ತಿ…. ಮುಚ್ಕೊಂಡು ಹೋಗ್ಬೇಕು….

ಪ್ರತಿಬಾರಿ ‘ಮುಕ್ತ ಮುಕ್ತ’ ಸಂವಾದವಾದಾಗಲೂ ನಾವು ಹೋಗುತ್ತಿರುವ ಊರಿನ ದೂರವನ್ನಾಧರಿಸಿ ಎಲ್ಲ ಕಲಾವಿದರೂ ಒಂದು ಅಥವಾ ಎರಡು ಬಸ್ ನಲ್ಲಿ ತೆರಳುತ್ತೇವೆ. ಆದರೆ ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಸಂವಾದದ ಹಿಂದಿನ ದಿನ ಮಗನ ನಾಮಕರಣ ಕಾರ್ಯಕ್ರಮವಿದ್ದುದರಿಂದ ಎಲ್ಲರೊಡನೆ ಹೋಗಲಾಗಲಿಲ್ಲ. ಹೀಗಾಗಿ ಮಾರನೇ ದಿನ ಬೆಳಿಗ್ಗೆ ‘ಸುವರ್ಣ ಕರ್ನಾಟಕ ಸಾರಿಗೆ’ಯಲ್ಲಿ ಬೆಂಗಳೂರಿನಿಂದ ದುರ್ಗಕ್ಕೆ ಹೋಗುವ ಸುಯೋಗ ನನಗೊದಗಿಬಂತು.

ಮುಂಜಾನೆ ಏಳೂವರೆಗೆಲ್ಲ ದುರ್ಗದ ಬಸ್ ಹತ್ತಿಬಿಟ್ಟೆ. ಈಗಿತ್ತಲಾಗಿ ಸುವರ್ಣ ಸಾರಿಗೆಯಲ್ಲಿ ತುಂಬಾ ಕಂಫರ್ಟೇಬಲ್ ಆಗಿ ಸೀಟ್ ಸಿಗುತ್ತದೆ. ಕರ್ಚೀಫು, ಟವಲ್ ಹಾಕುವುದಾಗಲಿ, ಸೀಟ್ ಮೇಲೆ ಉಗುಳುವುದಾಗಲಿ ಮಾಡಿ ಸೀಟ್ ಹಿಡಿಯಬೇಕಾದ ಅಗತ್ಯವಿಲ್ಲ. ಹೀಗಾಗಿ ನನಗೂ ನನ್ನ ಪ್ರಿಯವಾದ ವಿಂಡೋ ಸೀಟ್ ಸಿಕ್ಕಿತು. ಕುಳಿತ ತಕ್ಷಣ ನಾನು ಐಪೋಡ್ ಮರೆತಿರುವುದು ಜ್ಞಾಪಕ್ಕೆ ಬಂತು. ಒಮ್ಮೆ ಬೇಜಾರಾದರೂ, ಮತ್ತೊಮ್ಮೆ ಬಸ್ ನಲ್ಲಿನ ಚಟುವಟಿಕೆಗಳನ್ನು, ಜನರ ಮಾತುಗಳನ್ನು ಗಮನಿಸಬಹುದೆಂದು ಸಮಾಧಾನಪಟ್ಟುಕೊಂಡೆ. ಆದರೆ ದುರ್ಗದಲ್ಲಿ ಇಳಿಯುವಾಗ ನನ್ನ ತಲೆಯೆಂಬ ತಲೆಯು, ಕೆಟ್ಟುಕೆರಹಿಡಿದು, ವಿಚಾರಗಳೆಲ್ಲ ಹೊಲಸುಮೇಲೋಗರವಾಗಿ, ದಿಮಿದಿಮಿ ಕುದಿಯುವ ಅಗ್ನಿಕುಂಡವಾಗಿ ಪರಿಣಮಿಸಿಬಿಟ್ಟಿತ್ತು. ಐಪೋಡ್ ತರದೇ ಹೋದುದಕ್ಕೆ ನನ್ನನ್ನು ನಾನು ಜೀವನ ಪೂರ್ತಿ ಕ್ಷಮಿಸಿಕೊಳ್ಳದ ಹಂತ ತಲುಪಿಬಿಟ್ಟಿದ್ದೆ. ದುರ್ಗದ ಲಾಜ್ ನಲ್ಲಿ ತಣ್ಣನೇ ನೀರು ಕುಡಿದಾಗಲೇ ರಕ್ತಕಣಗಳು ಶಾಂತವಾದವು. ಹೀಗೆಲ್ಲ ಆಗಲು ಕಾರಣವಾಗಿದ್ದು ಬಸ್ ನಲ್ಲಿ ನನ್ನ ಸೀಟ್ ಹಿಂಭಾಗದಲ್ಲಿ ಕುಳಿತ ಇಬ್ಬರು ಪ್ರಯಾಣಿಕರು.

ನವರಂಗೋ, ಪೀಣ್ಯದಲ್ಲೋ ಬಸ್ ಹತ್ತಿದ ಇವರು ಅಲ್ಲಿಂದಲೇ ಮಾತಿಗೆ ಶುರವಿಟ್ಟುಕೊಂಡರು. ಇಬ್ಬರೂ ಮಾತಿಗೆ ಶುರುವಿಟ್ಟುಕೊಂಡರು ಎಂಬುದಕ್ಕಿಂತ, ಒಬ್ಬ ಮಾತನಾಡುತ್ತಲೇ ಇದ್ದ, ಮತ್ತೊಬ್ಬ ಕೇಳುತ್ತಲೇ (?) ಇದ್ದ. ಹಾಗೇ ಮಾತನಾಡಿದ್ದರೆ ಏನೂ ತೊಂದರೆಯಿರಲಿಲ್ಲ. ಆದರೆ ಮಾತನಾಡುತ್ತಿದ್ದವನ ಪ್ರತಿ ನಾಲ್ಕನೆಯ ಅಥವಾ ಐದನೆಯ ಸೆಂಟೆನ್ಸ್ “ತಿಕ ಮುಚ್ಕೊಂಡು ಹೋಗ್ಬೇಕು” ಎಂಬುದಾಗಿತ್ತು. ಉದಾಹರಣೆಗೆ ಆತನ ಮಾತಿನ ಓಘ ಹೀಗಿತ್ತು.

ಉದಾಹರಣೆ -1 “ನಮ್ಮ ಹುಡುಗ ಒಬ್ನು ಜರ್ಮನಿಯಲ್ಲವ್ನೆ. ಅವನು ಯೋಳ್ತಾ ಇದ್ದ. ಅಲ್ಲೆಲ್ಲ ರಸ್ತೆ ಮೇಲೆ ಹಾರ್ನ್ ಹೊಡೆಯೋ ಹಾಗೇ ಇಲ್ವಂತೆ. ಮುಂದಿನವನು ನಿಧಾನವಾಗಿ ಹೋಗ್ತಾ ಇದ್ರೆ ಅವನ ಹಿಂದೆ ನಾವು ತಿಕ ಮುಚ್ಕೊಂಡು ವೋಯ್ತಾ ಇರಬೇಕು. ಹಾರ್ನ್ ಮಾಡಂಗೇ ಇಲ್ಲ. ಮಾಡಿದ್ರೆ ಪೈನ್ ಹಾಕ್ತಾರೆ ಪ್ರೋಲಿಸ್ರು…”

ಉದಾಹರಣೆ ಎರಡು – “ಜರ್ಮನಿಯಲ್ಲಿ ಎಲ್ಲ ಬೇಕಂದ್ರಲ್ಲಿ ಬಾರ್ ಇಲ್ಲ. ಎಲ್ಲಿ ಬೇಕಂದ್ರಲ್ಲಿ ಕುಡಿಯೋಅಂಗಿಲ್ಲ. ಕುಡಿಯಕ್ಕಂತಾನೇ ಒಂದು ಜಾಗ ಮಾಡಿದಾರೆ. ಅಲ್ಲ್ ವೋಗ್ಬೇಕು. ಬಾಟ್ಲಿ ತಗೋಬೇಕು. ಮನೆಗೆ ಹೋಗಿ ತಿಕ ಮುಚ್ಕೊಂಡು ಕುಡೀಬೇಕು”.

ಉದಾಹರಣೆ ಮೂರು – “ಮೊನ್ನೆ ಸೀನಪ್ಪ ಸಿಕ್ಕಿದ್ದ. ಎತ್ತು ಮಾರಿ ಟ್ರ್ಯಾಕ್ಟರ್ ತಗೋತಿವ್ನಿ ಅಂದ. ನಾ ಯೋಳ್ದೆ. ಎತ್ತ್ ಇದ್ರೆ ಭೂಮಿಗೆ ನಿಂಗೆ ಇಬ್ರಿಗೂ ಅನುಕೂಲ. ತಿಕ ಮುಚ್ಕೊಂಡು ಎತ್ತಿನ್ ಹಿಂದೆ ಹೆಜ್ಜೆ ಹಾಕೋದು ಕಲಿ ಅಂತ”

ಉದಾಹರಣೆ ನಾಲ್ಕು – “ಮೊಪೆಡ್ ಗೆ ಪೆಟ್ರೋಲ್ ಹಾಕಿಸ್ದೆ. ನೂರು ರೂಪಾಯಿಗೆ ಅಂತ ಹೇಳ್ದೆ. 99.85 ಪೈಸೆದು ಹಾಕ್ದ. ತಿಕ ಮುಚ್ಕೊಂಡು ನೂರು ರೂಪಾಯ್ದು ಹಾಕು ಅಂತ ಹೇಳ್ದೆ. ತಿಕ ಮುಚ್ಕೊಂಡು ಹಾಕ್ದ ನೋಡು”.

ಹೀಗೆ ಸಾಗಿತ್ತು ಆತಿನ ಮಾತಿನ ಪ್ರವಾಹ. ಸ್ವಲ್ಪ ಹೊತ್ತಾಗಿದ್ರೆ ಕೇಳ್ಬಹುದಾಗಿತ್ತು. ಆದರೆ ಯೋಚಿಸಿ. ಬೆಂಗಳೂರಿನಿಂದ ದುರ್ಗದವರೆಗೂ ಈ ರೀತಿಯ ಮಾತನ್ನು ಕೇಳುವುದು ಎಂತಹ ಖುಷಿಯ ಸಂಗತಿ ಎಂದು…ಹೀಗಾಗಿಯೇ ನನ್ನ ತಲೆ ಎಂಬುದು ಹೊಲಸುಮೇಲೋಗರವಾಗಿದ್ದು.

ಕೆಲ ದಿನಗಳ ಬಳಿಕ ನನ್ನ ಗೆಳೆಯನ ಹತ್ತಿರ ಈ ಘಟನೆಯನ್ನು ಹೇಳಿದೆ. ಅದಕ್ಕೆ ಆತ ಹೇಳಿದ್ದು “ಅಯ್ಯೋ ಆತನಿಗೆ ತಿಕ ಮುಚ್ಕೊಂಡು ಕೂತ್ಕೋ ಅಂತ ಹೇಳ್ಬಾರ್ದಾಗಿತ್ತಾ?”

18 thoughts on “ತಿ…. ಮುಚ್ಕೊಂಡು ಹೋಗ್ಬೇಕು….

  • ಆತ್ಮೀಯ ಅವಿನಾಶ್,
   ನಿಮ್ಮ ಪ್ರಶ್ನೆಗೆ ಉತ್ತರ ಆಮೇಲೆ ಕೊಡುತ್ತೇನೆ. ಮೈಂಡ್ ಇದ್ದವರಿಗಂತೂ ಕಾಷಿಯಸ್ ಮೈಂಡ್ ಅಂದರೆ ಏನು ಎನ್ನವುದು ತಿಳಿದಿದೆ ಅಂತಷ್ಟೂ ಹೇಳಬಲ್ಲೆ.
   ಅಂದಹಾಗೆ ನನ್ನ ಹಳೆಯ ಪೋಸ್ಟ್ “ಫೇಲ್ ಆದವರು, ಹಾಲು ಮಾರುವುದು, ಎಂ80, ಇತ್ಯಾದಿ….”ಎಂಬ ತಮ್ಮ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಹಲವು ದಿನಗಳಾಗಿದೆ. ತಮ್ಮಿಂದ ಉತ್ತರವಿಲ್ಲ. ನನ್ನ ಆ ಪ್ರತಿಕ್ರಿಯೆಗೆ ಉತ್ತರಿಸಬೇಕೆಂದು ಕೇಳಿಕೊಳ್ಳುತ್ತೇನೆ.
   ಪ್ರೀತಿಪೂರ್ವಕವಾಗಿ,
   ಸುಘೋಷ್ ಎಸ್. ನಿಗಳೆ

 1. ಗೆಳಯಾ,
  ನಾನು ಪ್ರತಿ ದಿನಾನು ನಿಮ್ಮ ಬ್ಲಾಗ್ ನೋಡುತ್ತೇನೆ, ನಿಮ್ಮ ಬ್ಲಾಗ್ ಹುಡುಕಲು ಕಾರಣ ನಿಮ್ಮ ಅಬಿನಯದ ಮುಕ್ತ – ಮುಕ್ತ ದಾರವಾಹಿ. ಸಾಮಾನ್ಯ ಎಲ್ಲ ಬರಹ ಓದಿದ್ದೇನೆ ಒಳ್ಳೆಯದಿದೆ. ನನ್ನ ತಿಳಿವಳಿಕೆ ಪ್ರಕಾರ ಡ್ರಾಮಾ ಸೈಡ್ವಿಂಗ್ ಬ್ಲಾಗ್ನಲ್ಲಿ ನಿಮ್ಮ ಹೆಸರು ನೋಡಿದೆ. ಆದರೆ ಆ ಬ್ಲಾಗ್ ಅಪ್ಡೇಟ್ ಆಗಿದ್ದು ಅಪರೂಪ. ಅಪ್ಡೇಟ್ ಮಾಡಬಹುದ? ಇನ್ನು ನಾನು ಉಡುಪಿ ರಂಗಭೂಮಿ (ರಿ) ದ ಕಲಾವಿದ ನಮ್ಮ ಸಂಸ್ಥೆಯ ಅಥವಾ ನಾಟಕಕ್ಕೆ ಸಂಬದಿಸಿದ ಕಾರ್ಯಕ್ರಮಗಳನ್ನು ನಿಮ್ಮ I ಬ್ಲಾಗ್ ನಲ್ಲಿ ಬರುವಂತೆ ಮಾಡಲು ಏನು ಮಾಡಬೇಕು? ತಿಳಿಸಿ.

  ದನ್ಯವಾದ,

  ಮೋಹನ Hegade

 2. ನೀವು ಬರೆದ ಶೈಲಿ ಇಷ್ಟವಾಗಿ ಜೋರು ನಗು ಬಂತು ಕೂಡ. T ಮು .ಅನ್ನುವುದನ್ನು ಎಷ್ಟು ಸಲ ಹೇಳಿದರು ಅಂತ ಎಣಿಸುತ್ತಿದ್ದರೆ ನಿಮಗೆ ದಾರಿ ಸವೆದಿದ್ದು ಗೊತ್ತಾಗುತಿರಲಿಲ್ಲ.ತಮಾಷೆಗೆ ಹೇಳಿದೆ. ಆದ್ರೆ ನಿಮ್ಮತಲೆ ‘ಹದಗೆಟ್ಟ ಹೈದರಾಬಾದ್ “ಅಗದಿದ್ದದ್ದೆ ವಿಶೇಷ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.