ನಿಮಗೆ ನಿಮ್ಮ ಮಗನ ಬಗ್ಗೆ ಹೆಮ್ಮೆ ಅನ್ನಿಸತ್ತಾ?
March 22, 2013
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ satish crpf jawan 1 Comment
ಮೊನ್ನೆ ಶ್ರೀನಗರದಲ್ಲಿ ನಡೆದ ಪಾಕಿಸ್ತಾನದ ರಾಕ್ಷಸರ ಆತ್ಮಾಹುತಿ ದಾಳಿಗೆ ಕರ್ನಾಟಕದ ವೀರಯೋಧ ಸತೀಶ್ ಹುತಾತ್ಮರಾದರು. ಮೃತ ಶರೀರ ಕರ್ನಾಟಕಕ್ಕೆ ಬಂತು. ಆ ಸಂದರ್ಭದಲ್ಲಿ ಸತೀಶ್ ತಾಯಿಗೆ ವರದಿಗಾರನೊಬ್ಬ ಕೇಳಿದ ಪ್ರಶ್ನೆ, “ನಿಮ್ಮ ಮಗನ ಬಗ್ಗೆ ನಿಮಗೆ ಹೆಮ್ಮೆ ಅನ್ನಿಸತ್ತಾ?”
ಮೊದಲಿಗೆ ನಾನು ಇಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತನಾಗಿ, ಮೃತಪಟ್ಟವರ ಮನೆಗಳವರ ಬೈಟ್ ತೆಗೆದುಕೊಳ್ಳುವುದನ್ನು ವಿರೋಧಿಸುತ್ತೇನೆ. ನನಗೆ ಸ್ಟೋರಿ ರನ್ ಮಾಡುವ ಅಧಿಕಾರವಿದ್ದರೆ, ಈ ರೀತಿಯ ಬೈಟ್ ಳಿಲ್ಲದೆ ಸ್ಟೋರಿ ರನ್ ಮಾಡುತ್ತೇನೆ. ಮೃತಪಟ್ಟವರ ತಾಯಿ, ತಂದೆ, ಗಂಡ, ಹೆಂಡತಿಗೆ “ನಿಮಗೆ ಈಗ ಹೇಗೆ ಅನ್ನಿಸತ್ತೆ” ಎಂದು ಕೇಳುವುದು ಕ್ರೌರ್ಯವಲ್ಲವೆ?
ಅ ನ ರಮೇಶ್ ನುಡಿ, ದೃಶ್ಯ. ಗೀತನಮನ
February 24, 2013
ಸವಿತಾ ಹಾಲಪ್ಪನವರ್ ಸಾವು ಒಂದು ರೀತಿಯಲ್ಲಿ ಕೊಲೆಯಲ್ಲವೆ?
November 16, 2012
ಅವರೇನು ಮಾಡಿದರು?, ಕಂಬನಿ, ವಿಚಾರ, ವಿಡಿಯೋ anti abortion laws, Irish, savita halappanava 1 Comment
ಧರ್ಮ ಮುಖ್ಯವೋ ಅಥವಾ ಜೀವವೋ? ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ. ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಧರ್ಮ ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಅಹಿಂಸಾ ಪರಮೋ ಧರ್ಮ ಎಂಬ ನಿಲುವು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ? ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ಪರೋಕ್ಷ ಕೊಲೆ ಎನಿಸುತ್ತದೆ.
ಸನ್ಮಾನ್ಯ ಶಾಸಕರೇ, ಬರಗಾಲವಿದ್ದರೆ ಜನ ಊಟ ಬಿಡೋದಿಲ್ಲ, ಆತ್ಮಹತ್ಯೆ ಮಾಡಿಕೊಳ್ತಾರೆ
October 3, 2012
ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ರ ನೀವ್ ಸತ್ರಿ, ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು farmer suicide Leave a comment
ಮೂಲವ್ಯಾಧಿಗೂ ನಾಯಿಗೂ ಏನು ಸಂಬಂಧ?
September 14, 2012
ಕಂಬನಿ, ವಿಚಾರ dog, piles 1 Comment
ಈ ಘಟನೆ ಅಷ್ಟೇನೂ ಜನರ ಗಮನ ಸೆಳೆಯಲಿಲ್ಲ. ನನ್ನ ಗಮನಕ್ಕೂ ತಡವಾಗಿಯೇ ಬಂತು. ಪೇಪರ್ ಗಳಲ್ಲಿ ಕೂಡ ಓದಿದ ಹಾಗಿಲ್ಲ. ಆಗಿದ್ದಿಷ್ಟು.
ಕತ್ತಲಾದ ನಂತರ ಬೆಂಗಳೂರಿನ ನಿರ್ಜನ ಪ್ರದೇಶವೊಂದರಲ್ಲಿ ಆಟೋದಲ್ಲಿ ಮೂವರು ಬಂದಿದ್ದಾರೆ. ಬಂದವರೇ ಅಲ್ಲೇ ಮಲಗಿಕೊಂಡಿದ್ದ ನಾಯಿಗೆ ಮಾಂಸದ ತುಂಡು ಎಸೆದಿದ್ದಾರೆ. ಮಾಂಸದ ಆಸೆಗೆ ನಾಯಿ ಅವರ ಹಿಂದೆ ಮುಂದೆ ಸುತ್ತಾಡಿದೆ. ಹಾಗೆಯೇ ನಾಯಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದವರೇ ಅದರ ಕುತ್ತಿಗೆಯನ್ನು ಕಚಕ್ ಅನ್ನಿಸಿದ್ದಾರೆ. ಆದರೆ ಇದನ್ನೆಲ್ಲ ಹತ್ತಿರದಲ್ಲೇ ಇದ್ದ ಕೆಲ ಹುಡುಗರು ನೋಡಿದ್ದಾರೆ. ನಾಯಿ ತಲೆ ಕಡಿದದ್ದನ್ನು ನೋಡಿದ ಹುಡುಗರು ಇವರನ್ನು ಪ್ರಶ್ನಿಸಿದ್ದಾರೆ. ದಿಢೀರ್ ಅಂತ ರಾಡ್ ಎಳೆದ ಅಪರಿಚತರು ಹುಡುಗರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಆದರೆ ಹುಡುಗರೂ ಜಗ್ಗಿಲ್ಲ. ಫೈಟ್ ಗೆ ನಿಂತಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ. ಹುಡುಗರು ಇಬ್ಬರನ್ನು ಹಿಡಿದು ಸರಿಯಾಗಿ ತದಕಿದ್ದಾರೆ. ಕೊನೆಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೋಲಿಸರ ಆಗಮನ, ಆರೋಪಿಗಳ ಬಂಧನ. “ಯಾಕ್ರಪ್ಪಾ ನಾಯಿ ತಲೆ ಕಡದ್ರೀ?” ಅಂತ ಕೇಳಿದರೆ, ಅವರು ಹೇಳಿದ್ದು, “ಪೈಲ್ಸ್ ಇತ್ತು ಸಾರ್, ಬೀದಿ ಬದಿಯ ಡಾಕ್ಟರ್ ನೊಬ್ಬ ನಾಯಿ ನಾಲಿಗೆ ತಿಂದ್ರೆ ಪೈಲ್ಸ್ ವಾಸಿಯಾಗತ್ತೆ ಅಂದ. ಅದಕ್ಕೆ ನಾಯಿ ತಲೆ ಕಡದು ನಾಲಿಗೆ ತೆಗೆಯಲಿಕ್ಕೆ ಹೊರಟಿದ್ವಿ” ಅಂದ.
ಪೈಲ್ಸ್ ಗಾಗಿ ಜನ ಏನೇನು ಮಾಡುತ್ತಾರೆ ಅಂತ….
ಅಂದಹಾಗೆ ನನಗೆ ಕೂಡ ಪೈಲ್ಸ್ ಇದೆ. ಕಳೆದ ಸುಮಾರು 15 ವರ್ಷಗಳಿಂದ ಪೈಲ್ಸ್ ಇದೆ. ಅದರಿಂದ ನಾನು ಪಟ್ಟ ಯಮಯಾತನೆ ಅಷ್ಟಿಷ್ಟಲ್ಲ. ಆದರೆ ಇದೀಗ ಪೈಲ್ಸ್ ಸಂಪೂರ್ಣ ವಾಸಿಯಾಗದಿದ್ದರೂ, ಕಂಟ್ರೋಲ್ ನಲ್ಲಿದೆ. ಪೌಷ್ಟಿಕ ಆಹಾರ, ಹೆಚ್ಚು ನೀರು ಕುಡಿಯುವುದು, ನಾರಿನ ಪದಾರ್ಥ ಸೇವನೆ, ಮಸಾಲೆ ಪದಾರ್ಥ ತಿನ್ನದಿರುವುದು – ಹೀಗೆ ಕೆಲವೇ ಕೆಲವು ಸಿಂಪಲ್ ಪಥ್ಯ ಹಾಗೂ ಕೆಲ ಔಷಧಿಗಳನ್ನು ಬಳಸಿದರೆ ಪೈಲ್ಸ್ ನಿಯಂತ್ರಣದಲ್ಲಿರುತ್ತದೆ. ನಾಯಿ ತಲೆ ಕಡಿಯುವ ಅಗತ್ಯ ಬೀಳುವುದಿಲ್ಲ.
ಆಂಧ್ರದ ಪೆನುಗೊಂಡದಲ್ಲಿ ರೈಲು ಅಪಘಾತ, ತುರ್ತು ಸಂಪರ್ಕ ಸಂಖ್ಯೆ ಇಲ್ಲಿದೆ
May 22, 2012
ಕಂಬನಿ penukonda rail accident Leave a comment
ಆಂಧ್ರದ ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಮುಂಜಾನೆ ೩.೪೫ ಕ್ಕೆ ಹಂಪಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದೆ. ತುರ್ತು ಸಂಪರ್ಕ ಸಂಖ್ಯೆ ಹೀಗಿದೆ -
ಬೆಂಗಳೂರು – 080 – 22321166, 22156653
ಹುಬ್ಬಳ್ಳಿ – 0836 – 2345338, 2346141, 2289826
ಬಳ್ಳಾರಿ – 08392 – 277704
ಹೊಸಪೇಟೆ – 08394-2217881
ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು?
July 14, 2011
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು mumbai bomb blast 1 Comment
ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ. ಅಜ್ಮಲ್ ಕಸಾಬ್ ಹಾಗೂ ಅಫ್ಜಲ್ ಗುರುವಿನ ಗೆಳೆಯರು ಮತ್ತೊಮ್ಮೆ ನಕ್ಕಿದ್ದಾರೆ. ಎಂದಿನಂತೆ ದೇಶದೆಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ (ಬಾಂಬ್ ಸ್ಠೋಟ ನಡೆದ ಬಳಿಕ). ಚಿದು ಸಾಹೇಬರು ತಮ್ಮ ಪಂಚೆ ಸರಿಪಡಿಸಿಕೊಳ್ಳುತ್ತ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಹೇತ್ಲಾಂಡಿ ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು.
ಇಂತಹ ನಿರ್ದಯಿ ಅಧಿಕಾರಿಗೆ ಶಿಕ್ಷೆಯಾಗಲೇಬೇಕು
February 1, 2011
ಆಜಾದಿ ಬಚಾವೋ ಆಂದೋಲನದ ರೂವಾರಿ ರಾಜೀವ್ ದೀಕ್ಷಿತ್ ಶ್ರದ್ಧಾಂಜಲಿ
December 2, 2010
ನನ್ನ “ಸಾಮ್ರಾಟ” ಇನ್ನಿಲ್ಲ
November 29, 2010
ವಿಜಯದಶಮಿಗೆ ಇಷ್ಟೇ ವರ ಕೊಡು ತಾಯೇ…
October 16, 2010
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ durga, vidhana sabhe, vijayadashami 6 Comments
ಇಂದಿನ ‘ವಿಜಯ ಕರ್ನಾಟಕ’ ಸಂಪಾದಕೀಯ ಹೀಗಿದೆ
October 12, 2010
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಬಹುಪರಾಕ್, Media editorial, vijay karnataka 3 Comments
ಯೋಧರ ಕತ್ತು ಸೀಳಿದ ನಕ್ಸಲರಿಗೆ ಧಿಕ್ಕಾರವಿರಲಿ…
July 2, 2010
ಇಳೇಖಾನ್ ಇನ್ನಿಲ್ಲ…
April 22, 2010
ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ…..
April 14, 2010
ಚಾಮಯ್ಯ ಮೇಷ್ಟ್ರೆ ಮತ್ತೊಮ್ಮೆ ಬನ್ನಿ…
January 18, 2010
ಕಂಬನಿ chamayya meshtru, death, film star, k s ashwath Leave a comment


























ಚಿಠ್ಠೀ ಆಯೀ ಹೈ…