ಮುಖ್ಯಮಂತ್ರಿಗಳ ಸ್ಟೇಟ್ ಮೆಂಟ್ ಗಾಗಿ ಈ ಲಿಂಕ್ ನೋಡಿ.
http://www.kannadaprabha.com/pdf/epaper.asp?pdfdate=6/4/2012
ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡರು ಈ ರೀತಿ ಹೇಳಿಕೆ ನೀಡುತ್ತಾರೆ ಅಂತ ಅನ್ನಿಸಿರಲಿಲ್ಲ. ಇಂದು ಏನೇ ಜಾತ್ಯಾತೀತತೆ ಅಂತ ಮಾತನಾಡಿದರೂ, ಜಾತಿ ವ್ಯವಸ್ಥೆ ಅನ್ನುವುದು ನಮ್ಮ ಜೀನ್ಸ್ ಗಳಲ್ಲೇ ಪ್ರಿಂಟ್ ಆಗಿಬಿಟ್ಟಿದೆ. ಆದರೆ ಸಾರ್ವಜನಿಕ ಹುದ್ದೆಯಲ್ಲಿದ್ದವರು ಈ ರೀತಿ ಒಂದೇ ಜಾತಿಗೆ (ಅವರು ಅದೇ ಜಾತಿಯಿಂದ ಬಂದಿದ್ದರೂ) ತಮ್ಮ ಬದ್ಧತೆಯನ್ನು ಪ್ರದರ್ಶಿಸಬಹುದೆ? ಸದಾನಂದಗೌಡರಿಗೆ ಕೇವಲ ಒಕ್ಕಲಿಗರು ಮಾತ್ರ ಮತ ಹಾಕಿದ್ದಾರೆಯೆ? ದಲಿತರು, ಲಿಂಗಾಯತರು, ಕುರುಬರು, ಬ್ರಾಹ್ಮಣರು, ಕ್ರೈಸ್ತರು, ಮುಸ್ಲಿಮರು, ಉಳಿದ ಜಾತಿಗಳವರು ಮತ ಹಾಕಿಲ್ಲವೆ? ಹಾಕಿದ್ದಾರೆ ಎಂದಾದರೆ ಅದ್ಹೇಗೆ ಮುಖ್ಯಮಂತ್ರಿ ಹುದ್ದೆ ಕೇವಲ ಒಕ್ಕಲಿಗರ ಕೊಡುಗೆಯಾಯಿತು? ಇವರ ಹೇಳಿಕೆಯಂತೆ ಯಡಿಯೂರಪ್ಪನವರಿಗೆ ಇದು ಲಿಂಗಾಯತರ ಕೊಡುಗೆ, ಹೆಗಡೆಗೆ ಬ್ರಾಹ್ಮಣರ ಕೊಡುಗೆಯಾಯಿತೆ?
ಮುಖ್ಯಮಂತ್ರಿ ಹುದ್ದೆ ನೀಡಿರೋದು ಜನ. ಕೇವಲ ಜನ. ಆ ಜನರಿಗೆ ಯಾವುದೇ ಜಾತಿಯನ್ನು ಆರೋಪಿಸುವುದು ಬೇಡ. ಡಿವಿಎಸ್ ಈ ರೀತಿ ಹೇಳಿಕೆ ನೀಡಿ ತಮಗೆ ವೋಟ್ ಮಾಡಿದವರನ್ನೇ ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರಿಗೆ ಇಂತಹ ಸಂಗತಿ ಹೊಳೆಯದಿರವುದು ವಿಪರ್ಯಾಸವೇ ಸರಿ. ಸದಾನಂದಗೌಡರು ಆರ್ಎಸ್ಎಸ್ ಕ್ಯಾಂಪಿನಿಂದ ಬಂದವರು. ಆರ್ಎಸ್ಎಸ್ ಸದಾ ಹಿಂದೂ ಸಂಘಟನೆಯ ಬಗ್ಗೆ ಮಾತನಾಡುತ್ತದೆ. ಇದೇನಾ ಹಿಂದೂ ಸಂಘಟನೆ?










ಚಿಠ್ಠೀ ಆಯೀ ಹೈ…