ಶುಂಠಿಯನ್ನ ಗೊಬ್ಬರ ಗುಂಡಿಗೆ ಒಗದೀದಿವಿ….

2 Comments

ಪುಟ್ಟನನ್ನು ನೋಡಿಕೊಳ್ಳಲು ಅಮ್ಮ ಕೊಪ್ಪದಿಂದ ಬಂದಿದ್ದಾರೆ. ನಿರಂತರ ಮನೆಯ ಕೆಲಸದಲ್ಲಿಯೂ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ, ಮನೆಯ ಸುತ್ತಮುತ್ತ ತರಕಾರಿ ಬೆಳೆಯುತ್ತ, ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸುತ್ತ ಅಮ್ಮ ಇಂದಿಗೂ ಕ್ರಿಯಾಶೀಲವಾಗಿದ್ದಾರೆ. ಇಂತಿಪ್ಪ ಅಮ್ಮ ಬೆಂಗಳೂರಿನ ನನ್ನ ಮನೆಗೆ ಬಂದು ಬೆಂಗಳೂರಿನ ಕಾಸ್ಟ್ ಆಫ್ ಲಿವಿಂಗ್, ಪಿಜ್ಝಾದ ರೇಟ್, ಕೆಲಸದವಳ ಅರೆಬರೆ ಕೆಲಸ, ಇತ್ಯಾದಿ ನೋಡಿ ಹೌಹಾರಿದ್ದಾಳೆ.

ಮೊನ್ನೆ ತರಕಾರಿ ತರಲೆಂದು ಅಮ್ಮನೊಡನೆ ಹತ್ತಿರದ ಅಂಗಡಿಗೆ ಹೋಗಿದ್ದೆ. ಹೈಬ್ರಿಡ್ ತರಕಾರಿಗಳನ್ನಿಟ್ಟುಕೊಂಡಿದ್ದ ಆ ತರಕಾರಿ ಅಂಗಡಿಯನ್ನು ನೋಡಿ ಮೊದಲ ನೋಟದಲ್ಲೇ ಅಮ್ಮ ಮುಖ ಸಿಂಡರಿಸಿದಳು. ಆದರೆ ಬೇರೆ ಉಪಾಯ ಇರಲಿಲ್ಲವಾಗಿ ಅಲ್ಲಿಯೇ ತರಕಾರಿ ತೆಗೆದುಕೊಳ್ಳಬೇಕಾಯಿತು. ಕುಂಬಳಕಾಯಿ 20 ರೂಪಾಯಿ, ಹೀರೇಕಾಯಿ 25 ರೂಪಾಯಿ, ಬೀನ್ಸ್ 60 ರೂಪಾಯಿ, ನುಗ್ಗೆಕಾಯಿ ಮೂರಕ್ಕೆ ಎಂಟುರೂಪಾಯಿ ಎಂದು ರೇಟು ಕೇಳಿ ಇನ್ನಷ್ಟು ಗಲಿಬಿಲಿಗೊಂಡಳು, ತರಕಾರಿ ಕೊಳ್ಳಲು ಹಿಂದೇಟು ಹಾಕಿದಳು. ಹೀಗೆ ಮಾಡಿದರೆ ತರಕಾರಿ ಕೊಂಡಹಾಗೇ ಎಂದುಕೊಂಡು ನಾನು ಅಮ್ಮನಿಗೆ ಒತ್ತಾಯ ಮಾಡಿ ಎಲ್ಲ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಳ್ಳತೊಡಗಿದೆ. ಲಿಸ್ಟ್ ನಲ್ಲಿ ಶುಂಠಿ ಕೂಡ ಇತ್ತು. “ಶುಂಠಿ ಹೆಂಗೆ?” ಅಮ್ಮ ಅಂಗಡಿಯವನನ್ನು ಕೇಳಿದಳು.

“60 ರೂಪಾಯಿ ಕೆಜಿ” ಅಂದ ಅವ.

“ಏನು 60 ರೂಪಾಯಿನಾ? ಸುಘೋಷಾ ನೋಡ 60 ರೂಪಾಯಿ ಅಂತೆ”

“ಆಯ್ತಮಾ, 100 ಗ್ರಾಂ ತಗಳ್ಳಾ?” ಅಂದೆ.

“ಹುಂ..ತಗಾ..ಇನ್ನೇನು ಮಾಡದು. ನೋಡು, ಹೈಬ್ರೀಡ್ ಶುಂಠಿ ತಗಳ್ಳಿಕೆ ಮನಸ್ಸು ಬರಲ್ಲ ಮಾರಾಯಾ…..”ಅಂದಳು.

ಅಂಗಡಿಯವ “ಇಲ್ಲ… ಶುಂಠಿ ಚೆನ್ನಾಗಿದೆ” ಅಂದ.

“ಎಂಥ ಚೆನ್ನಾಗಿದೆ….ನಾವು ಸಾವಯವ ಕೃಷಿಯಲ್ಲಿ ಶುಂಠಿ ಬೆಳೀತಿವಿ. ನಿಮ್ಮ ಶುಂಠಿಗಿಂತ ಅರ್ಧದಷ್ಟಿದ್ರೂ ಎಷ್ಟು ಚೆನ್ನಾಗಿರತ್ತೆ ಗೊತ್ತಾ? ಆದ್ರೆನ್ ಮಾಡದು. ಮೊನ್ನೆ ಕೊಪ್ಪದಲ್ಲಿ ಶುಂಠಿ ಬೆಳದ್ವಿ. ಕಿಲೋಗೆ 3 ರೂಪಾಯಿ ಕೂಡ ಸಿಗಲಿಲ್ಲ. ಎಲ್ಲ ಶುಂಠಿ ಒಯ್ದು ಗೊಬ್ಬರ ಗುಂಡಿಗೆ ಒಗದ್ವಿ” ಎಂದಳು.

ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಅಂಗಡಿಯವ ಸುಮ್ಮನಿದ್ದ. ನಾನು ತರಕಾರಿ ಅಂಗಡಿಯವನಿಗೆ ದುಡ್ಡು ಕೊಡಲು ಪರ್ಸ್ ತೆಗೆದೆ.

ಹಿಂದಿನ ಕಾಲದ ಲೆಟರ್ ಗಳು

Leave a comment

1970 ನೇ ಇಸವಿಯಲ್ಲಿ ಅಂದರೆ ಸುಮಾರು 40 ವರ್ಷಗಳ ಹಿಂದೆ ನನ್ನ ಅಜ್ಜ, ನನ್ನಮ್ಮನಿಗೆ ಬರೆದ ಪತ್ರ ಇಲ್ಲಿದೆ. ಆ ಕಾಲದ ಅಕ್ಷರ, ಭಾಷೆ, ಎಲ್ಲವೂ ನಿಖರ – ನಿಖರ.

ಹೊಸ ಅಪ್ಪ, ಅಮ್ಮ ಮತ್ತು ಮಗು…

1 Comment

suvidya baby 017

‘ತಂದೆಯರ ಸಂಘ’ ಸೇರಿದ ಸುಘೋಷ್ ನಿಗಳೆ

8 Comments

suvidya baby

ಆತ್ಮೀಯರೆ,

ಇಲ್ಲಿದೆ ಹೊಸ ಸುದ್ದಿ. ದಿನಾಂಕ 16 ನೇ ಸೆಪ್ಟೆಂಬರ್ 2009 ರಂದು ನನ್ನ ಜೀವನ ಸಂಗಾತಿ ವಿದ್ಯಾ, ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ತಾಯಿ, ಮಗು ಹಾಗೂ ಅಪ್ಪ ಮೂವರು ಆರೋಗ್ಯವಾಗಿದ್ದಾರೆ.  ಇದೀಗ ನಾನು ‘ತಂದೆಯರ ಸಂಘ’ವನ್ನು ಸೇರಿದಂತಾಗಿದೆ. ಇನ್ನು ಮೇಲೆ ಸ್ಲೀಪ್ ಲೆಸ್ ನೈಟ್ಸ್ ಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಮಿತ್ರರೊಬ್ಬರು ಕಿವಿಮಾತು ಹೇಳಿದ್ದಾರೆ….ಇದೇ ವೇಳೆ ವಿವಿಧ ಬಗೆಯ ಗ್ರೀಟಿಂಗ್ ಎಸ್ಎಂಎಸ್ ಗಳು ನನಗೆ ಬಂದಿವೆ. ಆಯ್ದ ಕೆಲವುಗಳನ್ನು ಸಧ್ಯದಲ್ಲಿಯೇ ಪ್ರಕಟಿಸುತ್ತೇನೆ.

ಈ ಎಲ್ಲ ಓಡಾಟಗಳ ಮಧ್ಯೆ ಬ್ಲಾಗ್ ಅಪ್ ಡೇಟ್ ನಿಧಾನವಾಗಿದೆ. ದಯವಿಟ್ಟು ಕ್ಷಮಿಸಬೇಡಿ.

ವಿಶ್ವಾಸವಿರಲಿ

ಸುಘೋಷ್ ಎಸ್. ನಿಗಳೆ.

Follow

Get every new post delivered to your Inbox.

Join 2,051 other followers

%d bloggers like this: