ಈ ಬಾರಿ ಮುಕ್ತ ಮುಕ್ತ ಸಂವಾದಕ್ಕೆಂದು ಕೆಜಿಎಫ್ ಗೆ ಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ಬಂಡೆಕಲ್ಲುಗಳು, ಏನೇನೋ ಮಾತಾಡಿದವು……
ಕೋಲಾರದ ಹಾದಿಯಲ್ಲಿ ಕಂಡ ಕಲ್ಲುಗಳು….
March 17, 2010
ಈ ಬಾರಿಯ ಮುಕ್ತ ಮುಕ್ತ ಸಂವಾದ ಕೆಜಿಎಫ್ ನಲ್ಲಿ….
March 12, 2010
ಮುಕ್ತ...ಮುಕ್ತ...ಮುಕ್ತ.... beml nagara, kgf, mukta mukta samvada Leave a comment
ಇಂದು ಮುಕ್ತ ಮುಕ್ತ ಸಂವಾದ ಆದಿಚುಂಚನಗಿರಿಯಲ್ಲಿ
February 14, 2010
ಮುಕ್ತ...ಮುಕ್ತ...ಮುಕ್ತ.... adichundhanagiri, mukta mukta samvada 1 Comment
ಈ ಬಾರಿಯ ‘ಮುಕ್ತ ಮುಕ್ತ’ ಸಂವಾದ ಚಿತ್ರದುರ್ಗದಲ್ಲಿ…
December 11, 2009
ಮುಕ್ತ...ಮುಕ್ತ...ಮುಕ್ತ.... chitradurga, mukta mukta samvada Leave a comment
ತುಮಕೂರಿನಲ್ಲಿ ಮುಕ್ತ ಮುಕ್ತ ಸಂವಾದ…
November 7, 2009
ಮುಕ್ತ...ಮುಕ್ತ...ಮುಕ್ತ.... invitation, mukta mukta samvada Leave a comment

ಆತ್ಮೀಯರೆ,
ನಾಳೆ ಅಂದರೆ ಭಾನುವಾರ 2009 ನೇ ಇಸವಿಯ ನವೆಂಬರ್ ಮಾಹೆಯ 8 ನೇ ದಿನದಂದು ತುಮಕೂರು ಪ್ರದೇಶದಲ್ಲಿನ ಬಿರ್ಲಾ ಆಡಿಟೋರಿಯಂ ನಲ್ಲಿ ‘ಮುಕ್ತ ಮುಕ್ತ ಸಂವಾದ’ ಕಾರ್ಯಕ್ರಮ ನಡೆಯಲಿದೆ. ತುಮಕೂರಿನ ಸಮಸ್ತ ನಾಗರಿಕರಿಗೆ ಸಂವಾದ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.
ಇತಿ ವಿಶ್ವಾಸಿ
ಸುಘೋಷ್ ಎಸ್. ನಿಗಳೆ
(‘ಮುಕ್ತ ಮುಕ್ತ’ ದಲ್ಲಿನ ದೇವಾನಂದಸ್ವಾಮಿ)
‘ಮುಕ್ತ ಮುಕ್ತ ಸಂವಾದ’ ಹಾಗೂ ತಿಪಟೂರಿನ ಶ್ರೀಸಾಮಾನ್ಯ
September 14, 2009
ಮುಕ್ತ...ಮುಕ್ತ...ಮುಕ್ತ.... auto driver, mukta mukta, mukta mukta samvada, t n sitaram 2 Comments

ಭ್ರಮೆ ಒಡೆಯಿತು. ಕಣ್ಣು ತೆರೆಯಿತು. ಪರದೆ ಸರಿಯಿತು. ಸಣ್ಣ ಊರಲ್ಲಿ ಯಾರು ಬರುತ್ತಾರೆ? ಜನರ ಕ್ವಾಲಿಟಿ ಏನು ಮಹಾ ಇರುತ್ತದೆ? ಹಾಲ್ ಕೂಡ ಸಣ್ಣದಂತೆ…. ಇತ್ಯಾದಿ ಸಂಶಯಗಳೊಂದಿಗೆ ತಿಪಟೂರಿಗೆ ಹೋದಾಗ ಮಧ್ಯಾಹ್ನ 12.30. ಬಿ.ಎಂ.ಶ್ರೀ ರೆಸಿಡೆನ್ಸಿಯಲ್ಲಿ ಫ್ರೆಶ್ ಆಗಿ, ಅತಿಥೇಯರೊಬ್ಬರ ಮನೆಯಲ್ಲಿ ಪುಷ್ಕಳ ಊಟಮುಗಿಸಿಕೊಂಡು ಸಂವಾದ ನಡೆಯುವ ಸ್ಥಳಕ್ಕೆ ಹೋದಾಗ ನನಗೆ ನಿಜಕ್ಕೂ ಶಾಕ್!!
ಹಾಲ್ ಅಕ್ಷರಶಃ ಜಾಮ್ ಪ್ಯಾಕ್ಡ್ ಆಗಿತ್ತು. ಸ್ಟೇಜ್ ಮುಂದೆ ಸಹ ಜನರು ಒತ್ತೊತ್ತಾಗಿ ನೆಲದ ಮೇಲೆ ಕುಳಿತಿದ್ದರು. ಸ್ಟೇಜ್ ಬಲಕ್ಕೆ, ಎಡಕ್ಕೆ, ಹಿಂದೆ ಕೊನೆಕೊನೆಗೆ ಸ್ಜೇಜ್ ಪಕ್ಕ ಮಾಡಿರುವ ಮೆಟ್ಟಿಲುಗಳ ಮೇಲೆ ಸಹ ಜನರು ಸುಮಾರು ಮೂರು ಗಂಟೆ ಕಾಲ ನಿಂತು ಮುಕ್ತ ಮುಕ್ತ ಸಂವಾದಕ್ಕೆ ಸಾಕ್ಷಿಯಾದರು!!
ಎಲ್ಲಕ್ಕಿಂತ ಖುಶಿಯಾಗಿದ್ದು ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ. ಸಾಮಾನ್ಯವಾಗಿ ಕೌಟುಂಬಿಕ ಪ್ರಶ್ನೆಗಳನ್ನು ನಾನು ನೋಡಿರುವ ಮೂರು ಸಂವಾದಗಳಲ್ಲಿ ಹೆಚ್ಚು ಕೇಳಲಾಗಿತ್ತು. ಆದರೆ ಈ ಸಂವಾದದಲ್ಲಿ ಮಾತ್ರ ರಾಜಕೀಯ, ಭ್ರಷ್ಟಾಚಾರ, ವ್ಯವಸ್ಥೆಯ ಆರೋಗ್ಯ, ಜೂನಿಯರ್ ವಕೀಲರು ಎದುರಿಸುತ್ತಿರುವ ಸಂಕಷ್ಟ ಮುಂತಾದವುಗಳ ಬಗ್ಗೆ ಪ್ರೇಕ್ಷಕರಿಂದ ಮೌಲ್ಯಾಧಾರಿತ ಪ್ರಶ್ನೆಗಳು ಬಂದವು. ನಿರ್ದೇಶಕ ಟಿ. ಎನ್. ಸೀತಾರಾಮ್ ಕೂಡ ಆ ಪ್ರಶ್ನೆಗಳಿಗೆ ಅಷ್ಟೇ ಮೌಲ್ಯಯುತ ಹಾಗೂ ಕನ್ವಿನ್ಸಿಂಗ್ ಉತ್ತರ ನೀಡಿದರು. ಅಫ್ ಕೋರ್ಸ್ ಹಾಸ್ಯದ ಟಚ್ ಜೊತೆಗೆ.
ತಿಪಟೂರಿನ ಓರ್ವ ಶ್ರೀಸಾಮಾನ್ಯ ಕೇಳಿದ್ದ ಪ್ರಶ್ನೆಗೆ ಟಿ. ಎನ್. ಸೀತಾರಾಮ್ ಸೇರಿದಂತೆ, ಕಲಾವಿದರು, ಪ್ರೇಕ್ಷಕರು ತಲೆದೂಗಿದರು. ಇಟ್ ವಾಸ್ ಶಾಟ್ ಎಟ್ ದಿ ಸೆಂಟರ್…..ಆ ವ್ಯಕ್ತಿಯ ಕಾನ್ಫಿಡೆನ್ಸ್ ಲೆವೆಲ್, ಪ್ರಶ್ನೆ ಕೇಳಿದ ರೀತಿ, ಪ್ರಶ್ನೆಯ ಹಿಂದಿದ್ದ ಸಾಮಾಜಿಕ ಕಳಕಳಿ, ಅವರು ಮುಕ್ತಾ ಮುಕ್ತಾ ವನ್ನು ಎಷ್ಟು ಕೂಲಂಕುಷವಾಗಿ ವೀಕ್ಷಿಸುತ್ತಾರೆ ಎಂಬುದನ್ನು ಅವರ ಪ್ರಶ್ನೆ ಪ್ರತಿನಿಧಿಸಿತ್ತು. ಪ್ರಶ್ನೆ ಮುಗಿದ ಕೂಡಲೆ ಜನರಿಂದ ಚಪ್ಪಾಳೆಯೂ ಬಂತು. ಅಂಡ್ ಬಿಲಿವ್ ಮಿ ಆ ಪ್ರಶ್ನೆ ಕೇಳಿದ್ದು ಬೇರಾರೂ ಅಲ್ಲ ನಾವು ತೀರ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವ ಓರ್ವ ಆಟೋ ಚಾಲಕ!!
ತಿಪಟೂರಿನ ಸಂವಾದದ ಹಲವು ವಿಶೇಷಗಳನ್ನು ನೀವು ನೋಡಿಯೇ ಆನಂದಿಸಬೇಕು. ಬರುವ ಭಾನುವಾರ (20-09-2009) ರಂದು ತಿಪಟೂರಿನ ಸಂವಾದ ‘ಈ ಟಿವಿ’ಯಲ್ಲಿ ಬೆಳಿಗ್ಗೆ 10.05 ಕ್ಕೆ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ.
‘ಮುಕ್ತ ಮುಕ್ತ’ ಸಂವಾದ ತಿಪಟೂರಿನಲ್ಲಿ…
September 13, 2009
ಮುಕ್ತ...ಮುಕ್ತ...ಮುಕ್ತ.... mukta mukta samvada, tiptur 1 Comment

ಈ ಬಾರಿಯ ‘ಮುಕ್ತ ಮುಕ್ತ’ ಸಂವಾದ ಇಂದು ಭಾನುವಾರ ತಿಪಟೂರಿನಲ್ಲಿ ನಡೆಯಲಿದೆ. ತಿಪಟೂರಿನ ಎಲ್ಲ ನಾಗರಿಕರಿಗೆ ಸಂವಾದಕ್ಕೆ ಆತ್ಮೀಯ ಸ್ವಾಗತ.
ಸುಘೋಷ್ ಎಸ್. ನಿಗಳೆ.
ಜನತಾ ದರ್ಶನ
August 20, 2009
ಮುಕ್ತ...ಮುಕ್ತ...ಮುಕ್ತ.... mukta mukta samvada, people 3 Comments

ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.
ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”
“ಹೌದು” ಎಂದೆ.
ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.
“ಕೊಪ್ಪ” ಎಂದೆ.
ವ್ಯಕ್ತಿ ಸುಮ್ಮನಾಯಿತು.
ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.
“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.
“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.
“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.
ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.
ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.
ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.
“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.
“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.
“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.
“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.
—————————————————————————————
ಒಂದು ಪತ್ರ…
August 14, 2009
ಮುಕ್ತ...ಮುಕ್ತ...ಮುಕ್ತ...., Uncategorized mukta mukta samvada 2 Comments

ಆತ್ಮೀಯರೆ,
ಅಗಸ್ಟ್ 16, ಭಾನುವಾರ ಬಾಗಲಕೋಟೆಯ ನವನಗರದಲ್ಲಿ ಮುಕ್ತ ಮುಕ್ತ ಸಂವಾದ ನಡೆಯಲಿದೆ. ಅದಕ್ಕಾಗಿ ಪ್ರಯಾಣ ಬೆಳಸುತ್ತಿದ್ದೇನೆ.
ನಿಮ್ಮವನೇ
ಸುಘೋಷ್ ಎಸ್. ನಿಗಳೆ.























ಚಿಠ್ಠೀ ಆಯೀ ಹೈ…