‘ಮುಕ್ತ ಮುಕ್ತ’ ದಲ್ಲಿನ ನನ್ನ ಪಾತ್ರ(ದೇವಾನಂದಸ್ವಾಮಿ) ಹೆಂಡತಿ (ನಿವೇದಿತಾ)ಗೆ ಬಹುವಚನ ಬಳಸುವುದರ ಬಗ್ಗೆ ಓದುಗರೊಬ್ಬರು ‘ಸುಧಾ’ದ ‘ಜಾಣರ ಪೆಟ್ಟಿಗೆ’ಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಆಕ್ಷೇಪಕ್ಕೆ ಈ ವಾರದ ‘ಸುಧಾ’ದಲ್ಲಿ ಇಬ್ಬರು ಓದುಗರು ಉತ್ತರಿಸಿದ್ದಾರೆ.
ಏನೂಂದ್ರೆ….ಹೆಂಡತಿಗೆ ಬಹುವಚನ ತಪ್ಪಲ್ಲ ಕಣ್ರೀ
October 15, 2010
ಮುಕ್ತ...ಮುಕ್ತ...ಮುಕ್ತ.... jaanara pettige, mukta mukta, sudha 4 Comments
ಎರಡು ಹನಿ ಗ್ಲಿಸರಿನ್
October 7, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... gliserin, mukta mukta 1 Comment
ಘಜನಿಯ ಅಮೀರ್
ಪಾ ದ ಅಮಿತಾಭ್
ಮೇರೆ ಅಂಗನೇಮೇ ಯ ಮತ್ತದೇ ಅಮಿತಾಭ್
ಚಾಚಿ ಚಾರ್ಸೋಬೀಸ್ ನ ಕಮಲ್
ಎಲ್ಲ ಫಿಲ್ಮ್ ಗಳ ರಜನಿ
ಅದ್ಭುತ ಎಕ್ಸಪ್ರೆಷನ್ನಿನ ಶ್ರೀದೇವಿ
ಕ್ಲಾಸಿಕ್ ನಟನೆಯ ಸ್ಮಿತಾ ಪಾಟೀಲ್
ಹೀಗೆ ಮೊನ್ನೆ ಎಲ್ಲರನ್ನೂ ನೆನೆಸಿಕೊಂಡು ಬಿಟ್ಟೆ
ಅವರ ನಟನೆಗೆ ಸಲಾಂ ಹೊಡೆದು ಬಿಟ್ಟೆ
ಕಹಾಂ ರಾಜಾಭೋಜ, ಕಹಾಂ ಗಂಗೂತೇಲಿ ಎಂದುಕೊಂಡು ಬಿಟ್ಟೆ
ಕಾರಣ ಇಷ್ಟೆ,
ಮೊನ್ನೆ ‘ಮುಕ್ತ ಮುಕ್ತ’ ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
ಹೆಚ್ಚಿಗೆ ಬಿದಿತ್ತು ಅಷ್ಟೆ……!!
ಪತ್ನಿಗೆ ಬಹುವಚನ ಬೇಕೆ?
September 24, 2010
ಮುಕ್ತ...ಮುಕ್ತ...ಮುಕ್ತ.... devaanandswaamy, mukta mukta 4 Comments
ಮುಕ್ತ ಮುಕ್ತ ಕಲಾವಿದೆಗೆ ಶಭಾಷ್…
September 17, 2010
ಮುಕ್ತ...ಮುಕ್ತ...ಮುಕ್ತ.... jayashree, mukta mukta, sudha 6 Comments
“ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ”
September 1, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... devanandaswamy, karwar, mukta mukta 7 Comments
ಕಿರುತೆರೆ ಕಲಾವಿದರು ಬೆಂಗಳೂರಿಗರಿಗೆ ಅಪರೂಪದವರೇನಲ್ಲ. ನಾನು ಈ ಹಿಂದೆ ಹೇಳಿದಂತೆ ಹಾದಿಗೊಬ್ಬ, ಬೀದಿಗಿಬ್ಬರು ಕಿರುತೆರೆ ಕಲವಿದರು ಬೆಂಗಳೂರಿಲ್ಲಿದ್ದಾರೆ. ಆದರೆ ಇದೇ ಕಿರುತೆರೆ ಕಲಾವಿದರು ಬೆಂಗಳೂರೇತರ ಜಿಲ್ಲೆಗಳಲ್ಲಿ ಕಂಡರೆ, ಅನೇಕ ಸಲ ಜನರಿಗೆ ನಂಬುವುದು ಕಷ್ಟವಾಗುತ್ತದೆ.
ಶೂಟಿಂಗ್ ಸಲುವಾಗಿ ಮೊನ್ನೆ ಕಾರವಾರಕ್ಕೆ ಹೋಗಿದ್ದೆ. ಎಂದಿನಂತೆ ನಾನು ಹೋದಲ್ಲೆಲೆಡೆ, ಮುಕ್ತ ಮುಕ್ತ ದ ಬಗ್ಗೆಯೇ ಚರ್ಚೆ. ನನ್ನ ಆಕ್ಟಿಂಗ್, ಮುಕ್ತ ಮುಕ್ತ ಕಥೆ ಸಾಗುತ್ತಿರುವ ರೀತಿ, ಟಿಎನ್ಎಸ್ ಸರ್ ಅವರ ವಿಭಿನ್ನ ಧಾರಾವಾಹಿ – ಹೀಗೆ ಜನರೊಡನೆ ಚರ್ಚೆ ಸಾಗಿತ್ತು. ಸಂಜೆ ಶೂಟಿಂಗ್ ಮುಗಿಸಿದ ಬಳಿಕ ನಮ್ಮ ಕ್ಯಾಮರಾಮನ್ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಪತ್ನಿಗೆ ನನ್ನನ್ನು ಪರಿಚಯಸಿತ್ತ, “ಯಾರು ಗೊತ್ತಾಯ್ತಲ್ಲ?” ಎಂದರು. ಅವರ ಪತ್ನಿ ನನ್ನನ್ನು ಕಂಡು ಗುರುತಿಸಿ ಸಂತಸದಿಂದ ನಮಸ್ಕಾರ ಮಾಡಿದರು. ಅಷ್ಟರಲ್ಲಿ ಕ್ಯಾಮರಾಮನ್ ಅವರ ವಯಸ್ಸಾದ, ದಪ್ಪ ಕನ್ನಡಕ ಹಾಕಿಕೊಂಡಿದ್ದ ತಾಯಿ ಕೂಡ ಹೊರಬಂದರು. ಮತ್ತೆ ನಮ್ಮ ಕ್ಯಾಮರಾಮನ್ ತಮ್ಮ ತಾಯಿಗೆ, “ನೋಡಮ್ಮ, ದೇವಾನಂದಸ್ವಾಮಿ ಬಂದಿದಾರೆ” ಎಂದರು. ಅದಕ್ಕೆ ಆ ತಾಯಿ “ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ” ಎಂದು ಉದ್ಗರಿಸಿದರು. ಕ್ಯಾಮರಾಮನ್ಗೆ ಮುಜುಗರವಾದಂತಾಗಿ, “ಏ ಏನಮ್ಮ,,,ಥೇಟ್ ಹಾಗೆಯೇ ಇದ್ದಾನೆ ಅಂದ್ರೇನು?…ಅವರೇ ಬಂದಿರೋದು” ಎಂದರು. ‘ಮುಖ್ಯಮಂತ್ರಿ ಮಗ’ನನ್ನು ತಮ್ಮ ಮನೆಯಲ್ಲಿ ಕಂಡ ತಾಯಿಯ ಸಂತಸ ಇಮ್ಮಡಿಸಿತು. ನನಗೆ ಮಾತ್ರ ನಗು ತಡೆಯಲಾಗಲಿಲ್ಲ.
ಟಿ ಎನ್ ಸೀತಾರಾಂ ಸಂತತಿ ಹೆಚ್ಚಲಿ
August 7, 2010
ಮುಕ್ತ...ಮುಕ್ತ...ಮುಕ್ತ.... mukta mukta, T N S, t n sitaram Leave a comment
ಜನತಾ ದರ್ಶನ
July 29, 2010
ಬ್ಲಾಗು ಇತ್ಯಾದಿ. mukta mukta Leave a comment
(ಅಗಸ್ಟ್ 20, 2009 ರಂದು ಪ್ರಕಟವಾದ ಲೇಖನ)
ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.
ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”
“ಹೌದು” ಎಂದೆ.
ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.
“ಕೊಪ್ಪ” ಎಂದೆ.
ವ್ಯಕ್ತಿ ಸುಮ್ಮನಾಯಿತು.
ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.
“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.
“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.
“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.
ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.
ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.
ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.
“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.
“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.
“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.
“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.
ಮುಜುಗರ ಬಿಟ್ಟು ಕೇಳಿದೆ, ಸಾರ್ ಇಲ್ಲಿ ಟಾಯ್ಲೆಟ್ ಇದ್ಯಾ?
June 18, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... bellary, mukta mukta, muncipal ground, nature call, toilet, vajpayee arogya shree 6 Comments
ಆರೋಗ್ಯ ಇಲಾಖೆಯ ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದ ಕುರಿತು ಶಾರ್ಟ್ ಫಿಲ್ಮ್ ಮಾಡಲೆಂದು ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಅಲ್ಲಿ ಆರೋಗ್ಯಶ್ರೀ ಕ್ಯಾಂಪ್ ಇತ್ತು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ. ಬಳ್ಳಾರಿಯ ರಣಬಿಸಿಲು ನೆನೆಸಿಕೊಂಡು ಮುಂಜಾನೆಯೇ ತಂಬಿಬೆಗಟ್ಟಲೆ ನೀರು ಕುಡಿದು ಕ್ಯಾಮೆರಾ ಯೂನಿಟ್ ನೊಂದಿಗೆ ಮುನ್ಸಿಪಲ್ ಮೈದಾನಕ್ಕೆ ಹೋಗಿದ್ದೆ. ಆದರೆ ಅದೃಷ್ಟ…ವರುಣ ದೇವ ಪ್ರಸನ್ನನಾಗಿ ಇಡೀ ಮೈದಾನದ ತುಂಬ ಮೋಡ ಕವಿದ ವಾತಾವರಣವನ್ನು ನಿರ್ಮಿಸಿದ್ದ. ಹೀಗಾಗಿ 10 ಗಂಟೆಯ ಸುಮಾರಿಗೆ ನನಗೆ ನೇಚರ್ ಕಾಲ್ ಬಂದುಬಿಟ್ಟಿತು. ಅದಾಗಲೇ ಪ್ರಕೃತಿಯ ಕರೆಗೆ ಓಗೋಟ್ಟು ಬಂದಿದ್ದ ಕ್ಯಾಮರಾಮನ್ ಆಂಜಿ ಅವರಿಗೆ ಕೇಳಿದೆ. “ಟಾಯ್ಲೆಟ್ ಎಲ್ಲಿದೆ ಗೊತ್ತಾ?”
“ಅಯ್ಯೋ ನಾನೂ ತುಂಬಾ ಹುಡುಕಿದೆ ಸಾರ್. ಇಡೀ ಗ್ರೌಂಡ್ ನಲ್ಲಿ ಸಿಗಲಿಲ್ಲ. ಕೊನೆಗೆ ಹೊರಗೆ ಸುಮಾರು ಅರ್ಧ ಕಿಮಿ ದೂರ ನಡೆದುಕೊಂಡು ಹೋಗಿ ಕಾರ್ಯಕ್ರಮ ಮುಗಿಸಿದೆ” ಎಂದರು ಆಂಜಿ.
ಸರಿ, ಎಂದು ನಾನೂ ‘ಆಪರೇಷನ್ ನೇಚರ್ ಕಾಲ್’ ಗೆ ಮುಂದಾದೆ. ಗ್ರೌಂಡ್ ಗೆ ತಾಕಿದಂತೆ ಮತ್ತೊಂದು ಗ್ರೌಂಡ್ ಇತ್ತು. ಆ ಗ್ರೌಂಡ್ ನ ಮೂಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಚೇರಿಯಿತ್ತು. ಅಲ್ಲಿ ಟಾಯ್ಲೆಟ್ ಇರಬಹುದು ಎಂದು ಅಂದುಕೊಂಡು ಹೋದೆ. ಆದರೆ ನನಗೆ ನಿರಾಸೆ ಕಾದಿತ್ತು. ಎಲ್ಲ ರೂಮ್ ಗಳಿಗೂ ಬೀಗ ಜಡಿಯಲಾಗಿತ್ತು. ಅಷ್ಟರಲ್ಲಿ ನನಗೆ ನೇಚರ್ ಕಾಲ್ ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಇನ್ನೇನು ನಾನೂ ಅರ್ಧ ಕಿಮಿ ನಡೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ವ್ಯಕ್ತಿಯೊಬ್ಬರು ಬಂದು ಕೈಕುಲುಕಿದರು. ನಮ್ಮ ಮುಂದಿನ ಸಂಭಾಷಣೆ ಹೀಗಿತ್ತು.
“ಸರ್, ನೀವು ಮುಕ್ತ ಮುಕ್ತ ದಲ್ಲಿ ಮಾಡುತ್ತೀರಿ ಅಲ್ವಾ? ”
“ಹೌದು”
“ದೇವಾನಂದಸ್ವಾಮಿ, ಮುಖ್ಯಮಂತ್ರಿಗಳ ಮಗ ಅಲ್ವಾ?”
“ಹೌದು”
“ನಾನು ನಾಗರಾಜ್ ಅಂತ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಸರ್”
“ಥ್ಯಾಂಕ್ಯು ಸರ್”
“ನಿಮ್ಮ ಸೀರಿಯಲ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಇಲ್ಲೇನು ಸಾರ್ ಬಂದಿದ್ದು?”
“ವಾಜಪೇಯಿ ಆರೋಗ್ಯಶ್ರೀ ಕ್ಯಾಂಪ್ ಬಗ್ಗೆ ಶಾರ್ಟ್ ಫಿಲ್ಮ್ ಮಾಡಲು ಬಂದಿದ್ದೇನೆ”
“ಓಹ್ ಹೌದಾ ಸರ್…”
“ಸರ್, ನನಗೆ ಟಾಯ್ಲೆಟ್ ಗೆ ಹೋಗಬೇಕಿತ್ತು. ಇಲ್ಲಿ ಎಲ್ಲಾದ್ರೂ ಟಾಯ್ಲೆಟ್ ಇದ್ಯಾ?”
“ಅಯ್ಯೋ ಬನ್ನಿ ಸಾರ್…”
ಎನ್ನುತ್ತಾ ನಾಗರಾಜ್ ಅವರು ಸ್ಕೌಟ್ಸ್ ಬಿಲ್ಡಿಂಗ್ ನ ಒಂದು ರೂಂನ ಬೀಗ ತೆಗೆಸಿದರು. ಒಳಗೆ ಕರೆದುಕೊಂಡು ಹೋಗಿ ಮತ್ತೊಂದು ರೂಂನ ಬೀಗ ತೆಗೆಸಿದರು. ಒಳಗೆ ಹೋಗಿ ಮತ್ತೊಂದು ಬಾಗಿಲು ತೆರೆದರು. ಟಾಯ್ಲೆಟ್ ಬಾಗಿಲು ನನ್ನ ಭಾಗ್ಯದ ಬಾಗಿಲಿನಂತೆ ಕಂಡಿತು ನನಗೆ. ಟಾಯ್ಲೆಟ್ ನಲ್ಲಿ ನೀರಿಲ್ಲದ ಕಾರಣ ಮೋಟರ್ ಆನ್ ಮಾಡಿಸಿದರು. ನಾನು ನನ್ನ ನೇಚರ್ ಕಾಲ್ ಪೂರೈಸಿ, ಹೊರಗೆ ಬಂದು ನಾಗರಾಜ್ ಅವರಿಗೆ ಮನಃಪೂರ್ವಕವಾಗಿ ವಂದಿಸಿದೆ.
ಎಂತೆಂತಹ ಅನುಭವ ಮಾರಾಯ್ರೆ…..
‘ಸುಧಾ’ ದ ಪ್ರತಿಸ್ಪಂದನದಲ್ಲಿ ‘ಮುಕ್ತ ಮುಕ್ತ’ದ ದೀಪಾ ಅಯ್ಯರ್…
May 14, 2010
ಮುಕ್ತ...ಮುಕ್ತ...ಮುಕ್ತ.... deepa iyer, malati, mukta mukta, pratispandana, sudha 1 Comment
ಡೆಕ್ಕನ್ ಕ್ರಾನಿಕಲ್ ನಲ್ಲಿ ನಮ್ಮ ಫೆವರಿಟ್ ಜೋಡೀಸ್…
May 5, 2010
ಮುಕ್ತ...ಮುಕ್ತ...ಮುಕ್ತ.... deccan chronicle, devanand, jayashree, mukta mukta, namma favourite jodis, nivedita, sughosh, tv guide 2 Comments
ಡೆಕ್ಕನ್ ಕ್ರಾನಿಕಲ್ ಪತ್ರಿಕೆ ಕನ್ನಡ ಟೆಲಿ ಸೀರಿಯಲ್ ಗಳ ಪ್ರಖ್ಯಾತ ಜೋಡಿಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಮುಕ್ತ ಮುಕ್ತದ ದೇವಾನಂದ (ನಾನು) ಹಾಗೂ ನಿವೇದಿತಾ (ಜಯಶ್ರೀ) ಜೋಡಿ ಸ್ಥಾನಪಡೆದುಕೊಂಡಿದೆ. ಈ ಜೋಡಿಗಳಿಗೆ ತಮ್ಮ ಸಹ ನಟ/ನಟಿಯ ಕುರಿತು ಏನೆನ್ನಿಸುತ್ತದೆ ಎಂಬುದಕ್ಕೆ ಎಲ್ಲರೂ ಉತ್ತರಿಸಿದ್ದಾರೆ. ಮೇ 1, (ಶನಿವಾರ) ದ ಡೆಕ್ಕನ್ ಕ್ರಾನಿಕಲ್ ನಲ್ಲಿ ಪ್ರಕಟವಾಗಿದೆ.
ಮುಕ್ತ ಮುಕ್ತ ಸಂಭಾಷಣೆ
April 30, 2010
ಮುಕ್ತ...ಮುಕ್ತ...ಮುಕ್ತ...., Uncategorized me, mukta mukta, script writer 9 Comments
ಈ ತಿಂಗಳ 17 ಕ್ಕೆ ಆರ್ಣವ…
April 11, 2010
ನಿಮಗಿದೋ ಆಮಂತ್ರಣ, ಮುಕ್ತ...ಮುಕ್ತ...ಮುಕ್ತ.... arnava, bharatanatyam, dance, dhanyashree, kalyani, karthik, mukta mukta, seeta kote, shambhavi, shammi, sharmila, shashikanth, sushmita Leave a comment
ಹೇಮಾಮಾಲಿನಿ, ರೇಖಾ ಆಕರ್ಷಣೆ ಕಡಿಮೆಯೆ?
April 10, 2010
ಮುಕ್ತ...ಮುಕ್ತ...ಮುಕ್ತ.... dhanyashree shreehari, kalyani, mukta mukta 2 Comments
ಮುಕ್ತ ಮುಕ್ತದ ಬಗ್ಗೆ ಬಸ್ ನಲ್ಲಿ ಮಾತಾಡಿದ್ದು….
April 9, 2010
ಮುಕ್ತ...ಮುಕ್ತ...ಮುಕ್ತ.... me, mukta mukta, TNS 5 Comments
ಬಹಳ ದಿನಗಳ ನಂತರ ಮೊನ್ನೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಅವಕಾಶ ಬಂತು. ಸುಲಭವಾಗಿ ವಿಂಡೋ ಸೀಟ್ ಕೂಡ ಸಿಕ್ಕಿತು. ಸೀಟ್ ಅಲಂಕರಿಸುತ್ತಿದ್ದಂತೆಯೆ ನನ್ನ ಪಕ್ಕ ಬಂದು ಕುಳಿತ ಹುಡುಗನೊಬ್ಬ ನನ್ನೊಂದಿಗೆ ಮಾತಿಗೆ ತೊಡಗಿದ.
ಹುಡುಗ – ಸಾರ್, ನೀವು ಮುಕ್ತ ಮುಕ್ತ ದಲ್ಲಿ ಮಾಡ್ತೀರಲ್ವಾ? ದೇವಾನಂದಸ್ವಾಮಿ ಅಲ್ವ?
ನಾನು – ಹೌದು. ನಾನು ಸುಘೋಷ್ ಅಂತ. ತಮ್ಮ ಹೆಸರು?
ಹುಡುಗ – ಸಾರ್ ನನ್ನ ಹೆಸರು ………….ಅಂತ.
ನಾನು – ಏನ್ ಕೆಲಸ ಮಾಡ್ತೀರಿ?
ಹುಡುಗ – ನಾನು ………….ಕಾಲೇಜಲ್ಲಿ ……………..ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತೀದಿನಿ.
ನಾನು – ಓಹ್…
ಹುಡುಗ – ಸಾರ್, ನಾನು ಮೊದ್ಲಿಂದಾನೂ ಮುಕ್ತ ಮುಕ್ತ ನೋಡ್ತೀನಿ ಸರ್. ಸೀತಾರಾಮ್ ಅವರ ಎಲ್ಲ ಸೀರಿಯಲ್ ಗಳನ್ನೂ ಬಿಡದೆ ನೋಡ್ತಿನಿ.
ನಾನು – ಓಹ್ ಹೌದಾ….ತುಂಬ ಸಂತೋಷ.
ಹೀಗೆ ನಮ್ಮ ಮಾತು ಶೂಟಿಂಗು, ಆಕ್ಟಿಂಗು, ಕಥೆ, ಅಂತೆಲ್ಲ ಸುತ್ತಾಡಿ ಬರುವ ಹೊತ್ತಿಗೆ ಆ ಹುಡುಗ ಇಳಿಯುವ ಸ್ಟಾಪ್ ಬಂದಿತ್ತು. ಮುಂದಿನ ಮಾತುಕತೆ ಹೀಗಾಯಿತು.
ಹುಡುಗ – ಸಾರ್ ನಾನು ಇಳಿಯೋ ಸ್ಪಾಪ್ ಬಂತು. ಬರ್ತೀನಿ.
ನಾನು – ಆಯ್ತು.
ಹುಡುಗ – ಸಾರ್, ನಾನು ಸೀತಾರಾಮ್ ಅವರನ್ನ ಕೇಳ್ದೆ ಅಂತ ಹೇಳಿ ಸಾರ್…..
ನಾನು – !!!!!!!!!!!!!!!!!!!!!!!!!!!!!!!!
ಮುಕ್ತ ಮುಕ್ತ ದ ಕಲಾವಿದರಿಂದ ಹೊಸ ಹೆಜ್ಜೆ
April 4, 2010
ನಿಮಗಿದೋ ಆಮಂತ್ರಣ, ಮುಕ್ತ...ಮುಕ್ತ...ಮುಕ್ತ.... arnava, bharatanatyam, dance, dhanyashree, kalyani, mukta mukta, seeta kote, shambhavi, sharmila, sushmita 1 Comment
ಶಾಂಭವಿ (ಸೀತಾ ಕೋಟೆ), ಕಲ್ಯಾಣಿ (ಧನ್ಯಶ್ರೀ ಶ್ರೀಹರಿ), ಶರ್ಮಿಳಾ(ಸುಶ್ಮಿತಾ) ಹಾಗೂ ಶಶಿಕಾಂತ (ಕಾರ್ತಿಕ್ ಹೆಬ್ಬಾರ್) ಅವರನ್ನು ನೀವೆಲ್ಲ ಮುಕ್ತ ಮುಕ್ತ ದಲ್ಲಿ ನೋಡಿಯೇ ಇರುತ್ತೀರಿ. ಈಗ ಈ ನಾಲ್ವರೂ ಸೇರಿ ‘ಅರ್ಣವ’ ಎಂಬ ಹೊಸ ಭರತನಾಟ್ಯ ಡ್ಯಾನ್ಸ್ ಗ್ರುಪ್ ಒಂದನ್ನು ಹುಟ್ಟುಹಾಕಿದ್ದಾರೆ. ಸೀತಕ್ಕ, ಧನ್ಯ, ಹಾಗೂ ಸುಶ್ಮಿತಾ ನೃತ್ಯಗಾರ್ತಿಯರಾದರೆ, ಕಾರ್ತಿಕ್ ಹಾಡುಗಾರರು. ಶಾಸ್ತ್ರೀಯ ಭರತನಾಟ್ಯವನ್ನು ಪ್ರಚುರಪಡಿಸುವುದು ಅರ್ಣವದ ಉದ್ದೇಶ. ಅರ್ಣವಕ್ಕೆ ಆಲ್ ದಿ ಬೆಸ್ಟ್….
‘ಸುಧಾ’ದ ಪ್ರತಿಸ್ಪಂದನದಲ್ಲಿ ಮುಕ್ತ ಮುಕ್ತದ ನಿವೇದಿತಾ…
March 29, 2010
ಮುಕ್ತ...ಮುಕ್ತ...ಮುಕ್ತ.... jayashree raj, mukta mukta, pratispandana, sudha Leave a comment
ಮುಕ್ತ ಮುಕ್ತ ಟೈಟಲ್ ಕಾರ್ಡ್ ನಲ್ಲಿ ನಾನು…
March 27, 2010
ಮುಕ್ತ...ಮುಕ್ತ...ಮುಕ್ತ.... devanandaswamy, mukta mukta, sughosh s nigale, title card Leave a comment
ಯಾರು ಹೇಳಿದ್ದು ಕಲಾವಿದರನ್ನು ಎಲ್ಲರೂ ಗುರುತಿಸುತ್ತಾರೆ ಎಂದು?
March 25, 2010
ಮುಕ್ತ...ಮುಕ್ತ...ಮುಕ್ತ.... courier office, mukta mukta, popularity 4 Comments
ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡಲು ಶುರುಮಾಡಿದಾಗಿನಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹಲವು ಬಾರಿ ನಾನೇ ಹೇಳಿಕೊಂಡಿದ್ದೇನೆ. ಆ ಘಟನೆಗಳನ್ನು ಬರೆದಿದ್ದೇನೆ. ಅದರ ಉಲ್ಟಾ ಘಟನೆಯೊಂದು ಹೀಗಿದೆ.
ಸಿಸ್ಟೋಸ್ಕೋಪಿ ಆದ ಬಳಿಕ ಸ್ಟೆಂಟ್ ರಿಮೂವಲ್ ಇತ್ತು. ಹಾಗಾಗೆ ಮತ್ತೆ ಗಿರಿನಗರದ ರಾಧಾಕೃಷ್ಣನ ಮೊರೆ ಹೋಗಿದ್ದೆ. ಅಲ್ಲಿ ಸ್ಟೆಂಟ್ ರಿಮೂವಲ್ ಗೂ ಮೊದಲು ಎಕ್ಸ್ ರೇ ತೆಗೆಯಲು ಸೂಚಿಸಿದರು. ಸರಿ ಎಂದು ನಾನು ಎಕ್ಸ್ ರೇ ರೂಂನತ್ತ ಹೆಜ್ಜೆ ಹಾಕಿದೆ. ಅಲ್ಲಿ ಅದಾಗಲೇ ನಾಲ್ಕೆಂಟು ಜನ ಎಕ್ಸ್ ರೇ ಗಾಗಿ ಕಾಯುತ್ತಿದ್ದರು. ಲ್ಯಾಬ್ ಅಸಿಸ್ಟೆಂಟ್ ಮಾತ್ರ ಬಂದಿರಲಿಲ್ಲ.
ಒಂದೈದು ನಿಮಿಷ ಬಿಟ್ಟು ಬಂದ ಆತ ಸರದಿ ಪ್ರಕಾರ ಎಕ್ಸ್ ರೇ ತೆಗೆಯಲು ಶುರುಮಾಡಿದ. ನನ್ನ ಸರದಿ ಬರಲು ಇನ್ನೂ ಹತ್ತು ನಿಮಿಷವಿತ್ತಾದ್ದರಿಂದ ಸುಮ್ಮನೇ ಏಕೆ ಕೂರುವುದು ಎಂದು ನನ್ನ ಬ್ಯಾಗ್ ತೆಗೆದೆ. ಮೂರ್ನಾಲ್ಕು ಚೆಕ್ ಗಳನ್ನು ಕಲೆಕ್ಷನ್ ಗೆ ಹಾಕಬೇಕಿತ್ತು. ಪೇ ಇನ್ ಸ್ಲಿಪ್ ಗಳನ್ನು ಮೊದಲೇ ತಂದಿದ್ದೆ. ಹೀಗಾಗಿ ಸ್ಲಿಪ್ ಗಳನ್ನು ತುಂಬುತ್ತ, ಪಿನ್ ಮಾಡತೊಡಗಿದೆ. ಲ್ಯಾಬ್ ಅಸಿಸ್ಟೆಂಟ್ ಸರದಿ ಸಾಲಿನಲ್ಲಿ ಇರುವವರನ್ನು ಕರೆಯಲು ಹೊರ ಬಂದಾಗಲೆಲ್ಲ ನನ್ನನ್ನು ನೋಡುತ್ತಿದ್ದ. ಕೊನೆಗೆ ನನ್ನ ಸರದಿಯೂ ಬಂತು.
ಎಕ್ಸ್ ರೇ ಟೇಬಲ್ ಮೇಲೆ ಮಲಗಿದೆ.
“ಕೆಯುಬಿ ಎಕ್ಸ್ ರೇ ಅಲ್ವಾ? ಯಾವಾಗಾ ಸಿಸ್ಟೋಸ್ಕೋಪಿ ಆಗಿದ್ದು?” ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತ ಕೊನೆಗೆ ಆತ ಕೇಳಿದ
“ನೀವು ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುತ್ತೀರಾ?”
ಈಗ ಹೇಳಿ ಕಲಾವಿದರ ಪಾಪ್ಯುಲಾರಿಟಿ ಎಷ್ಟಿದೆ ಎಂದು……….








































ಚಿಠ್ಠೀ ಆಯೀ ಹೈ…