ನನ್ನಪ್ಪ ನನಗಾಗಿ ಹಾಡುತ್ತಿದ್ದ ಹಾಡು….

myself

ನನ್ನಪ್ಪ ನನಗಾಗಿ ಹಾಡುತ್ತಿದ್ದ ಹಾಡನ್ನು ನಾನು ಇದೀಗ ನನ್ನ ಮಗನಿಗಾಗಿ ಹಾಡುತ್ತಿದ್ದೇನೆ…..

ಅತ್ತಿತ್ತ ನೋಡದಿರು
ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋ ಜೋ ಜೋ

ಸುತ್ತಿ ಹೊರಳಾಡದಿರು
ಮತ್ತೆ ಹಟ ಹೂಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋ ಜೋ ಜೋ

ಮಲಗು ಚೆಲ್ವಿನ ತೆರೆಯೆ
ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ
ಮಲಗು ಮುದ್ದಿನ ಮಣಿಯೆ
ಮಲಗು ಚಂದಿರನೂರ ಹೋಗುವೆಯಂತೆ

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ
ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳಹುವರಾಗ
ಪಟ್ಟದಾನೆಯ ಮೇಲೆ, ಪುಟ್ಟ ಮಗುವೆ