ಮಳೆಗೆ ಅನೇಕ ಮುಖಗಳಿವೆ

1

ಮುಖ -1

ಮಳೆ ಅಂದ್ರೆ ಉಸಿರು, ಮಳೆ ಅಂದ್ರೆ ಬೆಳೆ ಮತ್ತು ಬೆಲೆ

ಮಳೆ ಅಂದ್ರೆ ಹಸಿರು, ಹೊಸ ಚಿಗುರು, ಹಬೆ ಆಡ್ತಾ ಇರೋ ಕಾಫಿ

ನೆಟ್ಟಿ ಕಾಲ, ಎತ್ತುಗಳಿಗೆ ಪೂರ್ತಿ ಕೆಲಸ

ಹಲಸಿನ ಕಾಯಿ ಹಪ್ಪಳ ಜೊತೆಗೆ ರುಚಿರುಚಿ ಮಿರ್ಚಿ ಭಜಿ

ಜಾನುವಾರುಗಳಿಗೆ ಅಚ್ಚ ಹಸಿರಿನ ಊಟ

ನದಿ ಕೆರೆ ಮೇಲೆಲ್ಲ ನೀರಿಂದೇ ಆಟ

ಮೀನುಗಳಿಗೆ ಮಿನಲದ ಸಂಭ್ರಮ

ಮಳೆ ಅಂದ್ರೆ ಸ್ವಚ್ಛ ರಸ್ತೆ

ಬಹಿರಂಗದ ಜೊತೆ ಅಂತರಂಗವೂ ತಂಪು ತಂಪು.

ಆದರೆ ದುರಾದೃಷ್ಟ ಮಳೆಗೆ ಅನೇಕ ಮುಖಗಳಿವೆ

2

ಮುಖ -2

ಮಳೆ ಅಂದ್ರೆ ಬಿರುಗಾಳಿ, ಮಳೆ ಅಂದ್ರೆ ಗುಡುಗು, ಸಿಡಿಲು, ಮಿಂಚು.

ಮಳೆ ಅಂದ್ರೆ ಮರ ಬೀಳುತ್ತೆ, ವಾಹನಗಳು ಓಡಾಡಲ್ಲ

ಪ್ರವಾಹ ಬರುತ್ತೆ

ಮನೆಗಳ ಜೊತೆ ಕಣ್ಣುಗಳಲ್ಲೂ ನೀರು ತುಂಬುತ್ತೆ

ಸುಮ್ನೆ ಇದ್ದ ಕಡಲು ಕೊರೆಯಲು ಆರಂಭಿಸುತ್ತೆ

ದಡಕ್ಕಳಿಸುವ ಅಲೆಗಳು ವಾಪಸ್ ಹೋಗವಾಗ ಕನಸುಗಳನ್ನೂ ಕಿತ್ಕೊಂಡ್ ಹೋಗುತ್ತೆ.

ಅಪಘಾತಗಳು ಹೆಚ್ಚಾಗುತ್ತೆ, ವಿದ್ಯುತ್ ಕೈಕೊಡುತ್ತೆ.

ಮಳೆಗೆ ಅನೇಕ ಮುಖಗಳಿವೆ

3

ಮುಖ -3

ನೆನೆಸ್ಕೋ ಒಂದ್ಸಲ….

ಆ ದರಿದ್ರ ಬಿಸಿಲು, ಮೂಗ ಮೇಲಿನ ಬೆವರು, ಪೊಲ್ಯುಷನ್ನು, ಗಿಡಗಳಿಲ್ಲ ಮೆಟ್ರೋ ರಸ್ತೆಗಳು

ಗುಬ್ಬಚ್ಚಿಗಳಿಲ್ಲದ ಮನೆ-ಓಣಿಗಳು

ಡಂಪಿಂಗ್ ಯಾರ್ಡ್ ಆಗಿರುವ, ಆಪಾರ್ಟ್ ಮೆಂಟ್ ಗಳೆದ್ದಿರುವ ಸುಂದರ ಕೆರೆಗಳು

ಖಾಲಿ ಮನಸ್ಸು, ಕೊಡಗಳ ಜೊತೆ ನೀರಿಗಾಗಿ ದಿನಗಟ್ಟಲೆ ಕಾಯುವ ನೀರೆಯರು

ಕಾವೇರಿ ನೀರಿಗಾಗಿ ನಡೆದ ಅತ್ಯಾಚಾರಗಳು

ವಿದೇಶಿ ಕಂಪನಿಗಳು ಮಾರುತ್ತಿರುವ ದುಬಾರಿ ಬೆಲೆಯ ಮಿನಿರಲ್ ವಾಟರ್ ಬಾಟಲಿಗಳು

ಪ್ರತಿವರ್ಷ ಹೆಚ್ಚುತ್ತಿರುವ ಬಿಸಿಲು

ಸಿಟಿಯಲ್ಲಿ ಮಳೆಯಾದರೆ ಮುಖ ಸಿಂಡರಿಸುವ ಜನರು

ಗೆಳೆಯ, ಮಳೆಗೆ ಅನೇಕ ಮುಖಗಳಿಗವೆ.

ಪರದೆ ಇನ್ನೇನು ಏಳಲಿದೆ

ಯಾವ ಮುಖವನ್ನು ಮಳೆಗೆ ನೀಡುವ ಹೇಳು?