ಸರ್ಜಾಪುರ ರಸ್ತೆಯಲ್ಲಿ ತೆಗೆದ ಫೋಟೋ ಇದು.
ನಾಯಿಯೊಂದು ಓಡಿಬಂದು, ಆಟೋದೊಳಗೆ ಕುಳಿತಿತು…
March 25, 2013
ಮೂಲವ್ಯಾಧಿಗೂ ನಾಯಿಗೂ ಏನು ಸಂಬಂಧ?
September 14, 2012
ಕಂಬನಿ, ವಿಚಾರ dog, piles 1 Comment
ಈ ಘಟನೆ ಅಷ್ಟೇನೂ ಜನರ ಗಮನ ಸೆಳೆಯಲಿಲ್ಲ. ನನ್ನ ಗಮನಕ್ಕೂ ತಡವಾಗಿಯೇ ಬಂತು. ಪೇಪರ್ ಗಳಲ್ಲಿ ಕೂಡ ಓದಿದ ಹಾಗಿಲ್ಲ. ಆಗಿದ್ದಿಷ್ಟು.
ಕತ್ತಲಾದ ನಂತರ ಬೆಂಗಳೂರಿನ ನಿರ್ಜನ ಪ್ರದೇಶವೊಂದರಲ್ಲಿ ಆಟೋದಲ್ಲಿ ಮೂವರು ಬಂದಿದ್ದಾರೆ. ಬಂದವರೇ ಅಲ್ಲೇ ಮಲಗಿಕೊಂಡಿದ್ದ ನಾಯಿಗೆ ಮಾಂಸದ ತುಂಡು ಎಸೆದಿದ್ದಾರೆ. ಮಾಂಸದ ಆಸೆಗೆ ನಾಯಿ ಅವರ ಹಿಂದೆ ಮುಂದೆ ಸುತ್ತಾಡಿದೆ. ಹಾಗೆಯೇ ನಾಯಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದವರೇ ಅದರ ಕುತ್ತಿಗೆಯನ್ನು ಕಚಕ್ ಅನ್ನಿಸಿದ್ದಾರೆ. ಆದರೆ ಇದನ್ನೆಲ್ಲ ಹತ್ತಿರದಲ್ಲೇ ಇದ್ದ ಕೆಲ ಹುಡುಗರು ನೋಡಿದ್ದಾರೆ. ನಾಯಿ ತಲೆ ಕಡಿದದ್ದನ್ನು ನೋಡಿದ ಹುಡುಗರು ಇವರನ್ನು ಪ್ರಶ್ನಿಸಿದ್ದಾರೆ. ದಿಢೀರ್ ಅಂತ ರಾಡ್ ಎಳೆದ ಅಪರಿಚತರು ಹುಡುಗರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಆದರೆ ಹುಡುಗರೂ ಜಗ್ಗಿಲ್ಲ. ಫೈಟ್ ಗೆ ನಿಂತಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ. ಹುಡುಗರು ಇಬ್ಬರನ್ನು ಹಿಡಿದು ಸರಿಯಾಗಿ ತದಕಿದ್ದಾರೆ. ಕೊನೆಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೋಲಿಸರ ಆಗಮನ, ಆರೋಪಿಗಳ ಬಂಧನ. “ಯಾಕ್ರಪ್ಪಾ ನಾಯಿ ತಲೆ ಕಡದ್ರೀ?” ಅಂತ ಕೇಳಿದರೆ, ಅವರು ಹೇಳಿದ್ದು, “ಪೈಲ್ಸ್ ಇತ್ತು ಸಾರ್, ಬೀದಿ ಬದಿಯ ಡಾಕ್ಟರ್ ನೊಬ್ಬ ನಾಯಿ ನಾಲಿಗೆ ತಿಂದ್ರೆ ಪೈಲ್ಸ್ ವಾಸಿಯಾಗತ್ತೆ ಅಂದ. ಅದಕ್ಕೆ ನಾಯಿ ತಲೆ ಕಡದು ನಾಲಿಗೆ ತೆಗೆಯಲಿಕ್ಕೆ ಹೊರಟಿದ್ವಿ” ಅಂದ.
ಪೈಲ್ಸ್ ಗಾಗಿ ಜನ ಏನೇನು ಮಾಡುತ್ತಾರೆ ಅಂತ….
ಅಂದಹಾಗೆ ನನಗೆ ಕೂಡ ಪೈಲ್ಸ್ ಇದೆ. ಕಳೆದ ಸುಮಾರು 15 ವರ್ಷಗಳಿಂದ ಪೈಲ್ಸ್ ಇದೆ. ಅದರಿಂದ ನಾನು ಪಟ್ಟ ಯಮಯಾತನೆ ಅಷ್ಟಿಷ್ಟಲ್ಲ. ಆದರೆ ಇದೀಗ ಪೈಲ್ಸ್ ಸಂಪೂರ್ಣ ವಾಸಿಯಾಗದಿದ್ದರೂ, ಕಂಟ್ರೋಲ್ ನಲ್ಲಿದೆ. ಪೌಷ್ಟಿಕ ಆಹಾರ, ಹೆಚ್ಚು ನೀರು ಕುಡಿಯುವುದು, ನಾರಿನ ಪದಾರ್ಥ ಸೇವನೆ, ಮಸಾಲೆ ಪದಾರ್ಥ ತಿನ್ನದಿರುವುದು – ಹೀಗೆ ಕೆಲವೇ ಕೆಲವು ಸಿಂಪಲ್ ಪಥ್ಯ ಹಾಗೂ ಕೆಲ ಔಷಧಿಗಳನ್ನು ಬಳಸಿದರೆ ಪೈಲ್ಸ್ ನಿಯಂತ್ರಣದಲ್ಲಿರುತ್ತದೆ. ನಾಯಿ ತಲೆ ಕಡಿಯುವ ಅಗತ್ಯ ಬೀಳುವುದಿಲ್ಲ.
ಮಾಡ್ ಬಾರದ್ ಮಾಡಿದ್ರೆ, ಆಗ್ ಬಾರದ್ ಆಗತ್ತೆ…
January 2, 2010
ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು….
November 23, 2009
ವಿಚಾರ common sense, dog, gate, problem Leave a comment
©sughosh s. nigale
ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು ಹೇಳಿದರೂ ಬುದ್ಧಿನೇ ಬರಲ್ಲ. ಕಾಮನ್ ಸೆನ್ಸೇ ಇಲ್ಲ ಅಂತೀನಿ. ಅಲ್ಲ ಎಷ್ಟು ಜನರಿಗೇಂತ ಹೇಳುತ್ತ ಕೂತ್ಕೋಳಗಾತ್ತೆ ಹೇಳಿ? ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದು ಗೇಟಿನ ಮುಂದೆ ನೋಡಿದರೆ ನಾಯಿ ಇಸ್ಸಿ ಮಾಡಿರುತ್ತೆ. ಕ್ಲೀನ್ ಮಾಡಿ ಮಾಡಿ ಸಾಕಾಗಿ ಹೋಗುತ್ತೆ”
ಅಷ್ಟರಲ್ಲಿ ಯಾವುದೋ ಬೀದಿ ನಾಯಿ ನಮ್ಮ ಗೇಟಿನ ಮುಂದೆ ಬಂದು ನಿಂತುಕೊಳ್ಳಲು ಸರಿಹೋಯಿತು. ಅಲ್ಲೇ ನಿಂತಿದ್ದ ಅಂಕಲ್ ಹಚಾ ಹಚಾ ಎಂದು ನಾಯಿಯನ್ನು ಓಡಿಸಲು ಮುಂದಾದರು. ಅದನ್ನು ನೋಡಿದ ಆಂಟಿ, “ಅಯ್ಯೋ ಬರೇ ನಾಯಿಯನ್ನು ಓಡಿಸಬೇಡ್ರಿ. ನನಗೂ ನಾಯಿ ಅಂದ್ರೇ ಇಷ್ಟಾನೇ…ಬರೇ ನಾಯಿ ಬಂದ್ರೆ ಅದು ಗೇಟಿನ ಮುಂದೆ ಇಸ್ಸಿ ಮಾಡೋದೇ ಇಲ್ಲ. ಆದ್ರೆ ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಗೆ ಅಂತ ಈ ನಾಯಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಜನ. ಆಗಷ್ಟೇ ನಾಯಿಗಳು ಗೇಟಿನ ಮುಂದೆ ಇಸ್ಸಿ ಮಾಡುತ್ವೆ”
ನನಗೂ ಹೌದು ಎನಿಸಿತು. ನಾನು ಹಲವು ಬಾರಿ ನೋಡಿದ್ದೇನೆ. ಸಾವಿರಾರು ರೂಪಾಯಿಗಳ ನಾಯಿಯನ್ನು ಕೊಂಡು, ಅದಕ್ಕೆ ಸಾವಿರಾರು ರೂಪಾಯಿ ಪಿಡಿಗ್ರಿ ಫುಡ್ ಹಾಕಿ, ಬೆಲೆಬಾಳುವ ಚೈನ್ ಕಟ್ಟುವ ಜನ, ನಾಯಿಗಳ ಇಸ್ಸಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇತರರ ಮನೆಯೆ ಗೇಟೇ ತಮ್ಮ ನಾಯಿಯ ಪಾಯಿಖಾನೆ ಎಂದುಕೊಂಡು ಬಿಟ್ಟಿರುತ್ತಾರೆ. ಬೇಕಂತಲೆ ಮಾಡುತ್ತಾರೋ, ಕಾಮನ್ ಸೆನ್ಸ್ ಇರುವುದಿಲ್ಲವೋ ಒಂದೂ ಗೊತ್ತಾಗುವುದಿಲ್ಲ. ಹೇಳಲು ಹೋದರೆ ತಲೆ ತಗ್ಗಿಸಿಕೊಂಡು ಹೋಗುವ ಈ ಜನ ಮಾರನೇ ದಿನ ಅಲ್ಲೇ ಬಂದು ಮತ್ತೆ ನಾಯಿ ಇಸ್ಸಿ ಮಾಡಿಸುತ್ತಾರೆ. ಹಾಗಂತ ಈ ಜನರಿಗೆ ಬೇರೆಯವರ ಮೇಲೆ ದ್ವೇಷವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮತ್ತೆ ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಅಂತೂ ನಾಯಿಗಳ ಮಾಲೀಕರನ್ನು ಓಡಿಸುವ ಕೆಲಸವಂತೂ ಮುಂದುವರೆದೇ ಇದೇ.
ನಾ ಚಿಕ್ಕವನಾಗಿದ್ದಾಗಿನಿಂದಲೂ ಸಲ್ಮಾನ್ ಖಾನ್…
October 11, 2009
ಫೋಟೋ ಫಿನಿಶ್ dog, salman khan, sughosh kid 3 Comments

ಬಲದಿಂದ ಮೊದಲನೆಯವನು, ನಾಯಿಯ ಪಕ್ಕ ಅದರ ಕಿವಿ ಹಿಡಿದುಕೊಂಡು ಬರಿಮೈಯಲ್ಲಿ ನಿಂತಿರುವವನು ನಾನು.
ನಂಗೂ ಅಣಗ್ಸಕ್ ಬರುತ್ತೆ…ವ್ಯಾ…
July 29, 2009
ಫೋಟೋ ಫಿನಿಶ್, Uncategorized dog, photo Leave a comment
ಚಿತ್ರ – ಸುಘೋಷ್ ಎಸ್. ನಿಗಳೆ
ಮಾಡೆಲ್ – ಕೆಂಚ














ಚಿಠ್ಠೀ ಆಯೀ ಹೈ…