೆಲಸ ಮಾಡಬಾರದು ಎಂದು ನನ್ನ ಪತ್ರದಲ್ಲಿ ನಾನು ಎಲ್ಲಿಯೂ ಉಲ್ಲೇಖಿಸಿಲ್ಲ. ಅದು ಹೇಗೆ ತಾವು ಆ ನಿರ್ಣಯಕ್ಕೆ ಬಂದಿರಿ ನನಗಂತೂ ತಿಳಿಯಲಿಲ್ಲ.
ಇನ್ನು ‘ಎಲ್ಲದರಲ್ಲೂ ತಪ್ಪು ಹುಡುಕುತ್ತ ಕೂತರೆ’ ಎಂದು ಬಳಸಿದ್ದೀರಿ. ನಾನು ಮತ್ತ್ಯಾಯುವದರಲ್ಲಿ ತಪ್ಪು ಹುಡುಕುತ್ತ ಕೂತಿದ್ದೇನೆ ದಯವಿಟ್ಟು ತಿಳಿಸಿ. ಅಂದ ಹಾಗೆ ತಪ್ಪು ಹುಡುಕುತ್ತ ಕೂರುವಷ್ಟು ಸಮಯವಾಗಲಿ, ಪೇಷನ್ಸ್ ಆಗಲಿ, ಆಸಕ್ತಿಯಾಗಲಿ ನನಗಿಲ್ಲ.
ಇನ್ನು, ಹಾಸ್ಯವೆಂಬುದು ಎಲ್ಲರಿಗೂ ಖುಷಿಯನ್ನು ಕೊಡಬೇಕು. ಒಂದು ವರ್ಗವನ್ನು, ಜಾತಿಯನ್ನು, ಧರ್ಮವನ್ನು, ಅಂಗವೈಕಲ್ಯವನ್ನು, ವೃತ್ತಿಯನ್ನು ಗೇಲಿ ಮಾಡಿ ಹಾಸ್ಯ ಮಾಡುವುದು ಜೋಕ್ ಎನಿಸುವುದಿಲ್ಲ. ಅದು ವಿಕೃತಿ ಎನಿಸುತ್ತದೆ.
ಕೊನೆಯದಾಗಿ, ನನ್ನ ಹೆಸರು ಸುಘೋಷ್ ಎಸ್. ನಿಗಳೆ. ‘ಸ್ವಾಮಿ’ ಅಲ್ಲ. ನನ್ನನ್ನು ನನ್ನ ಹೆಸರಿನಿಂದಲೇ ಕರೆಯಬೇಕೆಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
ವಿಶ್ವಾಸವಿರಲಿ
ಸುಘೋಷ್ ಎಸ್. ನಿಗಳೆ.
ಇಟ್ಸ್ ಅಫಿಶಿಯಲ್….ನನ್ನ ಮಗನ ಹೆಸರು ಉದಾತ್
December 15, 2009
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) naming ceremony, udaath 2 Comments
©ಕಲೆ – ಅಪಾರ.
ಕಳೆದೆರಡು ದಿನಗಳಿಂದ ಬ್ಲಾಗ್ ಅಪ್ ಡೇಟ್ ಆಗಿಲ್ಲದ್ದಕ್ಕೆ ನನ್ನ ಮಗನೇ ಕಾರಣ. ಆತನ ನಾಮಕರಣ ಕಾರ್ಯಕ್ರಮದಲ್ಲಿ ಎಷ್ಟು ಬಿಝಿಯಾಗಿಬಿಟ್ಟೆನೆಂದರೆ, ಬ್ಲಾಗು, ಬೀಗು ಎಲ್ಲ ಮರೆತುಹೋಯಿತು. ಅಂದ ಹಾಗೆ ನನ್ನ ಮಗನಿಗೆ ಉದಾತ್ (UDAATH) ಎಂದು ಹೆಸರಿಡಲಾಗಿದೆ. ಇದನ್ನು ನನ್ನ ತಂದೆ ಸೂಚಿಸಿದ್ದು. ಹಲವು ಹೆಸರುಗಳು ಈ ಸಂದರ್ಭದಲ್ಲಿ ಸ್ಪರ್ಧೆ ನಡೆಸಿದವಾದರೂ, ಅಂತಿಮವಾಗಿ ಉದಾತ್ ಹೆಸರು ಮೊದಲ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ನಾಮಕರಣ ಕಾರ್ಯಕ್ರಮ ಸರಳವಾಗಿ ನಡೆಯಿತು. ಈ ಸಂದರ್ಭದಲ್ಲಿ ಕಾರ್ಡ್ ಶೀಟ್ ಒಂದರ ಮೇಲೆ ಎಲ್ಲರೂ ಉದಾತ್ ನಿಗೆ ಆಶೀರ್ವಾದ ನುಡಿಗಳನ್ನು ಬರೆಯುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಅದ್ಭುತ ಪ್ರತಿಕ್ರಿಯೆ ಬಂದಿತು. “ಏನಾದರೂ ಆಗು, ಮೊದಲು ನೀನು ಮಾನವನಾಗು”, “ನಿನ್ನಪ್ಪನಿಗಿಂತ ಉದ್ದವಾಗಿ ಬೆಳಿ”, “ನಿನಗೆ ದೇವರ ಆಶೀರ್ವಾದ ಉದಾತ್ತವಾಗಿ ದೊರಕಲಿ”, “ಬದುಕು ಸಂಗೀತಮಯವಾಗಿರಲಿ” “ಚಂದ ಹೆಸರು, ಚಂದ ಮಗು“ ಇತ್ಯಾದಿ, ಕೆಲ ಆಶೀರ್ವಾದಗಳ ಸ್ಯಾಂಪಲ್ ಗಳು.
ಬೇಜಾರಿನ ವಿಷಯ ಅಂದರೆ, ಕೆಲವರು ಕಾರ್ಯಕ್ರಮಕ್ಕೆ ಬರದೆ ಕೈಕೊಟ್ಟಿದ್ದು. ಕಾರ್ಯಕ್ರಮಕ್ಕೆ ಬರದಿದ್ದರೆ ತೊಂದರೆಯಿಲ್ಲ. ಆದರೆ ಎಟ್ ಲೀಸ್ಟ್ ಇನ್ ಫಾರ್ಮ್ ಆದರೂ ಮಾಡಬೇಕಿತ್ತು. ಇಂಥವರು ಬರುತ್ತಾರೆ ಎಂಬ ವಿಶ್ವಾಸದಿಂದ ನಾನು ಪ್ರತಿಯೊಂದು ಊಟಕ್ಕೆ ನೂರು ರೂಪಾಯಿಗೂ ಹೆಚ್ಚು ತೆತ್ತಿದ್ದೆ. ಸುಮ್ಮನೇ ವೇಸ್ಟ್ ಅಲ್ಲವೆ? ಇನ್ನು ಮನಸ್ಸಿಗಾದ ಬೇಸರದ ಬಗ್ಗೆ ನಾನು ಹೇಳಲಿಚ್ಛಿಸುವುದಿಲ್ಲ.
ಎನೀ ವೇ…ನಾಮಕರಣದ ಸಂದರ್ಭದ ವಿಶೇಷತೆಗಳು ಹಾಗೂ ಫೋಟೋಗಳನ್ನು ಶೀಘ್ರದಲ್ಲಿಯೇ ಹಾಕುವೆ….
ಈ ಬಾರಿಯ ‘ಮುಕ್ತ ಮುಕ್ತ’ ಸಂವಾದ ಚಿತ್ರದುರ್ಗದಲ್ಲಿ…
December 11, 2009
ಮುಕ್ತ...ಮುಕ್ತ...ಮುಕ್ತ.... chitradurga, mukta mukta samvada Leave a comment
‘ಓ ಮನಸೆ’ಯಲ್ಲಿ ನನ್ನ ಪತ್ರ…
December 10, 2009
ಮುದ್ರಣ ಮಾಧ್ಯಮ, ವಿಚಾರ dairy farm, fail, M80, o manase, pass, pulsar 1 Comment
ಹುರ್ರೆ…ನಮ್ಮ ಮದುವೆಗೆ ಇಂದಿಗೆ ನಾಲ್ಕುವರ್ಷ…
December 9, 2009












































ಚಿಠ್ಠೀ ಆಯೀ ಹೈ…