ನವರಸಾಭಿನಯ

ನವರಸಾಭಿನಯ

“ನವರಸಾಭಿನಯ” ಅಭಿನಯ ಕಾರ್ಯಗಾರ ಹಾಗೂ ತರಬೇತಿ ಶಿಬಿರ

ವಟಿ ಕುಟೀರ ಪ್ರಸ್ತುತ ಪಡಿಸುವ ಒಂದು ತಿಂಗಳ ಅಭಿನಯ ಶಿಬಿರವನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 2 ವರೆಗೆ ಬಸವನ ಗುಡಿಯ ಚಕ್ರವರ್ತಿ ಪ್ರತಿಷ್ಠಾನದಲ್ಲಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ನುರಿತ ರಂಗ ಶಿಕ್ಷಕರಿಂದ ಅಭಿನಯದ ವಿವಿಧ ಪ್ರಕಾರಗಳನ್ನು ಕಲಿಸಿಕೊಡಲಾಗುವುದು. ರಂಗಭೂಮಿ, ಕಿರುತೆರೆ, ಸಿನೆಮಾದಲ್ಲಿನ ನಟನೆಯ ಪರಿಚಯ ಈ ಕಾರ್ಯಗಾರದ ಮುಖ್ಯ ಉದ್ದೇಶ ಇದರಲ್ಲಿ ಆಂಗಿಕ ಅಭಿನಯ, ವಾಚಿಕ, ಪ್ರಸಾಧನ ಕಲೆ, ಬೆಳಕು, ವಿನ್ಯಾಸ, ಮುಂತಾದ ನಟನೆಗೆ ಸಂಭಂದಪಟ್ಟ ವಿಷಯಗಳನ್ನೂ ತಿಳಿಸಲಾಗುವುದು.

ಶುಲ್ಕ : ರೂ.3000
ದಿನಾಂಕ : ಸೆಪ್ಟೆಂಬರ್ 2 -2010 ರಿಂದ ಅಕ್ಟೋಬರ್ 2-2010 ವರೆಗೆ
ಸಮಯ: ಸೋಮವಾರದಿಂದ –ಶುಕ್ರವಾರದ ವರೆಗೆ ಸಂಜೆ 7 ರಿಂದ 9ರ ವರೆಗೆ
ಸ್ಥಳ : ಚಕ್ರವರ್ತಿ ಪ್ರತಿಷ್ಠಾನ, ಬಸವನಗುಡಿ, ಬೆಂಗಳೂರು.

ವಿಶೇಷ ಸೂಚನೆ : ಮೊದಲು ಬಂದವರಿಗೆ ಆದ್ಯತೆ .

ನಟನೆಯಲ್ಲಿ ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ
ಶ್ರೀ ಕಿರಣ್ ವಟಿ – ಕಾರ್ಯಗಾರದ ಆಯೋಜಕರು
ಮೊಬೈಲ್ ಸಂಖ್ಯೆ : 9880695659