ಭೇಟಿ ಕೊಡಿ – ಭಾರತ್ ಸ್ವಾಭಿಮಾನ್
ಜೂನ್ 4 ರಿಂದ ಬಾಬಾ ರಾಮದೇವ್ ಅವರ ‘ಭ್ರಷ್ಟಾಚಾರ ತೊಲಗಿಸಿ’ ಸತ್ಯಾಗ್ರಹ
May 29, 2011
ಅವರೇನು ಮಾಡಿದರು?, ನಿಮಗಿದೋ ಆಮಂತ್ರಣ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು baba ramdev Leave a comment
ಇಂದು ರಾಸ್ ಬಿಹಾರಿ ಬೋಸ್ ಜನ್ಮದಿನ
May 25, 2011
ಅವರೇನು ಮಾಡಿದರು?, ಐತಿಹಾಸಿಕ ras bihari bose 6 Comments
ಮಾಹಿತಿ – ಶ್ರೀ. ಟಿ. ಎನ್. ರಾಮಕೃಷ್ಣ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್
Born on 25.05.1886 was one of the great revolutionary freedom fighter who had fought against the invading Britishers both from India and also from abroad, mainly from Japan.
He was instrumental in throwing bomb on viceroy Lord Harding when he was entering the Delhi after the changing of the national capital from Kolkata to Delhi. He had masterminded a 1857 year like national war against the Britishers during 1915 in association with Gadar party.
He was a No. 1 target of britishers during 2nd decade of 20th century and had escaped to Japan from where he had continued his revolutionary activities and had lived incognito for 8 years and had become a citizen of Japan but his loyalty to motherland India did not change and founded India Independence league through which he had spearheaded the revolutionary freedom movement of India throughtout the Southeast asia. He had also founded the PAN ASIA LEAGUE for the benefit of freeding asian nations fron slavery.
He had sent 2 ships full of arms and ammunition to Indian revolutionaries which was unfortunately confiscated by Britishers at Singapore. He had good relation with Chinese which he had used for the benefit of furthering the cause of Indian independence movement.
During II world war when Japan defeated Britishers at Singapore and had captured over 105000 soldiers, Ras Bihari convinced Japan to free 35000 Prisoners of war (POW) who were Indians and changed these 35000 pows loyalty to Britishers to loyalty to mother land and had founded Indian National Army which was led by Subhas and had captured 200 square miles of Indian territory. When Netaji Subhas founded the Provisional Azad Hind Government for India, at Singapore on 21.10.1943, Ras Bihari Bose was Supreme advisor to the government and Azad Hind Government was recognized by Japan, Germany, Italy, China, Russia, Singapore, Burma, Munchuria, Philiphines and Japan had extended a loan of 100 million Yen (Yen is the currency name of Japan). Such was the influence of Ras Bihari Bose and Netaji Subhas across the world.
He was awarded second highest civilian award of Japan and he was the first non Japanese to get it. When he dies on 21.01.1945, the royal vehicle of the Japan King was sent to get his dead body to palace which was a rearest honour a non Japanese got.
While Ras Bihari Bose had got highest respect at Japan and other countries, it is unfortunate that at his own motherland, Bharat (India) other than bringing out a postal stamp and naming of few landmarks, mainly in Bengal nothing else is done in his memory. Let us correct it.
ಮಂತ್ರಾಲಯದಲ್ಲೊಂದು ಪವಾಡ
April 18, 2011
ಅವರೇನು ಮಾಡಿದರು? ಬಿಸಿಲು ಕೋಲು, v k murty 2 Comments
ಅಂತಾರಾಷ್ಟ್ರೀಯ ಖ್ಯಾತಿಯ ಸಿನಿ ಛಾಯಾಗ್ರಾಹಕ, ಕನ್ನಡಿಗ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವಿ. ಕೆ. ಮೂರ್ತಿಯವರ ಜೀವನ ಕಥನದ ಹೆಸರು ಬಿಸಿಲು ಕೋಲು. ಲೇಖಕಿ ಉಮಾ ರಾವ್. ಇದನ್ನು ಪ್ರಿಸಮ್ ಪ್ರಕಟಿಸಿದೆ. ಮೂರ್ತಿಯವರ ಬದುಕಿನಲ್ಲಿ ನಡೆದ ಘಟನೆಯೊಂದು ಇಲ್ಲಿದೆ. ಬಿಸಿಲು ಕೋಲು ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ.
ಮಂತ್ರಾಲಯದಲ್ಲಿ ಅಂದು ನಡೆದ ಪವಾಡ ಇಂದಿಗೂ ಮೂರ್ತಿ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ.
ಅವತ್ತು ನಾನು (ಮೂರ್ತಿ) ನನ್ನ ಮೇಷ್ಟ್ರು ಸ್ನಾನಕ್ಕೆ ನದಿಗೆ ಹೋದೆವು. ನಮ್ಮ ಮೇಷ್ಟ್ರು ಕ್ಷೌರ ಮಾಡಿಕೊಳ್ಳುತ್ತಿದ್ದರು. ನಾನು ಸುಮ್ಮನೆ ನದಿ ನೋಡುತ್ತ ನಿಂತಿದ್ದೆ. ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ಜೋರಾಗಿ ಕೂಗಿಕೊಳ್ಳುತ್ತ, ಅಳುತ್ತಿರುವುದು ಕೇಳಿಸಿತು. ನೋಡಿದರೆ, ಅವಳ ಒಂದರೆಡು ವರ್ಷದ ಮಗು ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ್ತಿದೆ. ಹತ್ತಿರದಲ್ಲೇ ಮೂರು ಜನ ಬ್ರಾಹ್ಮಣರು ನೋಡುತ್ತ ನಿಂತಿದ್ದರು. ಮಗು ಮುಳುಗಿ ಹೋಗುತ್ತಿದ್ದರೂ ಅವರು ಅಲ್ಲಿಂದ ಕದಲಲಿಲ್ಲ. ನಾನು ಓಡಿ ಹೋಗಿ ನದಿಗೆ ಧುಮುಕಿದೆ. ನಂಗೆ ಈಜೋಕೆ ಬರ್ತಿತ್ತು. ನದಿನೂ ಅಲ್ಲಿ ಅಂಥಾ ಆಳ ಏನೂ ಇರ್ಲಿಲ್ಲ. ಮಗೂನ್ನ ಎತ್ತಿಕೊಂಡು ಬಂದು, ಬಗ್ಗಿಸಿ ಒತ್ತಿ, ನೀರು ತೆಗೆದೆ. ಮಗು ಬದುಕಿಕೊಂಡಿದ್ದು ಕಂಡು ಎದೆ ತುಂಬಿ ಬಂತು.
ಆ ಮೂರೂ ಬ್ರಾಹ್ಮಣರು ಏಕೆ ಸಹಾಯಕ್ಕೆ ಹೋಗಿರಲಿಲ್ಲವೆಂದರೆ ಅದು ಶೂದ್ರ ಹೆಂಗಸಿನ ಮಗು ಎಂದು. ನಂಗೆ ಅಂಥಾ ಆಘಾತ ಎಂದೂ ಆಗಿರಲಿಲ್ಲ.
ಅಲ್ಲಿಂದ 11 ಗಂಟೆ ಹೊತ್ತಿಗೆ ಮಠಕ್ಕೆ ಹೋದ್ವಿ. ಎಲ್ಲೆಲ್ಲೂ ಗುಜುಗುಜು, ಉತ್ಸಾಹ. ಒಂದು ಮಗು ಮುಳುಗೇ ಹೋಗಿತ್ತಂತೆ, ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ ಬಂದು ಬದುಕಿಸಿದರಂತೆ…. ಎಂಥಾ ಪವಾಡ! ಈ ಕಥೆಯನ್ನು ಸ್ವಾಮಿಗಳ ಎದುರಿಗೆ ಹೇಳುತ್ತಿದ್ದವರು ಅದೇ ಮೂರು ಜನ ಬ್ರಾಹ್ಮಣರು!
ನಮ್ಮ ಮೇಷ್ಟ್ರಿಗೆ ರೇಗಿ ಹೋಯಿತು. “ಯಾರ್ರೀ ಹೇಳಿದ್ದು? ನನ್ನ ವಿದ್ಯಾರ್ಥಿ ಮಗೂನ್ನ ಉಳಿಸಿದ್ದು. ಮಗು ಮುಳುಗಿ ಹೋಗ್ತಿದ್ರೆ ಇವ್ರೆಲ್ಲ ನೋಡ್ತಾ ನಿಂತಿದ್ರು. ಮನುಷ್ಯರೇನ್ರೀ ಇವರು? ನಾಚಿಕೆಗೇಡು” ಎಂದು ಸ್ವಾಮಿಗಳೇ ಎದುರೇ ಕೂಗಾಡಿದರು.
ಸ್ವಾಮಿಗಳು ಆ ಬ್ರಾಹ್ಮಣರನ್ನೆಲ್ಲ ಕರೆಸಿ ಛೀಮಾರಿ ಹಾಕಿದರು. ನನ್ನನ್ನು ಕರೆದು ಆಶೀರ್ವಾದ ಮಾಡಿ ವಸ್ತ್ರ ಹೊದೆಸಿದರು. ಆ ಘಟನೆ ಎಂದಿಗೂ ಮರೆಯೋಕೇ ಆಗಲ್ಲ.
ಎಚ್ ನರಸಿಂಹಯ್ಯ ಹಾಗೂ ಹಾರಾಟದ ಹೋರಿ
March 17, 2011
ಅವರೇನು ಮಾಡಿದರು? k v ghanashyama Leave a comment
ಪ್ರೊ. ಕೆ. ವಿ. ಘನಶ್ಯಾಮ, ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿದ್ದವರು. ಎಚ್. ಎನ್. ರ ಗರಡಿಯಲ್ಲಿ ಬೆಳೆದವರು. ಘನಶ್ಯಾಮ ಅವರ ಅನುಭವ ಕಥನದ ಹೆಸರು ‘ನಾ ಬಂದ ಹಾದಿಯಲ್ಲಿ’. ಇದು ಒಂದು ಕಾಲೇಜು ಜೀವನ ಚರಿತ್ರೆ. ಅಭಿನವ ಮತ್ತು ಕೊಳವಳ್ಳಿ ಪ್ರಕಾಶನ ಪುಸ್ತಕ ಹೊರತಂದಿವೆ. ಅದರಲ್ಲಿನ ಆಯ್ದ ಭಾಗವೊಂದು ಇಲ್ಲಿದೆ.
ಕೃಪೆ – ಪ್ರೊ. ಕೆ. ವಿ. ಘನಶ್ಯಾಮ, ಅಭಿನವ ಮತ್ತು ಕೊಳವಳ್ಳಿ ಪ್ರಕಾಶನ.
ಅಯ್ಯೋ ಮರೆತೆ, ನಾವು ಊಟಕ್ಕೆ ಸೇರುತ್ತಿದ್ದ ಸಮಯದಲ್ಲಿ ನಡೆದ ಒಂದು ಪ್ರಸಂಗವನ್ನು ಹೇಳಲೇಬೇಕು. ನಾಗರಾಜ ರೆಡ್ಡಿಯವರ ಮನೆಯಲ್ಲಿ ಒಂದು ದಿನ ಊಟಕ್ಕೆ ಸೇರಿದ್ದೆವು. (ರೆಡ್ಡಿಯವರು ಅವರ ಹಳ್ಳಿಯಾದ ಸಿಂಗನಾಯಕನ ಹಳ್ಳಿಯ ಅವರ ತೋಟದ ಮನೆಯಲ್ಲೂ ಒಂದು ಬಾರಿ ಎಲ್ಲರಿಗೂ ಊಟ ಹಾಕಿಸಿದರು) ಆ ದಿನ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇತ್ತು. ಊಟವಾದ ಮೇಲೆ ದೂರದರ್ಶನದಲ್ಲಿ ಬಿತ್ತರವಾಗುತ್ತಿದ್ದ ಈ ಮ್ಯಾಚ್ ನಲ್ಲಿ ನಾವೆಲ್ಲ ತಲ್ಲೀನರಾದೆವು. ಮಾತಿಗೆ ಜನ ಸಿಗದೆ ಎಚ್. ಎನ್. ಗೆ ಬೇಸರವಾಯಿತು. “ಸರಿಯಪ್ಪ ನೀವು ಮ್ಯಾಚ್ ನೋಡಿ. ನಾನು ಹೊರಡುತ್ತೇನೆ” ಎಂದರು. ರೆಡ್ಡಿ ಮನೆಯ ಹತ್ತಿರ ಆಟೋ ಸಿಗುತ್ತಿರಲಿಲ್ಲ. ಎಚ್. ಎನ್. ರನ್ನು ಆಟೋ ಹತ್ತಿಸಿ ಬರುತ್ತೇವೆಂದು ನಾನು, ನಟರಾಜ ಅವರ ಜೊತೆ ಮಹಡಿ ಇಳಿದು ರಸ್ತೆಗೆ ಬಂದು ನಾಲ್ಕು ಹೆಜ್ಜೆ ಹಾಕಿದ್ದೇವೆ, ರಸ್ತೆಯ ಆಚೆ ಬದಿ ಒಂದ ಮಾರುತಿ ಕಾರು ನಿಂತಿತು. ಕಾರಿನಿಂದ ಇಳಿದ ಮಧ್ಯವಯಸ್ಕ ವ್ಯಕ್ತಿಯೊಂದು, ರಸ್ತೆ ದಾಟಿ ಬಂದು ಎಚ್. ಎನ್. ಗೆ ನಮಸ್ಕರಿಸಿ, “ಸಾರ್ ನಾನು ನಿಮ್ಮ ಹಳೆಯ ವಿದ್ಯಾರ್ಥಿ. ಆಸ್ಟ್ರೇಲಿಯಾಕ್ಕೆ ಹೋಗಿ 25 ವರ್ಷಗಳಾಗಿವೆ. ಅಲ್ಲಿಯೇ ವಾಸಿಸುತ್ತಿದ್ದೇನೆ. ನನಗೆ ಕನ್ನಡದ ನಂಟು ಇನ್ನೂ ಹೋಗಿಲ್ಲ. ನಿಮ್ಮ ಆತ್ಮಕಥೆ ‘ಹಾರಾಟದ ಹೋರಿ’ ಓದಿದೆ. ಬಹಳ ಚೆನ್ನಾಗಿದೆ. ಅದರ 20 ಪುಸ್ತಕಗಳನ್ನು ಗೆಳೆಯರಿಗೆ ಕೊಡಲು ತೆಗೆದುಕೊಂಡಿದ್ದೇನೆ. ಕಾರಿನಲ್ಲಿದೆ” ಎಂದು ಹೇಳಿದ ಕೂಡಲೇ ನನಗೆ ನಗು ಬಂದರೂ ತಡೆದುಕೊಂಡಿದ್ದೆ. ಎಚ್. ಎನ್. ನಗಲಿಲ್ಲ. ನಟರಾಜ್ ಮಾತ್ರ ಮಧ್ಯರಸ್ತೆಯಲ್ಲಿ ನಿಂತೇ ಕಿಸಕ್ಕನೆ ನಕ್ಕುಬಿಟ್ಟರು. ವಿದ್ಯಾರ್ಥಿಗೆ ಅವಮಾನವಾದಂತಾಯಿತು. ತಕ್ಷಣವೇ ಅವರಿಗೆ ತಾವು ಮಾಡಿದ ಅಚಾತುರ್ಯದ ಅರಿವಾಯಿತು. ಸಾರಿ ಸರ್ ಎಂದರು. ಎಚ್. ಎನ್. ಆತ್ಮಕಥೆಯ ಹೆಸರು ‘ಹೋರಾಟದ ಹಾದಿ’. ಎಚ್. ಎನ್. ರನ್ನು ನೋಡಿದ ಆನಂದದಲ್ಲಿ ಮೈಮರೆತ ಅವರ ಬಾಯಿಂದ ಬಂದದ್ದು ‘ಹಾರಾಟದ ಹೋರಿ’ ಅಷ್ಟೆ.
ಇದೊಂದು ವಿಶೇಷ ಹೋರ್ಡಿಂಗ್
February 2, 2011
ಅವರೇನು ಮಾಡಿದರು?, ಐತಿಹಾಸಿಕ laalaa laajpat roy, rashtra goura, subhash chandra bose, t n ramakrishna 4 Comments
ಯಾವುದೋ ತಲೆಹಿಡುಕ ರಾಜಕಾರಣಿಯ ಹುಟ್ಟುಹಬ್ಬ, ರೌಡಿ-ಕಮ್-ಕಾರ್ಪೋರೇಟರ್ ನ ಅಕ್ಕನ ತಂಗಿಯ ಮಗಳ ಗಂಡನ ಸೋದರಮಾವನ ಅಳಿಯನ ವಿದೇಶ ಪ್ರಯಾಣ, ಶೇವಿಂಗ್ ಬ್ಲೇಡ್ ಮಾರಲು ಕನಿಷ್ಟ ಬಟ್ಟೆ ತೊಟ್ಟು ನಿಂತ ಹುಡುಗಿ, ಬಾಕ್ಸಾಫೀಸಿನಲ್ಲಿ ತೋಪೆದ್ದು ಹೋಗಿರುವ ಎ ಚಿತ್ರ – ಹೀಗೆ ವಿವಿಧ ಹೋರ್ಡಿಂಗ್ ಗಳು ಬೆಂಗಳೂರಿನಲ್ಲಿ ಸಾಮಾನ್ಯ. ಆದರೆ ಮೊನ್ನೆ ಸ್ವಲ್ಪ ಬೇರೆ ರೀತಿಯ ಹೊರ್ಡಿಂಗ್ ಬೆಂಗಳೂರಿಗರ ಕಣ್ಣಿಗೆ ಬಿತ್ತು. ಸುಭಾಷ್ ಚಂದ್ರ ಬೋಸ್ ಹಾಗೂ ಲಾಲಾ ಲಜಪತ್ ರಾಯ್ ಅವರ ಹುಟ್ಟುಹಬ್ಬಕ್ಕೆ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಮೆಜೆಸ್ಟಿಕ್ ನಲ್ಲಿ ಈ ಹೋರ್ಡಿಂಗ್ ಹಾಕಿತ್ತು. ಹಾಗೆಯೇ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಇಲೆಕ್ಟ್ರಾನಿಕ್ ಹೋರ್ಡಿಂಗ್ ನಲ್ಲಿ ಸುಭಾಷ್ ಹಾಗೂ ಲಾಲಾ ಲಜಪತ್ ರಾಯ್ ರನ್ನು ನೆನಪಿಸುವ ಪ್ರಯತ್ನ ಮಾಡಿತ್ತು. ಪರಿಷತ್ ನ ಸಂಚಾಲಕರಾದ ಶ್ರೀ. ಟಿ. ಎನ್. ರಾಮಕೃಷ್ಣ ಇದರ ರೂವಾರಿ. ದೇಶಭಕ್ತರನ್ನು ಸ್ಮರಿಸುವ ಇದೊಂದು ವಿಭಿನ್ನ ಪ್ರಯತ್ನ ಅಲ್ಲವೆ?
ಇಂದಿಗೆ ರಾಯನನ್ನು ಗಲ್ಲಿಗೇರಿಸಿ 180 ವರ್ಷ
January 26, 2011
ಇಂದು ಸುಭಾಷರ 114 ನೇ ಜನ್ಮದಿನ
January 23, 2011
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು Leave a comment
ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಭಾಷಣದ ಆಡಿಯೋ
January 18, 2011
ಅವರೇನು ಮಾಡಿದರು? chicago, swami vivekaananda Leave a comment
ಕುಂವಿ ಗಾಂಧಿ ಕ್ಲಾಸಿನಿಂದ….
December 6, 2010
ಅವರೇನು ಮಾಡಿದರು?, ಬಹುಪರಾಕ್ Leave a comment
ಕುಂವಿ ಅವರ ಆತ್ಮಕಥನ ಗಾಂಧಿ ಕ್ಲಾಸು ಓದುತ್ತಿದ್ದೇನೆ. ಅದರೊಳಗಿನ ಆಯ್ದ ಭಾಗ.
ಕೃಪೆ – ಕುಂ. ವೀರಭದ್ರಪ್ಪ, ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್.
ಅವರೆಲ್ಲ ಪೈಕಿ ಪರಮವಿಧೇಯತೆಯೇ ಮೈವೆತ್ತಂತೆ ಬಂದಿರುತ್ತಿದ್ದ ಸಣಕಲು ವ್ಯಕ್ತಿಗೆ ಕಳೆದ ತಿಂಗಳ ವರೆಗೆ ಒಂದು ಖಾಯಂ ಹೆಸರೆಂಬುದಿರಲಿಲ್ಲ. ಹೊಲೆಯನಾಗಿದ್ದರೂ ತುಸು ಎಣ್ಣೆಗೆಂಪು ಬಣ್ಣದ ಅವನನ್ನು ಸಂತೆಕುಡ್ಲೂರು ಗೌಡರ ಮನೆಯಲ್ಲಿದ್ದ ಅಸಂಖ್ಯಾತ ಸದಸ್ಯರು ಅವನನ್ನು ಅಸಂಖ್ಯಾತ ಹೆಸರುಗಳಿಂದ ಕರೆಯುತ್ತಿದ್ದರು. ಅದರೆ ಅವು ಜಗತ್ತಿನ ಯಾವುದೇ ಭಾಷೆಯ ನಾಮವಾಚಕ ನಿಘಂಟಿನಲ್ಲಿರಲು ಸಾಧ್ಯವಿರಲಿಲ್ಲ. ಒಂದೊಂದು ನಾಮವಾಚಕವೂ ನಗೆ ತರಿಸುವಂತಿತ್ತು. “ನಿನ್ನ ಹೆಸರೇನು?” ಎಂದು ಕೇಳಿದೊಡನೆ ಅವನು ತಬ್ಬಿಬ್ಬಾಗದೆ ಇರುತ್ತಿರಲಿಲ್ಲ. ಅವನಂತೆ ನಾಮಾಂಕಿತ ವಂಚಿತರು ದಲಿತರೋಣಿಗಳಲ್ಲಿ ಅಸಂಖ್ಯಾತರಿದ್ದರು. ಆದ್ದರಿಂದ ನಾನು ಅವನಿಗೆ “ಚಂದ್ರ” ಎಂದು ನಾಮಕರಣ ಮಾಡಿ ಕರೆಯುತ್ತಿದ್ದೆನು, ಕಾರಣ ಅವನ ಮೈಬಣ್ಣ ಬೆಳ್ಳಗಿತ್ತು. ಹಾಗೆ ಕರೆದಾಗಲೆಲ್ಲ ಅವನು ನವವಧುನಿನಂತೆ ನಾಚಿ ನೀರಾಗದೆ ಇರಲಿಲ್ಲ. ಆದರೆ ಆ ಹೆಸರಿಗೆ ಅವು ಕ್ರಮೇಣ ಹೊಂದಿಕೊಂಡಿದ್ದು ಸಮಾಧನಕರ ಸಂಗತಿ.
ಚಂದ್ರನ ಸೊಂಟದ ಸುತ್ತ ಒಂದು ತುಂಡು ದೋತರ, ತಲೆಗೊಂದು ಕಿಮುಟು ವಲ್ಲಿ. ಆದರೆ ಅವೂ ಗೌಡರು ಉಟ್ಟುಬಿಟ್ಟವುಗಳಾಗಿದ್ದವು. ಮರ್ಯಾದೆ ಮುಚ್ಚಿಕೊಳ್ಳಲು ತಾನು ಎಷ್ಟು ಪ್ರಯತ್ನಿಸುತ್ತಿದ್ದರೂ ಎರಡು ಕುಂಡಿಗಳ ಪೈಕಿ ಒಂದಾದರೂ ಸಾರ್ವಜನಿಕವಾಗಿ ಗೋಚರಿಸದೆ ಇರುತ್ತಿರಲಿಲ್ಲ. ಕುಂಡಿಗಿಂತ ಮುಖ್ಯವಾಗಿ ಅವನು ತನ್ನ ಸಾಮಾನು ಹೊರಇಣುಕುವಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸುತ್ತಿದ್ದನು. ಅದು ಅವನ ಕಾಮನ್ ಸೆನ್ಸಾಗಿತ್ತು.
ಸಂಬಳ ಪಡೆದ ದಿವಸ ನಾನು ಆದವಾನಿಯಿಂದ ಒಂದು ಹೆಚ್ಚುವರಿ ಶರ್ಟನ್ನು ಖರೀದಿನಿ ಪ್ಯಾಕು ಮಾಡಿಕೊಂಡು ತಂದು ಗೂಟಕ್ಕೆ ಇಳಿಬಿಟ್ಟಿದ್ದೆನು. ಅವನು ಅದನ್ನು ರೆಪ್ಪೆಯಾಡಿಸದೆ ನೋಡುತ್ತಿದ್ದುದನ್ನು ಗಮನಿಸಿದೆನು. “ಉಟುಗೊಂತಿಯ್ಯೋನು?” ಎಂದು ನಾನು ಕೇಳಿದ್ದು ತಮಾಷೆಗೆ. ಆಶ್ಚರ್ಯವೆಂದರೆ ಅವನು “ಹ್ಹೂ” ಎಂದು ತಲೆ ಅಲ್ಲಾಡಿಸಿಬಿಡುವುದೆ…. ! ತಡಮಾಡದೆ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುತ್ತ ಚಂದ್ರ, “ಆದರೆ ನೀನಿದನ್ನ ತೊಟ್ಟುಕೊಂಡು ಗೌಡರೆದುರು ಅಡ್ಡಾಡಬೇಕು ನೋಡು” ಎಂದು ಕರಾರು ವಿಧಿಸಿದ್ದು ಎಷ್ಟು ನಿಜವೋ, ಅದಕ್ಕವನು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ್ದೂ ಅಷ್ಟೇ ನಿಜ.
ಇವತ್ತು ತೊಟ್ಟುಕೊಂಡಾನು, ನಾಳೆ ತೊಟ್ಟುಕೊಂಡಾನು ಎಂದು ಎದುರು ನೋಡಿದ ನನಗೆ ನಿರಾಸೆಯಾಗದಿರಲಿಲ್ಲ. ಅವನದನ್ನು ತೊಟ್ಟುಕೊಂಡರೆ ತಾನೆ….ಗೋಣಿತಾಟು ತುಂಡಿನೊಳಗೆ ಅಡಗಿಸಿಟ್ಟು ಕಂಕುಳದಲ್ಲಿರಿಸಿಕೊಂಡಿರುತ್ತಿದ್ದನೇ ಹೊರತು ಧರಿಸುವ ಧೈರ್ಯ ತೋರಲಿಲ್ಲ. ಹದಿನೈದಿಪ್ಪತ್ತು ದಿವಸಗಳ ಬಳಿಕ “ನೀನದನ್ನು ತೊಟ್ಟುಕೊಳ್ಳದಿದ್ದಲ್ಲಿ ವಾಪಸು ಕೊಡು” ಎಂದು ಒಣ ಬೆದರಿಕೆ ಹಾಕುವುದು ಅನಿವಾರ್ಯವಾಯಿತು. ತೊಟ್ಟರೆಲ್ಲಿ ಗೌಡಿಕೆ ಮಂದಿ ತಮ್ಮ ಅಭಿಜಾತ ಚುಚ್ಚು ಮಾತುಗಳಿಂದ ತನ್ನನ್ನು ಘಾಸಿಗೊಳಿಸುವರೋ ಎಂಬ ಆತಂಕ ಅವನಿಗಿತ್ತು. ಅವನ ಮೈಚಳಿ ಬಿಡಿಸುವ ಮತ್ತು ತನ್ಮೂಲಕ ಜಮೀನ್ದಾರಿಶಾಹಿ ವಿರುದ್ದ ಚಿಕ್ಕ ಪ್ರತಿಭಟನೆ ವ್ಯಕ್ತಪಡಿಸುವ ಇರಾದೆ ನನ್ನದಾಗಿತ್ತು. ಆದರೆ ಅವನು ಸುತ್ತಮುತ್ತ ಯಾರಿಲ್ಲದಿರುವುದನ್ನು ಖಚಿತಪಡಿಸಿಕೊಂಡು “ತ್ವಟಗಂತೀನಿ ಸಾರೂ……ಆದರ ಗವುಡರೆದುರು ಬ್ಯಾಡ….ಪರುಗಗುಣಿಮಾಗಿ ಹೊಲಕ ಬೊರ್ರಿ….ತೊಟಗಂಡು ತ್ವಾರುಸ್ತೀನಿ” ಎಂದು ಮೆಲ್ಲಗೆ ಹೇಳಿದ.
ಪರುಗುಣಿಮಾಗಿಯೆಂಬ ಬಾಣಾಪುರ ಗೌಡರ ಐವತ್ತೆಕರೆ ಬಿಳಿ ಜೋಳದ ಹೊಲ ವಾಗಿಲಿಗೆ ಒಂದು ದಮ್ಮು ದಾರಿ ದೂರದಲ್ಲಿತ್ತು. ಗೌಡರು ನನ್ನಲ್ಲಿಗೆ ಹಲವು ಸಲ ಕರೆದೊಯ್ದು ಬೆಳಸುಕಾಳು ತಿನ್ನಸಿದ್ದರು. ಆದ್ದರಿಂದ ಆ ಹೊಲದ ಪರಿಚಿತವಿತ್ತು. ಹೋದೆ. ಮೇವಿಗೆಂದು ನಡುವಿನ ಒಂದು ಭಾಗವನ್ನು ಕಟ್ಟಾಫ್ ಮಾಡಿದ್ದರು. ಅಲ್ಲಿ ಚಂದ್ರ ಹೊಸ ಶರ್ಟನ್ನು ತೊಟ್ಟುಕೊಂಡು ನವವಧುನಿನೋಪಾದಿಯಲ್ಲಿ ನಾಚಿ ಕೂತಿದ್ದ. ಕಣ್ತುಂಬ ನೋಡಿ ಕಣ್ಣಲ್ಲಿ ನೀರು ತಂದುಕೊಂಡೆ. “ನ್ವಾಡಿದ್ರೇನು ಸಾರೂ….?”ಎಂದು ಕೇಳಿದ. ಕಣ್ಣೊಳಗಿದ್ದ ಆನಂದ ಬಾಷ್ಪ ಒರೆಸಿಕೊಳ್ಳುತ್ತ ನಾನು “ನೋಡಿದ್ನೆಪ್ಪಾ…ನೋಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ಅವನು ಒಂದೊಂದಾಗಿ ಗುಂಡಿಗಳನ್ನು ಬಿಚ್ಚಿ ಪುನಃ ಮಡಚಿ ಕಂಕುಳಲ್ಲಿರಿಸಿಕೊಂಡ.
ಮಣಿಕರ್ಣಿಕಾ ಉರ್ಫ್ ಝಾನ್ಸಿರಾಣಿ ಲಕ್ಷ್ಮೀಬಾಯಿಯವರ 175 ನೇ ಜನ್ಮದಿನ ಇಂದು
November 19, 2010
ಅವರೇನು ಮಾಡಿದರು?, ಐತಿಹಾಸಿಕ jhansi rani lakshmibaayi, manikarnikaa, t n ramakrishna 1 Comment
ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಹೀಗೊಂದು ಪತ್ರ
November 12, 2010
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ karnataka rajyotsava award, sudhakar chaturvedi 1 Comment
ಟಿ. ಎನ್. ರಾಮಕೃಷ್ಣ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ನ ಸಂಚಾಲಕರು. ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅವರು ನನ್ನೊಂದಿಗೆ ಹಂಚಿಕೊಂಡ ಒಂದು ಪ್ರಸಂಗ ಇಲ್ಲಿದೆ.
Dear Sughosh,
In continuation to my telecon of day before yesterday, I would like to inform you that the Rajyostsava award is loosing its importance and many undeserving people are getting the same due to caste, influence, political connections as also other criteria.
I have tried to get the Rajyostava award to Centenarian freedom fighter Pandit Sudhakar Chaturvedi. Some of the important facts about Sri. Chaturvedi are as below.
*Born on Ramnavami day of 1897, he is the sole surviving eye witness for Jalian Wala Bagh massacre
*He is a bachelor who has adopted a Harijan as son
*Though he is eligible for both Central and State pention given to freedom fighters, he has not accepted it.
*He had participated in the freedom movement actively and had sufferred imprisonment for 13 years
*He was a contemporary of Gandhiji, Subhas, Nehru, and had associated with Tilak, Lajpat Rai, Bhagat Singh, Chandarshekara Azad, Savarkar,Bipin Chandra pal and many other such towerly extraordinary personalities of freedom movement.
*He has translated Vedas to Kannada and delivers speech on Vedas daily.
The above is only a brief biodata of Sri. Chaturvedi.
I have personally spoken to JAYANAGAR MLA. Sri Chaturvedi lives at 5th Block, Jayanagar, Had also spoken to Malleswaram MLA personally and to an MLC over phone. Had also given letter to CM and to the director of Kannada & Culture Manu Baligar, but all in vain. Also other attempts are also made through a powerful organisation which has got influence on the present state government and sorry to state that even this effort also did not suceed.
Regards
T N Ramakrishna.
ಪುಣ್ಯತಿಥಿಯಂದೇ ಪಿತನ ದೇಹಛೇದ
November 8, 2010
ಹುಡುಗ ಹುಡುಗನ್ನೇ ಮದುವೆ ಆಗೋ ಈ ಕಾಲ್ದಲ್ಲೂ….
November 4, 2010
ಅವರೇನು ಮಾಡಿದರು?, ವಿಚಾರ inter caste marriages 2 Comments
ಟ್ರಿಣ್ ಟ್ರಿಣ್, ಟ್ರಿಣ್ ಟ್ರಿಣ್, ಟ್ರಿ…..
ಹಲೋ….
ಹಲೋ ಸರ್ ನಮಸ್ಕಾರ.
ನಮಸ್ಕಾರ. ಯಾರ್ ಮಾತಾಡೋದು?
ಸರ್, ನಾನು ಹಯವದನ.
ಓಹ್…ಹಯವದನ್. ಏನ್ರೀ ಪತ್ತೇನೇ ಇಲ್ವಲ್ರಿ….ಒಂದು ಫೋನ್ ಇಲ್ಲ, ಒಂದೇ ಮೆಸೇಜ್ ಇಲ್ಲ. ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದ್ರೆ ಸ್ವಿಚ್ ಆಫ್ ಅಂತ ಬರ್ತಾ ಇತ್ತು….ಹಂ ಇರ್ಲಿ ಬಿಡಿ. ಎಲ್ಲಿ ಇದೀರಾ? ಏನ್ ಮಾಡ್ತಾ ಇದೀರಾ?
ಇಲ್ಲೇ ಬೆಂಗ್ಳೂರಲ್ಲೇ ಇದೀನಿ ಸರ್. ಅದೇ ಸಾಫ್ಟ್ ವೇರ್ ಕಂಪ್ನೀನಲ್ಲೇ ಕೆಲಸ ಮಾಡ್ತಾ ಇದೀನಿ. ಒಂದು ಗುಡ್ ನ್ಯೂಸ್ ಕೋಡೋಣ ಅಂತ ಪೋನ್ ಮಾಡ್ದೆ. ತಾವು ಬಯ್ಯಬಾರ್ದು.
ನೀವು ಗುಡ್ ನ್ಯೂಸ್ ಕೊಟ್ರೆ ನಾನ್ ಯಾಕ್ರೀ ಬೈಲಿ? ಏನು ಗುಡ್ ನ್ಯೂಸು?
ನನ್ನ ಮದುವೆ ಆಯ್ತು ಸರ್.
ಏನು? ಮದುವೆ ಮಾಡ್ಕೊಂಡ್ರಾ? ಹೇ…ಕಾಂಗ್ರಾಚುಲೇಷನ್ಸ್. ಮತ್ತೆ ನಮಗೆಲ್ಲ ಊಟಕ್ಕ್ ಕರೀಲೇ ಇಲ್ಲ. ಹೋಗ್ಲಿ ಇನ್ಫಾರ್ಮೂ ಮಾಡ್ಲಿಲ್ಲ. ಇದು ಅನ್ಯಾಯ ಕಣ್ರೀ….ಅಂದ ಹಾಗೆ ಹುಡುಗಿ ನಾಗವೇಣಿನೇ ತಾನೆ?
ಹೌದು ಸಾರ್. ಅವಳ್ ಜೊತೆನೇ ಮದ್ವೇ ಆಯ್ತು. ನಾಲ್ಕು ವರ್ಷದ ಪ್ರೇಮ. ನಿಮಗ್ ಗೊತ್ತಿಲ್ದೇ ಇದ್ದಿದ್ದು ಏನಿದೆ? ಆದ್ರೆ ಸಾರಿ ಸರ್. ಯಾರಿಗೂ ಇನ್ಫಾರ್ಮ್ ಮಾಡ್ಲಿಕ್ಕೆ ಆಗ್ಲಿಲ್ಲ. ತುಂಬ ಅರ್ಜೆಂಟ್ ಅರ್ಜೆಂಟಲ್ಲಿ ಮದುವೆ ಆಯ್ತು. ಅದೂ ರಿಜಿಸ್ಟರ್ ಮ್ಯಾರೇಜ್ ಸರ್.
ಓಹ್ ಹೌದಾ…..ಯಾಕೆ ಏನಾದ್ರೂ ಪ್ರಾಬ್ಲಂ ಆಯ್ತಾ?
ಪ್ಲಾಬ್ಲಂ ಆಗ್ಲಿಲ್ಲ ಸರ್. ಪ್ಲಾಬ್ಲಂ ಆಗೋ ಹಾಗೆ ಮಾಡಿದ್ರು. ನಾವು ಅಯ್ಯರ್ಸು. ನಾಗವೇಣಿ ಅಯ್ಯಂಗಾರ್ಸು. ನಮ್ ನಮ್ ಪೇರೆಂಟ್ಸ್ ಎಲ್ಲಾ ಒಪ್ಕೊಂಡಿದ್ರು. ಕೊನೆಗೆ ಇಬ್ರದ್ದು ಬೇರೆ ಬೇರೆ ಕಾಸ್ಟು ಅಂತ ಎರಡ ಕಡೆನೂ ಬೇಡ ಅಂದ್ಬಿಟ್ರು.
ಏನ್ ಹಯವದನ….ಈ ಕಾಲ್ದಲ್ಲೂ ಇದೆಲ್ಲ….
ಈ ಕಾಲ್ದಲ್ಲೇ ಹೆಚ್ಚಾಗಿದೆ ಸರ್. ಹುಡುಗ ಹುಡಗನ ಜೊತೆ, ಹುಡುಗಿ ಹುಡುಗಿ ಜೊತೆ ಮದುವೆ ಆಗ್ತಾ ಇರೋ ಇವತ್ತಿನ ಕಾಲದಲ್ಲೂ ಹೀಗೆಲ್ಲ ಆಗತ್ತೆ ಅಂದ್ರೆ ನಂಬಕ್ಕಾಗಲ್ಲ. ಅಲ್ವಾ ಸರ್? ಈಗ ಎರಡೂ ಕಡೆಯವರ ವಿರೋಧ ಕಟ್ಟಿಕೊಂಡೇ ಮದುವೆ ಆಗೀದಿವಿ. ನಿಮ್ಮ ಆಶೀರ್ವಾದ ಬೇಕು ಸರ್.
ಖಂಡಿತ ನನ್ನ ಆಶೀರ್ವಾದ ಇದೆ. ಅಂದ ಹಾಗೆ ಬರೋ ಭಾನುವಾರ ಏನ್ ಮಾಡ್ತಾ ಇದೀರಿ?
ವಿಶೇಷ ಏನೂ ಇಲ್ಲ ಸರ್.
ಹಾಗೆದ್ರೆ ಹೊಸ ಗಂಡ ಹೆಂಡತಿ ನಮ್ಮ ಮನೆಗೆ ಊಟಕ್ಕೆ ಬನ್ನಿ. ಆಮೇಲೆ ಮಾತಾಡೋಣ.
ಸರಿ ಸರ್. ಒನ್ಸ್ ಅಗೇನ್ ಸಾರಿ ಸರ್. ಮದುವೆಗೆ ಕರೀಯೋದಕ್ಕೆ ಆಗ್ದೇ ಇದ್ದದ್ದಕ್ಕೆ.
ನೋ ಇಶ್ಯೂಸ್ ಹಯವದನ. ವಿಶ್ ಯೂ ಎ ಹ್ಯಾಪಿ ಮ್ಯಾರೀಡ್ ಲೈಫ್. ಟೇಕ್ ಕೇರ್. ಬೈ.
ಬೈ. ಥ್ಯಾಂಕ್ಯೂ ಸರ್. ಇಡ್ತೀನಿ.
ಟೀಂ….ಟೀಂ….ಟೀಂ……
ಬೆಳ್ಳಿ ಪರದೆಯ ಬಣ್ಣದ ಪ್ರತಿಭೆ ಮೇಕಪ್ ಚಂದ್ರಣ್ಣ
November 3, 2010
ಅವರೇನು ಮಾಡಿದರು?, ಚಿತ್ರರಂಗ, ಬಹುಪರಾಕ್, ಮುಕ್ತ...ಮುಕ್ತ...ಮುಕ್ತ.... chitra, make up chandranna Leave a comment
ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….
ಅಗ್ನಿಮೀಳೇ ಪುರೋಹಿತಂ
October 29, 2010
ಅವರೇನು ಮಾಡಿದರು?, ಐತಿಹಾಸಿಕ, ಬಹುಪರಾಕ್, ವಿಚಾರ, Media Leave a comment
ಕೈಯಿಲ್ಲ, ಕಾಲಿಲ್ಲ, ಆತ್ಮವಿಶ್ವಾಸಕ್ಕೇನೇನೂ ಕೊರತೆಯಿಲ್ಲ
October 6, 2010
ಅವರೇನು ಮಾಡಿದರು?, ಬಹುಪರಾಕ್ no arms, no legs, no worries Leave a comment
1966 ರ ತಾಷ್ಕೆಂಟ್ ಒಪ್ಪಂದ – ಒಂದು ವರದಿ
October 2, 2010
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು lal bahadur shastry Leave a comment
ಮಹಾತ್ಮಾ ಗಾಂಧಿ ಮಾತನಾಡಿದ್ದಾರೆ
October 2, 2010
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಬಹುಪರಾಕ್, ರೆಫರೆನ್ಸ್, ವಿಚಾರ, ವಿಡಿಯೋ gandhi first interview, m k gandhi, mahatma gandhi, mohandas karamchand gandhi Leave a comment
ಶುಂಠಿಯನ್ನ ಗೊಬ್ಬರ ಗುಂಡಿಗೆ ಒಗದೀದಿವಿ….
April 26, 2010
ಅವರೇನು ಮಾಡಿದರು?, ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ರ ನೀವ್ ಸತ್ರಿ amma, ginger 2 Comments
ಪುಟ್ಟನನ್ನು ನೋಡಿಕೊಳ್ಳಲು ಅಮ್ಮ ಕೊಪ್ಪದಿಂದ ಬಂದಿದ್ದಾರೆ. ನಿರಂತರ ಮನೆಯ ಕೆಲಸದಲ್ಲಿಯೂ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ, ಮನೆಯ ಸುತ್ತಮುತ್ತ ತರಕಾರಿ ಬೆಳೆಯುತ್ತ, ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸುತ್ತ ಅಮ್ಮ ಇಂದಿಗೂ ಕ್ರಿಯಾಶೀಲವಾಗಿದ್ದಾರೆ. ಇಂತಿಪ್ಪ ಅಮ್ಮ ಬೆಂಗಳೂರಿನ ನನ್ನ ಮನೆಗೆ ಬಂದು ಬೆಂಗಳೂರಿನ ಕಾಸ್ಟ್ ಆಫ್ ಲಿವಿಂಗ್, ಪಿಜ್ಝಾದ ರೇಟ್, ಕೆಲಸದವಳ ಅರೆಬರೆ ಕೆಲಸ, ಇತ್ಯಾದಿ ನೋಡಿ ಹೌಹಾರಿದ್ದಾಳೆ.
ಮೊನ್ನೆ ತರಕಾರಿ ತರಲೆಂದು ಅಮ್ಮನೊಡನೆ ಹತ್ತಿರದ ಅಂಗಡಿಗೆ ಹೋಗಿದ್ದೆ. ಹೈಬ್ರಿಡ್ ತರಕಾರಿಗಳನ್ನಿಟ್ಟುಕೊಂಡಿದ್ದ ಆ ತರಕಾರಿ ಅಂಗಡಿಯನ್ನು ನೋಡಿ ಮೊದಲ ನೋಟದಲ್ಲೇ ಅಮ್ಮ ಮುಖ ಸಿಂಡರಿಸಿದಳು. ಆದರೆ ಬೇರೆ ಉಪಾಯ ಇರಲಿಲ್ಲವಾಗಿ ಅಲ್ಲಿಯೇ ತರಕಾರಿ ತೆಗೆದುಕೊಳ್ಳಬೇಕಾಯಿತು. ಕುಂಬಳಕಾಯಿ 20 ರೂಪಾಯಿ, ಹೀರೇಕಾಯಿ 25 ರೂಪಾಯಿ, ಬೀನ್ಸ್ 60 ರೂಪಾಯಿ, ನುಗ್ಗೆಕಾಯಿ ಮೂರಕ್ಕೆ ಎಂಟುರೂಪಾಯಿ ಎಂದು ರೇಟು ಕೇಳಿ ಇನ್ನಷ್ಟು ಗಲಿಬಿಲಿಗೊಂಡಳು, ತರಕಾರಿ ಕೊಳ್ಳಲು ಹಿಂದೇಟು ಹಾಕಿದಳು. ಹೀಗೆ ಮಾಡಿದರೆ ತರಕಾರಿ ಕೊಂಡಹಾಗೇ ಎಂದುಕೊಂಡು ನಾನು ಅಮ್ಮನಿಗೆ ಒತ್ತಾಯ ಮಾಡಿ ಎಲ್ಲ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಳ್ಳತೊಡಗಿದೆ. ಲಿಸ್ಟ್ ನಲ್ಲಿ ಶುಂಠಿ ಕೂಡ ಇತ್ತು. “ಶುಂಠಿ ಹೆಂಗೆ?” ಅಮ್ಮ ಅಂಗಡಿಯವನನ್ನು ಕೇಳಿದಳು.
“60 ರೂಪಾಯಿ ಕೆಜಿ” ಅಂದ ಅವ.
“ಏನು 60 ರೂಪಾಯಿನಾ? ಸುಘೋಷಾ ನೋಡ 60 ರೂಪಾಯಿ ಅಂತೆ”
“ಆಯ್ತಮಾ, 100 ಗ್ರಾಂ ತಗಳ್ಳಾ?” ಅಂದೆ.
“ಹುಂ..ತಗಾ..ಇನ್ನೇನು ಮಾಡದು. ನೋಡು, ಹೈಬ್ರೀಡ್ ಶುಂಠಿ ತಗಳ್ಳಿಕೆ ಮನಸ್ಸು ಬರಲ್ಲ ಮಾರಾಯಾ…..”ಅಂದಳು.
ಅಂಗಡಿಯವ “ಇಲ್ಲ… ಶುಂಠಿ ಚೆನ್ನಾಗಿದೆ” ಅಂದ.
“ಎಂಥ ಚೆನ್ನಾಗಿದೆ….ನಾವು ಸಾವಯವ ಕೃಷಿಯಲ್ಲಿ ಶುಂಠಿ ಬೆಳೀತಿವಿ. ನಿಮ್ಮ ಶುಂಠಿಗಿಂತ ಅರ್ಧದಷ್ಟಿದ್ರೂ ಎಷ್ಟು ಚೆನ್ನಾಗಿರತ್ತೆ ಗೊತ್ತಾ? ಆದ್ರೆನ್ ಮಾಡದು. ಮೊನ್ನೆ ಕೊಪ್ಪದಲ್ಲಿ ಶುಂಠಿ ಬೆಳದ್ವಿ. ಕಿಲೋಗೆ 3 ರೂಪಾಯಿ ಕೂಡ ಸಿಗಲಿಲ್ಲ. ಎಲ್ಲ ಶುಂಠಿ ಒಯ್ದು ಗೊಬ್ಬರ ಗುಂಡಿಗೆ ಒಗದ್ವಿ” ಎಂದಳು.
ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಅಂಗಡಿಯವ ಸುಮ್ಮನಿದ್ದ. ನಾನು ತರಕಾರಿ ಅಂಗಡಿಯವನಿಗೆ ದುಡ್ಡು ಕೊಡಲು ಪರ್ಸ್ ತೆಗೆದೆ.
ಹುಡುಗಿ ಬಂದಿದಾಳೆ…..
April 24, 2010
ಅವರೇನು ಮಾಡಿದರು?, ಹಿಂಗೇ ಟೈಮ್ ವೇಸ್ಟ್ broomstick, girl, grocery shop, jokes 2 Comments
ನಮ್ಮ ದಿನನಿತ್ಯದ ವ್ಯವಹಾರದಲ್ಲಿ ನಮಗೆ ಉದ್ದೇಶವಿಲ್ಲದೆಯೇ ಹಲವು ಹಾಸ್ಯ ಪ್ರಸಂಗಗಳು ನಡೆದುಬಿಡುತ್ತವೆ. ಅದರಲ್ಲೂ ಪೋಲಿ ಪ್ರಸಂಗಗಳು ಜರುಗುವುದು, ರವಷ್ಟು ಹೆಚ್ಚೇ. ಅದರಲ್ಲೂ ಹಿರಿಯರಿಂದ ಗೊತ್ತಿಲ್ಲದೆಯೆ ಪೋಲಿ ಪ್ರಸಂಗಗಳೂ ಜರುಗಿದರಂತೂ ಏಳುಕೊಂಡಲವಾಡನೇ ಗತಿ…..
ನನ್ನ ಬಂಧುವೊಬ್ಬರ ಕಿರಾಣಿ ಅಂಗಡಿಯಲ್ಲಿ ನಡೆದಿದ್ದು. ಅವರ ಕಿರಾಣಿ ಅಂಗಡಿ, ಮನೆಯ ಒಂದು ಪಾರ್ಶ್ವದಲ್ಲೇ ಇದೆ. ಅಂಗಡಿಯನ್ನು ಸುಮಾರು 35 ವರ್ಷದ ಮಗ ಹಾಗೂ ಸುಮಾರು 70 ವರ್ಷದ ಅವರ ಅಪ್ಪ ನಡೆಸಿಕೊಂಡು ಹೋಗುತ್ತಾರೆ. ಅಂಗಡಿಯ ಸಂಪೂರ್ಣ ಜವಾಬ್ದಾರಿ ಮಗನದ್ದೇ. ಆದರೆ ಅಂಗಡಿಗೆ ಸಾಮಾನು ತರಬೇಕು, ಇನ್ನೊಂದು ಮತ್ತೊಂದು ಅಂತ ಕೆಲಸ ಬಿದ್ದಾಗಲೆಲ್ಲ, ತಂದೆಯೇ ಅಂಗಡಿ ನೋಡಿಕೊಳ್ಳುವುದು. ಮಗ ಪ್ರಾಮಾಣಿಕ ಹಾಗೂ ಶ್ರಮ ಜೀವಿ. ತಂದೆ ತೀರ ಮುಗ್ದರು. ಜಗತ್ತಿನ ಮುಗ್ಧರನ್ನೆಲ್ಲ ಸೇರಿಸಿದರೂ, ಇವರ ಮುಗ್ಧತೆ ಸ್ವಲ್ಪ ಹೆಚ್ಚೇ ಎನ್ನಿವಷ್ಟಿರುತ್ತದೆ.
ಅದೊಮ್ಮೆ ಅಂಗಡಿಗೆ ಸಾಮಾನು ತರಲೆಂದು ಹೊರಗೆ ಹೋಗಿದ್ದ ಮಗ ಆಗಷ್ಟೆ ಮನೆಗೆ ವಾಪಸ್ ಆಗಿದ್ದಾನೆ. ಮಧ್ಯಾಹ್ನವಾದ್ದರಿಂದ ಊಟ ಮಾಡಲು ಕೂತಿದ್ದಾನೆ. ಅಂಗಡಿಯನ್ನು ತಂದೆ ನೋಡಿಕೊಳ್ಳುತ್ತಿದ್ದಾರೆ. ಬಂದ ನಾಲ್ಕಾರು ಜನರಿಗೆ ಸಾಮಾನು ಕಟ್ಟಿಕೊಡುತ್ತಿದ್ದಾರೆ. ಅದೇ ಸಮಯಕ್ಕೆ ಏರು ಜವ್ವನೆಯೊಬ್ಬಳು ಅಂಗಡಿಗೆ ಬಂದಿದ್ದಾಳೆ. ತಂದೆ ಏನು ಬೇಕೆಂದು ಕೇಳಿದ್ದಕ್ಕೆ “ಕಸಬರಿಗೆ” ಎಂದಿದ್ದಾಳೆ. ತಂದೆ ಅಂಗಡಿಯಲ್ಲಿ ಕಸಬರಿಗೆ ಹುಡುಕಿದ್ದಾರೆ. ಅವರಿಗೆ ಸಿಕ್ಕಿಲ್ಲ. ನಮ್ಮ ಕಡೆ ಕಸಬರಿಗೆಗೆ, ಹಿಡಿ ಎನ್ನುತ್ತಾರೆ. ತಂದೆ ಅಂಗಡಿಯಿಂದಲೇ ಜೋರಾಗಿ ಮಗನಿಗೆ ಕೂಗಿದ್ದಾರೆ….”ಏ…ನೋಡಾ…ಹುಡುಗಿ ಬಂದಿದಾಳೆ, ಹಿಡಿಬೇಕಂತೆ….”
ಇತರ ಗಿರಾಕಿಗಳು ಘೊಳ್ ಎಂದು ನಕ್ಕರೆ, ಹುಡುಗಿ ನಾಚಿ ನೀರಾಗಿದ್ದಾಳೆ. ಮಗ ಸುಸ್ತೋ ಸುಸ್ತು….ತಂದೆಗೆ ಮಾತ್ರ ಪಾಪ ಏನೂ ಗೊತ್ತಾಗಿಲ್ಲ….






























ಚಿಠ್ಠೀ ಆಯೀ ಹೈ...