ಮುಕ್ತ ಮುಕ್ತ ಧಾರಾವಾಹಿಯಲ್ಲಿನ ಧವಳಗಿರಿ ಗುರುಗಳ ಪರಮ ಭಕ್ತೆ ಹಾಗೂ ನನ್ನ(ದೇವಾನಂದಸ್ವಾಮಿ) ಅತ್ತೆ ಶಾರದಾ ಶ್ರೀಕಂಠ ಮೂರ್ತಿ ಎಲ್ಲರಿಗೂ ಪರಿಚಯ. ಶಾರದಾ ಶ್ರೀಕಂಠಮೂರ್ತಿ ನಿಜವಾದ ಹೆಸರು ವಿದ್ಯಾ ಮೂರ್ತಿ. ಕಿರಿ-ಹಿರಿ ತೆರೆಯೆರಡರಲ್ಲೂ ಅತ್ಯುತ್ತಮ ನಟಿ. ಅವರೊಡನೆ ಮೊನ್ನೆ ಶೂಟಿಂಗ್ ನಲ್ಲಿ ಮಾತಾಡುತ್ತಿರುವಾಗ ಯಾವುದೋ ವಿಷಯ ಪ್ರಸ್ತಾಪವಾಗಿ ಎಲ್ಲಿಗೋ ಹೋಗಿ, ಕೊನೆಗೆ ಅವರು ಕನ್ನಡ ಕಾಗುಣಿತ ರಾಗವಾಗಿ ಹೇಳಿದರು.
ನಾನು ಚಿಕ್ಕಂದಿನಲ್ಲಿ ಕನ್ನಡ ಕಾಗುಣಿತ ಕಲಿತಿಲ್ಲ. ಇಂದಿನ ಮಕ್ಕಳೂ ಕಲಿಯುತ್ತಿಲ್ಲ. ಆದರೆ ಹಿಂದೆ ಕನ್ನಡ ಕಾಗುಣಿತ ಕಡ್ಡಾಯವಾಗಿತ್ತು. ಕಾಗುಣಿತವನ್ನು ವಿದ್ಯಾ ಮೂರ್ತಿ ಮತ್ತೆ ನೆನಪು ಮಾಡಿಕೊಟ್ಟರು. ಅದು ಇಲ್ಲಿದೆ. ಥ್ಯಾಂಕ್ಸ್ ವಿದ್ಯಮ್ಮ…
ಕ ತಲಕಟ್ಟು ಕ
ಕ ದೀರ್ಘ ಕಾ
ಕ ಕೊಂದು ಸುಳಿ ಕಿ
ಕಿ ದೀರ್ಘ ಕೀ
ಕ ಕೊಂಬು ಕು
ಕು ದೀರ್ಘ ಕೂ
ಕ ಏತ್ವಾ ಕೆ
ಕೆ ಕೊಂದು ದೀರ್ಘ ಕೇ
ಕ ಐತ್ವಾ ಕೈ
ಕ ಓತ್ವಾ ಕೊ
ಕೋ ಕೊಂದು ದೀರ್ಘ ಕೋ
ಕ ಔತ್ವಾ ಕೌ
ಕ ಸೊನ್ನೆ ಕಂ
ಕ ಎರಡ ಸೊನ್ನೆ ಕಃ










Apr 13, 2011 @ 10:02:49
ನಾವು ಸಹ ಇದೇ ರೀತಿ ಕಾಗುಣಿತ ಕಲಿತಿದ್ದು…. ಆದರೆ ಈಗ ಈ ರೀತಿ ಕಲಿಸುವುದೇ ಇಲ್ಲ…. ಮತ್ತೊಮ್ಮೆ ನಮ್ಮ ಶಾಲೆಯ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು
Apr 17, 2011 @ 14:56:29
Apr 13, 2011 @ 10:29:31
yes this type of “balli” i first heard from my daughter. ita unique way to learn.
Apr 17, 2011 @ 14:56:13
ಹೌದು ಸರ್… ಇದರಿಂದ ಭಾಷೆಯ ಅಡಿಪಾಯ ತುಂಬಾ ಗಟ್ಟಿಯಾಗಿಬಿಡುತ್ತದೆ.
Apr 13, 2011 @ 11:25:10
ಹೆ, ಹೆ, ನಮಸ್ಕಾರ, ನಮ್ಮಮ್ಮ ನನಗೆ ಈ ರೀತಿಯೇ ಕಾಗುಣಿತ ಹೇಳಿಕೊಟ್ಟದ್ದು. ಮೇಲಿನ ಸಾಲಿನಲ್ಲಿ ಸ್ವಲ್ಪ ಮಾರ್ಪಾಡುಗಳಿವೆ. ೨೦೦೭ರಲ್ಲಿ ನನ್ನ ಒಂದು ಬ್ಲಾಗಿನಲ್ಲಿ ಇದರ ಕುರಿತು ಬರೆದಿದ್ದೆ. ಓದಿ ಆನಂದಿಸಿ.
ನಾನು ಕಾಗುಣಿತವನ್ನು ಕಲಿತ ಬಗೆ -
http://sampada.net/blog/sunil_jayaprakash/06/01/2007/2737
Apr 13, 2011 @ 21:12:14
ಹೌದು ಸುಘೋಷ್….ಲಾಕೌತ್ವಾ ಲವ್!
Apr 17, 2011 @ 14:54:42
ಹೌದು ಸರ್…. ಆಮೇಲೆ ಡ ಕೌತ್ವಾ ಡವ್
ಕಾಗುಣಿತ ಒಪ್ಪಿಸಿಬಿಡಿ | ಕಿಂದರ ಜೋಗಿ
Apr 14, 2011 @ 08:55:15
Apr 14, 2011 @ 12:44:06
ನಾವೆಲ್ಲ ಕಾಗುಣಿತ ಕಲಿತಿದ್ದು ಇದೇ ತರಹ. ನನ್ನ ಮಗನಿಗೂ ಪೂರ್ಣ ಪ್ರಜ್ಞಶಾಲೆಯಲ್ಲಿ ಈ ರೀತಿಯೆ ಕಲಿಸಿದ್ದು.
Apr 17, 2011 @ 14:53:03
ಒಳ್ಳೆಯ ಪರಿಪಾಠ…
Apr 15, 2011 @ 10:58:04
“ಢ = ಡ ಕ್ಕೊಂದು ಹೊಟ್ರುಸುಳಿ ಢ”
ಅನ್ನೋ ನೆನಪು.
ಯಾರಾದ್ರೂ confirm ಮಾಡ್ತೀರಾ?
Dec 16, 2011 @ 13:37:32
naavu kuuda hige kalithiddu
Feb 17, 2012 @ 16:04:37
hale nennapugalu madam edhu….