ಡಾ. ಶಿವರಾಮ ಕಾರಂತರ ಚೋಮನ ದುಡಿಯನ್ನು ನನ್ನ ಉರ್ದು ಉಸ್ತಾದ್ ಜನಾಬ್ ಮಾಹೇರ್ ಮನ್ಸೂರ್ ಅವರು 1982 ನೇ ಇಸವಿಯಲ್ಲಿ ಉರ್ದುವಿಗೆ ತಂದಿದ್ದಾರೆ. ಅದರ ಮುಖಪುಟ ಇಲ್ಲಿದೆ. ಉರ್ದುವಿನಲ್ಲಿ ಚೋಮಾ ಕಾ ಢೋಲ್ ಎಂದು ಹೆಸರಿಟ್ಟಿದ್ದಾರೆ. ಈ ಕವರ್ ಪೇಜ್ ನಿಮಗಾಗಿ.
ಉರ್ದುವಿನಲ್ಲಿ ಚೋಮನ ದುಡಿ
March 19, 2011
ಬಹುಪರಾಕ್ choma ka dhol, chomana dudi, maaher mansur, shivaraama kaaranth 2 Comments
ಇದಪ್ಪಾ ಕ್ಯಾಪ್ಶನ್ ಅಂದ್ರೆ….
December 17, 2010
ಫೋಟೋ ಫಿನಿಶ್, ಬಹುಪರಾಕ್ photo caption, respect everyone 1 Comment
ನನ್ನ ಫೋಟೋ “ಹೀಗೊಬ್ಬವನು” ಗೆ ರಿಸ್ಪೆಕ್ಟ್ ಎವ್ರಿವನ್ ನೀಡಿರುವ ಕ್ಯಾಪ್ಶನ್ ಇಲ್ಲಿದೆ. ನಿಮ್ಮ ಕ್ಯಾಪ್ಶನ್ ತುಂಬ ಇಷ್ಟವಾಯಿತು ರಿಸ್ಪೆಕ್ಟ್ ಎವ್ರಿವನ್…..
“ಮೊಬೈಲು ಇಂಟರ್ನೆಟ್ ಫೋನು ಗ್ಯಾಸು MP3 ಡೌನುಲೋಡು ಡ್ಯುಯಲ್ ಸಿಮ್ಮು ನೆಟ್ವರ್ಕು ಶೇರು ಏರು ಇಳಿ ಶೇಂದಿ ಸರಕಾರ ಯಡ್ಡಿ ರೆಡ್ಡಿ ಒಬಾಮ ಚುನಾವಣೆ ದೇವರು ದಿಂಡಿರು ಬೈಕು ಕಾರು ಲಾರಿ ರಸ್ತೆ ವಿಮಾನ ಪೆಟ್ರೋಲು ಡೀಸೆಲು global warmingಉ ಪ್ಲಾಸ್ಟಿಕ್ಕು ಪಟಾಕಿ ಏಸಿ ನುಸಿ ಸೊಳ್ಳೆ ಆರೋಗ್ಯ ಖಾಯಿಲೆ ಕಸಾಲೆ ಶಾಲೆ ಶಿಕ್ಷಣ ರಕ್ಷಣೆ ಮಿಲಿಟರಿ ಭಯೋತ್ಪಾದಕರು ಎಣ್ಣೆ ಹಾಕುವವರು ಬತ್ತಿ ಇಡುವವರು ರೈಲು ಬಿಡುವವರು ಆಡುವವರು ಹಾಡುವವರು ಕುಣಿಯುವವರು ಕಸ ಕಡ್ಡಿ ಕೂಲಿ ಕಾಳು ಶ್ರೀ ೧೦೮ ಮೈನ್ಸು ಕೋರ್ಟು ಲಂಚ ಬ್ಯಾಂಕು ಲೋನು ದುಡ್ಡು ಕಾಸು ಮಕ್ಕಳು ಮರಿ ಕಾನ್ವೆಂಟು ಇಂಗ್ಲೀಷು ಫಾರಿನ್ನು ಚಂದ್ರಲೋಕ, ಮಂಗಳನಲ್ಲಿ ನೀರು ಕರೆಂಟು ಪಾರ್ಕು ಪಬ್ಬು ಹಬ್ಬ ಬ್ಲಾಗು ಕಾಮೆಂಟು ಇನ್ನೂ ಏನೇನೇನೇನೇನೋ…..ಇವೆಲ್ಲ ನಿಮ್ಮ ಕರ್ಮ, ನನ್ನ ತಪಸ್ಸಿಗೇನೂ ಭಂಗವಿಲ್ಲ”
ಕುಂವಿ ಗಾಂಧಿ ಕ್ಲಾಸಿನಿಂದ….
December 6, 2010
ಅವರೇನು ಮಾಡಿದರು?, ಬಹುಪರಾಕ್ Leave a comment
ಕುಂವಿ ಅವರ ಆತ್ಮಕಥನ ಗಾಂಧಿ ಕ್ಲಾಸು ಓದುತ್ತಿದ್ದೇನೆ. ಅದರೊಳಗಿನ ಆಯ್ದ ಭಾಗ.
ಕೃಪೆ – ಕುಂ. ವೀರಭದ್ರಪ್ಪ, ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್.
ಅವರೆಲ್ಲ ಪೈಕಿ ಪರಮವಿಧೇಯತೆಯೇ ಮೈವೆತ್ತಂತೆ ಬಂದಿರುತ್ತಿದ್ದ ಸಣಕಲು ವ್ಯಕ್ತಿಗೆ ಕಳೆದ ತಿಂಗಳ ವರೆಗೆ ಒಂದು ಖಾಯಂ ಹೆಸರೆಂಬುದಿರಲಿಲ್ಲ. ಹೊಲೆಯನಾಗಿದ್ದರೂ ತುಸು ಎಣ್ಣೆಗೆಂಪು ಬಣ್ಣದ ಅವನನ್ನು ಸಂತೆಕುಡ್ಲೂರು ಗೌಡರ ಮನೆಯಲ್ಲಿದ್ದ ಅಸಂಖ್ಯಾತ ಸದಸ್ಯರು ಅವನನ್ನು ಅಸಂಖ್ಯಾತ ಹೆಸರುಗಳಿಂದ ಕರೆಯುತ್ತಿದ್ದರು. ಅದರೆ ಅವು ಜಗತ್ತಿನ ಯಾವುದೇ ಭಾಷೆಯ ನಾಮವಾಚಕ ನಿಘಂಟಿನಲ್ಲಿರಲು ಸಾಧ್ಯವಿರಲಿಲ್ಲ. ಒಂದೊಂದು ನಾಮವಾಚಕವೂ ನಗೆ ತರಿಸುವಂತಿತ್ತು. “ನಿನ್ನ ಹೆಸರೇನು?” ಎಂದು ಕೇಳಿದೊಡನೆ ಅವನು ತಬ್ಬಿಬ್ಬಾಗದೆ ಇರುತ್ತಿರಲಿಲ್ಲ. ಅವನಂತೆ ನಾಮಾಂಕಿತ ವಂಚಿತರು ದಲಿತರೋಣಿಗಳಲ್ಲಿ ಅಸಂಖ್ಯಾತರಿದ್ದರು. ಆದ್ದರಿಂದ ನಾನು ಅವನಿಗೆ “ಚಂದ್ರ” ಎಂದು ನಾಮಕರಣ ಮಾಡಿ ಕರೆಯುತ್ತಿದ್ದೆನು, ಕಾರಣ ಅವನ ಮೈಬಣ್ಣ ಬೆಳ್ಳಗಿತ್ತು. ಹಾಗೆ ಕರೆದಾಗಲೆಲ್ಲ ಅವನು ನವವಧುನಿನಂತೆ ನಾಚಿ ನೀರಾಗದೆ ಇರಲಿಲ್ಲ. ಆದರೆ ಆ ಹೆಸರಿಗೆ ಅವು ಕ್ರಮೇಣ ಹೊಂದಿಕೊಂಡಿದ್ದು ಸಮಾಧನಕರ ಸಂಗತಿ.
ಚಂದ್ರನ ಸೊಂಟದ ಸುತ್ತ ಒಂದು ತುಂಡು ದೋತರ, ತಲೆಗೊಂದು ಕಿಮುಟು ವಲ್ಲಿ. ಆದರೆ ಅವೂ ಗೌಡರು ಉಟ್ಟುಬಿಟ್ಟವುಗಳಾಗಿದ್ದವು. ಮರ್ಯಾದೆ ಮುಚ್ಚಿಕೊಳ್ಳಲು ತಾನು ಎಷ್ಟು ಪ್ರಯತ್ನಿಸುತ್ತಿದ್ದರೂ ಎರಡು ಕುಂಡಿಗಳ ಪೈಕಿ ಒಂದಾದರೂ ಸಾರ್ವಜನಿಕವಾಗಿ ಗೋಚರಿಸದೆ ಇರುತ್ತಿರಲಿಲ್ಲ. ಕುಂಡಿಗಿಂತ ಮುಖ್ಯವಾಗಿ ಅವನು ತನ್ನ ಸಾಮಾನು ಹೊರಇಣುಕುವಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸುತ್ತಿದ್ದನು. ಅದು ಅವನ ಕಾಮನ್ ಸೆನ್ಸಾಗಿತ್ತು.
ಸಂಬಳ ಪಡೆದ ದಿವಸ ನಾನು ಆದವಾನಿಯಿಂದ ಒಂದು ಹೆಚ್ಚುವರಿ ಶರ್ಟನ್ನು ಖರೀದಿನಿ ಪ್ಯಾಕು ಮಾಡಿಕೊಂಡು ತಂದು ಗೂಟಕ್ಕೆ ಇಳಿಬಿಟ್ಟಿದ್ದೆನು. ಅವನು ಅದನ್ನು ರೆಪ್ಪೆಯಾಡಿಸದೆ ನೋಡುತ್ತಿದ್ದುದನ್ನು ಗಮನಿಸಿದೆನು. “ಉಟುಗೊಂತಿಯ್ಯೋನು?” ಎಂದು ನಾನು ಕೇಳಿದ್ದು ತಮಾಷೆಗೆ. ಆಶ್ಚರ್ಯವೆಂದರೆ ಅವನು “ಹ್ಹೂ” ಎಂದು ತಲೆ ಅಲ್ಲಾಡಿಸಿಬಿಡುವುದೆ…. ! ತಡಮಾಡದೆ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುತ್ತ ಚಂದ್ರ, “ಆದರೆ ನೀನಿದನ್ನ ತೊಟ್ಟುಕೊಂಡು ಗೌಡರೆದುರು ಅಡ್ಡಾಡಬೇಕು ನೋಡು” ಎಂದು ಕರಾರು ವಿಧಿಸಿದ್ದು ಎಷ್ಟು ನಿಜವೋ, ಅದಕ್ಕವನು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ್ದೂ ಅಷ್ಟೇ ನಿಜ.
ಇವತ್ತು ತೊಟ್ಟುಕೊಂಡಾನು, ನಾಳೆ ತೊಟ್ಟುಕೊಂಡಾನು ಎಂದು ಎದುರು ನೋಡಿದ ನನಗೆ ನಿರಾಸೆಯಾಗದಿರಲಿಲ್ಲ. ಅವನದನ್ನು ತೊಟ್ಟುಕೊಂಡರೆ ತಾನೆ….ಗೋಣಿತಾಟು ತುಂಡಿನೊಳಗೆ ಅಡಗಿಸಿಟ್ಟು ಕಂಕುಳದಲ್ಲಿರಿಸಿಕೊಂಡಿರುತ್ತಿದ್ದನೇ ಹೊರತು ಧರಿಸುವ ಧೈರ್ಯ ತೋರಲಿಲ್ಲ. ಹದಿನೈದಿಪ್ಪತ್ತು ದಿವಸಗಳ ಬಳಿಕ “ನೀನದನ್ನು ತೊಟ್ಟುಕೊಳ್ಳದಿದ್ದಲ್ಲಿ ವಾಪಸು ಕೊಡು” ಎಂದು ಒಣ ಬೆದರಿಕೆ ಹಾಕುವುದು ಅನಿವಾರ್ಯವಾಯಿತು. ತೊಟ್ಟರೆಲ್ಲಿ ಗೌಡಿಕೆ ಮಂದಿ ತಮ್ಮ ಅಭಿಜಾತ ಚುಚ್ಚು ಮಾತುಗಳಿಂದ ತನ್ನನ್ನು ಘಾಸಿಗೊಳಿಸುವರೋ ಎಂಬ ಆತಂಕ ಅವನಿಗಿತ್ತು. ಅವನ ಮೈಚಳಿ ಬಿಡಿಸುವ ಮತ್ತು ತನ್ಮೂಲಕ ಜಮೀನ್ದಾರಿಶಾಹಿ ವಿರುದ್ದ ಚಿಕ್ಕ ಪ್ರತಿಭಟನೆ ವ್ಯಕ್ತಪಡಿಸುವ ಇರಾದೆ ನನ್ನದಾಗಿತ್ತು. ಆದರೆ ಅವನು ಸುತ್ತಮುತ್ತ ಯಾರಿಲ್ಲದಿರುವುದನ್ನು ಖಚಿತಪಡಿಸಿಕೊಂಡು “ತ್ವಟಗಂತೀನಿ ಸಾರೂ……ಆದರ ಗವುಡರೆದುರು ಬ್ಯಾಡ….ಪರುಗಗುಣಿಮಾಗಿ ಹೊಲಕ ಬೊರ್ರಿ….ತೊಟಗಂಡು ತ್ವಾರುಸ್ತೀನಿ” ಎಂದು ಮೆಲ್ಲಗೆ ಹೇಳಿದ.
ಪರುಗುಣಿಮಾಗಿಯೆಂಬ ಬಾಣಾಪುರ ಗೌಡರ ಐವತ್ತೆಕರೆ ಬಿಳಿ ಜೋಳದ ಹೊಲ ವಾಗಿಲಿಗೆ ಒಂದು ದಮ್ಮು ದಾರಿ ದೂರದಲ್ಲಿತ್ತು. ಗೌಡರು ನನ್ನಲ್ಲಿಗೆ ಹಲವು ಸಲ ಕರೆದೊಯ್ದು ಬೆಳಸುಕಾಳು ತಿನ್ನಸಿದ್ದರು. ಆದ್ದರಿಂದ ಆ ಹೊಲದ ಪರಿಚಿತವಿತ್ತು. ಹೋದೆ. ಮೇವಿಗೆಂದು ನಡುವಿನ ಒಂದು ಭಾಗವನ್ನು ಕಟ್ಟಾಫ್ ಮಾಡಿದ್ದರು. ಅಲ್ಲಿ ಚಂದ್ರ ಹೊಸ ಶರ್ಟನ್ನು ತೊಟ್ಟುಕೊಂಡು ನವವಧುನಿನೋಪಾದಿಯಲ್ಲಿ ನಾಚಿ ಕೂತಿದ್ದ. ಕಣ್ತುಂಬ ನೋಡಿ ಕಣ್ಣಲ್ಲಿ ನೀರು ತಂದುಕೊಂಡೆ. “ನ್ವಾಡಿದ್ರೇನು ಸಾರೂ….?”ಎಂದು ಕೇಳಿದ. ಕಣ್ಣೊಳಗಿದ್ದ ಆನಂದ ಬಾಷ್ಪ ಒರೆಸಿಕೊಳ್ಳುತ್ತ ನಾನು “ನೋಡಿದ್ನೆಪ್ಪಾ…ನೋಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ಅವನು ಒಂದೊಂದಾಗಿ ಗುಂಡಿಗಳನ್ನು ಬಿಚ್ಚಿ ಪುನಃ ಮಡಚಿ ಕಂಕುಳಲ್ಲಿರಿಸಿಕೊಂಡ.
ಬೆಳ್ಳಿ ಪರದೆಯ ಬಣ್ಣದ ಪ್ರತಿಭೆ ಮೇಕಪ್ ಚಂದ್ರಣ್ಣ
November 3, 2010
ಅವರೇನು ಮಾಡಿದರು?, ಚಿತ್ರರಂಗ, ಬಹುಪರಾಕ್, ಮುಕ್ತ...ಮುಕ್ತ...ಮುಕ್ತ.... chitra, make up chandranna Leave a comment
ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….
ಅಗ್ನಿಮೀಳೇ ಪುರೋಹಿತಂ
October 29, 2010
ಅವರೇನು ಮಾಡಿದರು?, ಐತಿಹಾಸಿಕ, ಬಹುಪರಾಕ್, ವಿಚಾರ, Media Leave a comment
ವಿಜಯ ಕರ್ನಾಟಕದ ಕತ್ತೆ ವ್ಯಾಪಾರ
October 14, 2010
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಬಹುಪರಾಕ್, ಮುದ್ರಣ ಮಾಧ್ಯಮ, ವಿಚಾರ donkey, horse trading, vijay karnataka 2 Comments
ಇಂದಿನ ‘ವಿಜಯ ಕರ್ನಾಟಕ’ ಸಂಪಾದಕೀಯ ಹೀಗಿದೆ
October 12, 2010
ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಬಹುಪರಾಕ್, Media editorial, vijay karnataka 3 Comments
ಕೈಯಿಲ್ಲ, ಕಾಲಿಲ್ಲ, ಆತ್ಮವಿಶ್ವಾಸಕ್ಕೇನೇನೂ ಕೊರತೆಯಿಲ್ಲ
October 6, 2010
ಅವರೇನು ಮಾಡಿದರು?, ಬಹುಪರಾಕ್ no arms, no legs, no worries Leave a comment
ಮಹಾತ್ಮಾ ಗಾಂಧಿ ಮಾತನಾಡಿದ್ದಾರೆ
October 2, 2010
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಬಹುಪರಾಕ್, ರೆಫರೆನ್ಸ್, ವಿಚಾರ, ವಿಡಿಯೋ gandhi first interview, m k gandhi, mahatma gandhi, mohandas karamchand gandhi Leave a comment
‘ಅಕ್ಕ’ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಗ್ರಹ – ದೀಪ ತೋರಿದೆಡೆಗೆ
September 12, 2010
ನೋಟಿನಲ್ಲಿ ಎಷ್ಟೊಂದು ಸೃಜನಶೀಲತೆ…
May 8, 2010
ಫೋಟೋ ಫಿನಿಶ್, ಬಹುಪರಾಕ್ origami, won park Leave a comment
Won Park is the master of Origami. He is also called the “money folder”, a practitioner of origami whose canvas is the United States One Dollar Bill.
Bending, twisting, and folding, he creates life-like shapes in stunning detail.
ಸ್ವಾತಂತ್ರ್ಯ ಹೋರಾಟಗಾರರ ಅಕ್ಷರ ಮಾಲೆ…
May 2, 2010
ಬಹುಪರಾಕ್, ವಿಚಾರ english alphabet, kannada akhsaramale, rashtra gourava samrakshana parishat, t n ramakrishna 3 Comments
‘ಎ’ ಫಾರ್ ಆಪಲ್, ‘ಬಿ’ ಫಾರ್ ಬ್ಯಾಟ್, ‘ಅ’ ಅರಸ, ‘ಆ’ ಆನೆ ಎಂದಷ್ಟೇ ಕಲಿಯುವ ಮಕ್ಕಳಿಗೆ ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ವಿನೂತನ ಅಕ್ಷರ ಮಾಲೆಯನ್ನು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಹೊರ ತಂದಿದೆ. ಇಂದಿನ ನಮ್ಮ ಮಕ್ಕಳಿಗೆ ಅತ್ಯುತ್ತಮ ಎನ್ನಿಸಬಹುದಾದ ಅಕ್ಷರ ಮಾಲೆ ಇದು. ಹೆಚ್ಚಿನ ಮಾಹಿತಿಗೆ ಶ್ರೀ. ಟಿ ಎನ್ ರಾಮಕೃಷ್ಣ (9845672560) ಅವರನ್ನು ಸಂಪರ್ಕಿಸಬಹುದು.
ಬೆಂಗಳೂರು ಯೂನಿವರ್ಸಿಟಿಯ ಇರುವೆಗಳು
February 5, 2010
ನಿಮಗಿದೋ ಆಮಂತ್ರಣ, ಬಹುಪರಾಕ್, ಬ್ಲಾಗು ಇತ್ಯಾದಿ., Media aditya bharadwaja, Bangalore University, kannada sahitya sammelana 2 Comments
ನನ್ನ ‘ಆಪರೇಷನ್ ಕಿಡ್ನಿಸ್ಟೋನ್’ ಮಾಲಿಕೆ ಮುಗಿಯುವವರೆಗೂ ಬೇರೆ ಪೋಸ್ಟ್ ಹಾಕಬಾರದೆಂದು ನಿರ್ಧರಿಸಿದ್ದೆ. ಆದರೆ ಬೆಂಗಳೂರು ಯೂನಿವರ್ಸಿಟಿಯ ಇರುವೆಗಳು ಬಂದು ಕಚ್ಚಿದ್ದರಿಂದ ಅನಿವಾರ್ಯವಾಗಿ ಈ ಪೋಸ್ಟ್ ಹಾಕಬೇಕಾಗಿ ಬಂದಿದೆ. ಯೂನಿವರ್ಸಿಟಿಯ ಆದಿತ್ಯ ಭಾರದ್ವಾಜ್ ಮತ್ತು ಗ್ಯಾಂಗ್ ನ ಕೆಂಪಿರುವೆ, ಕಟ್ಟಿರುವೆ, ಮಳ್ಳಿರುವೆ, ಕಪ್ಪಿರುವೆಗಳೆಲ್ಲ ಸೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೇಂದೇ ಹೊಸ ಬ್ಲಾಗ್ ಆರಂಭಿಸಿದ್ದಾರೆ. ಅದರ ಶುಭಾರಂಭ ಇಂದಿನಿಂದ. ಬ್ಲಾಗ್ ನುಡಿನಮನ ಕ್ಕೆ ಭೇಟಿ ಕೊಡಿ. ಇರುವೆಗಳನ್ನು ಪ್ರೋತ್ಸಾಹಿಸಿ…..
ಭಾರತೀಯ ವಿದ್ಯಾ ಭವನದಲ್ಲಿನ ಕಾರ್ಯಾಗಾರದ ಫೋಟೋಗಳು
January 11, 2010
ಬಹುಪರಾಕ್, Media bharatiya vidya bhavana, madhyama bharati, tv serial workshop Leave a comment
‘ಭಾರತೀಯ ವಿದ್ಯಾ ಭವನ’ದ ‘ಮಾಧ್ಯಮ ಭಾರತಿ’ಯ ವತಿಯಿಂದ ಎರಡು ದಿನಗಳ ಟಿವಿ ಸ್ಕ್ರಿಪ್ಟಿಂಗ್ ವರ್ಕ್ ಶಾಪ್ ನಿನ್ನೆ ಮುಕ್ತಾಯಗೊಂಡಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ನಿವೃತ್ತ ನೌಕರರು ಪಾಲ್ಗೊಂಡಿದ್ದ ಕಾರ್ಯಾಗಾರದಲ್ಲಿ ನಾನು, ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ (ಗೋಧೂಳಿ, ಯಾವ ಜನ್ಮದ ಮೈತ್ರಿ, ಎಲ್ಲ ಮರೆತಿರುವಾಗ ಖ್ಯಾತಿಯ), ಮಂಜುನಾಥ್ ಚಾಂದ್, ಸತ್ಯಬೋಧ ಜೋಶಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿದ್ದೆವು. ಎರಡು ದಿನಗಳ ಕಾರ್ಯಾಗಾರದಲ್ಲಿ ಟಿವಿ ಸೀರಿಯಲ್ ಹಾಗೂ ನ್ಯೂಸ್ ಬರವಣಿಗೆ ಕುರಿತ ತರಬೇತಿ ನಡೆಯಿತು. ಮಾಧ್ಯಮ ಭಾರತಿಯ ನಿರ್ದೇಶಕ ಜಯರಾಮ ಅಡಿಗರ ನೇತೃತ್ವದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ನಾನು ಕೋಆರ್ಡಿನೇಟ್ ಮಾಡಿ, ಧಾರಾವಾಹಿ ಹಾಗೂ ನ್ಯೂಸ್ ಬರವಣಿಗೆಗಳೆರಡಕ್ಕೂ ತರಬೇತಿ ನೀಡಿದೆ. ಕಾರ್ಯಾಗಾರದ ಕೆಲ ಫೋಟೋಗಳು ಇಲ್ಲಿವೆ.
ಹಿಂದಿನ ಕಾಲದ ಲೆಟರ್ ಗಳು
December 29, 2009
ಐತಿಹಾಸಿಕ, ಫೋಟೋ ಫಿನಿಶ್, ಬಹುಪರಾಕ್ 1970 letter, amma, grandpa, hand writing, kannada, language Leave a comment
ಅಂದಕಾಲತ್ತಿಲ್ ಬೆಂಕಿಪೊಟ್ಟಣಗಳನ್ನು ನೋಡಿದ್ದೀರಾ?
December 26, 2009
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಫೋಟೋ ಫಿನಿಶ್, ಬಹುಪರಾಕ್ collection, high school, hobby, match box 2 Comments
ಮಿಡ್ಲ್ ಸ್ಕೂಲ್ ಹಾಗೂ ಹೈಸ್ಕೂಲ್ ನಲ್ಲಿರುವಾಗ ಬೆಂಕಿಪೊಟ್ಟಣಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಸುಮಾರು 1000 ಬೆಂಕಿಪೊಟ್ಟಣಗಳನ್ನು ಸಂಗ್ರಹಿಸಿದ್ದೆ. ತಿಪ್ಪೆಗುಂಡಿಯಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್ ವರೆಗೂ ಎಲ್ಲವನ್ನೂ ಶೋಧಿಸಿ ಬೆಂಕಿಪೊಟ್ಟಣಗಳನ್ನು ಹುಡುಕುತ್ತಿದ್ದೆ. ಮೊನ್ನೆ ಅಟ್ಟದ ಮೇಲಿನ ಸಾಮಾನು ತೆಗೆಯುತ್ತಿದ್ದಾಗ ನನ್ನ ಹೈಸ್ಕೂಲು ದಿನದ ಬೆಂಕಿ ಪೊಟ್ಟಣಗಳು ಮತ್ತೆ ಕಣ್ಣಿಗೆ ಬಿದ್ದವು. ನಿಮಗೂ ಇವು ನೆನಪಿರಬಹುದು.
ಅಂಕಿತ ಪುಸ್ತಕ ದ ಪಾಕೆಟ್ ಡೈರಿ
December 23, 2009
ಫೋಟೋ ಫಿನಿಶ್, ಬಹುಪರಾಕ್ 2010 pocket diary, ankita pustaka Leave a comment



































































ಚಿಠ್ಠೀ ಆಯೀ ಹೈ...