ನನ್ನ ಮಗನ ಪ್ರಶ್ನೆಗೆ ಉತ್ತರಿಸಿ…
April 14, 2013
ಮೂರ್ಖರ, ಮೂರ್ಖರಿ೦ದ, ಮೂರ್ಖರಿಗಾಗಿ
April 9, 2013
ವಿಚಾರ, Media cipher's space, pramod Leave a comment
ತ್ರಾಸದಿ೦ದಲೇ ಅಸ೦ಬದ್ಧ ಪ್ರಾಸಕ್ಕಾಗಿ ಶಬ್ದ ತಿರುಚಿ ನ್ಯೂಸ್ ಹೆಡ್ ಲೈನ್ಸ್ ಮಾಡೋದು ಒ೦ದು ಟ್ರೆ೦ಡ್. ವಿಜಯ ಕರ್ನಾಟಕದಲ್ಲಿ ಶುರುವಾದ ಇದು ಕ್ಲೀಷೆಯಾಗಿ ಎಲ್ಲ ಕಡೇ ತು೦ಬಿ ಕನ್ನಡ ನರಳುತ್ತಿದೆ. ಅರೆ ಬೆ೦ದ ಕನ್ನಡದ ಚಾನೆಲ್ ಗಳು ಪು೦ಖಾನುಪು೦ಖವಾಗಿ ತಮ್ಮ ಪ್ರತಿಭೆಯನ್ನು ಕನ್ನಡಿಗರ ಮು೦ದೆ ತೋರಿಸಿ ಬೆತ್ತಲಾಗಿದ್ದಾರೆ. ಕನ್ನಡಿಗರೇನು ಕಮ್ಮಿ. ಉದಾರಿಗಳು. ಬೇಕಾದಷ್ಟು ಹಿ೦ದಿ, ತೆಲುಗು, ತಮಿಳು ಚಾನೆಲ್ ಇದ್ದಾವೆ. ಅದನ್ನು ನೋಡಿಕೊ೦ಡು ಹಾಯಾಗಿ ಬಿದ್ದಿರುತ್ತಾರೆ.
ಆದರೆ ಬರಿಯ ಕನ್ನಡ ಗೊತ್ತಿದ್ದವರು ಏನು ಮಾಡೋದು!!
ಇದು ಟೀವಿಯ ಒ೦ದು ತುದಿ. ಇನ್ನೊ೦ದು ತುದಿಗೆ ಹೋದಾಗ..
ಒ೦ದಾನೊ೦ದು ಕಾಲದಲ್ಲಿ ಸರಕಾರಿ ಕೆಲಸದ ಬಿದ್ದಿದ್ದ ಮಿಡಲ್ ಕ್ಲಾಸ್, ರಿಯಲ್ ಎಸ್ಟೇಟ್, ಷೇರು ಪೇಟೆ, ಐಟಿ ಇತ್ಯಾದಿಗಳ ಹಿ೦ದೆ ಬಿತ್ತು. ಸದ್ಯಕ್ಕೆ ಅವೆಲ್ಲವೂ ಬಿದ್ದಿವೆ. ರಿಯಲ್ ಎಸ್ಟೇಟ್ ಮಾಫಿಯದಿ೦ದ ಬಚಾವಾಗಳು ಮಿಡಲ್ ಕ್ಲಾಸ್ ಗೆ ಕಷ್ಟವಾಗಿದ್ದರಿ೦ದ ಮಿಡಲ್ ಕ್ಲಾಸ್ ಯಾವುದಾದರೂ ಒಳ್ಳೆಯ ಫಸಲು ಕೊಡುವ ಪ್ರೊಫೆಷನ್ ಹುಡುಕುತ್ತಿದೆ.ಮು೦ದಕ್ಕೇನು ಮಾಡುವುದು ಎ೦ಬುದಾಗಿ ಪ್ರಶ್ನೆ ಹುಟ್ಟಿಕೊ೦ಡಿದೆ.
ಇಡೀ ದಿನ ಟೀವಿ ಮು೦ದೆ ಅ೦ಗಾಲಾಚಿ ಬಿದ್ದಿರುವ ಮಿಡಲ್ ಕ್ಲಾಸ್ ಗೆ ಟೀವಿ ಸೇರಿದರೆ ಮನೆಮಾತಾಗಬಹುದು.ಟ್ಯಾಲೆ೦ಟ್ ಇಲ್ಲದೆ ದುಡ್ಡು ಮಾಡುವ ಇನ್ನೊ೦ದು ವಿಧಾನ ಟೀವಿ ಚಾನೆಲ್ ಗಳು, ನ್ಯೂಸ್, ಸೀರಿಯಲ್ ಗಳು. ಅಸ೦ಬದ್ಧಕ್ಕೆ ಹೊಸ ಔನ್ನತ್ಯ ಕೊಟ್ಟ ಧಾರವಾಹಿಗಳಿಗೆ ಕೂಡ ಬಹಳಷ್ಟು ಕತ್ತೆಗಳು ಕ್ಷಮಿಸಿ ಮನುಷ್ಯರು ಬೇಕಾಗುತ್ತಾರೆ. ಈ ಧಾರವಾಹಿಗಳ ಬಗ್ಗೆ ಒ೦ದಲ್ಲ ಮೆಗಾ ಬ್ಲಾಗಿನಲ್ಲಿ ಬರೆಯಬಹುದು. ಸದ್ಯಕ್ಕೆ ನ್ಯೂಸ್ ಚಾನೆಲ್ ಗಳ ಬಗ್ಗೆ ಅವಲೋಕಿಸೋಣ.
ಸೊಟ್ಟ ನಿರ೦ತರ, ಹುತ್ತಮ ತೆಲುಗು ಸಮಾಜಕ್ಕಾಗಿ, ಇಪ್ಪತ್ನಾಲ್ಕು ಕ್ಯಾರೆಟ್ ಹಿತ್ತಾಲೆ ಚೊ೦ಬು ಇತ್ಯಾದಿ ವಿಧ ವಿಧವಾಗಿ ಟ್ಯಾಗ್ ಹಾಕಿ ಮಿನುಗುತ್ತಿರುವ ಚಾನೆಲ್ ಗಳಿಗೆ ಸೇರಲು ಈ ಕೆಲವು ಅರ್ಹತೆಗಳು ಇದ್ದರೆ ನಿಮಗೆ ಕೆಲಸ ಸಿಗುವುದು ಖ೦ಡಿತ.
- ಕ೦ಟೆ೦ಟ್ ಇಲ್ಲದೇ ಜೋರಾಗಿ ಅರಚಲು, ಕಿರುಚಲು ಗೊತ್ತಿರಬೇಕು.
- ಒಟ್ಟಾರೆಯಾಗಿ, ಎಲ್ಲೋ ಒ೦ದು ಕಡೆ ಇತ್ಯಾದಿ ವೇದಶಬ್ದಗಳನ್ನು ಕ೦ಠಪಾಠ ಮಾಡಿ ನಿಮ್ಮ ವಾಕ್ಯದಲ್ಲಲ್ಲಿ ತುರುಕಿಸಿ ಸಾವಿರಾರು ಸಾರಿ ಸುತ್ತಿ ಬಳಸಿ ಹೇಳಿದ್ದನ್ನೇ ಹೇಳಲು ಸಿದ್ದರಿರಬೇಕು.
- ದಿನಾಲೂ ಇದೇ ಪ್ರೋಗ್ರಾಮ್ ಲೀಸ್ಟ್ ಚಾಚೂ ತಪ್ಪದೇ ಪಾಲಿಸಬೇಕು – ಬೆಳಗ್ಗೆ ದೆವ್ರು, ದೇವ್ರ ಬಗ್ಗೆ ಭಯ ಹರಡಿಸೋದು, ಜ್ಯೋತಿಷ್ಯ, ಡಿಸ್ಕವರಿ ಯೂಟ್ಯೂಬ್ ಕಾಪಿ, ಕ೦ಪಲ್ಸರಿ ಕ್ರಿಕೆಟ್, ಯಥಾವತ್ ಅಡುಗೆ ,ಸ೦ಜೆ ಪಾಲಿಟಿಕ್ಸು, ಆಮೇಲೆ ಮರ್ಡರು ಕಾಮ ಕ್ರೈಮು, ನ೦ತರ ಹೀಗೂ ಉ೦ಟೆ.
- ಚ೦ದನ, ಈಟೀವಿ ನ್ಯೂಸ್ ನ೦ತೆ ನ್ಯೂಟ್ರಲ್ ಆಗಿರದೆ ಪಕ್ಕದ ಮನೆಯವರ ಹತ್ರ ಗಾಸಿಪ್ ಮಾಡಿದ೦ತೆ ಮಾತಾಡಬೇಕು. ಹಾಗ೦ತೆ, ಹೀಗ೦ತೆ ಹೀಗೆ ಅ೦ತೆಕ೦ತೆಗಳ ಬೊ೦ತೆ ಇರಬೇಕು.
- ರೇಪ್, ಸೆಕ್ಸ್ ವೈಭವೀಕರಿಸಿ ತೋರಿಸುವ ಲಜ್ಜೆಗೆಟ್ಟ ಎದೆಗಾರಿಕೆ ಇರಬೇಕು.
- ಫುಡಾರಿಗಳ, ಫಿಲ೦ ಸ್ಟಾರ್(ಸ್ವ೦ತ ಸರ್ಟಿಫಿಕೇಟ್ ಮಾಡಿಸಿಕೊ೦ಡವರು) ಗಳ ಬೂಟು, ^&*% ನೆಕ್ಕಲು ರೆಡಿಯಾಗಿರಬೇಕು.
- ತೆಲುಗು, ಬಾಲಿವುಡ್ ಫಿಲ೦ ಇ೦ಡಸ್ಟ್ರೀ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಅದರ ಬಗ್ಗೆ ಹಾಡಿ ಹೊಗಳಲು ಗೊತ್ತಿರಬೇಕು.
- ಮನೆಹಾಳ್ ಜ್ಯೋತಿಷ್ಯ ಹೇಳುವವರ ಜೊತೆ ಬೊಗಳೆ ಮಾತಾಡಲು ಗೊತ್ತಿರಬೇಕು.
- ನಿಜವಾದ ಸಮಸ್ಯೆಗಳನ್ನು ಸೈಡಿಗೆ ಹಾಕಿ, ಕೋಟಿಗಟ್ಟಳೆ ಖರ್ಚಿನ ಫಿಲ೦ ಸ್ಟಾರ್ ಮಕ್ಕಳ ಮದುವೆ, ದುಡ್ಡು ಹಾಳು ಮಾಡೊದನ್ನು ತೋರಿಸುವಷ್ಟು ಹೀನ, ಮತಿಹೀನ ನಾಗಿರಬೇಕು.
- ಸಲೀಸಾದ, ನೇರವಾದ ಸಬ್ಜಕ್ಟ್ ನ್ನು ಕಾ೦ಟ್ರವರ್ಸಿ ಯಾಗಿ ಕನ್ವರ್ಟ್ ಮಾಡುವ ಜಾಣ್ಮೆ ಇರಬೇಕು. ಡಿಬೇಟ್ ನಲ್ಲಿ ಕಾ೦ಟ್ರವರ್ಸಿ ಕಿ೦ಗ್ ಗಳನ್ನೇ ಕರೆಸಿ ಸೋ ಕಾಲ್ಡ್ ಡಿಸ್ಕಶನ್ ಮಾಡಿಸಬೇಕು.
- ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಬದಲು ಅವಿವೇಕಿ, ಮೂಢ, ದರಿದ್ರ ಮನುಷ್ಯರನ್ನು ಸ್ಟುಡಿಯೋಗೆ ತ೦ದು ಅವರ ಬಾಯಿ೦ದ ನುಡಿ ಮುತ್ತನ್ನು ಉದುರಿಸುವ ಟ್ಯಾಲೆ೦ಟ್ ಇರಬೇಕು.
- ಯಾವುದೇ ಕ್ಷಣದಲ್ಲಿ ಸಿಕ್ಕಿದನ್ನೆಲ್ಲಾ ವೀಡಿಯೋ ಮಾಡಲು ಕ್ಯಾಮೆರ ಇರೋ ಸ್ಮಾರ್ಟ್ ಫೋನ್ ಇದ್ದರೆ ಚೆನ್ನ.
ವೀಕ್ಷಕ ಮಹಾಶಯನ ಬಗ್ಗೆ ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ. ಭಾರತದಲ್ಲಿ ನೂರಿಪ್ಪತ್ತು ಕೋಟಿ ಜನ ಇದ್ದಾರೆ. ಎಷ್ಟೊ೦ದು ಜನ ಪರ್ಪಸ್ ಇಲ್ದೇ ಹುಟ್ಟಿದ್ದಾರೆ. ಯಾವುದೇ ಪ್ರೋಗ್ರಾಮ್ ಇರಲಿ, ಎಷ್ಟೇ ಕೆಟ್ಟ ಕೀಳು ಅಭಿರುಚಿಯ ಪ್ರೋಗ್ರಾಮ್ ಇರಲಿ ನೋಡೋರು ಸಿಗ್ತಾರೆ. ಆಫ್ಟರ್ ಆಲ್ ಅವನು ಯಾವುದಾದರೂ ಚಾನೆಲ್ ನೋಡಲೇಬೇಕು. ಟೀವಿಯ ಮು೦ದೆ ಕೂರುವರೆಲ್ಲಾ ಮೂರ್ಖರೆ೦ಬ ಆಪ್ತ ಭಾವನೆಯಿ೦ದ ಪ್ರೋಗ್ರಾಮ್ ನಡೆಸಿಕೊಡಿ. ತಲೆ ನಮ್ಮದು ಯಶಸ್ಸು, ಟಿಆರ್ ಪಿ ನಿಮ್ಮದು.
ಜಾಸ್ತಿ ಟಿಆರ್ ಪಿ ಎ೦ದರೆ ಚೆನ್ನಾಗಿರಲೇಬೇಕು ಎ೦ಬುದು ಮಾಸ್ ಹಿಸ್ಟೀರಿಯ. ಜಾಸ್ತಿ ಪೇಪರ್ ಸರ್ಕುಲೇಷನ್ ಅ೦ದರೆ ಚೆನ್ನಾಗಿರಲೇಬೇಕು ಅಲ್ಲವೇ. ಉದಾ. ಟೈ೦ಸ್ ಆಫ್ ಇ೦ಡಿಯಾ ದ೦ತಹ ಪೇಪರ್ ತಮ್ಮನ್ನು ತಾವು ಹಾಡಿ ಕೊ೦ಡಾಡಿಕೊ೦ಡು ಮಾರಿ, ಜನರನ್ನು ಯಾಮರಿಸುತ್ತಿರುವುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ. ನೆಟ್ಟಗೆ ಯಾವತ್ತಾದರೂ ಹೆಡ್ ಲೈನ್ ಬರೆದವರಲ್ಲ. ಮನೆ ಮ೦ದಿ ಕುಳಿತು ಓದುವ ಪೇಪರಲ್ಲ. ಲಜ್ಜೆಗೆಟ್ಟ ನ್ಯೂಸ್ ನ್ನು ಬಿಡದೆ ಆರಿಸಿ ಪ್ರಿ೦ಟ್ ಮಾಡಿದವರು. ಲಾಸ್ಟ್ ಸ್ಟಾಪ್ ಜಾಸ್ತಿ ಸರ್ಕುಲೇಷನ್. ಅದಕ್ಕೆ ಏನೂ ಮಾಡಲು ರೆಡಿ.
ಜಾಸ್ತಿ ಕ್ಲಿಕ್ ಗಳೆ೦ದರೆ ಬೆಸ್ಟ್ ವೆಬ್ ಸೈಟ್. ಇದೂ ಮೇಲೆ ಹೇಳಿ೦ದತೆ ಸ್ವ೦ತ ಸರ್ಟಿಫೀಕೇಟ್. ಟೈ೦ಸ್, ಹಿ೦ದೂಸ್ತಾನ್ ಟೈಮ್ಸ್ ಇತ್ಯಾದಿ ಕಾ೦ಗ್ರೆಸ್ ಕೃಪಾ ಪೋಷಿತ ಸುದ್ಧಿ ಮನೆಗಳು ಧಾರಾಳವಾಗಿ ಅಶ್ಲೀಲತೆಯನ್ನು ನಾಭೀಕರಿಸಿ ತೋರಿಸುತ್ತಾರೆ. ಇದರ ಹಿ೦ದಿನ ಉದ್ದೇಶ ಜಾಸ್ತಿ ಕ್ಲಿಕ್ಕ್ ಗಳು. ಅಶ್ಲೀಲ ವೆಬ್ ಸೈಟ್ ಗಳಿಗೂ ಈ ವೆಬ್ ಸೈಟ್ ಗಳಿಗೂ ಜಾಸ್ತಿ ವ್ಯತ್ಯಾಸವಿಲ್ಲ. ಬರಿಯ 18 ವಯಸ್ಸಿನ ಡಿಸ್ಕ್ಲೈಮರ್ ಮಾತ್ರ.
ಜಾಸ್ತಿ ಹಣಗಳಿಸಿದೆಯೆ೦ದರೆ ಒಳ್ಳೆಯ ಚಿತ್ರ ಎ೦ದು ಮಾಧ್ಯಮದವರು ಸೃಷ್ಟಿಸಿದ ಮಿಥ್ಯತೆ ಎಲ್ಲಾ ಕಡೆ ವ್ಯಾಪಿಸಿ ಅದೇ ಸತ್ಯವಾಗಿ ತೋರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ. ನೂರು ಕೋಟಿ ಕ್ಲಬ್ ನಲ್ಲಿರುವ ಬಾಲಿವುಡ್ ಚಿತ್ರಗಳ ಪಟ್ಟಿ ನೋಡಿ. ಟೀವಿ ಹಾಗು ನ್ಯೂಸ್ ಪೇಪರ್ ನವರು “ಮಸ್ಟ್ ವಾಚ್”, “ಡೋ೦ಟ್ ಮಿಸ್” ಅ೦ತಾ ಬರೆದು, ಸಿಲೆಬ್ರಿಟಿ ಪು೦ಗಿ ಊದಿ ಊದಿ ಚೆನ್ನಾಗಿ “ರಿವ್ಯೂ” ಬರುವ೦ತೆ ನೋಡಿಕೊಳ್ಳುತ್ತಾರೆ. ಶಾರುಕ್, ಯಶ್ ರಾಜ್ ಪ್ರೊಡಕ್ಷನ್ ಇ೦ಡಸ್ಟ್ರಿ ಭಯದಿ೦ದ ಕ೦ಪಲ್ಸರಿ 3.5-4 ಸ್ಟಾರ್ ರೇಟಿ೦ಗ್ ಚಿತ್ರಗಳಾಗುತ್ತವೆ. ಪ್ರತಿ ಸಾರಿಯೂ ಮೋಸ ಹೋಗುವವರ ದುಡ್ಡು ಅದೇ ದೊಡ್ಡ ಫ್ರಾಡ್ಯೂಸರ್ ಗಳ ಕಿಸೆಗೆ ಸೇರುತ್ತವೆ.
ಹೆಚ್ಚಿನವರಿಗೆ ದಿನ ಬೆಳಗಾಗುವುದು ಟೀವಿಯಿ೦ದಲೇ. ಎಲ್ಲರಿಗೂ ದಿನ ಮುಗಿಯುವುದು ಟೀವಿಯಿ೦ದ. ಟೀವಿ ಮೂರ್ಖರ ಪೆಟ್ಟಿಗೆ ಅನ್ನುತ್ತಿದ್ದರು. ಅದು ಮೂರ್ಖರನ್ನು ಹುಟ್ಟು ಹಾಕುತ್ತದೆ. ಮೂರ್ಖರನ್ನು ತನ್ನ ತೆಕ್ಕೆಗೆಳೆದು ನಿಯ೦ತ್ರಿಸುತ್ತದೆ ಕೂಡ.
ಪ್ರೊ. ಎಸ್. ಎನ್. ಬಾಲಗಂಗಾಧರ ಅವರೊಂದಿಗೆ “ಮುಖಾಮುಖಿ”
March 29, 2013
ನಿಮಗಿದೋ ಆಮಂತ್ರಣ, ವಿಚಾರ prof. s. n. balagangadhara Leave a comment
ನಿಮಗೆ ನಿಮ್ಮ ಮಗನ ಬಗ್ಗೆ ಹೆಮ್ಮೆ ಅನ್ನಿಸತ್ತಾ?
March 22, 2013
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ satish crpf jawan 1 Comment
ಮೊನ್ನೆ ಶ್ರೀನಗರದಲ್ಲಿ ನಡೆದ ಪಾಕಿಸ್ತಾನದ ರಾಕ್ಷಸರ ಆತ್ಮಾಹುತಿ ದಾಳಿಗೆ ಕರ್ನಾಟಕದ ವೀರಯೋಧ ಸತೀಶ್ ಹುತಾತ್ಮರಾದರು. ಮೃತ ಶರೀರ ಕರ್ನಾಟಕಕ್ಕೆ ಬಂತು. ಆ ಸಂದರ್ಭದಲ್ಲಿ ಸತೀಶ್ ತಾಯಿಗೆ ವರದಿಗಾರನೊಬ್ಬ ಕೇಳಿದ ಪ್ರಶ್ನೆ, “ನಿಮ್ಮ ಮಗನ ಬಗ್ಗೆ ನಿಮಗೆ ಹೆಮ್ಮೆ ಅನ್ನಿಸತ್ತಾ?”
ಮೊದಲಿಗೆ ನಾನು ಇಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತನಾಗಿ, ಮೃತಪಟ್ಟವರ ಮನೆಗಳವರ ಬೈಟ್ ತೆಗೆದುಕೊಳ್ಳುವುದನ್ನು ವಿರೋಧಿಸುತ್ತೇನೆ. ನನಗೆ ಸ್ಟೋರಿ ರನ್ ಮಾಡುವ ಅಧಿಕಾರವಿದ್ದರೆ, ಈ ರೀತಿಯ ಬೈಟ್ ಳಿಲ್ಲದೆ ಸ್ಟೋರಿ ರನ್ ಮಾಡುತ್ತೇನೆ. ಮೃತಪಟ್ಟವರ ತಾಯಿ, ತಂದೆ, ಗಂಡ, ಹೆಂಡತಿಗೆ “ನಿಮಗೆ ಈಗ ಹೇಗೆ ಅನ್ನಿಸತ್ತೆ” ಎಂದು ಕೇಳುವುದು ಕ್ರೌರ್ಯವಲ್ಲವೆ?
ಯಾವ ಲೆವೆಲ್ ಗೆ ಇಳಿದೀದೀವಪ್ಪಾ?
March 8, 2013
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ವಿಚಾರ ambulance 1 Comment
ಮನುಷ್ಯ ಮತ್ತೊಬ್ಬ ಮನುಷ್ಯನ ಸಾವು ಬದುಕಿನ ಹೋರಾಟವನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾನೆ. ಟ್ರಾಫಿಕ್ ನಲ್ಲಿ ಸೈರನ್ ಬಾರಿಸುತ್ತ ಸಾಗುವ ಆಂಬ್ಯುಲೆನ್ಸ್ ಹಿಂದೆಯೇ ಹತ್ತಾರು ವಾಹನಗಳು ಬೆನ್ನು ಬಿದ್ದಿರುತ್ತವೆ.
ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಖಂಡನಾ ಗೀತೆಯಲ್ಲೂ “ತೇರೀ ಬೇಣ್ ಕೀ….”
February 14, 2013
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ, ವಿಡಿಯೋ amant, delihi gang rape Leave a comment
ಮೈಮೇಲೆ ಮಲ ಸುರಿದುಕೊಂಡು ದಲಿತರ ಪ್ರತಿಭಟನೆ
February 13, 2013
ಅವರೇನು ಮಾಡಿದರು?, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ dalait, protest Leave a comment
ನಿನಗೆ ನನ್ನ ಬರ್ತ್ ಡೇ ನೆನಪಿದ್ಯಾ? ಸೋ ಸ್ವೀಟ್ ಆಫ್ ಯೂ…
January 31, 2013
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ವಿಚಾರ birthday, facebook Leave a comment
ನನ್ನದೊಂದು ಪುಟ್ಟ ಡೈರಿಯಿತ್ತು. ಅದರಲ್ಲಿ ನನ್ನ ಪ್ರೀತಿ ಪಾತ್ರರಾದವರ ಜನ್ಮದಿನಾಂಕ, ಮದುವೆ ವಾರ್ಷಿಕೋತ್ಸವಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ಇದು ನಾನು ಶಾಲಾ ದಿನಗಳಿಂದಲೂ ಇಟ್ಟುಕೊಂಡಿದ್ದ ಡೈರಿಯಾಗಿತ್ತು. ಪ್ರತಿವರ್ಷವೂ ನಾನು ಈ ಡೈರಿಯ ರೆಫರೆನ್ಸ್ ಇಟ್ಟುಕೊಂಡು ವಿಶ್ ಮಾಡುತ್ತಿದ್ದೆ. “ಓಹ್, ನಿನಗೆ ನೆನಪಿದ್ಯಾ ನನ್ನ ಬರ್ತ್ ಡೇ…ಸೋ ಸ್ವೀಟ್ ಆಫ್ ಯೂ…ಥ್ಯಾಂಕ್ಸ್ ಎ ಲಾಟ್….ನೀನೊಬ್ನೆ ನೋಡು ನನ್ನ ಬರ್ತ್ ಡೇ ನೆನಪಿಟ್ಟುಕೊಂಡು ವಿಶ್ ಮಾಡಿದ್ದು” ಎಂದೆಲ್ಲ, ನಾನು ವಿಶ್ ಮಾಡಿದವರು ಹೇಳುತ್ತಿದ್ದರು. ಅವರಿಗೆ ನಿಜಕ್ಕೂ ಸಂತಸವಾಗಿರುತ್ತಿತ್ತು. ಅವರ ಸಂತಸ ನೋಡಿ ನನಗೂ ಆನಂದವಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ನನ್ನ ಬಳಿ ಈಗಲೂ ಆ ಪುಟ್ಟ ಡೈರಿ ಇದೆ. ಅದರಲ್ಲಿನ ಹೆಸರುಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ನಾನು ಈಗ ವಿಶ್ ಮಾಡಿದಾಗ, ಎಲ್ಲರೂ ಕೇಳುವುದು, “ಓಹ್ ಥ್ಯಾಂಕ್ಸ್….ಹೇಗೆ ಗೊತ್ತಾಯ್ತು ನನ್ನ ಬರ್ತ್ ಡೇ ಅಂತ….ಫೇಸ್ ಬುಕ್ ನಲ್ಲಿ ನೋಡಿದೆ ಅಲ್ವಾ?…..”
ನನ್ನ ಪುಟ್ಟ ಡೈರಿ ಅಳುತ್ತಿರುವುದು ಯಾರಿಗೂ ಕೇಳಿಸುತ್ತಿಲ್ಲ.
ಎಲ್ಲೊ ಒಂದು ಕಡೆ ಫೇಸ್ ಬುಕ್ ಮನುಷ್ಯರ ನಡುವಿನ ಸಂಬಂಧಗಳನ್ನ ಯಾಂತ್ರೀಕೃತವಾಗಿಸುತ್ತಿದೆಯಾ?
ಕನಿಷ್ಠ ಶಿಷ್ಟಾಚಾರವೂ ಇಲ್ಲದ ರಾಜಕಾರಣಿಗಳು
January 16, 2013
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ, Media kds, Media, news acnhor Leave a comment
ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.
ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”
ಆರ್ ಎಸ್ ಎಸ್, ಮಾಧ್ಯಮ ಹಾಗೂ ಪ್ರವೀಣ್ ಪಟವರ್ಧನ್ ಅವರ ಪ್ರಕಟಗೊಳ್ಳದ ಪ್ರತಿಕ್ರಿಯೆ
January 15, 2013
ಅವರೇನು ಮಾಡಿದರು?, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ agni shridhar, dwarakanath, Media, praveen patavardhan, rss, vimala 2 Comments
ಪ್ರವೀಣ್ ಪಟವರ್ಧನ್ ಬರೆಯುತ್ತಾರೆ…..ವ್ಯಕ್ತಿತ್ವ ವಿಕಸನದ ಶಿಬಿರಗಳಲ್ಲಿ communication ಬಗ್ಗೆ ಒಂದು ಪ್ರಕ್ರಿಯೆ ಇಂತಿದೆ. ಶಿಕ್ಷಕನು ಸಭಿಕನೋರ್ವನಿಗೆ ಕಿವಿಯಲ್ಲ್ಲಿ ಒಂದು ಕತೆ ಹೇಳುತ್ತಾನೆ. ನಿಯಮಾನುಸಾರ ಆ ಕತೆಯನ್ನು ಒಮ್ಮೆಯಷ್ಟೇ ಹೇಳುತ್ತಾನೆ. ಈ ಸಭಿಕ ಅದೇ ರೀತಿಯಲ್ಲಿ ತನ್ನ ಪಕ್ಕದಲ್ಲಿ ಇರುವ ತನ್ನ ಸ್ನೇಹಿತನಿಗೆ ಅದೇ ಕತೆಯನ್ನು ಕಿವಿಯಲ್ಲ್ಲಿ ಹೇಳಬೇಕು. ಈ ರೀತಿಯಾಗಿ (ಸಾಲಿನ) ಮುಂದಿನವನು ತನ್ನ ಹಿಂದಿನವನಿಗೆ ತಾನು ತನ್ನ ಹಿಂದಿನವನಿಂದ ತಿಳಿದುಕೊಂಡ ಆ ಸಂಗತಿಯನ್ನು ಹೇಳುವುದೇ ಆಟ. ಕಡೆಯಲ್ಲಿ ಉಳಿಯುವವ ಆ ಸಂಗತಿಯನ್ನು ಇಡಿಯ ಸಭೆಯಲ್ಲಿ ಜೋರಾಗಿ ಹೇಳಿದಾಗ ಆ ಶಿಕ್ಷಕನು ಬೆರಗಾಗಿಬಿಡುತ್ತಾನೆ. ಕಾರಣ ಪ್ರತಿಯೊಬ್ಬನೂ ತನ್ನ Version ಹೇಳುತ್ತಾ ಹೋದಹಾಗೆ ಕತೆ ಬದಲಾಗುತ್ತಾ, ತಮ್ಮದೇ ಉಪಕಥೆಗಳು ಸೇರಿಕೊಂಡು ಮೂಲ ಕಥೆಗಿಂತ ವಿಭಿನ್ನವಾಗಿರುತ್ತದೆ. ಇಂದಿನ ಮಧ್ಯಮದವರು ಮಾಡಿದ್ದೂ ಅದೆ. ಮೋಹನ್ ಭಾಗವತ್ ರವರ ಭಾಷಣವನ್ನು ಕೇಳಿದವನು ಮಸಾಲೆ ಅರಿದು ಜಗತ್ತಿಗೆ ಅವರೊಬ್ಬ ದುಷ್ಟ ಎಂದು ಹೇಳುತ್ತಾ ಕಿರುಚಾಡಿದರು. ಉಳಿದವರು ಅವರದ್ದೇ ಕತೆ ಹೆಣೆದರು. ಕತೆ ಕಟ್ಟಲು ಸಮಯವಿಲ್ಲದವರು ಪ್ರಮುಖ ಸುದ್ದಿಯಲ್ಲಿ ಬಂದ ವಿವರವನ್ನೇ ತರ್ಜುಮೆ ಮಾಡಿದರು. ಅಸಲಿಗೆ ಯಾರೂ ಏನಾಗಿರಬಹುದೆಂದು ಓದಲಿಲ್ಲ. ಕೇಳಲಿಲ್ಲ. ಅಂತಿಮದಲ್ಲಿ ಮೋಹನ್ ಭಾಗವತರಿಗೆ, ಆರ್ ಎಸ್ ಎಸ್ ಗೆ ಕೆಟ್ಟ ಹೆಸರು ಬರುವಂತೆ ಮಾಡಿದರು. ಜನವರಿ 8ರ “ಬಿಗ್ ಡಿಬೇಟ್” ನಲ್ಲಿ ಹಲವರ ಹೇಳಿಕೆಗಳನ್ನು ಹಮೀದ್ ಪಾಳ್ಯ ತೋರಿಸಿದರಾದರೂ ಎಲ್ಲರೂ ಮಾತನಾಡಿದ್ದು ಆರ್ ಎಸ್ ಎಸ್ ಬಗ್ಗೆ. ಮೊಹನ್ ಭಾಗವತರ ಬಗ್ಗೆ. ಆರ್ ಎಸ್ ಎಸ್ಸ್ ಒಳ್ಳೆಯ ಕೆಲಸ ಮಾಡಿದಾಗ ಹೊಗಳದೆ ತಟಸ್ತರಾಗಿ ಇರುವ ಈ ಮಿತ್ರ ವೃಂದ ತಮ್ಮ Hidden Agendaಗೋಸ್ಕರ ಸೂರು ಕಳಚಿ ಬೀಳುವಂತೆ ಹರಿಹಾಯ್ದರು.ಲೇಖನವನ್ನು ಓದುವುದಕ್ಕಿಂತಲೂ ಮುಂಚೆ Youtube ನಲ್ಲಿ ಮೋಹನ್ ಭಾಗವತರ ಭಾಷಣ, ಸುವರ್ಣ ನ್ಯೂಸ್ ವಾಹಿನಿಯ ಜನವರಿ ೮ ರ “ಬಿಗ್ ಡಿಬೇಟ್” ಕಾರ್ಯಕ್ರಮವನ್ನೂ ನೋಡಿರಿ. ನಿಮಗೆ ಪ್ರಸ್ತುತವೆನಿಸಬಹುದುಮೋಹನ್ ಭಾಗವತರು ಮಾತನಾಡಿದ ಪೂರ್ಣ ವಿವರಕ್ಕೆ ಇಲ್ಲಿ ನೋಡಿ. www.samvada.org ಇದನ್ನು ನೋಡದೇ ವಿವರ ತಿಳಿಯದೇ ಮಾತನಾಡಿದ 3ಖರನ್ನು (ವಿಮಲಾ, ಅಗ್ನಿ ಶ್ರೀಧರ್, ಸಿ. ಎಸ್. ದ್ವಾರಕಾನಾಥ್) ಹೀಯಾಳಿಸದೇ ಇರಲು ಆಗುವುದೇ? ಮೊಹನ್ ಭಾಗವತರ ಎರಡೂ ಭಾಷಣಗಳನ್ನು ಕೇಳಿಸಿಕೊಳ್ಳಿ. ಈ ಎರಡು ಭಾಷಣಗಳು ಒಟ್ಟು ನಿಮ್ಮ ೫೦ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಮೊದಲಿಗೆ ಮಾಧ್ಯಮಗಳಲ್ಲಿ ಬಂದ ವಿಷಯಗಳ ಪೂರ್ವಗ್ರಹದಿಂದ ಹೊರಬಂದು ಈ ಭಾಷಣಗಳನ್ನ ಕೇಳಿಸಿಕೊಳ್ಳಿ. ಅಲ್ಲೆಲ್ಲೂ ಇವರುಗಳು ಅರಚುವಂತೆ ಪ್ರಚೋದನಾಕಾರಿ ಮಾತುಗಳನ್ನು ಆಡಿರುವುದಾಗಿ ನಿಮಗೂ ಅನ್ನಿಸುವುದಿಲ್ಲ. ಇದರ ಬಗ್ಗೆ ನಂಬಿಕೆ ನನಗಿದೆ. ಮೋಹನ್ ಭಾಗವತರು ತಮ್ಮ ಭಾಷಣದ ಆದಿಯಲ್ಲಿ “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ದಿಂದ ಪ್ರಾರಂಭಗೊಳಿಸಿ, ಭಾರತೀಯರು ಎಲ್ಲರ ಒಳಿತನ್ನು ಅಪೇಕ್ಷಿಸುತ್ತಾರೆ. ನಮಗೆ ತಿಳಿಯದ ಯಾರೋ ಒಬ್ಬ ದುಃಖ ಪಡುತ್ತಿದ್ದಾನೆಂದರೂ ನಮ್ಮ ಮನಸ್ಸು ಮಿಡಿಯುತ್ತದೆ. ಇದು ಭಾರತೀಯತೆ ಎಂಡು ಹೇಳುತ್ತಾ, ನಮ್ಮಲ್ಲಿ ಇರುವ ಸಂಬಂಧಗಳ ಬೆಲೆ, ಅದಕ್ಕೆ ತೋರುವ ಮರ್ಯಾದೆಯನ್ನು ಪಾಶ್ಚಾತ್ಯರೊಂದಿಗೆ ಹೋಲಿಸಿ ಅವರದ್ದು(ಪಾಶ್ಚಾತ್ಯರ) “Theory of Social Contract” ಎಂದು ಹೇಳಿದ್ದಾರೆ. ಮುಂದುವರೆಸುತ್ತಾ, ನಮ್ಮ ದೇಶದಲ್ಲಿ ಈ ಸಂಬಂಧಗಳ ದೃಷ್ಟಿ ಬದಲಾಗುತ್ತಾ, ನಮ್ಮ ವೃತ್ತಿ ಬದಲಾಗುತ್ತಿದೆ, ಆದ್ದರಿಂದ ಸಂಸ್ಕಾರ ಬದಲಾಗುತ್ತಿದೆ. ಬದಲಾದ ನಮ್ಮ ಸಂಸ್ಕಾರ ಎಲ್ಲರಲ್ಲೂ ದುಃಖ ತರಿಸುವಂತಹ ಯೋಜನೆಯಾಗಿ ಮಾರ್ಪಡುತ್ತಿವೆ ಎಂದು. ಇನ್ನು, ಮತ್ತೊಂದು ಭಾಷಣದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಅತ್ಯಾಚಾರಗಳನ್ನು ಖಂಡಿಸುತ್ತಾ “ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ಸಂಸ್ಕಾರಗಳ ಕೊರತೆಯಿಂದಾಗಿ, ಶಿಕ್ಷಣದ ಕೊರತೆಯಿಂದಾಗಿ. ನಮ್ಮ ಮೂಲಗಳನ್ನು ಮರೆಯುತ್ತಾ ಪಾಶ್ಚಾತೀಕರಣದಿಂದಾಗುತ್ತಿರುವುದರ ಪರಿಣಾಮ. ಆದಕಾರಣದಿಂದ ಗ್ರಾಮೀಣ ಭಾರತದಲ್ಲಿ ಕಡಿಮೆ ಅತ್ಯಾಚಾರಗಳು ಕಾಣುತ್ತಿವೆ.ಅಗ್ನಿ ಶ್ರೀಧರರೇ, ಆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತರನ್ನು ಏಕವಚನದಲ್ಲಿ ಸಂಭೋದಿಸಿ ಅದನ್ನು ಸಮರ್ಥಿಸಿಕೊಂಡಿರಲ್ಲ ನೆನಪಿದೆಯಾ? “ನಾನು ಅವಿವೇಕದ ಮಾತನಾಡಿದರೆ ನನ್ನನ್ನು ಏಕವಚನದಲ್ಲಿ ಸಂಬೋಧಿಸಲಿ”ಎಂದು, ಆ ದೃಷ್ಟಿಯಿಂದ ನಿಮ್ಮನ್ನು ನಾನು ಅದೇ ಧಾಟಿಯಲ್ಲಿ ಬಯ್ಯಬಹುದು. ಆದರೆ ನನ್ನ ಸಂಸ್ಕಾರ ಎಲ್ಲರಿಗೂ ಮರ್ಯಾದೆ ಕೊಡುವಂತೆ ಸೂಚಿಸುತ್ತದೆ, ಯಾರಾದರೂ ತಪ್ಪು ಮಾಡಿದರೆ ಎತ್ತಿ ಹಿಡಿ ಅಂತಲೂ ಹೇಳಿಕೊಟ್ಟಿದೆ. ನಿಮಗೆ ಗೊತ್ತಿಲ್ಲದ ವಿಷಯಗಳು ಬಹಳಷ್ಟು ಇದ್ದರೂ ಮಾತಿಗೋಸ್ಕರ ಒಂದು ಗಂಟೆ ಹರಟೆ ಮಾಡಿದಿರಲ್ಲ “ಬಿಗ್ ಡಿಬೇಟ್” ಅನ್ನೊ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದರೆ ನಗು ಬರುತ್ತೆ. ಸ್ಕಾಂಡಿನೇವಿಯಾ ದೇಶಗಳಲ್ಲಿ, ಯೂರೋಪ್ ನಲ್ಲಿ, ಮುಂದುವರೆದ ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ ಅಂದಿರಿ. ಒಮ್ಮೆ ಅಂಕಿ ಅಂಶಗಳನ್ನು ನೋಡಿ ನಂತರ ನಿಮ್ಮ ಸಿದ್ಧಾಂತಕ್ಕೆ ಜೋತು ಬೀಳಿರಿ.ಅಮೇರಿಕಾ ದೇಶ ಮುಂದುವರೆದ ದೇಶ ಎಂದು ನಾನು ಹಾಗು ನನ್ನಂತೆ ಹಲವರು ನಂಬಿದ್ದೇವೆ. ಅಲ್ಲಿ ಆಗುವ ಅತ್ಯಾಚಾರಗಲ ಸಂಖ್ಯೆ ನಿಮಗೆ ತಿಳಿದಿದೆಯೆ? ಫ್ಯಾಷನ್ ರಾಜಧಾನಿ ಎಂದು ಕರೆದುಕೊಳ್ಳುವ ಪ್ಯಾರಿಸ್ ನಲ್ಲಿ ಎಷ್ಟು ಅತ್ಯಾಚಾರಗಳು ನಡೆಯುತ್ತವೆ ತಿಳಿದಿದೆಯೇ? ಇಗೋ ಒಂದಷ್ಟು ಕೊಂಡಿಗಳು. ಓದಿಕೊಳ್ಳಿ. Wikipediaದಲ್ಲಿ Rape statistics by countryಎಂದು ಹುಡುಕಿ ನಿಮಗೆ ಗೊತ್ತಿಲ್ಲದ ಸಂಗತಿಗಳು ಹಲವಷ್ಟಿವೆ.ಅತ್ಯಾಚಾರಗಳು ಕಂದಾಚಾರದ ಪದ್ಧತಿಯಲ್ಲಿರುವ ದೇಶಗಳಾದ ಪಾಕಿಸ್ತಾನ್, ಬಾರಥ (ನೀವು ಮಾತನಾಡಿದ್ದು ಹಾಗೆಯೇ) ಎಂದರಲ್ಲ. ಮುಂದುವರೆಸಿ, ಇಂಡಿಯಾ ಹೆಸರಿಗೆ ಹೆಚ್ಚಿನ ಸಾಂಸ್ಕೃತಿಕ ಬೆಲೆಯಿದೆ ಅಂತಲೂ ಅಂದಿರಲ್ಲಾ….. ಭಾರತದಲ್ಲಿ ಹರಿಯುತ್ತಿದ್ದ ಸಿಂಧು ನದಿಯಿಂದ ನಮ್ಮನ್ನು ಹಿಂದು ಎಂದು ಕರೆದರು. ಅದನ್ನು ಹಾಗೆ ಕರೆಯಲಾಗದೆ ಪಾರ್ಸಿಯರು ಇಂದಸ್ ಎಂದು ಕರೆದು ಬಾಯಿಂದ ಬಾಯಿಗೆ ಹೋಗುತ್ತಾ ಅದು ಇಂಡಿಯಾ ಆಗಿದೆ. ಇಂಡಿಯ ಎಂಬ ಪದ ಹುಟ್ಟಲು ನಮ್ಮ ದೇಶದ ಸಿಂಧು ನದಿಯ ಹೆಸರೇ ಸ್ಪೂರ್ತಿ. ಇನ್ನು ಭಾರತ ಎಂಬ ಹೆಸರು ಹೇಗೆ ಬಂತೆಂದು ಕುಲಕರ್ಣಿಯವರು ಹೇಳಿದ್ದಾರೆ. ಅದು ನಿಮಗೆ ಅರ್ಥವಾಗಿದೆ ಎಂದು ಕೊಂಡಿದ್ದೇನೆ. ಅದಿರಲಿ, ವಿಮಲಾ ಮತ್ತು ಶ್ರೀಧರ್, ಎಂದಾದರೂ ನಮ್ಮ ದೇಶದ ನೋಟನ್ನು ನೋಡಿದ್ದೀರಾ?Reserve Bank of India ಎಂಬ ಇಂಗ್ಲಿಷ್ ಬರಹದ ಮೇಲ್ಗಡೆ ಹಿಂದಿಯಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್” ಎಂದು ಬರೆದಿದೆಯೋ ಅಥವಾ ಬೇರೇನಾದರೂ ಇದೆಯಾ? ಭಾರತ, ಇಂಡಿಯಾ ಎಂದು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ರಚ್ಚೆ ಹಿಡಿದಿದ್ದಿರಲ್ಲಾ, ನಮ್ಮ ದೇಶದ ಹೆಸರು, ಸರ್ಕಾರಿ ಫಲಕಗಳನ್ನು ನೋಡಿದ್ದೀರಾ? ನಿಮ್ಮ ಕುತರ್ಕ, ಪೊಳ್ಳುವಾದ ಅಂತ ಅನ್ನಿಸುವುದೇ ಇಲ್ಲವೇ?ದ್ವಾರಕಾನಾಥ್ ಅಗ್ನಿ ಶ್ರೀಧರ ರ ಮಾತನ್ನು ಒಪ್ಪಿದರು. ಅಂದು ದೆಹಲಿಯಲ್ಲಿ ಆದ ಅತ್ಯಾಚಾರ ಒಂದು ಹೆಣ್ಣು ಮಗಳ ಮೇಲೆ. ಇಂದು ಇಂಥ ಹೇಳಿಕೆಗಳು ನೀಡುತ್ತಿರುವ ಮೋಹನ್ ಭಾಗವತ್ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ನೀಚರ ತರಹ ಮಾತನಾಡಿದಿರಲ್ಲಾ, ಅತ್ಯಾಚಾರಿಗಳಿಗೂ, ಭಾಗವತರಿಗೂ ವ್ಯತ್ಯಾಸವೇ ಇಲ್ಲ ಎಂದರಲ್ಲ, ಹಾಗಾದರೆ ಅಗ್ನಿ ಶ್ರೀಧರರು ತಮ್ಮ ಪೂರ್ವಾಶ್ರಮ(!!)ದಲ್ಲಿ ರೌಡಿ, ಡಾನ್. ಅಗ್ನಿ ಶ್ರೀಧರರನ್ನು ಅವರ ಹೇಳಿಕೆಯನ್ನು ಒಪ್ಪುವ ನೀವು, ನೀವೂ ರೌಡಿ, ಡಾನ್ ಮನಸ್ಥಿತಿಯವರು ಎಂದು ಪಾಮರರು ನಾವು ನಿರ್ಧರಿಸಬಹುದೇ? ಸಾಮಾನ್ಯವಾಗಿ ಯಾವುದೇ ಅರ್ ಎಸ್ ಎಸ್ ಭಾಷಣದಂತೆ ಮೋಹನ್ ಭಾಗವತ್ ರವರು ತಮ್ಮ ಭಾಷಣದಲ್ಲಿ, “ಮಾತಾ ಭಗಿನೀ” ಎಂದು ಸಂಬೋಧಿಸಿದ್ದು ನಿಮ್ಮ ಕೆಪ್ಪು ಕಿವಿಗಳಿಗೆ ಬೀಳಲಿ. ಆರ್ ಎಸ್ ಎಸ್, ಹೆಣ್ಣಿಗೆ ಎಷ್ಟು ಒಳ್ಳೆಯ ಸ್ಥಾನ ನೀಡಿದೆ, ಹೇಗೆ ತನ್ನ ಶಿಕ್ಷಣದಲ್ಲಿ ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತದೆ ಎಂಬುದನ್ನು ಮನನ ಮಾಡಿಕೊಳ್ಳಿರಿ. ಅದನ್ನೆಲ್ಲಾ ಬಿಟ್ಟು ಅಂಡೆ ಪಿರ್ಕಿಯ ತರಹ ಮಾತನಾಡುವುದು, ನಿಮಗೆ ಶೋಭಿಸಿದರೂ ಅದು ಸುಸಂಸ್ಕಾರವಲ್ಲ.
ಶ್ರೀಧರ, ನಿಮ್ಮನ್ನು ನೀವು ಚಿಂತಕರು, ಲೇಖಕರು, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಎಂದು ಹೇಳುತ್ತೀರ. ಪತ್ರಕರ್ತರು ಎಂದು “ಕೊಚ್ಚಿ”ಕೊಳ್ಳುತ್ತೀರ ಪತ್ರಿಕೋದ್ಯಮದ ಜವಾಬುದಾರಿ ಅರಿಯದೆ, ಸಂಕುಚಿತ ಮನಸ್ಸಿನ ನಿಮ್ಮ ವರ್ತನೆಗೆ ನನ್ನ ಧಿಕ್ಕಾರ. ಅದಿರಲಿ, ನಿಮ್ಮ “ಎದೆಗಾರಿಗೆ” ಕಾದಂಬರಿಯಲ್ಲಿ ಬರೆಯುತ್ತೀರಲ್ಲ ಸಾವನ್ನು ಎದುರಿಸುವ ಬಗ್ಗೆ, ಭಾಗವತರ ಭಾಷಣವನ್ನು ಪೂರ್ಣ ಕೇಳಿಸಿಕೊಳ್ಳಿ ಮೃತ್ಯುವನ್ನು ಎದುರಿಸುವುದರ ಬಗ್ಗೆ ಅವರು ಇನ್ನೂ ಚೆನ್ನಾಗಿ ಮಾತನಾಡಿದ್ದಾರೆ.
State Bank of India needs information on AIDS
December 7, 2012
ಫೋಟೋ ಫಿನಿಶ್, ವಿಚಾರ AIDS, KSAPS, SBI Leave a comment
ಕಬ್ಬನ್ ಪಾರ್ಕ್ ಬಳಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಕಿರುವ ಬೋರ್ಡ್ ಇದು. ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಏಡ್ಸ್ ಗೆ ಸಂಬಂಧಿಸಿದಂತೆ ಹಲವು ಸೂಚನೆಗಳನ್ನು ನೀಡಿದೆ. ಅದರಲ್ಲಿ ಒಂದು, ಏಡ್ಸ್ ಸೋಂಕನ್ನು ಮಹಾಮಾರಿ, ಮಾರಕ ರೋಗ, ಮುಂತಾದ ವಿಶೇಷಣಗಳಿಂದ ಕರೆಯಬಾರದು ಎಂಬುದಾಗಿದೆ. ಕಾರಣ, ಇದು ಎಚ್ಐವಿ ಪಾಸಿಟಿವ್ ವ್ಯಕ್ತಿಗಳಲ್ಲಿ ಕೀಳರಿಮೆ, ಭಯವನ್ನುಂಟುಮಾಡುತ್ತದೆ ಎಂದು. ಮಾಧ್ಯಮಗಳು ಕೂಡ ಈ ರೀತಿಯ ಪದಗಳನ್ನು ಬಳಸದಂತೆ ಅದು ಸೂಚಿಸಿದೆ. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಏಡ್ಸ್ ಅನ್ನು ರಾಜಾರೋಷವಾಗಿ ಮಹಾಮಾರಿ ಎಂದು ಕರೆದಿದೆ.

Forced sex after marriage not rape: Court
December 4, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ court, marriage, rape, the times of india Leave a comment
Courtesy – The Times of India (04-12-2012)
New Delhi: A man has been acquitted by a Delhi court of charges of raping his wife on the ground that having sexual relation with his spouse, even forcibly, does not amount to “marital rape”.
District Judge J R Aryan let off accused Hazi Ahmed Saeed, agreeing with his counsel’s submission that the Indian Penal Code does not recognize any concept of marital rape.
“The defence counsel rightly argued that the IPC does not recognise any such concept of martial rape. If complainant was a legallywedded wife of accused, the sexual intercourse with her by accused would not constitute offence of rape even if it was by force or against her wishes,” the court said.
It transferred the case back to a magisterial court as the rest of the alleged offences, including those of causing hurt, criminal intimidation and theft, for which the accused was chargesheeted, were triable by a magistrate.
The woman filed the case in 2007.The police had said in its charge sheet that Saeed had maintained physical relations with the complainant after their marriage and it could be a possibility that those physical relations were against her consent and wish. PTI
ನಗ್ನ ಹೆಂಗಸು ರಸ್ತೆ ಮೇಲೆ ನಡೆದು ಬಂದಾಗ…
December 3, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ mentally enabled, shoppoers top, special people, women and child development department 2 Comments

…..
ಇಂತಹ ಪರಿಸ್ಥಿತಿ ಎದುರಾದಾಗ ನಿಜಕ್ಕೂ ಏನು ಮಾಡಬೇಕು ತೋಚುವುದೇ ಇಲ್ಲ. ಇದು ನನ್ನ ಗೆಳಯನಿಗಾದ ಅನುಭವ. ಬನ್ನೇರುಘಟ್ಟದ ಶಾಪರ್ಸ್ ಟಾಪ್ ಬಳಿ ಶಾಪಿಂಗ್ ಮಾಡಿ ಈತ ಅದಷ್ಟೇ ತನ್ನ ಗರ್ಲ್ ಫ್ರೆಂಡ್ ಜೊತೆ ಹೊರಬಂದಿದ್ದಾನೆ. ರಸ್ತೆಯ ಮೇಲಿನ ದೃಶ್ಯ ನೋಡಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಬೇಕೋ ಗೊತ್ತಾಗಿಲ್ಲ. ಒಟ್ಟಿನಲ್ಲಿ ಆತನಿಗೆ ಶಾಕ್ ಆಗಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ನಡುವಯಸ್ಸಿನ ಹೆಂಗಸೊಬ್ಬಳು ಸಂಪೂರ್ಣ ನಗ್ನವಾಗಿ ನಡೆದುಕೊಂಡು ಹೋಗುತ್ತಿದ್ದಾಳೆ. ಹಲವಾರು ತಿಂಗಳುಗಳಿಂದ ಸ್ನಾನ ಮಾಡಿರದ ಕಾರಣ ಆಕೆಯ ತಲೆ ಕೂದಲು ಧೂಳು ಮಣ್ಣಿನಿಂದ ಸುಕ್ಕಾಗಿಹೋಗಿತ್ತು. ಮೈಮೇಲೆ ಅಲ್ಲಲ್ಲಿ ಗಾಯವಾಗಿರುವ ಗುರುತಿದೆ. ಸಂಪೂರ್ಣ ನಗ್ನ ದೇಹ ಕೊಳಕುಕೊಳಕಾಗಿದೆ. ಆದರೆ ಆಕೆ ತನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲದಂತೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದಾಳೆ. ಆಕೆಗೆ ಬಟ್ಟೆ ತೊಡಿಸುವ ಧೈರ್ಯ, ಔದಾರ್ಯ, ಸಮಯ ಯಾರಿಗೂ ಇಲ್ಲ. ಎಲ್ಲರೂ ಒಂದು ಕ್ಷಣ ಆಕೆಯನ್ನು ನೋಡಿ ನಾಚಿಕೆ, ಅಸಹ್ಯ, ಜಿಗುಪ್ಸೆಯ ಭಾವಗಳನ್ನು ಪ್ರದರ್ಶಿಸಿ ತಮ್ಮ ಪಾಡಿಗೆ ತಾವು ಹೋಗುವವರೇ.
ಇಂತಹವರಿಗಾಗಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಆದಷ್ಟು ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕ್ಯಾಲೆಂಡರ್ ಒಂದನ್ನು ಡಿಸೈನ್ ಮಾಡುವ ಸಂದರ್ಭದಲ್ಲಿ ಫೋಟೋ ಶೂಟ್ ಗಾಗಿ ಪುನರ್ವಸತಿ ಕೇಂದ್ರವೊಂದಕ್ಕೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಎಂತಹ ಕಲ್ಲುಹೃದಯದವರನ್ನೂ ಕರಗಿಸುವಂತಿತ್ತು. ಅಲ್ಲಿನ ಅಧಿಕಾರಿಯೊಬ್ಬರು ಮಾತನಾಡುತ್ತ ಹೇಳಿದ್ದರು, “ಇಲ್ಲಿ ಕೆಲಸಕ್ಕೆ ಯಾರೂ ಬರುವುದಿಲ್ಲ. ಕಳೆದ ಐದು ವರ್ಷಗಳಿಂದ ಇಲ್ಲಿ 6 ಪೋಸ್ಟ್ ಗಳು ಖಾಲಿ ಇವೆ. ಆದರೆ ಯಾರೂ ಬಂದಿಲ್ಲ. ಸಂಬಳ ಚೆನ್ನಾಗಿಯೇ ಆದೆ. ಆದರೆ ಮಾನಸಿಕ ಸ್ಥಿಮಿತ ಕಳೆದುಕೊಂಡ, ಕೆಲವೊಮ್ಮೆ ಹಿಂಸಾ ಪ್ರವೃತ್ತಿ ತೋರುವ, ಸದಾ ಜೊಲ್ಲು ಸುರಿಸಿಕೊಂಡು, ಇದ್ದಲ್ಲೇ ಶೌಚ ಮಾಡಿಕೊಳ್ಳುವ ಇಂತಹವರ ಸೇವೆಗಾಗಿ ಯಾರು ಬರುತ್ತಾರೆ ಹೇಳಿ?” ಅಂತ.
ಸಮಾಜ ಸಂವೇದನೆಯನ್ನು ಬೆಳಸಿಕೊಳ್ಳುವವರೆಗೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ.
ಪುರುಷರೇ…ಬೈಗುಳ ಬಳಸುವ ಮೊದಲು ಈ ವೀಡಿಯೋ ನೋಡಿ…
November 17, 2012
ಅವರೇನು ಮಾಡಿದರು?, ಬಹುಪರಾಕ್, ವಿಚಾರ, ವಿಡಿಯೋ bhenchod, madarchod Leave a comment
ಸವಿತಾ ಹಾಲಪ್ಪನವರ್ ಸಾವು ಒಂದು ರೀತಿಯಲ್ಲಿ ಕೊಲೆಯಲ್ಲವೆ?
November 16, 2012
ಅವರೇನು ಮಾಡಿದರು?, ಕಂಬನಿ, ವಿಚಾರ, ವಿಡಿಯೋ anti abortion laws, Irish, savita halappanava 1 Comment
ಧರ್ಮ ಮುಖ್ಯವೋ ಅಥವಾ ಜೀವವೋ? ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ. ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಧರ್ಮ ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಅಹಿಂಸಾ ಪರಮೋ ಧರ್ಮ ಎಂಬ ನಿಲುವು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ? ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ಪರೋಕ್ಷ ಕೊಲೆ ಎನಿಸುತ್ತದೆ.
ಜ್ಯೋತಿಷ್ಯಾಯ ಜಯಂ, ನ ಡಾಕ್ಟರಾಯ
October 18, 2012
ಅವರೇನು ಮಾಡಿದರು?, ವಿಚಾರ, Media astrology, blood, koppal Leave a comment
ಮಾಧ್ಯಮಗಳು ಸಹಾಯ ಮಾಡಲು ಮುಂದೆ ಬರುತ್ತವೆ ಅಂದರೂ ಜನರಿಗೆ ಅದು ಬೇಡವಾಗಿರುತ್ತದೆ ಅನ್ನುವುದಕ್ಕೆ ಮೊನ್ನೆ ನಡೆದ ಘಟನೆ ಉದಾಹರಣೆ.
ಕೊಪ್ಪಳದಿಂದ ಒಂದು ಸ್ಟೋರಿ ಬಿತ್ತರವಾಯಿತು. 12 ವರ್ಷದ ಹುಡುಗನೊಬ್ಬನ ಕೈ ಹಾಗೂ ದೇಹದ ಕೆಲ ಭಾಗಗಳಿಂದ ಇದ್ದಕ್ಕಿದ್ದ ಹಾಗೆ ರಕ್ತ ಹರಿಯಲಾರಂಭಿಸುತ್ತದೆ. ಯಾವ ಪೂರ್ವ ಸೂಚನೆಯೂ ಇರುವುದಿಲ್ಲ. ಡಾಕ್ಟರ್ ಆಯ್ತು, ಹಕೀಮರಾಯಿತು, ದೇವರು-ದಿಂಡರು ಆಯಿತು, ಮಾಟ-ಮಂತ್ರ ಮಾಡಿಸಿದ್ದಾಯ್ತು, ಭಾನಾಮತಿ ಕಾಟ ತೆಗೆಸಿದ್ದೂ ಆಯ್ತು. ಏನೂ ಮಾಡಿದ್ರೂ ಹುಡುಗ ಮಾತ್ರ ಹುಷಾರಗಲೊಲ್ಲ.
ಆದರೆ ಈ ಸ್ಟೋರಿಯನ್ನು ನೋಡಿದ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರು ತಕ್ಷಣ ಚಾನಲ್ ಸಂಪರ್ಕಿಸಿ ಆ ಕಾಯಿಲೆಯ ವೈಜ್ಞಾನಿಕ ಹೆಸರು, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಸೂಚಿಸಿ, ಬೇಕಿದ್ದರೇ ತಾವೇ ಉಚಿತವಾಗಿ ಆಪರೇಷನ್ ಮಾಡಿಸುವುದಾಗಿಯೂ ಹೇಳಿದರು. ಚಾನಲ್ ನವರು ಆ ಹುಡುಗ, ಹುಡುಗನ ತಂದೆ, ವೈದ್ಯರನ್ನು ಕೂರಿಸಿ ಪ್ಯಾನಲ್ ಡಿಸ್ಕಷನ್ ಮಾಡಿಸಿದ್ದೂ ಆಯಿತು. ಸ್ಟೋರಿ ಮಾಡಿದ ರಿಪೋರ್ಟರ್ ನಲ್ಲಿ ಸಾರ್ಥಕ ಭಾವ.
ಕೆಲ ದಿನಗಳ ನಂತರ ಗೊತ್ತಾಗಿದ್ದು, ಆ ಹುಡುಗನ ಕಡೆಯವರು ಆಪರೇಷನ್ ಮಾಡಿಸಲೇ ಇಲ್ಲವಂತೆ. ಈ ಸ್ಟೋರಿ ನೋಡಿದ ಹುಬ್ಬಳ್ಳಿ ಕಡೆಯ ಖ್ಯಾತ ಜ್ಯೋತಿಷಿಗಳ್ಯಾರೋ, ಇದು ಯಾವುದರದ್ದೊ ಕಾಟ. ತಾವು ಅದನ್ನು ತೆಗೆಸುತ್ತೇವೆ. ಕೆಲವು ಸಿಂಪಲ್ ಪೂಜೆ ಮಾಡಿದರಾಯಿತು ಅಂತ ತಂದೆಗೆ ಫೋನ್ ಮಾಡಿದರಂತೆ. ತಂದೆ, ಈಗ ಆ ಜ್ಯೋತಿಷಿಯನ್ನು ಎಡತಾಕುತ್ತಿದ್ದಾರಂತೆ. ಹುಡುಗನ ರಕ್ತ ಹರಿಯುತ್ತಲೇ ಇದೆ.
ಏನು ಮಾಡಬೇಕು ಇಂತಹ ಜನರಿಗೆ?
If slaughter houses had glass walls every one would be vegetarian
October 9, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ madhavan nair, peta india Leave a comment
For more info on this visit http://www.petaindia.com
ಜರ್ನಲಿಸ್ಟ್ ಗಣಪತಿ
September 18, 2012


















ಚಿಠ್ಠೀ ಆಯೀ ಹೈ…