ಹದಿನಾರಾಣೆ ಸತ್ಯ. ಪೆಟ್ರೋಲ್ ದರ ಏರಿಸಿರುವುದು ಖಂಡಿತ ಖಂಡನೀಯ. ಕೇಂದ್ರ ಸರ್ಕಾರದ ದರಿದ್ರ ಧೋರಣೆ, ಜನರನ್ನು ಮೂರ್ಖರನ್ನಾಗಿಸುವ ರಾಜ್ಯಸರ್ಕಾರಗಳ ತೆರಿಗೆ ನೀತಿ ಎರಡಕ್ಕೂ ವಿರೋಧವಿದೆ. ಆದರೆ, ಬಂದ್ ಹೆಸರಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಮೂರು ಬಸ್ ಗಳನ್ನು ಸುಡಲಾಗಿದೆ. ಬಸ್ ನಲ್ಲಿ ಮಲಗಿದ್ದ ಮಹ್ಮದ್ ಹನೀಫ್ ಎಂಬ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಬಸ್ ಗೆ ಕಲ್ಲು ತೂರಲಾಗಿದೆ. ಬಂದ್ ಮಾಡಿದರೇ ಸಾಕು, ಆದ್ರೆ ಬಂದ್ ಹಿಂಸಾತ್ಮಕವಾಗಿ ಏಕಿರಬೇಕು? ಹಿಂಸಾತ್ಮಕವಾಗಿ ಬಂದ್ ಆದರೆ ಮಾತ್ರ ಬಂದ್ ಸಫಲ ಎಂಬ ಮನೋಭಾವವೇಕೆ? ಬಂದ್ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂತಿದ್ದರೂ, ಮಧ್ಯರಾತ್ರಿಯೇ ಬಸ್ ಸುಟ್ಟಿರುವ ಮರ್ಮವಾದರೂ ಏನು? ಆಕ್ರೋಶ ಕೇಂದ್ರ ಸರ್ಕಾರದ ರಾಜಕೀಯ, ರಾಜ್ಯ ಸರ್ಕಾರಗಳ ಜಾಣ ಕುರುಡಿನ ಬಗ್ಗೆಯಿರಲಿ. ಬಸ್ ಗಳ ಮೇಲೆ ಅಲ್ಲ….
ಪೆಟ್ರೋಲ್ ದರ ಹೆಚ್ಚಾಗಿದೆ ನಿಜ, ಆದರೆ ಬಸ್ ಸುಡೋದು ಯಾವ ನ್ಯಾಯ?
May 31, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು bandh, bus 4 Comments










May 31, 2012 @ 11:07:49
ನಿಮ್ಮಂತ ಬುದ್ದಿವಂತರೇ ಹೀಗೆ ಯೋಚನೆ ಮಾಡುವುದನ್ನು ನಿಲ್ಲಿಸಿದರೆ ಹೇಗೆ!
ಬಂದ್ ಗೆ ಕರೆಕೊಟ್ಟಿದ್ದಾರೆ ನಿಜ. ಅದಕ್ಕೆ ಕರೆಕೊಟ್ಟವರೇ ಬಸ್ ಸುಟ್ಟರು ಅಂತ ಏನು ಗ್ಯಾರಂಟಿ? ನೀವು ಕಂಡಿದ್ದೀರಾ? ಇಂತಹ ಸಂದರ್ಭದಲ್ಲಿ ಮೆರೆಯುವವರು ಕಿಡಿಗೇಡಿಗಳು ಮತ್ತು ವಿಕೃತರು. ಅವರಿಗೆ ಕೇಂದ್ರ ರಾಜ್ಯ ಅಂತೆಲ್ಲಾ ಏನೂ ಇರುವುದಿಲ್ಲ.
Jun 01, 2012 @ 08:32:40
ಅಜಯ್, ನಿಮ್ಮ ಗ್ರಹಿಕೆಯೇ ತಪ್ಪು. ಬಸ್ ಸುಟ್ಟವರು ಗಿಡಿಗೇಡಿಗಳು ಅಂತ ಗ್ಯಾರಂಟಿ ಕೊಡಲು ನಿಮಗೂ ಸಾಧ್ಯವಿಲ್ಲ. ಯಾಕೆಂದರೆ ನೀವೂ ಕೂಡ ಅಲ್ಲಿರಲಿಲ್ಲ. ನಿಮಗೆ ಯಾವುದು ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೊ, ಬೇರೆಯವರಿಗೂ ಅದು ಸಾಧ್ಯವಿಲ್ಲ. ಬಂದ್ ಗೆ ಕರೆ ಕೊಟ್ಟವರೇ ಬಸ್ ಸುಟ್ಟಿದ್ದಾರೆ ಎಂದು ಸುಗೋಶ್ ಹೇಳತ್ತಾರೆ ಅಂತ ನನಗನಿಸುದಿಲ್ಲ. ಆದರೆ, ಬಂದ್ ಗೆ ಕರೆಕೊಟ್ಟವರು ಕಿಡಿಗೇಡಿಗಳಿಂದ ಈ ರೀತಿಯ ಕೃತ್ಯ ಮಾಡಿಸಿರುವ ಸಾಧ್ಯತೆ ದಟ್ಟವಾಗಿದೆ.
Jun 01, 2012 @ 13:56:17
ಹ್ಹ ಹ್ಹ. ಕಿಡಿಗೇಡಿಗಳು ಅನ್ನುವುದು ಯಾವುದೇ ಸ್ಪೆಷಲ್ ಜನಾಂಗ ಅಲ್ಲ ಸ್ವಾಮಿ, ಯಾರು ಕೆಟ್ಟಕೆಲಸ ಮಾಡುವ ಕೇಡಿಗಳೋ ಅವರೇ ಕಿಡಿಗೇಡಿಗಳು
ಗ್ಯಾರಂಟಿ ಕೊಡಲು ಸಾಧ್ಯವಾಗಿದ್ದಕ್ಕೇ ಕಿಡಿಗೇಡಿಗಳು ಅನ್ನುವುದು… !
Jun 01, 2012 @ 13:55:33
ಹ್ಹ ಹ್ಹ. ಕಿಡಿಗೇಡಿಗಳು ಅನ್ನುವುದು ಯಾವುದೇ ಸ್ಪೆಷಲ್ ಜನಾಂಗ ಅಲ್ಲ ಸ್ವಾಮಿ, ಯಾರು ಕೆಟ್ಟಕೆಲಸ ಮಾಡುವ ಕೇಡಿಗಳೋ ಅವರೇ ಕಿಡಿಗೇಡಿಗಳು
ಗ್ಯಾರಂಟಿ ಕೊಡಲು ಸಾಧ್ಯವಾಗಿದ್ದಕ್ಕೇ ಕಿಡಿಗೇಡಿಗಳು ಅನ್ನುವುದು !