ಟಿಓಐ ನಲ್ಲಿ ನನ್ನ ಪತ್ರ

01.01.10 ರ ಟಿಓಐ ನ ಎಡಿಟ್ ಪೇಜ್ ನಲ್ಲಿ ಪ್ರಕಟವಾಗಿರುವ ನನ್ನ ಪತ್ರ.

ಆಂಗ್ಲ ಹೊಸವರ್ಷದಲ್ಲಿ ನನ್ನ ವಿಶ್ ಲಿಸ್ಟ್ ಹೀಗಿದೆ…

ಸುಖ ಹೆಚ್ಚಲಿ

ದುಃಖ ಬೆಚ್ಚಲಿ

ಟೆರರಿಸ್ಟುಗಳು ಸಾಯಲಿ

ಸೈನಿಕರ ಆತ್ಮವಿಶ್ವಾಸ ವರ್ಧಿಸಲಿ

ಭ್ರಷ್ಟ ರಾಜಕಾರಣಿಗಳು ಠೇವಣಿ ಕಳೆದುಕೊಳ್ಳಲಿ

ಶಶಿ ಥರೂರ್ ಟ್ವಿಟರ್ ಬಳಸದಿರಲಿ

ರಾಜ್ಯ ಕಾಂಗ್ರೆಸ್ ಇನ್ನೂ ಸಶಕ್ತವಾಗಲಿ

ಕೋಪನ್ ಹೆಗನ್ ಮುಂದಿನ ಬಾರಿ ಯಶಸ್ಸು ಕಾಣಲಿ

ಆರ್ ಟಿ ಐ ನೆರವು ಜನ ಹೆಚ್ಚು ಹೆಚ್ಚು ಪಡೆದುಕೊಳ್ಳಲಿ

ಹೊಸ ವಧುವರರಿಗೆ ಬರೇ ಹೆಣ್ಣು ಮಕ್ಕಳೇ ಹುಟ್ಟಲಿ

ಟ್ರಾಫಿಕ್ ಪೋಲಿಸ್ ಲಂಚ ಕೇಳುವುದು ಕಡಿಮೆಯಾಗಲಿ

ಕೋಕ್ ಗಿಂತ ಎಳನೀರು ಹೆಚ್ಚು ಮಾರಾಟವಾಗಲಿ

ಸಾವಯವ ಕೃಷಿಗೆ ಜಯವಾಗಲಿ

ಬೆಂಗಳೂರಿನಲ್ಲಿನ ರೌಡಿಗಳು ಪರಸ್ಪರ ಮತ್ತಷ್ಟು ಹೊಡೆದಾಡಿಕೊಳ್ಳಲಿ

ರಂಗಾಯಣಕ್ಕೆ ಲಿಂಗದೇವರ ದರ್ಶನವಾಗಲಿ

ಎಡಪಂಥಿಯರು, ಬಲಪಂಥಿಯರು ತಮ್ಮ ಮಾರ್ಗ ಬಿಡದಿರಲಿ

ಲಾಸ್ಟ್ ಬಟ್ ನಾಟ್ ದಿ ಲೀಸ್ಟ್…

ನನ್ನ ಪ್ರೇಯಸಿಗೆ ಇನ್ನಾದರೂ ನಾನು ಪ್ರೀತಿಸುತ್ತಿರುವುದು ತಿಳಿಯಲಿ