ನಾವು ಕೇಳ್ತಿರೋದು ಅದೇ – ನ್ಯಾಯ

venki2

 

06bvpeg12

ನಾನು ವೆಂಕಟೇಶ್ ಜೊತೆ ಕೆಲಸ ಮಾಡಿದ್ದೇನೆ. ಈ ಟಿ ವಿ ಕಂಡ ಪ್ರತಿಭಾವಂತ ಛಾಯಾಗ್ರಾಹಕರಲ್ಲಿ ನನಗೆ ತುಂಬಾ ಇಷ್ಟವಾದವರು ವೆಂಕಟೇಶ್, ನಟರಾಜ್ ಹಾಗೂ ಮೋಹನ್. ಈತ ಕ್ಯಾಮೆರಾ ಹೆಗಲಿಗೇರಿಸಿ ಫೀಲ್ಡ್ ಗೆ ಇಳಿದನೆಂದರೆ ಪಾದರಸ. ಸೌಮ್ಯ ಮಾತಿನ ಆ ಕಾರಣಕ್ಕಾಗಿಯೇ ಅಪಾರ ಗೆಳೆಯರನ್ನು ಹೊಂದಿರುವ ಹುಡುಗ.

ವೆಂಕಟೇಶ್ ನಲ್ಲಿರುವ ಪ್ರತಿಭೆ ಈ ಟಿ ವಿ ಗೊತ್ತಾಗಲಿಲ್ಲ, ಸಿ ಎನ್ ಎನ್ ಗೆ ಗೊತ್ತಾಯಿತು. ಆದ್ದರಿಂದ ಸಿ ಎನ್ ಎನ್ ಭಾಗವಾಗಿ ಹೋದ. ವೆಂಕಟೇಶ್ ಆ ಚಾನಲ್ ಗೂ ಹೆಸರು ತಂದಾತ. ಮೊನ್ನೆ ಅದೇ ರೀತಿ ಪಾದರಸದಂತೆ ಹೈ ಕೋರ್ಟ್ ನಲ್ಲಿ ವರದಿ ಮಾಡುತ್ತಿದ್ದಾಗಲೇ ವಕೀಲ ಸಮುದಾಯ ಅವನ ಮೇಲೆ ಹಲ್ಲೆ ಮಾಡಿದೆ. ನ್ಯಾಯಮೂರ್ತಿಗಳಿಗೇ ಹಲ್ಲೆ ಮಾಡಿರುವಾಗ ಇದಾವ ಲೆಕ್ಕ ಎನ್ನಬಹುದೇನೋ? ವೆಂಕಟೇಶ್ ನೊಂದಿಲ್ಲದೇ ಇರಬಹುದು. ಆದರೆ ಆತನಿಗೆ ಆಘಾತವಾಗಿದೆ. ಈ ಸಮಯದಲ್ಲಿ ಮಾಧ್ಯಮ ಸಮುದಾಯ ಅವನೊಟ್ಟಿಗೆ ಇರಬೇಕು ಎಂಬುದು ನಮ್ಮೆಲ್ಲರ ಆಸೆ. ಹಾಗಾಗಿ ಅವನಿಗೆ ಬೆಂಬಲ ಕೋರಿ ಒಂದು ಕಾಮೆಂಟ್ ಹಾಕಿ. ಈ ಎಲ್ಲವನ್ನೂ ರಾಜ್ಯಪಾಲರಿಗೆ ಒಟ್ಟಾಗಿಯೇ ತಲುಪಿಸೋಣ. ಕಾಮೆಂಟ್ ಕಾಲಂ ನಲ್ಲಿ ನಿಮ್ಮ ಅಭಿಪ್ರಾಯ ಮೂಡಿಸಿ.

(ಮೀಡಿಯಾ ಮೈಂಡ್ ನಿಂದ….)

ಬಡವರಿಗೆ ಸಾವ ಕೊಡಬೇಡೊ

ಒಡಲ ಬೆಂಕಿ

ಚಿಂತನ ಪುಸ್ತಕ ಪ್ರಕಟಿಸಿರುವ ವಿಠ್ಠಲ ಭಂಡಾರಿ ಸಂಪಾದಿಸಿರುವ “ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು” ಪುಸ್ತಕ ಮೊನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪುಸ್ತಕದಲ್ಲಿ ಜಾನಪದ ಕವಿಯೋರ್ವ ಹಸಿವನ್ನು ಕಂಡ ಬಗೆ ಹೀಗಿದೆ.

ಬಡವರು ಸತ್ತರೆ…

ಬಡವರು ಸತ್ತರೆ ಸುಡಲೀಕೆ ಸೌದಿಲ್ಲೋ

ಒಡಲ ಬೆಂಕೀಲಿ ಹೆಣ ಬೆಂದೊ ದೇವರೆ

ಬಡವರಿಗೆ ಸಾವ ಕೊಡಬೇಡೊ

ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳಿಯ ಹಣ್ಣು

ಏನು ಇಲ್ಲದ ಬಡವೇಯ ಮಕ್ಳೋಗೆ

ಹೆತ್ತಬ್ಬೆ ಬತ್ತ ಮೊಲೆ ಹಾಲು

ಕಣಜ ಬೆಳೆದ ಮನೆಗೆ ಉಣಲಾಕ ಕೂಳಿಲ್ಲ

ಬೀಸಾಕ ಕವಣೆ ಬಲವಿಲ್ಲ ಕೂಲ್ಯವರ

ಸುಡಬೇಕ ಜನುಮ ಸುಖವಿಲ್ಲ

ಅನ್ನೇಕಾರ ಅರಸು ನಿನ್ನ ಸಂಬಳ ಸಾಕು

ಹನ್ನೆರಡು ವರುಷಲ ಹಳೆ ಅಕ್ಕಿ ಅನ್ನ ಉಂಡು

ಚನ್ನಿಗ ನನ್ನ ತಮ್ಮ ಬಡವಾದ.