ನೋಡಿದ್ದೀರಾ ಈ ತರಹ ಇಲ್ಲಸ್ಟ್ರೇಷನ್ಸ್…

ಯವ ಕಲಾವಿದರ ಸಂಸ್ಥೆ ಸಮೂಹ ನಿನ್ನೆ ಹಾಗೂ ಮೊನ್ನೆ ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರಿನಲ್ಲಿ ಆರ್ಟ್ ಎಕ್ಸಿಬಿಷನ್ ಆಯೋಜಿಸಿತ್ತು. ಆರ್ಟ್ ಎಕ್ಸಿಬಿಷನ್ ಎಂದ ಕೂಡಲೇ ಗೋಡೆಯ ಮೇಲಿನ ಚಿತ್ರಗಳನ್ನಷ್ಟೇ ನಾನು ಊಹಿಸುತ್ತಿದ್ದೆ. ಆದರೆ ಇಲ್ಲಿನ ಇನ್ ಸ್ಟಾಲೇಷನ್ಸ್ ನೋಡಿ ದಂಗಾದೆ. ಪ್ರತಿಯೊಂದೂ ಇನ್ ಸ್ಟಾಲೇಷನ್ ಅರ್ಥಪೂರ್ಣವಾಗಿತ್ತು. ಯಾವೂದೂ ಅಬ್ಸಾಟ್ರಾಕ್ಟ್ ಆಗಿರಲಿಲ್ಲ. ಅದರ ಕೆಲವು ಝಲಕ್ ಇಲ್ಲಿದೆ.

ಎಕನಾಮಿಕ್ ಟೈಮ್ಸ್ ನಲ್ಲಿ ಇಲ್ಲಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿಮಿಷ 5000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಜೋಡಿಸಿದ್ದಾರೆ. ಅದರ ಮೇಲೆ ಇಡಲಾಗಿರುವ ಕಮಲಗಳು ಎಷ್ಟೆಲ್ಲ ಸಂಗತಿಗಳನ್ನು ಹೇಳುತ್ತಿವೆ ಅಲ್ಲವೆ?

0

1

2

3

4

5

6

7

ಇದು ಬೃಹತ್ ಪಿಕಾಸಿ. ಇದಕ್ಕೆ ಎಲ್ಲೆಂದರಲ್ಲಿ ಮೊಳೆಗಳನ್ನು ಹೊಡೆಯಲಾಗಿದೆ. ಇದನ್ನು ರಚಿಸಿರುವ ಕಲಾವಿದ ಪ್ರದರ್ಶನಕ್ಕೆ ಬರುವ ಪ್ರತಿಯೊಬ್ಬರಿಂದಲೂ ಒಂದೊಂದು ಮೊಳೆಗಳನ್ನು ಹೊಡೆಸಿದ್ದಾನೆ. ರೈತನ ಉಪಕರಣವಾಗಿರುವ ಇದನ್ನು ನಾವು ಆ ಅನ್ನದಾತನಿಗೆ ಮುಟ್ಟಲೂ ಸಹ ಬಿಡದಂತೆ ಆತನ ಹೊಟ್ಟೆಯ ಮೇಲೆ ಮೊಳೆ ಹೊಡೆದಿದ್ದೇವೆ ಎಂಬುದರ ಡಿಪಿಕ್ಷನ್ ಇದು.

8

9

10

ಈ ಆಮೆಗಳನ್ನು ನೋಡಿ. ಈ ಕಲಾವಿದನ ಬದುಕು ತೀರ ಸ್ಲೋ ಅಂತೆ. ಆತನ ಬದುಕಿನಲ್ಲಿ ಪ್ರತಿಯೊಂದೂ ತೀರ ನಿಧಾನವಾಗಿ ಆಗಿದೆ. ಅದರ ಡಿಪಿಕ್ಷನ್ ಹೀಗಿದೆ.

11

12

13

14

ಇಲ್ಲಿದೆ ಮತ್ತೊಂದು ಪೇಪರ್ ಹೌಸ್.

15

16

17

18

ಇಲ್ಲಿ ಮತ್ತೆ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳನ್ನು ಬಳಸಿ ಮಾಡಿರುವ ಕಲಾಕೃತಿಯನ್ನು ನೀವು ಹಲವು ವಿಧದಲ್ಲಿ ಅರ್ಥಮಾಡಿಕೊಳ್ಳಬಹುದು.

19

ಹೀಗೆ ಎಷ್ಟೋ ಅತ್ಯುತ್ತಮ ಕಲಾಕೃತಿಗಳು ಇಲ್ಲಿದ್ದವು.

ದುರಾದೃಷ್ಟ ಇದು ಮಾಧ್ಯಮಗಳ ಕಣ್ಣಿಗೆ ಬಿದ್ದೇ ಇಲ್ಲ….