ಮುಕ್ತ ಮುಕ್ತದ ಬಗ್ಗೆ ಬಸ್ ನಲ್ಲಿ ಮಾತಾಡಿದ್ದು….

ಬಹಳ ದಿನಗಳ ನಂತರ ಮೊನ್ನೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಅವಕಾಶ ಬಂತು. ಸುಲಭವಾಗಿ ವಿಂಡೋ ಸೀಟ್ ಕೂಡ ಸಿಕ್ಕಿತು. ಸೀಟ್ ಅಲಂಕರಿಸುತ್ತಿದ್ದಂತೆಯೆ ನನ್ನ ಪಕ್ಕ ಬಂದು ಕುಳಿತ ಹುಡುಗನೊಬ್ಬ ನನ್ನೊಂದಿಗೆ ಮಾತಿಗೆ ತೊಡಗಿದ.

ಹುಡುಗ – ಸಾರ್, ನೀವು ಮುಕ್ತ ಮುಕ್ತ ದಲ್ಲಿ ಮಾಡ್ತೀರಲ್ವಾ? ದೇವಾನಂದಸ್ವಾಮಿ ಅಲ್ವ?

ನಾನು – ಹೌದು. ನಾನು ಸುಘೋಷ್ ಅಂತ. ತಮ್ಮ ಹೆಸರು?

ಹುಡುಗ – ಸಾರ್ ನನ್ನ ಹೆಸರು ………….ಅಂತ.

ನಾನು – ಏನ್ ಕೆಲಸ ಮಾಡ್ತೀರಿ?

ಹುಡುಗ – ನಾನು ………….ಕಾಲೇಜಲ್ಲಿ ……………..ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತೀದಿನಿ.

ನಾನು – ಓಹ್…

ಹುಡುಗ – ಸಾರ್, ನಾನು ಮೊದ್ಲಿಂದಾನೂ ಮುಕ್ತ ಮುಕ್ತ ನೋಡ್ತೀನಿ ಸರ್. ಸೀತಾರಾಮ್ ಅವರ ಎಲ್ಲ ಸೀರಿಯಲ್ ಗಳನ್ನೂ ಬಿಡದೆ ನೋಡ್ತಿನಿ.

ನಾನು – ಓಹ್ ಹೌದಾ….ತುಂಬ ಸಂತೋಷ.

ಹೀಗೆ ನಮ್ಮ ಮಾತು ಶೂಟಿಂಗು, ಆಕ್ಟಿಂಗು, ಕಥೆ, ಅಂತೆಲ್ಲ ಸುತ್ತಾಡಿ ಬರುವ ಹೊತ್ತಿಗೆ ಆ ಹುಡುಗ ಇಳಿಯುವ ಸ್ಟಾಪ್ ಬಂದಿತ್ತು. ಮುಂದಿನ ಮಾತುಕತೆ ಹೀಗಾಯಿತು.

ಹುಡುಗ – ಸಾರ್ ನಾನು ಇಳಿಯೋ ಸ್ಪಾಪ್ ಬಂತು. ಬರ್ತೀನಿ.

ನಾನು – ಆಯ್ತು.

ಹುಡುಗ – ಸಾರ್, ನಾನು ಸೀತಾರಾಮ್ ಅವರನ್ನ ಕೇಳ್ದೆ ಅಂತ ಹೇಳಿ ಸಾರ್…..

ನಾನು – !!!!!!!!!!!!!!!!!!!!!!!!!!!!!!!!