ವೇಶ್ಯೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದು ಬಂದ ದಾರಿ
30 Jun 2012 Leave a Comment
in ನಿಮಗಿದೋ ಆಮಂತ್ರಣ Tags: sex work, sex workers
ಸ್ವಾಮಿ ನಿತ್ಯಾನಂದ ಸಂದರ್ಶನ
28 Jun 2012 Leave a Comment
ಸ್ವಾಮಿ ನಿತ್ಯಾನಂದರನ್ನು ಮಧುರೈನ ಆಧೀನಂ ಪೀಠದಲ್ಲಿ ಸಂದರ್ಶಿಸಿದ್ದೇನೆ. ಸಂದರ್ಶನ ಇಂದು ರಾತ್ರಿ ಸಮಯ ವಾಹಿನಿಯಲ್ಲಿ 8.05 ಕ್ಕೆ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ.
ವೀಣಾ ಮಲಿಕ್ ಜೊತೆ ಒಂದು ಮಾತುಕತೆ.
25 Jun 2012 Leave a Comment
in Media Tags: samaya tv, veena malik
ಪಾಕಿಸ್ತಾನದ ನಟಿ ವೀಣಾ ಮಲಿಕ್ ರನ್ನು ಸಂದರ್ಶಿಸಿದ್ದೇನೆ. ಇದು ಇಂದು ರಾತ್ರಿ (25/06/2012) 8.05 ಕ್ಕೆ ಸಮಯ ವಾಹಿನಿಯಲ್ಲಿ ಸಂದರ್ಶನ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ. ಸಮಯ ವಾಹಿನಿ ಅಲಭ್ಯವಿದ್ದರೆ, http://www.samayatv.in ವೆಬ್ ಸೈಟ್ ಗೆ ಹೋಗಿ ಅಲ್ಲಿ live news ಗೆ ಹೋಗಿ 8.05 ಕ್ಕೆ ವೀಕ್ಷಿಸಬಹುದು.
ಜಯದೇವರ ‘ಕಾಸು-ಕುಡಿಕೆ’
23 Jun 2012 Leave a Comment
in ಬಹುಪರಾಕ್ Tags: jayadevaprasad moleyara, kasukudike
ನಾನು ಇವರನ್ನು ಇದುವರೆಗೂ ಮುಖತಃ ಭೇಟಿಯಾಗಿಲ್ಲ. ಆದರೆ ಕಳೆದ ಸುಮಾರು 1 ವರ್ಷದಿಂದ ನಮ್ಮ ಮಾತುಕತೆ ಫೋನ್ ನಲ್ಲೇ ಸಾಗಿದೆ. ನಾಲ್ಕು ತಿಂಗಳ ಕಾಲ ನಾನು ಹೋಸ್ಟ್ ಮಾಡುತ್ತಿದ್ದ ‘ಸಮಯ ವಾಹಿನಿ’ಯ ‘ಮಾರ್ನಿಂಗ್ ಕಾಫಿ’ಯಲ್ಲಿ ಇವರು ಆರ್ಥಿಕ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಉದಯವಾಣಿಯ ಇವರ ಕಾಸು-ಕುಡಿಕೆ ಕಾಲಂ ಈಗಾಗಲೇ ಪ್ರಸಿದ್ಧ. ನಾನು ದಿನಕ್ಕೆ ನಾಲ್ಕಾರು ಬಾರಿ ಫೋನ್ ಮಾಡಿ ಗೋಳು ಹೊಯ್ದುಕೊಂಡರೂ ನಗುತ್ತಲೇ ಮಾಹಿತಿ ನೀಡುವ, ಕೊನೆ ಗಳಿಗೆಯಲ್ಲಿ ಫೋನ್ ಮಾಡಿದರೂ, ಬುಲೆಟಿನ್ ಗೆ ಲೈವ್ ಫೋನೋ ಬರುವ ಇವರೇ ಶ್ರೀ. ಜಯದೇವಪ್ರಸಾದ ಮೊಳೆಯಾರ. ಇದೀಗ ಜಯದೇವರು ತಮ್ಮದೇ ಆದ ಕಾಸು-ಕುಡಿಕೆ ಬ್ಲಾಗ್ ಆರಂಭಿಸಿದ್ದಾರೆ. ನನಗೆ ಜಯದೇವರ ಪರಿಚಯವಾಗಿದ್ದು ‘ಅವಧಿ’ ಹಾಗೂ ಶ್ರೀ. ಜಿ. ಎನ್. ಮೋಹನ್ ರ ಮೂಲಕ.
ಅವರ ಬ್ಲಾಗ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.
ವಾಣಿಜ್ಯ, ಬ್ಯಾಂಕಿಂಗ್ ಹಾಗೂ ಷೇರುಮಾರುಕಟ್ಟೆಯ ಸ್ಥಿತಿಗತಿಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವುದು ಸುಲುಭವಲ್ಲ. ಆದರೆ ಜಯದೇವರಿಗೆ ಎರಡೂ ಕಲೆ ಒಲಿದಿದೆ. ಬರವಣಿಗೆ (ಪ್ರಿಂಟ್ ಮೀಡಿಯಾಗಾಗಿ) ಹಾಗೂ ಮೌಖಿಕ ವಿವರಣೆ (ಇಲೆಕ್ಟ್ರಾನಿಕ್ ಮೀಡಿಯಾಗಾಗಿ). ಆರ್ಥಿಕತೆ ಬಗ್ಗೆ ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಸಾಹಿತ್ಯ ಇದು ಎಂದರೆ ಅತಿಶಯೋಕ್ತಿಯಾಗಲಾರದು. ಅಂದಹಾಗೆ, ಬ್ಲಾಗ್ ನ ಇಂಗ್ಲೀಷ್ ಅವತರಣಿಕೆ ಕೂಡ ಇದೆ.
ನೀರು ತಂದವರು
22 Jun 2012 Leave a Comment
in ನಿಮಗಿದೋ ಆಮಂತ್ರಣ Tags: anabhijna shakuntala, neeru tandavaru
ನಿತ್ಯಾನಂದ ಕುರಿತ ಮಾಧ್ಯಮ ವರದಿ ಹೇಗಿದೆ?
18 Jun 2012 Leave a Comment
in ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು Tags: nityananda
ಸದಾನಂದಗೌಡರಿಗೆ ಮುಖ್ಯಮಂತ್ರಿ ಹುದ್ದೆ ಒಕ್ಕಲಿಗರ ಕೊಡುಗೆಯಂತೆ
06 Jun 2012 Leave a Comment
in ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ Tags: cm, dvs
ಮುಖ್ಯಮಂತ್ರಿಗಳ ಸ್ಟೇಟ್ ಮೆಂಟ್ ಗಾಗಿ ಈ ಲಿಂಕ್ ನೋಡಿ.
http://www.kannadaprabha.com/pdf/epaper.asp?pdfdate=6/4/2012
ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡರು ಈ ರೀತಿ ಹೇಳಿಕೆ ನೀಡುತ್ತಾರೆ ಅಂತ ಅನ್ನಿಸಿರಲಿಲ್ಲ. ಇಂದು ಏನೇ ಜಾತ್ಯಾತೀತತೆ ಅಂತ ಮಾತನಾಡಿದರೂ, ಜಾತಿ ವ್ಯವಸ್ಥೆ ಅನ್ನುವುದು ನಮ್ಮ ಜೀನ್ಸ್ ಗಳಲ್ಲೇ ಪ್ರಿಂಟ್ ಆಗಿಬಿಟ್ಟಿದೆ. ಆದರೆ ಸಾರ್ವಜನಿಕ ಹುದ್ದೆಯಲ್ಲಿದ್ದವರು ಈ ರೀತಿ ಒಂದೇ ಜಾತಿಗೆ (ಅವರು ಅದೇ ಜಾತಿಯಿಂದ ಬಂದಿದ್ದರೂ) ತಮ್ಮ ಬದ್ಧತೆಯನ್ನು ಪ್ರದರ್ಶಿಸಬಹುದೆ? ಸದಾನಂದಗೌಡರಿಗೆ ಕೇವಲ ಒಕ್ಕಲಿಗರು ಮಾತ್ರ ಮತ ಹಾಕಿದ್ದಾರೆಯೆ? ದಲಿತರು, ಲಿಂಗಾಯತರು, ಕುರುಬರು, ಬ್ರಾಹ್ಮಣರು, ಕ್ರೈಸ್ತರು, ಮುಸ್ಲಿಮರು, ಉಳಿದ ಜಾತಿಗಳವರು ಮತ ಹಾಕಿಲ್ಲವೆ? ಹಾಕಿದ್ದಾರೆ ಎಂದಾದರೆ ಅದ್ಹೇಗೆ ಮುಖ್ಯಮಂತ್ರಿ ಹುದ್ದೆ ಕೇವಲ ಒಕ್ಕಲಿಗರ ಕೊಡುಗೆಯಾಯಿತು? ಇವರ ಹೇಳಿಕೆಯಂತೆ ಯಡಿಯೂರಪ್ಪನವರಿಗೆ ಇದು ಲಿಂಗಾಯತರ ಕೊಡುಗೆ, ಹೆಗಡೆಗೆ ಬ್ರಾಹ್ಮಣರ ಕೊಡುಗೆಯಾಯಿತೆ?
ಮುಖ್ಯಮಂತ್ರಿ ಹುದ್ದೆ ನೀಡಿರೋದು ಜನ. ಕೇವಲ ಜನ. ಆ ಜನರಿಗೆ ಯಾವುದೇ ಜಾತಿಯನ್ನು ಆರೋಪಿಸುವುದು ಬೇಡ. ಡಿವಿಎಸ್ ಈ ರೀತಿ ಹೇಳಿಕೆ ನೀಡಿ ತಮಗೆ ವೋಟ್ ಮಾಡಿದವರನ್ನೇ ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರಿಗೆ ಇಂತಹ ಸಂಗತಿ ಹೊಳೆಯದಿರವುದು ವಿಪರ್ಯಾಸವೇ ಸರಿ. ಸದಾನಂದಗೌಡರು ಆರ್ಎಸ್ಎಸ್ ಕ್ಯಾಂಪಿನಿಂದ ಬಂದವರು. ಆರ್ಎಸ್ಎಸ್ ಸದಾ ಹಿಂದೂ ಸಂಘಟನೆಯ ಬಗ್ಗೆ ಮಾತನಾಡುತ್ತದೆ. ಇದೇನಾ ಹಿಂದೂ ಸಂಘಟನೆ?
ಕನ್ನಡ ಚಿತ್ರಗಳ ಬರಗೆಟ್ಟ ಲಿರಿಕ್ಸ್ ಗಳು
01 Jun 2012 4 Comments
in ಚಿತ್ರರಂಗ Tags: kannada film
ಇದಕ್ಕಿಂತ ಹೊಲಸು ಹಾಗೂ ಅಶ್ಲೀಲವಾದದ್ದನ್ನ ಬರೆಯಲು ಸಾಧ್ಯವೇ ಇಲ್ಲ.
ಉದಾ-1. ಊ ಲಾಲಾ ಊಲಾಲಾ ಇದು ಹಾಲು ಕೊಡೊ ಎಮ್ಮೆ, ಊ ಲಾಲಾ ಊಲಾಲಾ ಹಾಲ್ ಕರ್ಕೋ ನೀ ಸುಮ್ನೆ, ಮುಂದಿನಿಂದಲೂ ಹಿಂದಿನಿಂದಲೂ ಹಾಯೋ ಕೋಣ ಯಾಕೆ. (ಕಠಾರಿವೀರ ಸುರಸುಂದರಾಂಗಿ)
ಉದಾ-2. ಕಣ್ಮುಚ್ರೋ ಕಣ್ಮುಚ್ರಿ, ಪೈಲ್ವಾನ್ ಮಂದಿಯಲ್ಲಿ ವಿನಂತಿ, ಫಾರಿಲ್ ಹುಡುಗಿ ಬಂದ್ಲು ಕಣ್ಮುಚ್ರಿ.
ಈ ಹಾಡುಗಳಿಗೆ ಅತ್ಯಂತ ಕಡಿಮೆ ಬಟ್ಟೆಯನ್ನು ಹಾಕಿಕೊಂಡಿರುವ ನಟಿಯರು(?) ಅಸಹ್ಯವಾಗಿ ಕುಣಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಚಿತ್ರಗಳು, ಲಿರಿಕ್ಸ್ ಗಳು ನೋಡಿದರೆ, ಯಾವ ಮಟ್ಟದಲ್ಲಿ ಚಿತ್ರರಂಗ ಪರಿಕಲ್ಪನೆ ಹಾಗೂ ಪ್ರತಿಭೆಗಳ ಕೊರತೆಯಿಂದ ಬಳಲುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಲಾಂಗು ಮಚ್ಚು ಆಧಾರಿತ ಚಿತ್ರಗಳು ಇನ್ನೂ ಬರುತ್ತಿರುವುದು, ಕ್ರಿಯೇಟಿವಿಟಿ ಹೆಸರಿನಲ್ಲಿ ಅಸಹ್ಯ ಹಾಗೂ ಮುಜುಗರವನ್ನುಂಟು ಮಾಡುವುದು ಸರಿಯಾ? ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು ಅಂತ, ಕೆಲ ನಿರ್ದೇಶಕರು, ನಿರ್ಮಾಪಕರು ಹೇಳುತ್ತಾರೆ. ಆದರೆ ಅವರು ನಿರ್ದೇಶಿಸಿದ ಚಿತ್ರಗಳನ್ನು ಮನೆಮಂದಿಯೆಲ್ಲ ಕುಳಿತು ನೋಡಿದರೆ, ನಿರ್ದೇಶಕನ ಮನೆಮಂದಿ ಎಂಥವರಿರಬಹುದು ಎಂದು ಆಶ್ಚರ್ಯವಾಗುತ್ತದೆ.
ಕಾಪಾಡು ದೇವರೆ!!











