ಇಟ್ಸ್ ಅಫಿಶಿಯಲ್….ನನ್ನ ಮಗನ ಹೆಸರು ಉದಾತ್

©ಕಲೆ – ಅಪಾರ.

ಕಳೆದೆರಡು ದಿನಗಳಿಂದ ಬ್ಲಾಗ್ ಅಪ್ ಡೇಟ್ ಆಗಿಲ್ಲದ್ದಕ್ಕೆ ನನ್ನ ಮಗನೇ ಕಾರಣ. ಆತನ ನಾಮಕರಣ ಕಾರ್ಯಕ್ರಮದಲ್ಲಿ ಎಷ್ಟು ಬಿಝಿಯಾಗಿಬಿಟ್ಟೆನೆಂದರೆ, ಬ್ಲಾಗು, ಬೀಗು ಎಲ್ಲ ಮರೆತುಹೋಯಿತು. ಅಂದ ಹಾಗೆ ನನ್ನ ಮಗನಿಗೆ ಉದಾತ್ (UDAATH) ಎಂದು ಹೆಸರಿಡಲಾಗಿದೆ. ಇದನ್ನು ನನ್ನ ತಂದೆ ಸೂಚಿಸಿದ್ದು. ಹಲವು ಹೆಸರುಗಳು ಈ ಸಂದರ್ಭದಲ್ಲಿ ಸ್ಪರ್ಧೆ ನಡೆಸಿದವಾದರೂ, ಅಂತಿಮವಾಗಿ ಉದಾತ್ ಹೆಸರು ಮೊದಲ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ನಾಮಕರಣ ಕಾರ್ಯಕ್ರಮ ಸರಳವಾಗಿ ನಡೆಯಿತು. ಈ ಸಂದರ್ಭದಲ್ಲಿ ಕಾರ್ಡ್ ಶೀಟ್ ಒಂದರ ಮೇಲೆ ಎಲ್ಲರೂ ಉದಾತ್ ನಿಗೆ ಆಶೀರ್ವಾದ ನುಡಿಗಳನ್ನು ಬರೆಯುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಅದ್ಭುತ ಪ್ರತಿಕ್ರಿಯೆ ಬಂದಿತು. “ಏನಾದರೂ ಆಗು, ಮೊದಲು ನೀನು ಮಾನವನಾಗು”, “ನಿನ್ನಪ್ಪನಿಗಿಂತ ಉದ್ದವಾಗಿ ಬೆಳಿ”, “ನಿನಗೆ ದೇವರ ಆಶೀರ್ವಾದ ಉದಾತ್ತವಾಗಿ ದೊರಕಲಿ”, “ಬದುಕು ಸಂಗೀತಮಯವಾಗಿರಲಿ” “ಚಂದ ಹೆಸರು, ಚಂದ ಮಗು“ ಇತ್ಯಾದಿ,  ಕೆಲ ಆಶೀರ್ವಾದಗಳ ಸ್ಯಾಂಪಲ್ ಗಳು.

ಬೇಜಾರಿನ ವಿಷಯ ಅಂದರೆ, ಕೆಲವರು ಕಾರ್ಯಕ್ರಮಕ್ಕೆ ಬರದೆ ಕೈಕೊಟ್ಟಿದ್ದು. ಕಾರ್ಯಕ್ರಮಕ್ಕೆ ಬರದಿದ್ದರೆ ತೊಂದರೆಯಿಲ್ಲ. ಆದರೆ ಎಟ್ ಲೀಸ್ಟ್ ಇನ್ ಫಾರ್ಮ್ ಆದರೂ ಮಾಡಬೇಕಿತ್ತು. ಇಂಥವರು ಬರುತ್ತಾರೆ ಎಂಬ ವಿಶ್ವಾಸದಿಂದ ನಾನು ಪ್ರತಿಯೊಂದು ಊಟಕ್ಕೆ ನೂರು ರೂಪಾಯಿಗೂ ಹೆಚ್ಚು ತೆತ್ತಿದ್ದೆ. ಸುಮ್ಮನೇ ವೇಸ್ಟ್ ಅಲ್ಲವೆ? ಇನ್ನು ಮನಸ್ಸಿಗಾದ ಬೇಸರದ ಬಗ್ಗೆ ನಾನು ಹೇಳಲಿಚ್ಛಿಸುವುದಿಲ್ಲ.

ಎನೀ ವೇ…ನಾಮಕರಣದ ಸಂದರ್ಭದ ವಿಶೇಷತೆಗಳು ಹಾಗೂ ಫೋಟೋಗಳನ್ನು ಶೀಘ್ರದಲ್ಲಿಯೇ ಹಾಕುವೆ….

Advertisements