ಮುಕ್ತ ಮುಕ್ತ ಸಂಭಾಷಣೆ

ನನ್ನ ಮೊದಲ ಧಾರಾವಾಹಿ ‘ಮುಕ್ತ ಮುಕ್ತ’ ದಲ್ಲಿಯೇ ನನಗೆ ನಟ ಹಾಗೂ ಸ್ಕ್ರಿಪ್ಟ್ ರೈಟರ್ ಆಗುವ ಎರಡು ಅವಕಾಶಗಳು ಒದಗಿ ಬಂದಿವೆ. ‘ಮುಕ್ತ ಮುಕ್ತ’ ಕ್ಕೆ ಶ್ರೀ ಟಿ.ಎನ್. ಸೀತಾರಾಮ್ ಅವರ ಮಾರ್ಗದರ್ಶನದಲ್ಲಿ ಸಂಭಾಷಣೆ ಬರೆಯುತ್ತಿದ್ದೇನೆ.

ಮುಕ್ತ ಮುಕ್ತ ಮುಕ್ತ....

ಯಾಕೆ ನಗುತ್ತೀರಿ ಮಕ್ಕಳೆ?

ದೇವರು ಕೊಟ್ಟ ಪೀಪಿ...ಹ್ಹಿ...ಹ್ಹಿ...ಹ್ಹಿ....

ಬಹುಶಃ 1960 ರ ಆಸುಪಾಸಿನ ಘಟನೆ. ನನ್ನ ದೂರದ ಸಂಬಂಧಿಕರೊಬ್ಬರು ಹೇಳಿದ್ದು.

ಆಗಿನ್ನೂ ಆಕೆ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ. ಕಲಿಸಲು ಬರುತ್ತಿದ್ದವರೆಲ್ಲರೂ ಸಿಸ್ಟರ್ ಗಳು. ಒಮ್ಮೆ ಸಿಸ್ಟರ್ ಪಾಠ ಮಾಡುವಾಗ ಅವರ ಹೊಟ್ಟೆ ಅಪ್ಸೆಟ್ ಆಗಿ, ಭಾರೀ ಶಬ್ದ ಹೊರಟೇ ಬಿಟ್ಟಿತಂತೆ. ಕ್ಲಾಸಿನಲ್ಲಿದ್ದ ಮಕ್ಕಳೆಲ್ಲ ಹೋ ಅಂತ ನಕ್ಕರು. ಸಿಸ್ಟರ್ ಒಂಚೂರು ಕೋಪಗೊಳ್ಳಲಿಲ್ಲವಂತೆ. ಬದಲಾಗಿ ಆಕೆ ಹೇಳಿದ್ದು,,,,

“ಯಾಕೆ ನಗುತ್ತೀರಿ ಮಕ್ಕಳೆ? ಇದು ದೇವರು ಕೊಟ್ಟ ಪೀಪಿ”.

ಬರೀ ಬಾಲ್ ಬಂತು ಅಂದುಕೊಂಡಿದ್ದೇ ತಪ್ಪಾಯಿತು….

speeeeeeeeeed

ಬಾಸ್ ದುಬೈಗೆ ಹೊರಟಿದ್ದರು. ಅವರನ್ನು ಏರ್ ಪೋರ್ಟ್ ಗೆ ಬಿಡಲು ವಾಹಿದ್ ತನ್ನ ಮಹಿಂದ್ರಾ ಲೋಗಾನ್ ಕಾರನ್ನು 100 ಕೀಮಿ. ಸ್ಪೀಡಿನಲ್ಲಿ ಓಡಿಸುತ್ತಿದ್ದ. ಆಗಲೇ ಲೇಟ್ ಆಗಿದ್ದರಿಂದ ಎಕ್ಸಲೇಟರ್ ಮೇಲಿಟ್ಟಿದ್ದ ಕಾಲನ್ನು ಎತ್ತಲು ವಾಹಿದ್ ಸಿದ್ಧನಿರಲಿಲ್ಲ. ಸರಕ್ಕನೆ ಇನ್ನೋವಾ ಹಿಂದೆ ಹಾಕಿ, ಆಟೋವನ್ನು ಒಂದು ಇಂಚು ದೂರದಿಂದ ಓವರ್ ಟೇಕ್ ಮಾಡಿದ. ಈಗ ಆತನ ಕಾರು 120 ಕಿಮಿ. ಸ್ಪೀಡ್ ನಲ್ಲಿ ಓಡುತ್ತಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ವಾಹಿದ್ ನ ಡ್ರೈವಿಂಗ್ ಬಗ್ಗೆ ಬಾಸ್ ಗೆ ಎಲ್ಲಿಲ್ಲದ ಆತ್ಮವಿಶ್ವಾಸ. ಹೀಗಾಗಿ ನಿಧಾನ ಹೋಗು ಎಂದು ಅವರು ವಾಹಿದ್ ಗೆ ಹೇಳಲಿಲ್ಲ. ಫ್ಲೈಟಿಗೆ ಬೇರೆ ತಡ ಆಗಿತ್ತಲ್ಲ….

ಹೆಬ್ಬಾಳ ದಾಟಿದ ಬಳಿಕ ಕಾರು ಗಾಳಿಯಲ್ಲಿ ಹಾರುವುದೊಂದೆ ಬಾಕಿಯಿತ್ತು. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಕ್ರಿಕೆಟ್ ಬಾಲೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಂತು. ಓಹ್…ಬಾಲ್ ಅಷ್ಟೇ ಅಲ್ವ ಎಂದುಕೊಂಡು ವಾಹಿದ್ ಬ್ರೇಕ್ ಹಾಕುವ ಗೋಜಿಗೇ ಹೋಗಲಿಲ್ಲ…ಎರಡು ಸೆಕೆಂಡ್ ಕಳೆದಿರಬೇಕಷ್ಟೇ….ಬಾಲ್ ಹಿಂದೆಯೇ ಪುಟ್ಟ ಹುಡುಗನೊಬ್ಬ ರಸ್ತೆ ಮಧ್ಯ ಓಡಿ ಬಂದು ಬಿಟ್ಟ…..

ಒಂದೂವರೆ ತಿಂಗಳು ನನ್ನ ದೇಹದಲ್ಲಿದ್ದ ಸ್ಟೆಂಟ್ ಹೀಗಿತ್ತು…

ಸಿಸ್ಟೋಸ್ಕೋಪಿ ಆದ ಬಳಿಕವೂ ಕೂಡ ಉಳಿದಿದ್ದ ಒಂದು ಕಿಡ್ನಿ ಸ್ಟೋನ್ ತೆಗೆಯಲು ನನ್ನ ದೇಹದೊಳಕ್ಕೆ ಈ ಸ್ಟೆಂಟ್ ಒಂದೂವರೆ ತಿಂಗಳು ಕೂರಿಸಲಾಗಿತ್ತು….

ಸ್ಟೆಂಟ್


ಶುಂಠಿಯನ್ನ ಗೊಬ್ಬರ ಗುಂಡಿಗೆ ಒಗದೀದಿವಿ….

ಪುಟ್ಟನನ್ನು ನೋಡಿಕೊಳ್ಳಲು ಅಮ್ಮ ಕೊಪ್ಪದಿಂದ ಬಂದಿದ್ದಾರೆ. ನಿರಂತರ ಮನೆಯ ಕೆಲಸದಲ್ಲಿಯೂ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ, ಮನೆಯ ಸುತ್ತಮುತ್ತ ತರಕಾರಿ ಬೆಳೆಯುತ್ತ, ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸುತ್ತ ಅಮ್ಮ ಇಂದಿಗೂ ಕ್ರಿಯಾಶೀಲವಾಗಿದ್ದಾರೆ. ಇಂತಿಪ್ಪ ಅಮ್ಮ ಬೆಂಗಳೂರಿನ ನನ್ನ ಮನೆಗೆ ಬಂದು ಬೆಂಗಳೂರಿನ ಕಾಸ್ಟ್ ಆಫ್ ಲಿವಿಂಗ್, ಪಿಜ್ಝಾದ ರೇಟ್, ಕೆಲಸದವಳ ಅರೆಬರೆ ಕೆಲಸ, ಇತ್ಯಾದಿ ನೋಡಿ ಹೌಹಾರಿದ್ದಾಳೆ.

ಮೊನ್ನೆ ತರಕಾರಿ ತರಲೆಂದು ಅಮ್ಮನೊಡನೆ ಹತ್ತಿರದ ಅಂಗಡಿಗೆ ಹೋಗಿದ್ದೆ. ಹೈಬ್ರಿಡ್ ತರಕಾರಿಗಳನ್ನಿಟ್ಟುಕೊಂಡಿದ್ದ ಆ ತರಕಾರಿ ಅಂಗಡಿಯನ್ನು ನೋಡಿ ಮೊದಲ ನೋಟದಲ್ಲೇ ಅಮ್ಮ ಮುಖ ಸಿಂಡರಿಸಿದಳು. ಆದರೆ ಬೇರೆ ಉಪಾಯ ಇರಲಿಲ್ಲವಾಗಿ ಅಲ್ಲಿಯೇ ತರಕಾರಿ ತೆಗೆದುಕೊಳ್ಳಬೇಕಾಯಿತು. ಕುಂಬಳಕಾಯಿ 20 ರೂಪಾಯಿ, ಹೀರೇಕಾಯಿ 25 ರೂಪಾಯಿ, ಬೀನ್ಸ್ 60 ರೂಪಾಯಿ, ನುಗ್ಗೆಕಾಯಿ ಮೂರಕ್ಕೆ ಎಂಟುರೂಪಾಯಿ ಎಂದು ರೇಟು ಕೇಳಿ ಇನ್ನಷ್ಟು ಗಲಿಬಿಲಿಗೊಂಡಳು, ತರಕಾರಿ ಕೊಳ್ಳಲು ಹಿಂದೇಟು ಹಾಕಿದಳು. ಹೀಗೆ ಮಾಡಿದರೆ ತರಕಾರಿ ಕೊಂಡಹಾಗೇ ಎಂದುಕೊಂಡು ನಾನು ಅಮ್ಮನಿಗೆ ಒತ್ತಾಯ ಮಾಡಿ ಎಲ್ಲ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಳ್ಳತೊಡಗಿದೆ. ಲಿಸ್ಟ್ ನಲ್ಲಿ ಶುಂಠಿ ಕೂಡ ಇತ್ತು. “ಶುಂಠಿ ಹೆಂಗೆ?” ಅಮ್ಮ ಅಂಗಡಿಯವನನ್ನು ಕೇಳಿದಳು.

“60 ರೂಪಾಯಿ ಕೆಜಿ” ಅಂದ ಅವ.

“ಏನು 60 ರೂಪಾಯಿನಾ? ಸುಘೋಷಾ ನೋಡ 60 ರೂಪಾಯಿ ಅಂತೆ”

“ಆಯ್ತಮಾ, 100 ಗ್ರಾಂ ತಗಳ್ಳಾ?” ಅಂದೆ.

“ಹುಂ..ತಗಾ..ಇನ್ನೇನು ಮಾಡದು. ನೋಡು, ಹೈಬ್ರೀಡ್ ಶುಂಠಿ ತಗಳ್ಳಿಕೆ ಮನಸ್ಸು ಬರಲ್ಲ ಮಾರಾಯಾ…..”ಅಂದಳು.

ಅಂಗಡಿಯವ “ಇಲ್ಲ… ಶುಂಠಿ ಚೆನ್ನಾಗಿದೆ” ಅಂದ.

“ಎಂಥ ಚೆನ್ನಾಗಿದೆ….ನಾವು ಸಾವಯವ ಕೃಷಿಯಲ್ಲಿ ಶುಂಠಿ ಬೆಳೀತಿವಿ. ನಿಮ್ಮ ಶುಂಠಿಗಿಂತ ಅರ್ಧದಷ್ಟಿದ್ರೂ ಎಷ್ಟು ಚೆನ್ನಾಗಿರತ್ತೆ ಗೊತ್ತಾ? ಆದ್ರೆನ್ ಮಾಡದು. ಮೊನ್ನೆ ಕೊಪ್ಪದಲ್ಲಿ ಶುಂಠಿ ಬೆಳದ್ವಿ. ಕಿಲೋಗೆ 3 ರೂಪಾಯಿ ಕೂಡ ಸಿಗಲಿಲ್ಲ. ಎಲ್ಲ ಶುಂಠಿ ಒಯ್ದು ಗೊಬ್ಬರ ಗುಂಡಿಗೆ ಒಗದ್ವಿ” ಎಂದಳು.

ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಅಂಗಡಿಯವ ಸುಮ್ಮನಿದ್ದ. ನಾನು ತರಕಾರಿ ಅಂಗಡಿಯವನಿಗೆ ದುಡ್ಡು ಕೊಡಲು ಪರ್ಸ್ ತೆಗೆದೆ.

ಉದಯವಾಣಿಯಲ್ಲಿ ನಾನು…ಕಿರುತೆರೆಯಲ್ಲಿ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ನನ್ನ ಸಂದರ್ಶನ ಉದಯವಾಣಿಯ ನಮ್ಮ ಬೆಂಗಳೂರು’ ದಲ್ಲಿ ಪ್ರಕಟವಾಗಿದೆ. ಹೇಮಾ ವೆಂಕಟ್ ಚಿಕ್ಕ-ಚೊಕ್ಕವಾಗಿ ನನ್ನ ಕುರಿತು ಬರೆದಿದ್ದಾರೆ. ಥ್ಯಾಂಕ್ಸ್ ಹೇಮಾ…..

ಕೃಪೆ - ಉದಯವಾಣಿ

ಹುಡುಗಿ ಬಂದಿದಾಳೆ…..

ಫೋಟೋ - ಇಂಟರ್ನೆಟ್

ನಮ್ಮ ದಿನನಿತ್ಯದ ವ್ಯವಹಾರದಲ್ಲಿ ನಮಗೆ ಉದ್ದೇಶವಿಲ್ಲದೆಯೇ ಹಲವು ಹಾಸ್ಯ ಪ್ರಸಂಗಗಳು ನಡೆದುಬಿಡುತ್ತವೆ. ಅದರಲ್ಲೂ ಪೋಲಿ ಪ್ರಸಂಗಗಳು ಜರುಗುವುದು, ರವಷ್ಟು ಹೆಚ್ಚೇ. ಅದರಲ್ಲೂ ಹಿರಿಯರಿಂದ ಗೊತ್ತಿಲ್ಲದೆಯೆ ಪೋಲಿ ಪ್ರಸಂಗಗಳೂ ಜರುಗಿದರಂತೂ ಏಳುಕೊಂಡಲವಾಡನೇ ಗತಿ…..

ನನ್ನ ಬಂಧುವೊಬ್ಬರ ಕಿರಾಣಿ ಅಂಗಡಿಯಲ್ಲಿ ನಡೆದಿದ್ದು. ಅವರ ಕಿರಾಣಿ ಅಂಗಡಿ, ಮನೆಯ ಒಂದು ಪಾರ್ಶ್ವದಲ್ಲೇ ಇದೆ. ಅಂಗಡಿಯನ್ನು ಸುಮಾರು 35 ವರ್ಷದ ಮಗ ಹಾಗೂ ಸುಮಾರು 70 ವರ್ಷದ ಅವರ ಅಪ್ಪ ನಡೆಸಿಕೊಂಡು ಹೋಗುತ್ತಾರೆ. ಅಂಗಡಿಯ ಸಂಪೂರ್ಣ ಜವಾಬ್ದಾರಿ ಮಗನದ್ದೇ. ಆದರೆ ಅಂಗಡಿಗೆ ಸಾಮಾನು ತರಬೇಕು, ಇನ್ನೊಂದು ಮತ್ತೊಂದು ಅಂತ ಕೆಲಸ ಬಿದ್ದಾಗಲೆಲ್ಲ, ತಂದೆಯೇ ಅಂಗಡಿ ನೋಡಿಕೊಳ್ಳುವುದು. ಮಗ ಪ್ರಾಮಾಣಿಕ ಹಾಗೂ ಶ್ರಮ ಜೀವಿ. ತಂದೆ ತೀರ ಮುಗ್ದರು. ಜಗತ್ತಿನ ಮುಗ್ಧರನ್ನೆಲ್ಲ ಸೇರಿಸಿದರೂ, ಇವರ ಮುಗ್ಧತೆ ಸ್ವಲ್ಪ ಹೆಚ್ಚೇ ಎನ್ನಿವಷ್ಟಿರುತ್ತದೆ.

ಅದೊಮ್ಮೆ ಅಂಗಡಿಗೆ ಸಾಮಾನು ತರಲೆಂದು ಹೊರಗೆ ಹೋಗಿದ್ದ ಮಗ ಆಗಷ್ಟೆ ಮನೆಗೆ ವಾಪಸ್ ಆಗಿದ್ದಾನೆ. ಮಧ್ಯಾಹ್ನವಾದ್ದರಿಂದ ಊಟ ಮಾಡಲು ಕೂತಿದ್ದಾನೆ. ಅಂಗಡಿಯನ್ನು ತಂದೆ ನೋಡಿಕೊಳ್ಳುತ್ತಿದ್ದಾರೆ. ಬಂದ ನಾಲ್ಕಾರು ಜನರಿಗೆ ಸಾಮಾನು ಕಟ್ಟಿಕೊಡುತ್ತಿದ್ದಾರೆ. ಅದೇ ಸಮಯಕ್ಕೆ ಏರು ಜವ್ವನೆಯೊಬ್ಬಳು ಅಂಗಡಿಗೆ ಬಂದಿದ್ದಾಳೆ. ತಂದೆ ಏನು ಬೇಕೆಂದು ಕೇಳಿದ್ದಕ್ಕೆ “ಕಸಬರಿಗೆ” ಎಂದಿದ್ದಾಳೆ. ತಂದೆ ಅಂಗಡಿಯಲ್ಲಿ ಕಸಬರಿಗೆ ಹುಡುಕಿದ್ದಾರೆ. ಅವರಿಗೆ ಸಿಕ್ಕಿಲ್ಲ. ನಮ್ಮ ಕಡೆ ಕಸಬರಿಗೆಗೆ, ಹಿಡಿ ಎನ್ನುತ್ತಾರೆ. ತಂದೆ ಅಂಗಡಿಯಿಂದಲೇ ಜೋರಾಗಿ ಮಗನಿಗೆ ಕೂಗಿದ್ದಾರೆ….”ಏ…ನೋಡಾ…ಹುಡುಗಿ ಬಂದಿದಾಳೆ, ಹಿಡಿಬೇಕಂತೆ….”

ಇತರ ಗಿರಾಕಿಗಳು ಘೊಳ್ ಎಂದು ನಕ್ಕರೆ, ಹುಡುಗಿ ನಾಚಿ ನೀರಾಗಿದ್ದಾಳೆ. ಮಗ ಸುಸ್ತೋ ಸುಸ್ತು….ತಂದೆಗೆ ಮಾತ್ರ ಪಾಪ ಏನೂ ಗೊತ್ತಾಗಿಲ್ಲ….