ಗೀತ ರಾಮಾಯಣ ಬೇಕಾಗಿದೆ
January 4, 2013
Uncategorized geet ramayan 1 Comment
ಮರಾಠಿಯಲ್ಲಿ ಗ. ದಿ. ಮಾಡಗುಳಕರ ವಿರಚಿತ ಹಾಗೂ ಸುಧೀರ್ ಫಡಕೆ ಹಾಡಿರುವ ಗೀತ ರಾಮಾಯಣ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಅದೇ ಮ್ಯೂಸಿಕ್ ನಲ್ಲಿ ಅದನ್ನು ಎಂ. ಎಸ್. ಕಾಮತ್ ಹಾಡಿದ್ದಾರೆ. ಯಾರ ಬಳಿಯಾದರೂ ಕನ್ನಡದ ಧ್ವನಿ ಸುರುಳಿ ಅಥವಾ ಸಿಡಿ ಇದ್ದರೆ ದಯವಿಟ್ಟು ನೀಡಿ.
ವಿಶ್ವಾಸಿ
ಸುಘೋಷ್
ವರಮಹಾಲಕ್ಷ್ಮಿ ಹಬ್ಬದ ನಿಮಿತ್ತವಾಗಿ ಈ ಪುಸ್ತಕ ಓದಿ
July 27, 2012
ಸ್ವಾಮಿ ನಿತ್ಯಾನಂದ ಸಂದರ್ಶನ
June 28, 2012
ಈ ಚಿತ್ರ ಭಯಾನಕವಾಗಿದೆ…ಆದರೆ ಪಬ್ಲಿಷ್ ಮಾಡದೇ ವಿಧಿಯಿಲ್ಲ…
March 17, 2012
ಫೋಟೋ ಹಾಗೂ ಮಾಹಿತಿ ಕಳುಹಿಸಿಕೊಟ್ಟಿದ್ದು ಜಿಗಣಿ ರಾಮಕೃಷ್ಣ.
ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಅನಾಹುತ ನಡೆಯಿತು. ಯಾವುದೋ ಕಾರಣಕ್ಕೆ ಕಿಟಕಿಯಿಂದ ಹೊರಗೆ ಬಾಗಿದ ವ್ಯಕ್ತಿಯ ತಲೆ, ಪಕ್ಕದಲ್ಲಿ ನಿಲ್ಲಿಸಿದ್ದ ಕ್ಯಾಂಟರ್ ಗೆ ಹೊಡೆದು ಛಿದ್ರವಾಯಿತು. ಘಟನೆಗೆ ಬಸ್ ಚಾಲಕನ ಅಜಾಗರೂಕತೆ ಕಾರಣ ಎಂಬುದು ಪೋಲಿಸರ ನುಡಿ. ಆದರೆ ಹೀಗೆ ತಲೆ ಹೊರಗೆ ಹಾಕಿದ್ದು ತಪ್ಪು ಎಂಬುದು ಬಿಎಂಟಿಸಿಯ ವಾದ. ಈ ನಡುವೆ, ಬಸ್ ಗಳಿಗೆ ಹೊರಗಿನಿಂದ ಈ ರೀತಿ ಬಾರ್ ಹಾಕಿದರೆ, ಅಪಾಯ ತಡೆಗಟ್ಟಬಹುದು ಎಂಬುದು ವಾಸ್ತವ.
ಬಣ್ಣ ನನ್ನ ಒಲವಿನ ಬಣ್ಣ….
March 8, 2012
‘ಅಪಾರ’ ಕಳಿಸಿದ ‘ಸುಘೋಷ್’ ಕ್ಯಾಲಿಗ್ರಫಿ…
March 4, 2012
ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….
February 8, 2012
ನಿಜ. ಕಳೆದ ಸುಮಾರು ಐದು ತಿಂಗಳಿನಿಂದ ಬ್ಲಾಗ್ ಅಪ್ಡೇಡ್ ಮಾಡಲು ಆಗಲಿಲ್ಲ. ಕಾರಣ ಇಷ್ಟೇ. ಚ್ಯಾನಲ್ ನಲ್ಲಿ ತುಂಬಾ ತುಂಬಾ ತುಂಬಾ ಕೆಲಸವಿತ್ತು. ಈಗ ಇಲ್ಲ ಅಂತಲ್ಲ. ಈಗಲೂ ಇದೆ. ಆದರೆ ಅದರ ನಡುವೆಯೇ ಹೇಗೋ ಸಮಯ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ದೇವರಾಣೆಗೂ ನಿತ್ಯವೂ ಬ್ಲಾಗ್ ಅಪ್ ಡೇಟ್ ಮಾಡುತ್ತೇನೆ ಎಂದು ಖಂಡಿತ ಹೇಳುವುದಿಲ್ಲ.
ನಾನು ಮೊದಲು ಅಂದುಕೊಂಡಿದ್ದು ಮೇನ್ ಸ್ಟ್ರೀಮ್ ಜರ್ನಲಿಸಂನಿಂದ 1 ವರ್ಷ ಬ್ರೇಕ್ ತೆಗೆದುಕೊಳ್ಳುತ್ತೇನೆ ಅಂದು. ಆದರೆ ಒಟ್ಟು ಬ್ರೇಕ್ ತೆಗೆದುಕೊಂಡಿದ್ದು ಸುಮಾರು ಎರಡೂವರೆ ವರ್ಷ. ಈ ಎರಡೂವರೆ ವರ್ಷದ ಅವಧಿಯಲ್ಲಿ ಮಾಧ್ಯಮ ತುಂಬಾ ತುಂಬಾ ಬದಲಾಗಿದೆ ಹಾಗೂ ಈ ಬದಲಾವಣೆ ನನಗೆ ತೀವ್ರ ಬೇಸರ ತಂದಿದೆ. ಕಾರಣ ಇಷ್ಟೇ, ಬದಲಾವಣೆ ಒಳ್ಳೆಯಾದಾಗಿದ್ದರೆ ಎಂದಿಗೂ ಸ್ವಾಗತಾರ್ಹವೆ. ಆದರೆ ಈಗ ಮಾಧ್ಯಮದಲ್ಲಿ ಆಗಿರುವ ಮತ್ತು ಆಗುತ್ತಿರುವ ಬದಲಾವಣೆ ದಿಗ್ಭ್ರಮೆ ಮೂಡಿಸಿದೆ. ಒಟ್ಟಿನಲ್ಲಿ ಮಾಧ್ಯಮದ ಪರಿಸ್ಥಿತಿ ಎಲ್ಲ ದೃಷ್ಟಿಯಿಂದಲೂ ಗೊಂದಲಮಯವಾಗಿದೆ. ಎಷ್ಟು ಗೊಂದಲವಾಗಿದೆಯೆಂದರೆ, ಯಾವುದನ್ನು ಬರೆಯಲಿ, ಯಾವುದನ್ನು ಬಿಡಲಿ ಎಂಬುದು ನನಗೇ ಗೊತ್ತಾಗ್ತಾ ಇಲ್ಲ. ಏನು ಬರೆದರೂ ತಪ್ಪಾಗಬಹುದು, ಬರೆಯದಿದ್ದರೆ ನನಗೆ ಸಮಾಧಾನವಿಲ್ಲ.
ಕೊನೆಯಲ್ಲಿ ನಾನು ಹೇಳಬಹುದಾದುದಿಷ್ಟೇ…..
ಕುರುಡು ಕಾಂಚಾಣ ಕುಣಿಯುತ್ತಲಿತ್ತು ಕಾಲಿಗೆ ಬಿದ್ದವ್ರ ತುಳಿಯುತ್ತಲಿತ್ತು….
ಕುರುಡು ನಾಯಿ ತಾ ಸಂತೆಗೆ ಬಂತಂತೆ…
ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….
ಸ್ನೇಹ ಮಾಡಬೇಕಿಂಥವಳ…
ಸೋರುತಿಹುದು ಮನೆಯ ಮಾಳಿಗೆ….
ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ….
ಎನಗೂ ಆಣೆ ರಂಗ ನಿನಗೂ ಆಣೆ….
ನಂಬರು ನಚ್ಚರು ಬರಿದೇ ಕರೆವರು….
ಹಜಾರೊಂ ಖ್ವಾಂಯಿಷೇ ಐಸೀ ಕೆ ಹರ್ ಖ್ವಾಯಿಷ್ ಪೆ ದಮ್ ನಿಕಲೆ….
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ….
ಆಗಾಗ ಬರೆಯುತ್ತಿರುತ್ತೇನೆ……
ವಿಶ್ವಾಸಿ
ಸುಘೋಷ್
ಲೇಡೀಸ್ ವಾಯ್ಸ್ ನಲ್ಲಿ ಬರ್ತೀನಿ…
September 11, 2011
ಸಮಯ ಟಿವಿಯ ಮಧ್ಯಾಹ್ನದ ಎಪಿಸೋಡ್ ಲೇಡೀಸ್ ವಾಯ್ಸ್ ನಲ್ಲಿ ಬರ್ತಾ ಇದೀನಿ. ಸೆಪ್ಟೆಂಟರ್ 12 ನೇ ತಾರೀಕು ಮಧ್ಯಾಹ್ನ 1.30 ರಿಂದ 2 ಗಂಟೆ ನಡುವೆ.
ಹೊಸದಾಗಿ ಮದುವೆಯಾಗಿ ಬಂದ ಫಾರಿನ್ ಹೆಂಡತಿ ಕೇಳಿದ್ದು…
July 9, 2011
Uncategorized mug, toilet, tub 1 Comment
ಇದು ನಿಜವಾದ ಘಟನೆ. ಮೊನ್ನೆ ಯಾರೋ ಮಿತ್ರರು ಹೇಳುತ್ತಿದ್ದರು.
ಅವರ ಸಂಬಂಧಿಕರ ಪೈಕಿ ಯಾರೋ ಒಬ್ಬ ಫ್ರಾನ್ಸ್ ನ ಯುವತಿಯನ್ನು ಪ್ರೀತಿಸಿ ಮದುವೆಯಾದನಂತೆ. ಮದುವೆಯಾಗಿ ಹೊಸ ಜೋಡಿ ಭಾರತದ ಅವರ ಮನೆಗೆ ಬಂದಿದೆ. ನವ ವಧುವಿಗೆ ಭಾರತೀಯ ಸಂಪ್ರದಾಯ, ಮನೆಗೆಲಸ ಇತ್ಯಾದಿಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಮೊದಲ ದಿನ ಕಳೆದು ಮಾರನೆ ದಿನ ಬೆಳಿಗ್ಗೆ ಮನೆಯ ಸದಸ್ಯರೆಲ್ಲ ಸೇರಿ ಕಾಫಿ ಕುಡಿಯುತ್ತಿರಬೇಕಾದರೆ ನವ ವಧು ಅದು ಇದು ಪ್ರಶ್ನೆ ಕೇಳುತ್ತ ಮನೆಯವರಿಗೆ ಕೇಳಿದಳಂತೆ “ಅಂದ ಹಾಗೆ ನೀವು ಮುಖ ತೊಳೆಯಲು ಟಬ್ ಹಾಗೂ ಮಗ್ ಅನ್ನು ಟಾಯ್ಲೆಟ್ ನಲ್ಲಿ ಏಕೆ ಇಟ್ಟಿದ್ದೀರಿ?” ಅಂತ.
ಹೆಂಗಿದೆ ಚಮಕ್?
ಯಾಮಾರಿಸುವ ಕಲೆಯು…
June 29, 2011
Uncategorized kid, toy 1 Comment
ತಾಯಿ ಹಾಗೂ ಆಕೆಯ 5 ವರ್ಷದ ಮಗ ಆಟಿಕೆಯ ಅಂಗಡಿಯನ್ನು ಹೊಕ್ಕರು. ಮಗನಿಗೆ ಸಂಬಂಧಪಟ್ಟಿರುವುದನ್ನೇ ತಾಯಿಗೆ ಏನೋ ಕೊಳ್ಳಬೇಕಿತ್ತು. ಆದರೆ ಮಗ ಅಂಗಡಿ ಹೊಕ್ಕ ಕೂಡಲೇ ಅದು ಬೇಕು, ಇದು ಬೇಕು ಎಂದು ವರಾತ ಶುರು ಹಚ್ಚಿಕೊಂಡ. ತಾಯಿ ಹೇಳಿದಳು, “ನೋಡು, ನಿನಗೆ ಎಲ್ಲವನ್ನೂ ಕೊಡಿಸಲಾಗುವುದಿಲ್ಲ. ಏನಾದರೂ ಒಂದು ಕೊಡಿಸುತ್ತೇನೆ. ಏನು ಬೇಕು ಹೇಳು?”
“ವಾಚ್ ಬೇಕು” ಮಗ ಅಂದ.
“ಸರಿ. ಒಳ್ಳೆಯ ವಾಚ್ ಸೆಲೆಕ್ಟ್ ಮಾಡು” ಎಂದಳು ತಾಯಿ.
ಮಗ ವಾಚ್ ಆಯ್ಕೆಗೆ ಅತ್ತ ಹೋಗುತ್ತಿದ್ದಂತೆ ತಾಯಿ ತನ್ನ ಖರೀದಿಯನ್ನು ಮುಂದುವರೆಸಿದಳು. ಕಾರ್ಟೂನ್ ಇರುವ ವಾಚ್, ಟೆಡ್ಡಿ ಬೇರ್ ವಾಚ್, ಸ್ಪೈಡರ್ ಮ್ಯಾನ್ ವಾಚ್ ಪ್ರತಿಯೊಂದನ್ನು ತಂದು ತಾಯಿಗೆ ತೋರಿಸುತ್ತಲೇ ಇದ್ದ ಮಗ.
“ಇನ್ನೊಮ್ಮೆ ವಿಚಾರ ಮಾಡಿ ನೋಡು. ಆಮೇಲೆ ಮನೆಗೆ ಹೋದ ಮೇಲೆ ಇಷ್ಟವಿಲ್ಲ ಎನ್ನಬೇಡ. ಈಗಲೇ ವಿಚಾರ ಮಾಡಿ ತಗೋ. ಹೋಗು, ಇನ್ನೊಮ್ಮೆ ಸೆಲೆಕ್ಟ್ ಮಾಡು” ಎಂದು ಪ್ರತಿಬಾರಿಯೂ ತಾಯಿ ಮಗನನ್ನು ವಾಪಸ್ ಕಳಿಸುತ್ತಿದ್ದಳು.
ಮಗ ಕೊನೆಗೊಂದು ವಾಚ್ ಹಿಡಿದುಕೊಂಡು ಬರುವಾಗ ತಾಯಿಯ ಖರೀದಿ ಕೂಡ ಮುಗಿದಿತ್ತು. ಮಗನ ಕೈಯಲ್ಲಿ ಮುದ್ದಾದ ಟಾಮ್ ಎಂಡ್ ಜೆರ್ರಿ ವಾಚಿತ್ತು. ಮಗ ಖುಷಿಯಿಂದ ತಾಯಿಗೆ ತೋರಿಸಿದ. ತಾಯಿ ತನ್ನ ಬಿಲ್ಲಿಂಗ್ ಮುಗಿಸಿದಳು. ಇದೀಗ ವಾಚ್ ಬಿಲ್ಲಿಂಗ್ ಎಂದು ಮಗ ವಾಚನ್ನು ಬಿಲ್ ಕೌಂಟರ್ ನತ್ತ ಚಾಚಿದ. ಅಷ್ಟರಲ್ಲಿ ತಾಯಿಯೆಂದಳು, “ನೋಡು, ನೀನು ವಾಚ್ ಕೊಳ್ಳಲು ಅಪ್ಪನ ಪರ್ಮಿಷನ್ ಬೇಕು. ಅವರಿಗೆ ಫೋನ್ ಮಾಡುತ್ತೇನೆ. ಅವರು ಹೂಂ ಅಂದರೆ ಕೊಳ್ಳುತ್ತೇನೆ”
ಮಗ ತುಸು ಪೆಚ್ಚಾದ. ತಾಯಿ ಫೋನ್ ಮಾಡಿದಳು. ಅತ್ತ ಕಡೆಯಿಂದ ಅಪ್ಪ ಮಾತಾಡಿದ. ವಾಚ್ ಕೊಳ್ಳುವುದು ಬೇಡವೆಂದು ಹೇಳಿದ. ಟಾಮ್ ಎಂಡ್ ಜೆರ್ರಿ ವಾಚ್ ಕೌಂಟರಿನಲ್ಲಿಯೇ ಉಳಿಯಿತು.
ನ್ಯೂಸ್ ಪಿಂಟ್ ಗೆ ರಮೇಶ್ ಸರ್ ಅಭಿಪ್ರಾಯ
June 15, 2011
ನ್ಯೂಸ್ ಪಿಂಟ್ ಪುಸ್ತಕದ ಕುರಿತು ಶ್ರೀ. ರಮೇಶ್ ಗುರುರಾಜ ರಾವ್ ಅವರು ಅವಧಿಗಾಗಿ ಬರೆದ ಅಭಿಪ್ರಾಯ ಇಲ್ಲಿದೆ.
ಮೊದಲೇ ಹೇಳಿಬಿಡುತ್ತೇನೆ… ನಾನು ಪತ್ರಕರ್ತನೂ ಅಲ್ಲ, ಕಿರುತೆರೆ ಕಲಾವಿದನೂ ಅಲ್ಲ.. ಇವೆರಡೂ ಪ್ರಪಂಚಗಳನ್ನು ಸ್ವಲ್ಪ, ತಕ್ಕ ಮಟ್ಟಿಗೆ ಹತ್ತಿರದಿಂದ ನೋಡಲು ಯತ್ನಿಸಿದವನು…ಹೀಗಾಗಿ, ಈ ಎರಡು ಪ್ರಪಂಚದಲ್ಲಿ ಪಳಗಿರುವ ಗೆಳೆಯ ಬರೆದಿರುವ ಪುಸ್ತಕದ ಬಗ್ಗೆ ನನ್ನ ಮಾತುಗಳು, ಪುಸ್ತಕ ಓದಿದ್ದಕ್ಕೆ ನನ್ನ ಪ್ರತಿಕ್ರಿಯೆಯೇ ಹೊರತು ವಿಮರ್ಶೆಯಲ್ಲ.
ಸಂಪೂರ್ಣ ಓದಿಗೆ ಕ್ಲಿಕ್ಕಿಸಿ.
ಸಚಿವರು ಪ್ರಯಾಣಿಸುತ್ತಿದ್ದ ಹಂದಿಗೆ ಕಾರು ಡಿಕ್ಕಿ
May 16, 2011
ಕಾರಣಾಂತರಗಳಿಂದ ಪುಸ್ತಕ ಬಿಡುಗಡೆ ಮುಂದಕ್ಕೆ
May 14, 2011
ಆತ್ಮೀಯರೆ,
ಮೇ 22 ಕ್ಕೆ ನಡೆಯಬೇಕಿದ್ದ ನನ್ನ ಪುಸ್ತಕ ‘ನ್ಯೂಸ್ ಪಿಂಟ್’ ಬಿಡುಗಡೆ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಆದಷ್ಟು ಬೇಗ ಹೊಸ ದಿನಾಂಕವನ್ನು ತಿಳಿಸುತ್ತೇನೆ. ನಿಮ್ಮ ಪ್ರೀತಿ ಸದಾ ಇರಲಿ.
ವಿಶ್ವಾಸಿ
ಸುಘೋಷ್ ಎಸ್. ನಿಗಳೆ
ಬೃಬೆಂಮಪಾ ಕನ್ನಡ
April 16, 2011



























ಚಿಠ್ಠೀ ಆಯೀ ಹೈ…