ಪ್ರಿಯರೇ,
೧. ಆಸಿಡ್ ಬ್ಯಾಟರಿಗಳನ್ನು ಹೆಚ್ಚು ಉಪಯೋಗಿಸಿದಷ್ಟು ಅದರ ಜೀವಿತಾವಧಿ ಹೆಚ್ಚು ಮತ್ತು ಇದು ರಾಷ್ಟ್ರೀಯ ನಷ್ಟವಾಗಲು ಸಾಧ್ಯವಿಲ್ಲ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೨. ಲೈಟನ್ನು ಕಂಡು ಕೆಲ ಜನರಿಗೆ ಕಿರಿಕಿರಿಯಾದರೆ ಅದು ಅವರ ಕರ್ಮ, ಜನರಿಗೆ ಇಂಥಹ ಸಮಸ್ಯೆಗಳು ನೂರಾರಿರುತ್ತವೆ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೩. ಆದರೂ, ಯಾವುದೋ ಹಳೆಯ ಸುಧಾ ಪತ್ರಿಕೆಯಲ್ಲಿ ‘ನಿಮಗಿದು ಹೊಳೆದಿತ್ತೇ?’ ಎಂಬ ಅಂಕಣದಲ್ಲಿ “ಹಗಲು ಹೊತ್ತು ವಾಹನದಲ್ಲಿ ದೀಪ ಹಚ್ಚಿ ಹೋಗುವುದರಿಂದ ಅಪಘಾತಗಳನ್ನು ತಪ್ಪಿಸಬಹುದು” ಎಂದು ಓದಿ ಅರ್ಧ ಗಂಟೆಗೂ ಕಾಲ ಹೆಚ್ಚು ನಕ್ಕಿದ್ದೆ.
೪. ದೀಪದ ಹೊರತು ಉಳಿದುದರ ಬಗ್ಗೆ ನಿಮ್ಮ ಕಳಕಳಿ ಸೂಕ್ತವಾಗಿದೆ.
ಧನ್ಯವಾದಗಳು
ರಿಸ್ಪೆಕ್ಟ್ ಎವ್ರಿವನ್










Sep 16, 2010 @ 10:25:48
Respect Everyone ಅದು.
ಯಾರಿಗೂ ನಷ್ಟ ಆಗಲ್ಲ, ಜೀವಿತಾವಧಿ ಜಾಸ್ತಿ ಆಗತ್ತೆ, ಯಾರಿಗೋ ಕಿರಿಕಿರಿ ಆದ್ರೆ ನಮಗೇನು ಅಂತ ಸುಮ್ನೆ ದೀಪ ಹಾಕ್ಕೊಂಡು ಓಡಾಡೋದು ಸರೀಗಿರಲ್ಲ ಬಿಡಿ.
ಬೇಕಾದಾಗ ಹಾಕಿ, ಬೇಡದಿದ್ದಾಗ ಆಫ್ ಮಾಡೋದು ಒಳ್ಳೇದು.
ಎಂತದೇ ನಗು ಬರುವಂತಹ ವಿಷಯ ಆಗಿದ್ದರೂ ಅರ್ಧ ಗಂಟೆಗೂ ಕಾಲ ಹೆಚ್ಚು ನಗಲು ಸಾಧ್ಯ ಅನ್ನುವುದೂ ಕೂಡ ಸತ್ಯವಲ್ಲ
Sep 16, 2010 @ 11:21:15
ಸರಿಯಾಗಿ ಹೇಳಿದ್ರಿ. ಹೀಗೆ ನನ್ನ ಬೈಕು/ಕಾರು ನನ್ನ ಹಾರ್ನ್ ಅಂತ ಹಾರ್ನ್ ಒತ್ತಿ ಡ್ರೈವ್ ಮಾಡುವವರು ಜಾಸ್ತಿ ಆಗಿದ್ದಾರೆ…
Sep 16, 2010 @ 12:51:33
Light off madi hogode better day time, bekadaaga hakolli
Sep 16, 2010 @ 20:10:21
ಗೆಳೆಯರೇ,
ನನ್ನ ಮತ್ತೊಂದು ಪ್ರತಿಕ್ರಿಯೆಯೂ blog ವಸ್ತು ಆಗುವುದು ಅಂತ ಅಂದುಕೊಂಡಿರಲಿಲ್ಲ…
ಸರಿ…
೧. ಹಗಲು ಹೊತ್ತು ದೀಪ ಹಚ್ಚಿ ಗಾಡಿ ಓಡಿಸುವುದರಿಂದ ಯಾವುದೇ ಗಂಭೀರ ಸಮಸ್ಯೆಯು ಉದ್ಭವವಾಗುವುದಿಲ್ಲ. ಇದಕ್ಕಿಂತ ರಾತ್ರಿ ವೇಳೆ ಭಯಂಕರ-ಪ್ರಖರ ಮುಖ್ಯದೀಪಗಳನ್ನು ಹಾಕಿಕೊಂಡು ಎದುರು ಬರುವವರಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ. ಇದು ನಗರ ಪ್ರದೇಶದೊಳಗೆ ಬೀದಿ ದೀಪಗಳಿಂದಾಗಿ ಅಂತಹ ಸಮಸ್ಯೆಯಾಗದಿದ್ದರೂ, ನಗರದ ಹೊರಗಿನ ಕತ್ತಲ ಪ್ರದೇಶಗಳಲ್ಲಿ ತೀರಾ ಹೆಚ್ಚಾಗುತ್ತದೆ. ಕೆಲವೊಮ್ಮೆ ಬೆಳಕಿನ ಪ್ರಖರತೆಗೆ ಕಣ್ಣು ತೆರೆಯುವುದೇ ಕಷ್ಟವಾಗಿ ವಾಹನವನ್ನು ನಿಲ್ಲಿಸಿಯೇ ಬಿಡಬೇಕಾಗುತ್ತದೆ. ಇಷ್ಟಾದರೂ ದೀಪದ ಪ್ರಖರತೆ ತಗ್ಗಿಸುವುದಿಲ್ಲ ಕೆಲವರು. ಈ ಸಮಯದಲ್ಲಿ ರಸ್ತೆಗಳು ಅಗಲವಿಲ್ಲದಿದ್ದರಂತೂ ಆ ಗೋಳು ಯಾರಿಗೂ ಬೇಡ… (ಸುಘೋಷರವರೂ ಈ ಸಮಸ್ಯೆಯನ್ನು ಎದುರಿಸಿರಬುದೆಂದು ಭಾವಿಸುತ್ತ, ಇದರ ಬಗ್ಗೆ ಬರಹವನ್ನು ನೀಡಿ ಎಂದು ಕೋರುತ್ತೇನೆ.)
ಇನ್ನು ವಿಕಾಸರವರು, ಗಿರಿಯವರು ಹೇಳುವಂತೆ ಯಾರಿಗೂ ಸುಮ್ಮಸುಮ್ಮನೆ ತೊಂದರೆ ಕೊಡುವುದು ಖಂಡಿತಾ ಸರಿಯಲ್ಲ. ಸುಮ್ಮಸುಮ್ಮನೆ ಹಾರ್ನ್ ಮಾಡುವುದು (ಸಾಮಾನ್ಯ ತಿಳುವಳಿಕೆಯೂ ಇಲ್ಲದಂತೆ) ತುಂಬ ಕಿರಿಕಿರಿ ಉಂಟುಮಾಡುತ್ತದೆ. (ನನ್ನ ಕರ್ಮವೇ?
)
೨. ಕಾರಿನ ಡೋರ್ ಸರಿಯಾಗಿ ಕೂತಿರದಿದ್ದರೆ, ಹಿಂದುಗಡೆ ಕುಳಿತ ಮಹಿಳೆಯ ವೇಲ್ ಚಕ್ರಕ್ಕೆ ಸಿಗುವ ಸಂಭವವಿದ್ದರೆ, ಖಂಡಿತವಾಗಿಯೂ ಎಚ್ಚರಿಸಬೇಕು, ಇಲ್ಲದಿದ್ದರೆ ತೀವ್ರ ಅಪಾಯದ ಸಾಧ್ಯತೆಯೂ ಇರುವುದು.
೩. ಸುಧಾ ಪತ್ರಿಕೆಯಲ್ಲಿ ‘ನಿಮಗಿದು ಹೊಳೆದಿತ್ತೇ?’ ಎಂಬ ಅಂಕಣದಲ್ಲಿ “ಹಗಲು ಹೊತ್ತು ವಾಹನದಲ್ಲಿ ದೀಪ ಹಚ್ಚಿ ಹೋಗುವುದರಿಂದ ಅಪಘಾತಗಳನ್ನು ತಪ್ಪಿಸಬಹುದು” ಎಂಬ ಬರಹ ಓದಿ ನಕ್ಕಿದ್ದೇಕೆಂದರೆ ಇದರಲ್ಲಿ ೨ ವಿಚಿತ್ರಗಳನ್ನು ಕಂಡೆ, ಒಂದು, “ಹಗಲು ಹೊತ್ತು ವಾಹನದಲ್ಲಿ ದೀಪ ಹಚ್ಚಿ ಹೋಗುವುದು” ಮತ್ತೊಂದು “ಇದರಿಂದ ಅಪಘಾತಗಳನ್ನು ತಪ್ಪಿಸಬಹುದು” ಎಂದು. ಈ ಸಲಹೆ ಖಂಡಿತಾ ಪರಿಣಾಮಕಾರಿ ಅನ್ನಿಸಲಿಲ್ಲ. ಅರ್ಧ ಗಂಟೆ ನಕ್ಕೆನೆಂದಿದ್ದು ಸುಮ್ಮನೆ ಬಿಡಿ, ಅಷ್ಟು ಹೊತ್ತು ನಗಲು ಸಾಧ್ಯವೇ?
ಧನ್ಯವಾದಗಳು.
Sep 17, 2010 @ 09:12:33
ಹಗಲು ಹೊತ್ತು ವಾಹನಗಳ ದೀಪ ಉರಿಯುತ್ತಿದ್ದರೆ, ನಾನು ಎಚ್ಚರಿಸುವುದು ಯಾವುದೇ ಲಾಭ ನಷ್ಟದ ಲೆಕ್ಕಾಚಾರ ಮಾಡಿಕೊಂಡು ಅಲ್ಲ.
ಕೆಲವೊಮ್ಮೆ “ಪ್ಯಾಂಟಿನ ಝಿಪ್” ಮೇಲೇರಿಸಿರಲು ಮರೆತವರನ್ನು, ಎಚ್ಚರಿಸುವಂತೆ, ಇದೂ ಕೂಡ ಅಂತ ನನ್ನ ಅನಿಸಿಕೆ. ಮರೆತವರಿಗೆ ನೆನಪಿಸಿ ಸಹಾಯ ಮಾಡುವು ಉದ್ದೇಶ ಅಷ್ಟೇ.
ಮರೆತಿದ್ದೀರಾ ಅಥವಾ ಸ್ವಯಿಚ್ಛೆಯಿಂದಲೋ? ಎನ್ನುವ ಪ್ರಶ್ನೆಗಳೊದಿಗಿನ ಎಚ್ಚರಿಕೆಯ ಸಂದೇಶ ಅದು.
ಸ್ವಯಿಚ್ಛೆಯಿಂದಲೇ ಆಗಿದ್ದಲ್ಲಿ ನನಗೇನೂ ಬೇಸರ ಇರದು, ಬಿಡಿ. ಅಲ್ಲದೇ, ನಮ್ಮ ಈ ಎಚ್ಚರಿಕೆಯ ಸಂದೇಶದಿಂದ ಲಾಭ ಆಗಿದೆಯೋ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳುವಷ್ಟು ಪುರುಸೊತ್ತೂ ಇರುವುದಿಲ್ಲ ಅಲ್ಲಿ. ಏಕೆಂದರೆ ನಾನಾಗಲೇ ವಿರುದ್ಧ ದಿಕ್ಕಿನಲ್ಲಿ , ಅಷ್ಟೊಂದು ದೂರ ಸಾಗಿಯಾಗಿರುತ್ತೆ.