ಹಲ್ಲಿಗೊಂದು ಸೆಂಡ್ ಆಫ್ …..

hallu

ಪ್ರೀತಿಯ ಹಲ್ಲೇ…,

ಹೌದು ನಿನಗೆ ಹಲ್ಲು ಅಂತಲೇ ಕರೆಯಬೇಕು. ಯಾವ ಹಲ್ಲು ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಏಕೆಂದರೆ ನಾನು ನಿಮಗೆ ಇದುವರೆಗೆ ಹೆಸರೇ ಇಟ್ಟಿಲ್ಲ. ಹಾಗೇನಾದರು ಆದರೆ ನಾನು ನಿಮಗೆ ೩೨ ಹೆಸರು ಹುಡುಕಬೇಕು. ಹುಡುಕುವುದೇನು ದೊಡ್ಡ ಕೆಲಸವಲ್ಲ. ಆದರೆ ಯಾಕೋ ನಿಮಗೆ ಹೆಸರಿಡಲು ನನಗೆ ಹೊಳೆಯಲೇ ಇಲ್ಲ. ನನ್ನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೊಟ್ಟೆ ಹೀಗೆ ಪ್ರತಿಯೊಂದು ಅಂಗಕ್ಕೆ ಅವರದೇ ಆದ identity ಇದೆ. ಆದರೆ ನಿಮಗೆ ನೀವೆಲ್ಲರೂ ಸೇರಿ ‘ ಹಲ್ಲುಗಳು’, ಅಷ್ಟೇ. ಕೆಲವರಿಗೆ ದವಡೆ, ಕೋರೆ ಎಂಬ ಹೆಸರಿದ್ದರೂ ನೀವು ಯಾವ ದವಡೆ ಯಾವ ಕೋರೆ ಎಂಬುದಕ್ಕೆ ಕೆರೆದುಕೊಳ್ಳಬೇಕಾಗುತ್ತದೆ. ತಲೆಯನ್ನು. ಹೀಗಿದ್ದೂ ನಿನಗೆ ಡಾ. ತ್ರಿವಿಕ್ರಂ ಹೆಸರಿಟ್ಟಿದ್ದು, ಸೆಕಂಡ್ ಫ್ರೊಂ ದಿ ರೈಟ್ ಟಾಪ್.

ಅಂತೂ ನನ್ನ ನಿನ್ನ ಇಷ್ಟು ವರ್ಷಗಳ ಸಂಬಂಧ ಮುಗಿದಿದೆ. ನೀನು ಹುಟ್ಟಿದಾಗ ಬಹುಶಃ ನನಗೆ ಮೂರೋ ನಾಲ್ಕೋ ವರ್ಷವಿರಬೇಕು. ಆದರೆ ನಿನ್ನಾಣೆಗೂ ನೀನು ಹುಟ್ಟಿದ್ದು ನನಗೆ ತಿಳಿಯಲಿಲ್ಲ. ಎದುರಿನ ಕೆಲವು ಹಲ್ಲುಗಳನ್ನು ಬಿಟ್ಟರೆ, ಒಳಗಿನ ಹಲ್ಲುಗಳಿಗೆ ನನಗೆ ಸಂಬಂಧವೇ ಇರಲಿಲ್ಲ. Actually, ಒಳಗಿನ ಹಲ್ಲುಗಳೇ ಎಲೆ ಮರೆಯ ಕಾಯಿಯ ಹಾಗೆ ಗಿರಣಿಯಂತೆ ಕರಕರ ದುಡಿಯುತ್ತಿದ್ದರೂ ಅವು ನನ್ನ ಬದುಕಿನಲ್ಲಿ ಯಾವುದೇ ಭಾವನಾತ್ಮಕ ಅಸ್ತಿತ್ವ ಹೊಂದಿರಲೇ ಇಲ್ಲ.

ಆದರೆ ಈಗ ನಿಮ್ಮಗಳ imporatance ಗೊತ್ತಾಗುತ್ತಿದೆ. ಡಾ. ತ್ರಿವಿಕ್ರಂ ತಮ್ಮ ಗೌಸ್ ಹಾಕಿದ ಕೈಗಳಲ್ಲಿ ಇಕ್ಕಳ ಹಿಡಿದು ನಿನ್ನನ್ನು ನನ್ನಿಂದ ಬೇರ್ಪಡಿಸಿ ರಕ್ತಸಿಕ್ತವಾಗಿದ್ದ ನಿನ್ನ ದೇಹವನ್ನು ‘ಕಣ್’ ಎಂದು ಟ್ರೇಯಲ್ಲಿ  ಹಾಕಿದಾಗ ನನ್ನ ಕಣ್ಣು ತುಂಬಿ ಬಂದಿತ್ತು. ನೋವಿನಿಂದ ಹೀಗಾಗಿದೆ ಎಂದು ಡಾ. ತ್ರಿವಿಕ್ರಂ ಅಂದುಕೊಂಡಿರಬೇಕು. ಆದರೆ ಅವರಿಗೇನು ಗೊತ್ತು, ನನ್ನ ನಿನ್ನ ಅಗಲಿಕೆಯ ದುಃಖ.
ನನ್ನ ನಿನ್ನ ಸಂಬಂಧ ಸುಮಾರು ೨೪-೨೫ ವರ್ಷಗಳದ್ದು ಅಲ್ಲವೇ? ಇಷ್ಟು ವರ್ಷ ನೀನು ನನ್ನೋಡನಿದ್ದೆ . ಆದರೆ ನಿನ್ನ ಇರುವಿಕೆ ಗೊತ್ತಗುತ್ತಿದ್ದುದು ಮಾತ್ರ ಕೆಲವೇ ಕೆಲವು ಸಂದರ್ಭಗಳಲ್ಲಿ. ಎಂಟು ಒಂಬತ್ತೆನೆಯ ಕ್ಲಾಸಿನಲ್ಲಿ ಪರೀಕ್ಷೆಯ ದಿನವೇ  ನೀನು ಭಯಂಕರವಾಗಿ ತೊಂದರೆ ಕೊಡಲು ಆರಂಭಿಸುತ್ತಿದೆ. ನೀನು ಹಾಗೆಯೇ ಇದ್ದರೂ, ಒಸಡು ಹಾಗೂ ಗಲ್ಲಕ್ಕೆ ಬಾವು ಬರಲು ಕಾರಣವಾಗುತ್ತಿದ್ದೆ. ಸುಪುತ್ರನ ಬಾತಿದ ಮುಖವನ್ನು ನೋಡುತ್ತಿದ್ದ ಅಪ್ಪ-ಅಮ್ಮ “ಇರಲಿ ಬಿಡು. ಪರೀಕ್ಷೆ ಮುಂದಿನ ಬಾರಿ ಬರೆದರಾಯಿತು” ಎನ್ನುತ್ತಿದ್ದರು. ಒಂದೆರಡು ದಿನಗಳ ಕಾಲ ನನ್ನನ್ನು ನರಳಿಸಿ ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಸರಿಯಾಗಿ ಬಿಡುತ್ತಿದ್ದೆ. ಮತ್ತೆ ನಿನ್ನ ಇರುವಿಕೆ ಗೊತ್ತಾಗುತ್ತಿದ್ದುದು ಮುಂದಿನ ಪರೀಕ್ಷೆಯ ವೇಳೆಗೆ!!

ಡಾ. ತ್ರಿವಿಕ್ರಂ ನಿನ್ನನ್ನು ಉಳಿಸಿಕೊಳ್ಳಲು ತುಂಬ ಪ್ರಯತ್ನ ಪಟ್ಟರು. ಮೂರು ಬಾರಿ ರೂಟ್ ಕೆನಾಲ್ ಮಾಡಿದರೂ, ಎಸಿ ಕ್ಲಿನಿಕ್ ನಲ್ಲಿ ಅವರ ಹಣೆಯ ಬೆವರು ಕಿತ್ತು ಬಂತೇ ಹೊರತು ಅವರಿಗೆ ನಿನ್ನ ರೂಟ್ ವರೆಗೆ ತಲುಪಲು ಆಗಲೇ ಇಲ್ಲ. “ಲಿಸನ್, ಐ ಥಿಂಕ್ ಇಟ್ ಇಸ್ ಕಂಪ್ಲೀಟ್ಲಿ ಬ್ಲಾಕ್ಡ್. ದೆರಿಸ್ ನೋ ಪಾಯಿಂಟ್ ಇನ್ ವೇಸ್ಟಿಂಗ್ ಟೈಮ್ ಅಂಡ್ ಮನಿ. ವಿ ವಿಲ್ extract  ಇಟ್” ಅಂತ ನಿನಗೆ ಮರಣ ದಂಡನೆ ವಿಧಿಸಿದ್ದರು.

ಹಲ್ಲೇ, ನಿನ್ನ ಸಂಬಂಧ ಕೊನೆಗೊಳ್ಳಲು ನಾನೇ ಕಾರಣ. ಬಹುಷಃ ನಿನ್ನ ಬಗ್ಗೆ ನಾನು ಇನ್ನೂ ಹೆಚ್ಚು ಪ್ರೀತಿಯಿಂದ ನಡೆದುಕೊಂಡಿದ್ದರೆ, ನಮ್ಮಿಬ್ಬರ ಅನುಬಂಧ ಇನ್ನೂ ಕೆಲ ವರ್ಷ ಮುಂದುವರೆಯಬಹುದಿತ್ತೇನೋ.

ನೀನು ನನ್ನಿದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ನಿನ್ನ ಕೊಡುಗೆಯನ್ನು ಸ್ಮರಿಸುವುದು ನನ್ನ ಕರ್ತವ್ಯ. ಇಷ್ಟು ವರ್ಷಗಳ ಕಾಲ ಹಸಿವು ಹಾಗೂ ಬಾಯಿ ಚಪಲಕ್ಕಾಗಿ ಬಾಯಲ್ಲಿ ತುರುಕಿದ್ದ ಎಲ್ಲವನ್ನೂ ಮರು ಮಾತನಾಡದೇ ಅರೆದಿದ್ದಕ್ಕೆ ಮತ್ತು ಆ ಮೂಲಕ ಅಜೀರ್ಣ ಹಾಗೂ ಮೂಲವ್ಯಾಧಿ ಬರದಂತೆ ನೋಡಿಕೊಂಡದ್ದಕ್ಕೆ ನಿನಗಿದೋ ನಮಸ್ಕಾರ. ನಾನು ನಕ್ಕಾಗಲೆಲ್ಲ ಕೆನ್ನೆಯಲ್ಲಿ ಗುಳಿ ಬೀಳಲು ನಿನ್ನದೇ ಕೊಡುಗೆ ನೀಡಿದ್ದಕ್ಕೆ ನಿನಗಿದೋ ನಮಸ್ಕಾರ. ಕಾಲೇಜಿನ ಲ್ಯಾಬ್  ನಲ್ಲಿ ನನ್ನನ್ನು ಒಳಗೊಳಗೇ ಪ್ರೀತಿಸುತ್ತಿದ್ದ ಹುಡುಗಿ ರಪಕ್ಕನೆ ಎದುರಾಗಿ ಕೆನ್ನೆಗೆ ಬಿಗಿಯಾಗಿ ಮುತ್ತು ಕೊಟ್ಟಾಗ ಗಲ್ಲ ಒಳ ಹೋಗದಂತೆ ತಡೆದ್ದಿದ್ದಕ್ಕೆ ನಿನಗಿದೋ ನಮಸ್ಕಾರ. ಹಾಸ್ಟೆಲ್ ರೂಮ್ ನಲ್ಲಿ ಅಸಂಖ್ಯಾತ ಬಿಯರ್ ಬಾಟಲಿಗಳನ್ನು ಓಪನ್ ಮಾಡಲು ಓಪನರ್ ಬದಲು ನಿನ್ನನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ!

ಈಗ ನಿನ್ನ ಸ್ಥಳದಲ್ಲಿ ಬ್ರಿಜ್ ಕೂರಿಸುತ್ತಾರಂತೆ. ಈಗ ನಿನ್ನ ಬದಲಿಗೆ ಮೂರು ಹಲ್ಲು ಹಾಕಿಸಿಕೊಳ್ಳಬೇಕು ನಾನು. ಆದರೂ ಇಷ್ಟು ವರ್ಷ ನನ್ನೊಡನಿದ್ದು, ಹೀಗೆ ಬೇರೆಯಾಗಿ ಹೋದೆಯಲ್ಲ, ಐ ಆಮ್ ಸಾರಿ ಹಲ್ಲೇ….

(ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದ್ದ ಲೇಖನ)

ಗೌಡರ ಗತ್ತೇ ಗಮ್ಮತ್ತು

dddd

ಘಟನೆ – 1.

ಆಗಿನ್ನೂ ನಾನು ಈ ಟಿವಿ ಸೇರಿ ಫೀಲ್ಡ್ ಗೆ ಹೋಗುತ್ತಿದ್ದ ಪರ್ವಕಾಲ. ಕೈಯಲ್ಲಿ ಈ ಟಿವಿ ಬೂಮ್ ಹಿಡಿದು ಹೊರಟೆನೆಂದರೆ ಏನೋ ಒಂದು ರೀತಿಯ ಹೆಮ್ಮೆ. ಆಗ ಅಚಾನಕ್ಕಾಗಿ ದೇವೇಗೌಡರ ಪದ್ಮನಾಭನಗರದ ಮನೆಗೆ ಕವರೇಜ್ ಗೆ ಹೋಗುವ ಸಂದರ್ಭ ಎದುರಾಯಿತು. ಗೌಡರ ಮೂಡ್ ಬಗ್ಗೆ ಹಿರಿಯ ಪತ್ರಕರ್ತರಿಂದ ಕೇಳಿ ತಿಳಿದಿದ್ದ ನಾನು ಅಳುಕುತ್ತಲೇ ಅವರ ಮನೆಗೆ ಹೋದೆ. ಒಳಗೆ ಗೌಡರು, ಹೊರಟ್ಟಿ, ಗೌಡರ ಅಂದಿನ ಕಾಲದ ದತ್ತು ಪುತ್ರ ಚೆನ್ನಿಗಪ್ಪ, ಗೌಡರ ಚಾಣಕ್ಯ ದತ್ತಾ ಹೀಗೆ ಎಲ್ಲರೂ ಕುಳಿತಿದ್ದರು. ರಾಜಕೀಯದಲ್ಲಿ ಯಾವುದೋ ಒಂದು ಅಪ್ರೀಯ ಘಟನೆ ನಡೆದು ಗೌಡರು ಫುಲ್ ಗರಂ ಆಗಿದ್ದರು. ಸರಿ, ನಾನು ಬೈಟ್ ಕೇಳಲು ಹೋದರೆ, ಗೌಡರ ಅಂಗರಕ್ಷಕರು ಹಚಾ ಹಚಾ ಎಂದರು. ಆಗ ನಾನು ನಂಬಲಾರದ ಘಟನೆ ನಡೆಯಿತು. ಇದನ್ನೆಲ್ಲ ವಾರೆಗಣ್ಣಿನಲ್ಲಿ ನೋಡುತ್ತಿದ್ದ ಗೌಡರು, ತಮ್ಮ ಅಂಗರಕ್ಷಕರಿಗೆ ಹೇಳಿ ನನ್ನನ್ನು ಒಳಗೆ ಕರೆಸಿದರು. ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದರು. ನಂತರ ಟೀ ಕೊಡುವಂತೆ ಸಹಾಯಕರಿಗೆ ಹೇಳಿದರು. ಅಂದಿನಿಂದ ನಾನು ಗೌಡರ ಫುಲ್ ಫ್ಯಾನ್ ಆಗಿಬಿಟ್ಟೆ. ಗೌಡರನ್ನು ತೆಗಳುತಿದ್ದ ಪತ್ರಕರ್ತರಿಗೆಲ್ಲ ಬುದ್ಧಿವಾದ ಹೇಳತೊಡಗಿದೆ.

dd

ಘಟನೆ – 2.

ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ಸನ್ಮಾನ ಕಾರ್ಯಕ್ರಮ. ಗೌಡರು ಮುಖ್ಯ ಅತಿಥಿ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಂದಿನಂತೆ ನಾನು ಹಾಗೂ ಉದಯ ಟಿವಿಯ ಯೂನಿಟ್ ಗೌಡರ ಬೈಟ್ ಗೆ ಹೊರಗೆ ಕಾಯುತ್ತಿದ್ದೆವು. ಗೌಡರು ಹೊರಬರುತ್ತಿದ್ದಂತೆ ತಳ್ಳಾಟ ನೂಕಾಟ ಆರಂಭವಾಯಿತು. ಗೌಡರು ನಮ್ಮ ಬಳಿ ಬರುವಷ್ಟರಲ್ಲಿ ತಳ್ಳಾಟ ಜೋರಾಯಿತು. ಗೌಡರು ನನ್ನ ಎದರು ಬಂದು ನಿಲ್ಲಲಿಕ್ಕೂ, ಯಾವನೋ ಒಬ್ಬನ ಕೈಯಿ ನನ್ನ ಕನ್ನಡಕಕ್ಕೆ ತಾಗಿ ಅದು ಕೆಳಗೆ ಬೀಳಲು ಸರಿ ಹೋಯಿತು. ನನ್ನ ಸ್ಪೆಕ್ಟ್ಸ್, ನನ್ನ ಸ್ಪೆಕ್ಟ್ಸ್ ಎಂದು ನಾನು ಹುಡುಕಲಾರಂಭಿಸಿದೆ. ಇದು ನಂಬಲು ಕಷ್ಟು, ಆದರೆ ಗೌಡರು ಕೂಡ ಕ್ಷಣ ಹೊತ್ತು ನಿಂತು ನನ್ನ ಸ್ಪೆಕ್ಟ್ಸ್ ಅನ್ನು ತಾವೂ ಅತ್ತಿತ್ತ ಕೆಳಗೆ ನೋಡಿ ಹುಡುಕಿದರು. ಅದೂ ಅವರಿಗೂ ಸಿಗಲಿಲ್ಲ. ಹಾಗೆಯೇ ತೆರಳಿದರು. ಕೊನೆಗೆ ನನ್ನ ಕನ್ನಡಕ ಕ್ಯಾಮೆರಾದ ಕೇಬಲ್ ಗೆ ಸಿಕ್ಕು ಜೋತಾಡುತ್ತಿತ್ತು. ಘಟನೆ – 2 ರಿಂದ ನಾನು ಗೌಡರ ಬಗ್ಗೆ ಮತ್ತಷ್ಟು ಅಭಿಮಾನ ಬೆಳೆಸಿಕೊಂಡೆ.

ddd

ಉಪಸಂಹಾರ – (ಅಯ್ಯೋ..ವಿಧಿಯೇ…)

ಕೆಲವೇ ದಿನಗಳು ಕಳೆದ ಬಳಿಕ ಜೆಡಿಎಸ್ ಕಚೇರಿಯಲ್ಲಿ ಯಾವುದೋ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಗೌಡರು ಗರಂ ಆಗಿದ್ದರು. ತಳ್ಳಾಟ ಆರಂಭವಾಗಿತ್ತು. ನಾನು ಹೇಗೋ ಮಾಡಿ ಗೌಡರ ಬಳಿ ತೆರಳಿ ಮೈಕ್ ಹಿಡಿದೆ. ಉತ್ತರ ಕೊಡುವ ಬದಲಾಗಿ ಗೌಡರು ಮತ್ತಷ್ಟು ಗರಂ ಆಗಿ ಏನೇನೋ ಬಯ್ಯುತ್ತ ಹೋಗಿಬಿಟ್ಟರು. ನಾನು ಘಟನೆ -1 ಹಾಗೂ 2 ನ್ನು ಮರೆತು ನಾರ್ಮಲ್ ಲೆವೆಲ್ ಗೆ ಬಂದೆ.

ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.

(ಕನ್ನಡ ಬ್ಲಾಗರ್ಸ್ ನಲ್ಲಿ ಹಾಕಿದ ಒಂದು ಕಮೆಂಟ್. ಚಿತ್ರಕೃಪೆ – ಕನ್ನಡಪ್ರಭ, ಮೆಟ್ ಬ್ಲಾಗ್)

ಮುಕ್ತ…..ಮುಕ್ತ….ಮುಕ್ತ….

ಮುಕ್ತ..ಮುಕ್ತ’ ದಲ್ಲಿ ಮುಖ್ಯಮಂತ್ರಿಯ ಹಿರಿಯ ಮಗನಾಗಿ (ದೇವಾನಂದ ಸ್ವಾಮಿ) ಪಾತ್ರ ಮಾಡಲು ಆರಂಭವಾದಾಗಿನಿಂದ ಸ್ನೇಹಿತರಿಂದ ಬಂದ ಕಾಮೆಂಟ್ ಗಳು ಇಲ್ಲಿವೆ. ಕಾಮೆಂಟ್ ಗಳು ಬಂದ ಹಾಗೆ ಮುಕ್ತ ಮುಕ್ತ ಕೆಟಗರಿಯಲ್ಲಿ ಪ್ರಕಟಿಸಲಿದ್ದೇನೆ. ತಾವು ಸಹ ಅಭಿಪ್ರಾಯಗಳನ್ನು ಕಳಿಸಬಹುದು.

Picture 065

*ಶ್ರೀರಂಗ ಕುಲಕರ್ಣಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು.

ಯೂ ಆರ್ ಲುಕಿಂಗ್ ಕೂಲ್….

*ಕೇಶವ, ಆರ್ಥಿಕ ತಜ್ಞ, ಬೆಂಗಳೂರು.

ಕಾಂಗ್ರಾಟ್ಸ್…ನ್ಯೂ ಇನ್ನಿಂಗ್ಸ್. ಆಕ್ಟಿಂಗ್ ಈಸ್ ಗುಡ್. ಕ್ಯಾರಿ ಆನ್.

*ಪ್ರಾಚಿ ರವಿಚಂದ್ರ, ಸಾಪ್ಟ್ ವೇರ್ ಇಂಜಿನಿಯರ್, ಬೆಂಗಳೂರು.

ಗುಡ್ ಶೋ.

*ರಾಘವೇಂದ್ರ ಗೌಡ, ಈ ಟಿವಿ ಪತ್ರಕರ್ತ, ಬೆಂಗಳೂರು.

ನೈಸ್ ಆಕ್ಟಿಂಗ್. ಗುಡ್ ಲಕ್.

*ರವಿದತ್ತಪ್ರಸಾದ್, ಎಲ್ಐಸಿ ಉದ್ಯೋಗಿ, ಬೆಂಗಳೂರು

ಕಾಂಗ್ರಾಚುಲೇಷನ್ಸ್

*ಮಧುಕರ ಭಟ್, ವಕೀಲರು, ಬೆಂಗಳೂರು

ಸುಘೋಷ್ ಇಟ್ ವಾಸ್ ರಿಯಲಿ ಗ್ರೇಟ್. ಐ ಲೈಕ್ಡ್ ಯುವರ್ ಎಕ್ಸಪ್ರೆಷನ್ ಅಂಡ್ ಡೈಲಾಗ್ ಡಿಲೆವರಿ.

*ವಾಣಿ ಶ್ರೀಹರ್ಷ, ಗೃಹಿಣಿ ಮತ್ತು ರೈತ ಮಹಿಳೆ, ಕೊಪ್ಪ.

ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿ ಆಯ್ತು. ಆಗ್ತಿದೆ. ಕಾಂಗ್ರಾಟ್ಸ್ ಕಣೋ. ಇದೇ ತರಹ ಮತ್ತೆ ಮತ್ತೆ ಬರ್ತಿರು.

*ಜ್ಯೋತಿ ಇರ್ವತ್ತೂರ್, ಈ ಟಿವಿ ಪತ್ರಕರ್ತೆ, ಬೆಂಗಳೂರು.

ವೆರಿಗುಡ್ ಪರ್ ಫಾರ್ಮನ್ಸ್. ಕೀಪ್ ಇಟ್ ಅಪ್.

3

*ವಿದ್ಯಾರಶ್ಮಿ, ಪತ್ರಕರ್ತೆ, ಕನ್ನಡಪ್ರಭ, ಬೆಂಗಳೂರು.

ಹಾಯ್, ವೆರಿ ಹ್ಯಾಪಿ ಟು ಸೀ ಯೂ ಇನ್ ಮುಕ್ತಾ ಮುಕ್ತಾ. ನೈಸ್ ರೋಲ್ ಅಂಡ ಯುವರ್ ಆಕ್ಟಿಂಗ್ ಇಸ್ ಆಲ್ಸೋ ನೈಸ್. ಹೋಪ್ ಯು ವಿಲ್ ಶೈನ್. ಆಲ್ ದಿ ಬೆಸ್ಟ್.

*ಶ್ರೀಧರ್ ವಿವಾನ್, ಪತ್ರಕರ್ತ, ಬ್ಯಾಂಗ್ಲೋರ್ ಮಿರರ್, ಬೆಂಗಳೂರು.

ಯೂ ಲುಕ್ ಗುಡ್ ಮ್ಯಾನ್. ನೈಸ್ ಜಾಬ್.

*ಸೌಮ್ಯರಾಣಿ, ಈ ಟಿವಿ ಪತ್ರಕರ್ತೆ, ಬೆಂಗಳೂರು.

ಕಾಂಗ್ರಾಚುಲೇಷನ್ಸ್. ಅಭಿನಯ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಮುಖದ ಭಾವನೆಗೆ ಹೆಚ್ಚು ಗಮನ ಕೊಡಿ. ಬಾಡಿ ಲಾಂಗ್ವೇಜ್ ತುಂಬಾ ಚೆನ್ನಾಗಿದೆ. ಕೀಪ್ ಇಟ್ ಅಪ್.

*ಪ್ರಸನ್ನ, ಈ ಟಿವಿ ಪತ್ರಕರ್ತ, ಬೆಂಗಳೂರು.

ವಾಟ್ ಎ ಕಮ್ ಬ್ಯಾಕ್. ಯವರ್ ಆಕ್ಟಿಂಗ್ ಈಸ್ ಗುಡ್ ಮಿ. ದೇವಾನಂದ. ವಿಶ್ ಯು ಆಲ್ ದಿ ಸಕ್ಸೆಸ್.

*ಡಾ. ಎಸ್. ಎಲ್. ಕುಲಕರ್ಣಿ, ಕನ್ನಡ ಪ್ರೋಫೆಸರ್, ಆರ್ ಪಿ ಡಿ ಕಾಲೇಜು, ಬೆಳಗಾವಿ.

ದೇವಾನಂದ್…ಆಲ್ ಆಫ್ ಅಸ್ ಎಂಜಾಯ್ಡ್. ಅಪ್ರೋಪ್ರಿಯೇಟ್ ರೋಲ್. ಕಂಟಿನ್ಯೂ ನ್ಯೂ ವೆಂಚರ್.

*ಡಾ. ಲೀಲಾ ಸಂಪಿಗೆ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ, ಬೆಂಗಳೂರು.

ಹುಟ್ಟು ಕಲಾವಿದ ಅನ್ನಿಸ್ತು.

Picture 062

*ಜಿ. ಎನ್. ಮೋಹನ್, ಸಿಇಓ, ಮೇ ಫ್ಲವರ್ ಮೀಡಿಯಾ ಹೌಸ್, ಬೆಂಗಳೂರು.

ಸುಘೋಷ್

ನಿಮಗೆ ಕಿರುತೆರೆಯಲ್ಲಿ ಒಳ್ಳೆ ಭವಿಷ್ಯವಿದೆ. ನಿಮ್ಮ ಮೊದಲ ಎಪಿಸೋಡ್ ಇದನ್ನು ಸಾಬೀತುಪಡಿಸಿದೆ.

ನೀವು ಲೀಲಾಜಾಲವಾಗಿ ಅಭಿನಯಿಸಿದ್ದೀರಿ. ನಿಮ್ಮೊಳಗೆ ಒಬ್ಬ ಒಳ್ಳೆ ಪ್ರೊಫೆಷನಲ್ ಇದ್ದಾನೆ

ಅವನನ್ನು ಜೋಪಾನವಾಗಿ ಕಾಪಾಡಿಕೊಳ್ಳಿ

ನಿಮ್ಮ ಅಭಿನಯ ನೋಡಿ ನಾನೇ ಸುಸ್ತಾದೆ.

ನಾಟಕದ ಲೈಮ್ ಲೈಟ್ ಗಿಂತ ಕ್ಯಾಮೆರಾ ಒದಗಿಸುವ ಲೈಮ್ ಲೈಟ್ ಹೆಚ್ಚಿನದು.

ನಿಮ್ಮ ತಲೆ ನಿಮ್ಮ ಭುಜದ ಮೇಲೆ ಇಂದಿಗೂ ಎಂದಿಗೂ ಇರಲಿ ಎಂಬುದು ನನ್ನ ಆಶಯ

ನಿಮ್ಮ ವಿನಯ, ನಿಮ್ಮ ಪ್ರೊಫೆಷನಲ್ ರೀತಿ ಮಾತ್ರವೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

ಆಲ್ ದಿ ಸಕ್ಸಸ್

*ಸುರೇಖಾ, ಮೇ ಫ್ಲವರ್ ಮೀಡಿಯಾ ಹೌಸ್, ಬೆಂಗಳೂರು.

ಸೂಪರ್ ಡೈಲಾಗ್ಸ್….

*ಲಕ್ಷ್ಮಿನಾರಯಣ, ಕ್ಯಾಮರಾಮನ್, ಎಎನ್ಐ, ಬೆಂಗಳೂರು.

ಯೂ ಹ್ಯಾವ್ ಗಾಟ್ ಎ ಗುಡ್ ರೋಲ್. ಯುವರ್ ಪರ್ಫಾರ್ಮನ್ಸ್ ಈಸ್ ನ್ಯಾಚುರಲ್. ಕೀಪ್ ಅಪ್ ದಿ ಕ್ವಾಲಿಟಿ.

*ಪ್ರೀತಿ, ಗೃಹಿಣಿ, ಗಾಯಕಿ ಹಾಗೂ ರಂಗಕರ್ಮಿ, ಬೆಂಗಳೂರು.

ಮೈ ಇನ್-ಲಾಝ್ ಥಿಂಕ್ ಯೂ ವೇರ್ ಗುಡ್. ಹೋಪ್ ಯೂ ಫೈಂಡ್ ಮೆನಿ ಮೋರ್ ಗುಡ್ ರೋಲ್ಸ್.

Picture 138

*ಅರ್ಪಣಾ ಎಚ್ ಎಸ್.

ಈ ಟಿವಿ ಪತ್ರಕರ್ತೆ, ಬೆಂಗಳೂರು.

ನಿಮ್ಮ ಚ್ಯಾನಲ್ ನಲ್ಲಿ ಕೆಲ್ಸ ಕೊಡಿ ಪ್ಲೀಸ್.


*ರವಿ ಉಳ್ಳಾಗಡ್ಡಿ. ಈ ಟಿವಿ ಪತ್ರಕರ್ತ, ಧಾರವಾಡ.

ಎನ್ ಸಾರ್ ಸ್ಮಾರ್ಟ್ ಆಗೀದ್ದೀರಾ…

*ಮಮತಾ ಅರಸಿಕೆರೆ, ಶಿಕ್ಷಕಿ, ಹಾಸನ.

ಸಿ.ಎಂ. ಪುತ್ರ ಮಧ್ಯಮ ವರ್ಗದ ಮನೆಯಲ್ಲಿ….ಕಲ್ಪನೆ ಅದ್ಭುತ.

*ನಟರಾಜ ಬೆಳಕವಾಡಿ

ಈ ಟಿವಿ ಪತ್ರಕರ್ತ, ಚನ್ನಪಟ್ಟಣ.

ಯಾವ ಚಾನಲ್ ಸಾರ್. ನಾನೂ ನಿಮ್ಮ ಜೊತೆ ಸೇರ್ಕೋತಿನಿ.

*ಶಶಿಧರ ಕೋಟೆ, ಗಾಯಕರು, ಬೆಂಗಳೂರು.

ನಿನ್ನೆ ಮುಕ್ತಾ ಮುಕ್ತಾದಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿತ್ತು. ಕೀಪ್ ಇಟ್ ಅಪ್.

*ಮಮತಾ ಅರಸಿಕೆರೆ, ಶಿಕ್ಷಕಿ, ಹಾಸನ.

ನಿನ್ನೆ ಮುಕ್ತಾ ಮುಕ್ತಾದಲ್ಲಿ ವಾಹಿನಿಗೆ ಬೇರೆ ಹೆಸರು ಇಟ್ಟಿರಿ. ಕಾಮನು ಬಿಲ್ಲು ಹೆಸರು ಅಷ್ಟು ಚೆನ್ನಾಗಿಲ್ಲ.

*ರವಿ ಮಂಡ್ಯ, ಕಿರುತೆರೆ ಕಲಾವಿದ, ಬೆಂಗಳೂರು.

ಏನ್ ನಾನಾ, ಫುಲ್ ಮಿಂಚಿಂಗು…


‘ವಿಜಯ ಕರ್ನಾಟಕ’ದಲ್ಲಿ ‘ತಿರುಗುಬಾಣವಾದ ವರ್ಗಾವಣೆ’

ಇಂದಿನ ‘ವಿಜಯ ಕರ್ನಾಟಕ’ದ ‘ವಾಚಕರ ವಿಜಯ’ದಲ್ಲಿ ಪ್ರಕಟವಾಗಿರುವ ನನ್ನ ಪತ್ರ.

vvv

20090728a_008101004