ಕುವೆಂಪು ಹುಟ್ಟೂರಲ್ಲಿ ರೆಸಾರ್ಟ್…

ವಿಕ

ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳಲ್ಲಿ ತಂದೆಯನ್ನು ಹುಡುಕಿಕೊಳ್ಳಬಹುದು…

ವಿಕ ಕೃಪೆ

ಮತ್ತೆ ಪತ್ರಕರ್ತರ ಮೇಲೆ ಹಲ್ಲೆ…

ವಿಜಯ ಕರ್ನಾಟಕ

ದಿಲ್ಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾದರೆ ರಾಷ್ಟ್ರಮಟ್ಟದ ಸುದ್ದಿಯಾಗತ್ತೆ. ಹಾಸನದಲ್ಲಿ ಆದರೆ…..:-(

ಹಾಗಾದರೆ ಆ ವೃತ್ತಿ ಮಾಡುವವರು ಯಾರು?

ಕಾರ್ಯ ಗೌರವ....

ಮೊನ್ನೆ ಯಾರೋ ಹೇಳುತ್ತಿದ್ದರು…..

“ಎಲ್ಲರೂ ರಾಜಕೀಯವನ್ನು ಬಯ್ಯುತ್ತಾರೆ. ರಾಜಕಾರಣ ಹೊಲಸು ಅನ್ನುತ್ತಾರೆ. ಆದರೆ ಅದರ ಕೊಳೆ ತೆಗೆಯಲು ಮಾತ್ರ ಯಾರೂ ಮುಂದೆ ಬರುವುದಿಲ್ಲ. ರಾಜಕಾರಣವನ್ನು ಕರಿಯರ್ ಮಾಡಿಕೊಳ್ಳಿ ಎಂದು ತಮ್ಮ ಮಕ್ಕಳಿಗೆ ಯಾರೂ ಹೇಳುವುದೇ ಇಲ್ಲ. ಭಗತ್ ಸಿಂಗ್ ಹುಟ್ಟಲಿ…ಆದರೆ ನಮ್ಮ ಮನೆಯಲ್ಲಿ ಬೇಡ, ಪಕ್ಕದ ಮನೆಯಲ್ಲಿ ಹುಟ್ಟಿಕೊಳ್ಳಲಿ ಎಂಬ ಧೋರಣೆ. ಅದಕ್ಕೇ ರಾಜಕಾರಣ ಕೆಟ್ಟು ಹೋಗಿದೆ”

ಇದಕ್ಕೆ ಮತ್ತೊಬ್ಬರೆಂದರು…

“ಬರೀ ರಾಜಕಾರಣ ಅಷ್ಟೇ ಏಕೆ ಸ್ವಾಮಿ? ಇಂದು ಒಳ್ಳೆಯ ರಾಜಕಾರಣಿ ಹೇಗೆ ಸಿಗುತ್ತಿಲ್ಲವೋ ಹಾಗೆಯೇ ಒಳ್ಳೆಯ ಪ್ಲಂಬರ್, ಉತ್ತಮ ಇಲೆಕ್ಟ್ರಿಷಿಯನ್, ಉತ್ತಮ ಬಡಗಿ, ಪರ್ಫೆಕ್ಟ್ ಪೇಂಟರ್, ಯಾರೂ ಸಿಗುತ್ತಿಲ್ಲ. ನಮ್ಮಲ್ಲಿ ಕಾರ್ಯಗೌರವ (ಡಿಗ್ನಿಟಿ ಆಫ್ ಲೇಬರ್) ಕಡಿಮೆಯಾಗಿರುವುದೇ ಇದಕ್ಕೆ ಕಾರಣ”

ಮತ್ತೊಬ್ಬರು ಹೀಗೆ ಪ್ರಶ್ನೆಗಳನ್ನು ಮುಂದಿಟ್ಟರು….

“1. ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಚಮ್ಮಾರನ ಮಗನೊಬ್ಬ 96% ತೆಗೆದನಂತೆ….ಆತನಿಗೆ ಮೆಡಿಕಲ್ ಕಲಿಯಬೇಕೆಂಬ ಇಚ್ಛೆಯಂತೆ. ಗುಡ್….ಆದರೆ…

ಈಗ ಚಮ್ಮಾರನ ಕೆಲಸ ಮಾಡುವವರಾರು?

2. ಈ ಬಾರಿ ಪಿಯುಸಿಯಲ್ಲಿ ಬಡಗಿಯೊಬ್ಬನ ಮಗ 92% ತೆಗೆದನಂತೆ….ಆತನಿಗೆ ಇಂಜಿನಿಯರಿಂಗ್ ಇಷ್ಟವಂತೆ….ಗುಡ್…ಆದರೆ

ಈಗ ಬಡಗಿಯ ಕೆಲಸ ಮಾಡುವವರಾರು?
3. ಬಡ ರೈತನ ಮಗ ಅಂತೂ ಇಂತೂ ಡೆಂಟಲ್ ಕೋರ್ಸ್ ಪೂರೈಸಿ ಡೆಂಟಿಸ್ಟ್ ಆಗಿದ್ದಾನಂತೆ. ವೆರಿಗುಡ್…ಆದರೆ

ಈಗ ನಮಗೆ ಅನ್ನ ನೀಡುವವರಾರು?”

ನನಗೆ ಈ ಪ್ರಶ್ನೆಗಳಿಗೆ ಪರಿಹಾರ ಏನೆಂದು ಗೊತ್ತಾಗಲಿಲ್ಲ. ಚಮ್ಮಾರನ ಮಗ ಮೆಡಿಕಲ್ ಕಲಿಯೋದು ಬೇಡ, ಚಮ್ಮಾರಿಕೆಯೇ ಮಾಡಲಿ, ಬಡಗಿಯ ಮಗ ಇಂಜಿನಿಯರ್ ಆಗೋದು ಬೇಡ, ಕಾರ್ಪೆಂಟರಿಯನ್ನೇ ಮುಂದುವರೆಸಿಕೊಂಡು ಹೋಗಲಿ, ರೈತನ ಮಗ ರೈತನೇ ಆಗಲಿ ಎಂದು ಹೇಳಿದರೆ ಅದಕ್ಕಿಂತ ಕ್ರೂರತನ ಬೇರೊಂದು ಇರಲ್ಲಿಕ್ಕಿಲ್ಲ….ಹಾಗಾದರೆ ಒಳ್ಳೆಯ ಪೇಂಟರ್, ಒಳ್ಳೆಯ ಚಮ್ಮಾರ, ಒಳ್ಳೆಯ ರೈತ ಹುಟ್ಟುವುದಾದರೂ ಹೇಗೆ? ಪರಿಹಾರ ಏನು?