ಅಯೋಧ್ಯೆ ತೀರ್ಪು ಏನೇ ಬರಲಿ – ಬಸ್ಸಿಗೆ ಕಲ್ಲು ಬೀಳದಿರಲಿ

ಸಹನಾ ವವತು, ಸಹನೌಭುನಕ್ತು...

ಅಯೋಧ್ಯೆ ತೀರ್ಪು ಏನೇ ಬರಲಿ

ಬಸ್ಸಿಗೆ ಕಲ್ಲು ಬೀಳದಿರಲಿ

ಮನಸ್ಸುಗಳು ಒಡೆಯದಿರಲಿ

ದ್ವೇಷ ಹೊಗೆಯಾಡದಿರಲಿ

ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳದಿರಲಿ

ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳಾಗದಿರಲಿ

ಹಾಳಾದರೆ, ದುಷ್ಕರ್ಮಿಗಳಿಗೆ ಪೋಲಿಸರು ಏರೋಪ್ಲೇಸ್ ಹತ್ತಿಸಲಿ

ಏನಾದರೂ ಸರಿಯೆ, ಮೊದಲು ಮಾನವನಾಗು ಎಂಬ ಘೋಷ

ಸದಾ ಕೇಳುತ್ತಿರಲಿ.

ಅಯೋಧ್ಯೆ ತೀರ್ಪು – ಮತ ಚಲಾಯಿಸಿ

ಅಯೋಧ್ಯೆ ವಿವಾದ ಕುರಿತಂತೆ ನಿಮ್ಮ ಮತ ಚಲಾಯಿಸಿ. ಅಭಿಪ್ರಾಯ ತಿಳಿಸಿ.

ಈಶ್ವರ್ - ಅಲ್ಲಾ ತೇರೊ ನಾಮ್

ಇಂದಿನ ರೋಮಿಯೋ ಜೂಲಿಯೆಟ್ ನಾಟಕದ ಕೆಲವು ದೃಶ್ಯಗಳು

---------------------------------
----------------------------------------
-----------------------------------
----------------------------------------
-----------------------------------------
----------------------------------------
--------------------------------

ಜಗತ್ತಿನ ಅತ್ಯಂತ ಚಿಕ್ಕ ಕಥೆ

ಯೆಂಗಿದೆ?

SHE SMILED.

HE DIED.

(ಕಥೆ ಕಳಿಸಿಕೊಟ್ಟವರು ಜಗಳೂರು ಸೀತಾರಾಮ್)

ಪತ್ನಿಗೆ ಬಹುವಚನ ಬೇಕೆ?

ಈ ವಾರದ ‘ಸುಧಾ’ದಲ್ಲಿ ನನ್ನ “ಮುಕ್ತ ಮುಕ್ತ”ದ ಪಾತ್ರ (ದೇವಾನಂದಸ್ವಾಮಿ) ಹೆಂಡತಿಯನ್ನು ಬಹುವಚನದಿಂದ ಏಕೆ ಕರೆಯುತ್ತದೆ ಎಂದು ಪ್ರಶ್ನಿಸಲಾಗಿದೆ.

ಬಾರೇ, ಹೋಗೆ ಅನ್ನಲು ನಾಚಿಕೆಯಾಗುತ್ತಪ್ಪ...
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಟೈಮ್ಸ್ ಆಫ್ ಇಂಡಿಯಾ ಮಾತಾಡಿದ್ದಕ್ಕೆ ವಿಕಾಸ್ ಹೇಳುತ್ತಾರೆ…

ಇಷ್ಟೇ ಇರಾದು...

ಫೋಕ್ಸ್ ವ್ಯಾಗನ್ ತನ್ನ ವಿನೂತನ adಅನ್ನು ಟೈಮ್ಸ್ ಆಫ್ ಇಂಡಿಯಾದ ಮೂಲಕ ನಿನ್ನೆ ಹೊರತಂದಿತ್ತು. ನಾನೇನೋ ಅದನ್ನು ಬೆಸ್ಟ್ ಆಡ್ ಕನ್ಸೆಪ್ಟ್ ಅಂದು ಬಿಟ್ಟೆ. ಆದರೆ ವಿಕಾಸ್ ಹೆಗಡೆ, “ಅದರಲ್ಲಿರುವುದು ಪ್ಲಾಸ್ಟಿಕ್ + ಎಲೆಕ್ಟ್ರಾನಿಕ್ ವಸ್ತುಗಳು. ಅರ್ಧ ಗಂಟೆ ಕೇಳಿ ಎಲ್ಲರೂ ಬಿಸಾಕುತ್ತಾರೆ.  ಅದರಿಂದ ಎಷ್ಟು ಕಸ ಆಗುತ್ತೆ ಅಂತ ಗೊತ್ತಿದೆಯಲ್ಲವೇ? . ಅಗತ್ಯವಿರಲಿಲ್ಲ ಇಂತಹ ಇನ್ನೋವೇಟಿವ್ ಐಡಿಯಾಗಳು” ಎಂದಿದ್ದಾರೆ. ಒಂದು ದೃಷ್ಟಿಯಿಂದ ಇದು ಹೌದು ಕೂಡ. ನಿಮಗೇನೆನ್ನಿಸುತ್ತದೆ? ಅಭಿಪ್ರಾಯಗಳಿಗೆ ಸ್ವಾಗತ.

ಇಂದಿನ ಟೈಮ್ಸ್ ಆಫ್ ಇಂಡಿಯಾ ಮಾತಾಡಿತು

ಬೆಳಿಗ್ಗೆ ಎದ್ದು ಟೈಮ್ಸ್ ಆಫ್ ಇಂಡಿಯಾ ಪೇಪರ್ ಮುಟ್ಟಿದವನೇ ಬೆಚ್ಚಿಬಿದ್ದೆ. ಪೇಪರ್ ಒಳಗಡೆಯಿಂದ ಯಾರೋ ಕಿಲಿ ಕಿಲಿ ಮಾತನಾಡುತ್ತಿದ್ದರು. ಇದೇನಪ್ಪ ಇದು ಎಂದು ತೆಗೆದುನೋಡಿದರೆ, ಪೇಪರ್ ನ ಕೊನೆಯ ಪುಟದಲ್ಲಿ ಕಪ್ಪುಬಣ್ಣದ ಪುಟ್ಟ ಪೆಟ್ಟಿಗೆಥರದ್ದೇನೋ ಕಾಣಿಸಿತು. ಪೆಟ್ಟಿಯೊಳಗಿಂದ ಸೌಂಡು. ನೋಡಿದರೆ, ಅದು ಫೋಕ್ಸ್ ವ್ಯಾಗನ್ Adಉ. ಫೋಕ್ಸ್ ವ್ಯಾಗನ್ ಹೊಸ ವೆಂಟೋ ಮಾಡೆಲ್ ಎಷ್ಟು ಚೆನ್ನಾಗಿದೆಯೆಂದರೆ ಅದನ್ನು ಕಾರ್ಖಾನೆಯಿಂದ ಕಳಿಸಿಕೊಡುವಾಗ ನಮ್ಮ ಇಂಜಿನಿಯರ್ ಗಳ ಹೃದಯ ಒಡೆದು ಹೋಗುತ್ತದೆ ಎಂಬ ಮಾತು ಆ ಕಪ್ಪು ಪೆಟ್ಟಿಗೆಯಿಂದ ಹೊರಡುತ್ತಿತ್ತು. ಬಿಚ್ಚಿ ನೋಡಿದರೆ ಅದರಲ್ಲಿ ಒಂದು ಸರ್ಕಿಟ್, ಎರಟು ಪುಟ್ಟು ಬ್ಯಾಟರಿ ಹಾಗೂ ಒಂದು ಚಿಕ್ಕ ಸ್ಪೀಕರ್ ಇದೆ. ಪೆಟ್ಟಿಗೆಯನ್ನು ನೀಟಾಗಿ ಚಿತ್ರದಲ್ಲಿ ಮಾರ್ಕ್ ಮಾಡಿರುವ ಜಾಗದಲ್ಲಿ ಅಂಟಿಸಲಾಗಿದೆ. ಜಾಹೀರಾತು ಜಗತ್ತಿನಲ್ಲಿ ಇದೊಂದು ಬೆಸ್ಟ್ ಕನ್ಸೆಪ್ಟ್ ಅನ್ನಿಸಿತು. (ಬೇರೆ ಪೇಪರ್ ಗಳಲ್ಲಿ ಕೂಡ ಈ  ad ಬಂದಿದೆಯೆ ಗೊತ್ತಿಲ್ಲ ಹಾಗೂ ಈ ಹಿಂದೆ ಈ ರಿತಿಯ ತಂತ್ರವನ್ನು ಬಳಸಲಾಗಿದೆಯೆ ಎಂಬುದರ ಬಗ್ಗೆಯೂ ಐಡಿಯಾ ಇಲ್ಲ).

ಆಹಾ...ಅದೇನಪ್ಪ Adಉ
ಇಷ್ಟೇ ಇರಾದು...

1835 ರಲ್ಲಿ ಮೆಕಾಲೆ ಭಾರತದ ಬಗ್ಗೆ ಹೇಳಿದ್ದು

ಕೃಪೆ - ಇಂಟರ್ನೆಟ್ಟಣ್ಣ

ಉದಯವಾಣಿಯಲ್ಲಿ ಹೆಂಗಿದಿಯಾ ‘ಪಾ’?

ಕೃಪೆ - ಉದಯವಾಣಿ

ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿರುವ ನನ್ನ ಲೇಖನ. (ಮಸುಕಾದ ಅಕ್ಷರಗಳಿಗೆ ವಿಷಾದವಿದೆ)

ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ – ಹೀಗೊಂದು ಪ್ರತಿಕ್ರಿಯೆ

ಆನ್..ಆಫ್?
ಪ್ರಿಯರೇ,
೧. ಆಸಿಡ್ ಬ್ಯಾಟರಿಗಳನ್ನು ಹೆಚ್ಚು ಉಪಯೋಗಿಸಿದಷ್ಟು ಅದರ ಜೀವಿತಾವಧಿ ಹೆಚ್ಚು ಮತ್ತು ಇದು ರಾಷ್ಟ್ರೀಯ ನಷ್ಟವಾಗಲು ಸಾಧ್ಯವಿಲ್ಲ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೨. ಲೈಟನ್ನು ಕಂಡು ಕೆಲ ಜನರಿಗೆ ಕಿರಿಕಿರಿಯಾದರೆ ಅದು ಅವರ ಕರ್ಮ, ಜನರಿಗೆ ಇಂಥಹ ಸಮಸ್ಯೆಗಳು ನೂರಾರಿರುತ್ತವೆ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೩. ಆದರೂ, ಯಾವುದೋ ಹಳೆಯ ಸುಧಾ ಪತ್ರಿಕೆಯಲ್ಲಿ ‘ನಿಮಗಿದು ಹೊಳೆದಿತ್ತೇ?’ ಎಂಬ ಅಂಕಣದಲ್ಲಿ “ಹಗಲು ಹೊತ್ತು ವಾಹನದಲ್ಲಿ ದೀಪ ಹಚ್ಚಿ ಹೋಗುವುದರಿಂದ ಅಪಘಾತಗಳನ್ನು ತಪ್ಪಿಸಬಹುದು” ಎಂದು ಓದಿ ಅರ್ಧ ಗಂಟೆಗೂ ಕಾಲ ಹೆಚ್ಚು ನಕ್ಕಿದ್ದೆ.
೪. ದೀಪದ ಹೊರತು ಉಳಿದುದರ ಬಗ್ಗೆ ನಿಮ್ಮ ಕಳಕಳಿ ಸೂಕ್ತವಾಗಿದೆ.
ಧನ್ಯವಾದಗಳು

ರಿಸ್ಪೆಕ್ಟ್ ಎವ್ರಿವನ್

ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ…

ಆಫ್ ಮಾಡಿ ಪ್ಲೀಸ್...

ಸೂರ್ಯ ಮನೆ ಸೇರುವ ಮೊದಲೇ ಬೆಂಗಳೂರಿನಲ್ಲಿ ಯಾರೂ ಮನೆ ಸೇರುವುದಿಲ್ಲ. ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಹೋಗುವವರು ರಾತ್ರಿ ಮನೆಗೆ ಹೋದ ಬಳಿಕ ಹೆಡ್ ಲೈಟ್ ಆಫ್ ಮಾಡದೇ ಹಾಗೆಯೇ ಗಾಡಿ ಆಫ್ ಮಾಡಿ ಪಾರ್ಕ್ ಮಾಡಿಬಿಡುತ್ತಾರೆ. ಮಾರನೇ ದಿನ ಮತ್ತೆ ಕೆಲಸಕ್ಕೆ ಹೊರಡುವಾಗ ಗಾಡಿಯ ಹೆಡ್ ಲೈಟ್ ಆನ್ ಆಗಿಯೇ ಇರುತ್ತದೆ. ಇದು ಸವಾರರಿಗೆ ಸಾಮಾನ್ಯವಾಗಿ ಗೊತ್ತಾಗುವುದಿಲ್ಲ. ಆದರೆ ಗಾಡಿಯ ಲೈಟ್ ಆನ್ ಇದೆ ಎಂದು ಮುಂದಿನಿಂದ ಬರುತ್ತಿರುವ ಯಾರೊಬ್ಬರೂ ಹೇಳುವುದೇ ಇಲ್ಲ. ಮರ್ಯಾದೆಗೆ ಕಡಿಮೆ ಎಂದು ಭಾವಿಸುತ್ತಾರೋ, ಅಥವಾ ಬೇರೊಬ್ಬರ ಸುದ್ದಿ ತಮಗೇಕೆ ಎಂದು ಭಾವಿಸುತ್ತಾರೋ ಗೊತ್ತಿಲ್ಲ.

ಬೆಂಗಳೂರಿನಲ್ಲಿ ನಾನು ಎಷ್ಟೋ ಬಾರಿ ಹೀಗೆಯೇ ಲೈಟ್ ಆನ್ ಮಾಡಿಕೊಂಡು ಹೋಗುವಾಗ, ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಹೇಳಿದವರು ಬಹಳಷ್ಟು ಕಡಿಮೆ.

ಆದರೆ ಅದೇ ಬೆಳಗಾವಿಯಲ್ಲಿ ಅಥವಾ ಕೊಪ್ಪದಲ್ಲಿ ಹೀಗೆ ಬೈಕ್ ಲೈಟ್ ಆನ್ ಮಾಡಿಕೊಂಡು ಓಡಿಸಿದರೆ, ಮುಂದಿನಿಂದ ಬರುವ ಪ್ರತಿ ಎರಡನೇ ಅಥವಾ ಮೂರನೇ ವ್ಯಕ್ತಿ, ಕೈಯಿಂದ ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಎಂದು ಹೇಳುತ್ತಾನೆ.

ಇದು ಸಣ್ಣ ವಿಷಯವಾಗಿ ಕಂಡರೂ, ಬೈಕ್ ನ ಬ್ಯಾಟರಿ ಲೈಫ್ ಮೇಲೆ ಪರಿಣಾಮವಾಗುವುದರ ಜೊತೆಗೆ, ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಹೋಗುವುದು ರಾಷ್ಟ್ರೀಯ ನಷ್ಟವಲ್ಲವೆ? ನಾನು ಬೆಂಗಳೂರಿನಲ್ಲಿ ಹೆಡ್ ಲೈಟ್ ಆನ್ ಇರುವುದನ್ನು ಕಂಡಾಗಲೆಲ್ಲ ಕೈಯಿಂದ ಸಿಗ್ನಲ್ ಮಾಡಿ ಎಚ್ಚರಿಸಿದ್ದೇನೆ. ಹೀಗೆ ಮಾಡಿದ್ದಕ್ಕೆ ಕೆಲವೊಮ್ಮೆ ಸವಾರರು ನನ್ನನ್ನೇ ದುರುಗುಟ್ಟಿಕೊಂಡು ನೋಡಿದ್ದಿದೆ. (ನನ್ನ ಬೈಕು, ನನ್ನ ಲೈಟು –  ಇವನಪ್ಪನ ಗಂಟೇನು ಹೋಗುತ್ತದೆ ಎಂಬ ಉಡಾಫೆಯೆ?)

ಏನೇ ಆದರೂ, ಹೆಡ್ ಲೈಟ್ ಆನ್ ಇದ್ದರೆ, ಕಾರಿನ ಡೋರ್ ಸರಿಯಾಗಿ ಕೂತಿರದಿದ್ದರೆ, ಹಿಂದುಗಡೆ ಕುಳಿತ ಮಹಿಳೆಯ ವೇಲ್ ಚಕ್ರಕ್ಕೆ ಸಿಗುವ ಸಂಭವವಿದ್ದರೆ, ನಾನಂತೂ ಸವಾರರನ್ನು ಎಚ್ಚರಿಸುತ್ತಿದ್ದೇನೆ. ಮರ್ಯಾದೆಗಿಂತ ಪ್ರಾಣ ದೊಡ್ಡದಲ್ವೆ?

Why just one sperm win?

Fight....

Q : Even if a million sperms fight, why just one sperm win to reach the egg?

A : It’s again the male ego. Nobody asks for direction!!

‘ಅಕ್ಕ’ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಗ್ರಹ – ದೀಪ ತೋರಿದೆಡೆಗೆ

ದೀಪ ತೋರಿದೆಡೆಗೆ
ದೀಪ ತೋರಿದೆಡೆಗೆ

ಬೆಂಗಳೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ನಿಗದಿಪಡಿಸಲಾಗಿರುವ ಕೆರೆಗಳು ಹಾಗೂ ತಾತ್ಕಾಲಿಕ ಸಂಚಾರಿ ಘಟಕಗಳ ವಿವರ

ಕೃಪೆ - ವಿಕ

ನಿರ್ವಿಘ್ನಂ ಕುರುಮೇ ದೇವ, ಸರ್ವ ಕಾರ್ಯೇಷು ಸರ್ವಾದಾ

ವಕ್ರತುಂಡ ಮಹಾಕಾಯ ಸುರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವಾದಾ

ಮಕ್ಕಳಿಗೆ ಸ್ವಲ್ಪಾನಾದ್ರೂ ಇನ್ನೋಸೆನ್ಸ್ ಬೇಕು ಕಣ್ರೀ…

ಚಿನ್ನದಂಬಾರಿಯಲಿ ನಿನ್ನ ಕಳುಹುವರಂತೆ...

ಮೊನ್ನೆ ಪುಣಾಕ್ಕೆ ಹೋದಾಗ ನನ್ನ ಮಿತ್ರನೊಬ್ಬ ಹೇಳಿದ ಘಟನೆಯಿದು.

ಆತನ ಪರಿಚಯದ ಓರ್ವ ಸಾಹಿತಿಯಿದ್ದಾರಂತೆ. ಸಾಹಿತ್ಯದ ಜೊತೆಗೆ ಚಿಕ್ಕಪುಟ್ಟ ಮ್ಯಾಜಿಕ್ ಟ್ರಿಕ್ ಮಾಡುವುದು ಅವರ ಹವ್ಯಾಸ. ಸಾಹಿತ್ಯ ಎಲ್ಲರಿಗೆ ಮೀಸಲಾದರೆ, ಮ್ಯಾಜಿಕ್ ಟ್ರಿಕ್ ಕೇವಲ ಮಕ್ಕಳಿಗಷ್ಟೇ ಮೀಸಲು. ಮದುವೆ, ಶುಭಕಾರ್ಯ, ಗೆಟ್ ಟು ಗೆದರ್ – ಹೀಗೆ ಯಾವುದೇ ಸಂದರ್ಭದಲ್ಲಿ ಮಕ್ಕಳು ಕಂಡರೂ, ಅವರನ್ನು ಒಂದೆಡೆ ಸೇರಿಸಿ ಮ್ಯಾಜಿಕ್ ತೋರಿಸಿ, ಆ ಮಕ್ಕಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು ಇವರಿಗೆ ಅಚ್ಚುಮೆಚ್ಚು. ಮಕ್ಕಳನ್ನು ರಂಜಿಸಿದ ಸಮಾಧಾನ.

ಕೆಲ ದಿನಗಳ ಹಿಂದೆ ಅವರು ಹೀಗೆ ಯಾವುದೋ ಗೆಟ್ ಟು ಗೆದರ್ ನಲ್ಲಿ ಮಕ್ಕಳನ್ನು ಸೇರಿಸಿ ಮ್ಯಾಜಿಕ್ ತೋರಿಸುತ್ತದ್ದರು. ಆದರೆ ಮ್ಯಾಜಿಕ್ ಮುಗಿದ ಬಳಿಕ ಮಕ್ಕಳು ಸಂತೋಷದಿಂದ ಚಪ್ಪಾಳೆ ಹೊಡೆಯುವುದನ್ನು ಬಿಟ್ಟು, ಈ ಆಸಾಮಿ ಆ ಟ್ರಿಕ್ಕನ್ನು ಹೇಗೆ ಮಾಡಿದರು ಎಂದು ವಿಶ್ಲೇಷಣೆ ಮಾಡಲಾರಂಭಿಸಿದರು. ಇವರನ್ನು ಕ್ರಾಸ್ ಕ್ವಶ್ಚನ್ ಮಾಡಿದರು. ಇದು ಒಂದೆರಡಕ್ಕೆ ನಿಲ್ಲಲಿಲ್ಲ. ಪ್ರತಿಯೊಂದು ಮ್ಯಾಜಿಕ್ ಟ್ರಿಕ್ ಪ್ರದರ್ಶಿತವಾದ ಬಳಿಕವೂ ಮಕ್ಕಳ ಈ ಕ್ರಾಸ್ ಕ್ವಶ್ಚನಿಂಗ್, ಅನಲೈಸಿಂಗ್ ನಡೆಯಿತಂತೆ. ಕೊನೆಗೆ ಆ ಮಿತ್ರರು ನೊಂದು, ನನ್ನ ಸ್ನೇಹಿತನ ಬಳಿ ಹೇಳಿಕೊಂಡರಂತೆ, “ಯಾಕೆ ಇಂದಿನ ಮಕ್ಕಳು ಇಷ್ಟು ಯಾಂತ್ರಿಕರಾಗಿದ್ದಾರೆ? ಯಾವುದೋ ಒಂದು ರಂಜನೆಯನ್ನು ರಂಜನೆಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಂದನ್ನೂ ಟೆಕ್ನಾಲಾಜಿಯ ಕನ್ನಡಕದದಿಂದ ನೋಡಿ, ಚಿಕ್ಕ ವಯಸ್ಸಿನಲ್ಲಿಯೇ ಟೆಕ್ಕಿಗಳಾಗುತ್ತಿದ್ದಾರೆ? ಕೊಂಚ ದೊಡ್ಡವರು ಹೀಗೆ ಮಾಡಿದರೆ ಅಡ್ಡಿಯಿಲ್ಲ. ಆದರೆ ಇನ್ನೂ ತಮ್ಮ ಮುಗ್ದತೆಯಿಂದ ಅಚ್ಛಾ ಮಾಡಿಸಿಕೊಳ್ಳಬೇಕಾದ ಮಕ್ಕಳು, ತಮ್ಮ ಟೆಕ್ ಸ್ಯಾವಿ ಸ್ವಭಾವದಿಂದ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದರಲ್ಲ?” ಅಂತ.

ಇದು ನನಗೂ ಎಲ್ಲೋ ನಿಜವೆನಿಸಿತು. ಮುಗ್ಧ ಮಕ್ಕಳು ಕನಿಷ್ಠ ಒಂದು ಹಂತದವರೆಗೆ ಮುಗ್ಧರಾಗಿದ್ದರೇ ಛಲೋ ಅಲ್ವ?

ಗೋಹತ್ಯೆ ನಿಷೇಧ ಒಳ್ಳೆಯದೇ – ಆದರೆ ಮುಂದೇನು?

ಗೋಹತ್ಯೆ ನಿಷೇಧ ಕುರಿತಂತೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ www.samvada.org ಯಲ್ಲಿ ತಿಪಟೂರಿನ ಕೆ. ಟಿ. ಬಸವರಾಜ್ ಎಂಬ ಕೃಷಿಕರು ಬರೆದ ಲೇಖನ ನನ್ನ ಗಮನ ಸೆಳೆಯಿತು. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ.

(ಕೃಪೆ – ಸಂವಾದ.org)

ಗೋಮಾತೆ...

ಗೋಹತ್ಯೆ ನಿಷೇಧ ಒಳ್ಳೆಯದೇ – ಆದರೆ ಮುಂದೇನು?

ಹಾಲು ಮಾರಲೆಂದೇ ದನ ಸಾಕುವವರು ಹೆಚ್ಚಿನವರು ವಿದೇಶೀ ಹಸುಗಳನ್ನು ಸಾಕುತ್ತಾರೆ. ಅವುಗಳ ಗಂಡು ಕರುಗಳು ಉಳುಮೆಗೂ ಉಪಯೋಗವಿಲ್ಲ. ಅವುಗಳನ್ನು ಕಸಾಯಿ ಖಾನೆಗೆ ಕೊಡುವುದು ಈಗ ಹೆಚ್ಚಿನೆಡೆ ಚಾಲ್ತಿಯಲ್ಲಿದೆ. ಗೋಹತ್ಯೆ ನಿಷೇಧದ ಬಳಿಕ ಅವುಗಳಿಗೇನು ಗತಿ? ಮುದಿ ಹಸು, ಎಮ್ಮೆ, ಕೋಣಗಳ ಕತೆಯೇನು? ಗೋಶಾಲೆ ಮಾಡಿದರೂ, ಎಷ್ಟು ಗೋಶಾಲೆ ಮಾಡಬೇಕಾಗಬಹುದು? ಅದು ಮಾಡಿ ಮುಗಿಯುವ ಕೆಲಸವೇ? ಕರ್ನಾಟಕದಲ್ಲಿರುವ ಸುಮಾರು ೧೫,೦೦೦ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸುಮಾರು ೧೦೦ ದನಗಳು ರೈತರಿಗೆ ಉಪಯೋಗವಿಲ್ಲವೆಂದಿಟ್ಟುಕೊಂಡಲ್ಲಿ ಏನಿಲ್ಲವೆಂದರೂ ೧೫ ಲಕ್ಷ ದನಗಳು ಗೋಶಾಲೆಗೆ ಬರುತ್ತವೆ. ಒಂದು ದನ ಸಾಕಲು ತಿಂಗಳಿಗೆ ಬರೀ ೫೦೦ ರೂ. ಖರ್ಚಾಗುತ್ತದೆ ಎಂದಿಟ್ಟುಕೊಂಡರೂ ಪ್ರತೀ ವರ್ಷವೂ ಸರ್ಕಾರ ಗೋಶಾಲೆಗಳ ನಿರ್ವಹಣೆಗೆ ೯೦೦ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಇದು ಸಾಧ್ಯವೇ?

ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದು ಸಂತೋಷ. ನಾವು ಮೊದಲಿನಿಂದಲೂ ತಾಯಿಯೆಂದು ಪೂಜಿಸಿಕೊಂಡು ಬರುತ್ತಿರುವ ಗೋಮಾತೆಯ ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಗೋಹತ್ಯೆ ನಿಷೇಧ ಕಾನೂನು ಮಾಡಿದರೆ ಮುಗಿಯಿತು ಗೋರಕ್ಷಣೆ ಆದಂತೆ ಎನ್ನುವ ಯೋಚನೆಯೇ ಬಹಳ ಮಂದಿಯ ತಲೆಯಲ್ಲಿರುವಂತೆ ಕಾಣುತ್ತಿದೆ. ಇಂದು ಪತ್ರಿಕೆಗಳಲ್ಲಿ ಗೋರಕ್ಷಣೆಯ ಬಗ್ಗೆ ಬರೆಯುವ ಕೈಗಳೂ, ಸಮಾವೇಶಗಳಲ್ಲಿ ಗೋಹತ್ಯೆ ನಿಷೇಧ ವಿರೋಧಿಗಳನ್ನು ಧಿಕ್ಕರಿಸುವ ಕೈಗಳೂ ಪ್ಯಾಕೆಟ್ ಹಾಲು ಕುಡಿಯುವ ಕೈಗಳೇ ಹೊರತು ಹಾಲು ಕರೆಯುವ ಕೈಗಳಲ್ಲ! ಗೋರಕ್ಷಣೆ ಮಾಡಬೇಕಾದವರು ನಮ್ಮಂತಹ ರೈತರು. ಪೇಟೆಯಲ್ಲಿರುವ ಉದ್ಯೋಗಸ್ಥ ಮಂದಿ ಗೋಸಾಕಣೆ ಮಾಡುವುದೂ ಸಾಧ್ಯವಿಲ್ಲ; ಅವರಿಗೆ ಹಾಗೆ ಮಾಡಿ ಎಂದು ಹೇಳುವುದು ವ್ಯಾವಹಾರಿಕವಾಗಿ ಸಾಧುವೂ ಅಲ್ಲ.
ಗೋರಕ್ಷಣೆ ಮಾಡಲು ಹಳ್ಳಿಯ ರೈತರಾದ ನಮಗಿರುವ ಕಷ್ಟಗಳೇನು ಎನ್ನುವ ಬಗ್ಗೆ ಇದುವರೆಗೂ ಯಾರೂ ಎಲ್ಲಿಯೂ ನಮ್ಮಂತಹವರನ್ನು ಕೇಳಿದ್ದು, ಆ ಕಷ್ಟಗಳನ್ನು ಪರಿಹರಿಸುವ  ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಲ್ಲ, ಓದಿಲ್ಲ. ಎಲ್ಲರಿಗೂ ಗೋಸಂರಕ್ಷಣೆ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯೇನೋ ಇದೆ. ಆದರೆ, ಹೇಗೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿದ್ದ ಹಾಗಿಲ್ಲ! ಹಾಗಾಗಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆಯೇ ಹೊರತು, ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಾವಯವ ಕೃಷಿಕರ ಸಮಾವೇಶದಲ್ಲಿಯೂ ರೈತರ ಮಕ್ಕಳು ಕಾಲೇಜು ಓದಲು ಅನುಕೂಲವಾಗುವಂತೆ ಹಳ್ಳಿಗಳಲ್ಲಿಯೂ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದರೇ ಹೊರತು ಹಳ್ಳಿಯ ರೈತರ ಮಕ್ಕಳು ಕೃಷಿಯನ್ನು ಲಾಭದಾಯಕವಾಗಿ ನಡೆಸಲು ಅನುಕೂಲ ವಾಗಲು ಏನು ಮಾಡುತ್ತೇವೆಂದು ಹೇಳಲೇ ಇಲ್ಲ! ಎಂಬಲ್ಲಿಗೆ, ಆ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆಯೇ ಎನ್ನುವುದೇ ಒಂದು ಪ್ರಶ್ನೆ.
ಬದಲಾದ ಇಂದಿನ ಕಾಲಮಾನದಲ್ಲಿ ಗೋಸಾಕಣೆಯೆನ್ನುವುದು ಸುಲಭವಲ್ಲ. ಮೊದಲಿನ ಹಾಗೆ ಗೋಮಾಳಗಳಿಲ್ಲ. ಇದ್ದ ಜಾಗದಲ್ಲೆಲ್ಲ ಕೃಷಿ ಮಾಡುತ್ತಿದ್ದೇವೆ ಅಥವಾ ಬಹಳಷ್ಟು ಪ್ರದೇಶಗಳು ಹುಲ್ಲೂ ಬೆಳೆಯದಷ್ಟು ಬರಡಾಗಿವೆ. ಮಳೆ ಕಡಿಮೆಯಾಗಿದೆ. ಸಾಂಪ್ರದಾಯಿಕ ನೀರಿನ ಮೂಲಗಳು ಬತ್ತಿವೆ. ಹಾಗಾಗಿ ಹಣ ನೀಡುವ ಬೆಳೆಗೇ ಬೋರ್‌ವೆಲ್ ನೀರನ್ನು ಉಪಯೋಗಿಸುತ್ತಿರುವಾಗ ಇನ್ನು ಹುಲ್ಲು ಬೆಳೆಯಲು ನೀರೆಲ್ಲಿ? ಹಸುಗಳಿಗೆ, ಎತ್ತುಗಳಿಗೆ ಮೇವೆಲ್ಲಿ? ಇದು ಬಯಲು ಸೀಮೆಯ ಕತೆಯಾದರೆ, ಮಲೆನಾಡು ಮತ್ತು ಕರಾವಳಿಗಳಲ್ಲಿ ಹಸುಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ, ಅವುಗಳಿಗೆ ಹುಲ್ಲು ತಂದು ಹಾಕುವುದಕ್ಕಾಗಿಯೇ ಆಳುಗಳನ್ನು ಇಡುವುದೂ ಚಾಲ್ತಿಗೆ ಬಂದಿದೆ. ಮಾರುವಷ್ಟು ಹಾಲು ಕೊಡುವ ಹಸುವಾದರೆ, ಅದನ್ನು ಸಾಕುವುದು ಆರ್ಥಿಕವಾಗಿ ಲಾಭಕರವಾದೀತು. ಆದರೆ ಮನೆ ಖರ್ಚಿಗಾಗುವಷ್ಟೇ ಹಾಲು ಕೊಡುವ ಹಸುಗಳಾದರೆ, ಹಸು ಸಾಕುವುದಕ್ಕಿಂತ ಹಾಲು ಕೊಳ್ಳುವುದೇ ಒಳ್ಳೆಯದು ಎನ್ನಿಸುತ್ತದೆ.
ನನಗೆ ಇರುವುದು ಇಬ್ಬರೇ ಮಕ್ಕಳು. ಮೊದಲಿನ ಹಾಗೆಲ್ಲ ಈಗ ಯಾರಿಗೆ ೪-೫ ಮಕ್ಕಳು ಇರುತ್ತಾರೆ ಹೇಳಿ. ಈಗಂತೂ ಶಿಕ್ಷಣ ಕಡ್ಡಾಯ ತಾನೇ? ಹಾಗಾಗಿ ಇಬ್ಬರೂ ಶಾಲೆಗೆ ಹೋಗುತ್ತಿದ್ದಾರೆ. ಚೆನ್ನಾಗಿ ಓದಿಲಿ ಒಳ್ಳೆಯ ಕೆಲಸ ಸಂಪಾದಿಸಲಿ, ನಮ್ಮ ಹಾಗೆ ಕಷ್ಟಪಡದಿರಲಿ ಎನ್ನುವುದು ನಮ್ಮಾಸೆ. ಎಷ್ಟು ಓದಿದರೂ ಓದಿಸಬೇಕೆಂದುಕೊಂಡಿದ್ದೇನೆ. ಓದಿದ ಮಕ್ಕಳು ಕೊಟ್ಟಿಗೆ ಕೆಲಸಕ್ಕೆ ಒಪ್ಪಲ್ಲ.
ಹಾಗಾಗಿ ಮನೆಯಲ್ಲಿ ಕೆಲಸ ಮಾಡುವವನು ನಾನೊಬ್ಬನೇ. ಸ್ವಲ್ಪ ಮಟ್ಟಿಗೆ ನನ್ನ ಹೆಂಡತಿಯೂ ನನ್ನೊಂದಿಗೆ ಸೇರಿಕೊಳ್ಳುತ್ತಾಳೆ. ಹೊಲದ ಕೆಲಸ ಮಾಡುವುದಕ್ಕೇ ನಮ್ಮ ಮನೆಯಲ್ಲಿ ಜನ ಸಾಲದು. ಇನ್ನು ದನಗಳಿಗೆ ಮೇವು ತಂದು ಹಾಕುವವರು ಯಾರು? ಮಳೆಗಾಲದಲ್ಲಿ ಹೇಗೋ ನಡೆದೀತು, ಬೇಸಿಗೆಯಲ್ಲಿ ಮೇವಿಗೆ ಏನು ಮಾಡುವುದು? ನನಗಿರುವ ೫ ಎಕರೆ ಜಮೀನಿಗೆ ೫-೬ ಹಸು, ಎಮ್ಮೆ, ಕೋಣಗಳಿದ್ದರೆ ಅವುಗಳ ಗೊಬ್ಬರ ಸಾಕು. ಆದರೆ, ಅವು ವರ್ಷಕ್ಕೊಂದು ಕರು ಹಾಕಿದರೆ, ಅವನ್ನು ಸಾಕುವುದು ಹೇಗೆ ಎನ್ನುವುದು ನನ್ನ ಸಮಸ್ಯೆ.
ಈಗ ಮೊದಲಿನ ಹಾಗೆ ಊಳಲು ಎತ್ತು, ಕೋಣಗಳು ಬೇಕೇ ಬೇಕೆಂದೇನು ಇಲ್ಲ. ಟ್ರ್ಯಾಕ್ಟರ್‌ನಲ್ಲಿಯೇ ಕೆಲಸ ಬೇಗ ಆಗುತ್ತದೆ. ಹಾಗಾಗಿ ನಮಗೆ ಹೆಚ್ಚಾದ ದನಕರುಗಳನ್ನು ಮಾರೋಣವೆಂದರೆ ಕೊಳ್ಳುವವರ‍್ಯಾರು? ಎಲ್ಲ ಕೃಷಿಕರಿಗೂ ಇದೇ ಸಮಸ್ಯೆ. ಅವುಗಳನ್ನೇನು ಮಾಡೋಣ ಎನ್ನುವುದಕ್ಕೆ ಉತ್ತರವೆಲ್ಲಿ?
ಇನ್ನು ಗೋಮೂತ್ರ, ಗೋಮಯದಿಂದ ಔಷಧ, ಸಾಬೂನು, ಶಾಂಪೂ ಮೊದಲಾದವು ಗಳನ್ನು ತಯಾರಿಸಬಹುದೆಂದು ಪತ್ರಿಕೆಗಳಲ್ಲಿ ಬರುತ್ತಿದೆಯೇ ಹೊರತು ಅದು ಎಲ್ಲಿ ಆಗುತ್ತಿದೆ ಎನ್ನುವುದು ಸಾಮಾನ್ಯ ರೈತರಿಗೆ ಗೊತ್ತಿಲ್ಲ. ಹಾಗಾದರೆ, ನಾನು ಗೋಮೂತ್ರ/ಗೋಮಯ ಸಂಗ್ರಹಿಸಿ ಮಾರಬಹುದೇ? ಯಾರು ಕೊಳ್ಳುತ್ತಾರೆ? ಲೀಟರಿಗೆ/ಕೆಜಿಗೆ ೫-೬ ರೂಪಾಯಿ ಯಾದರೂ ಸಿಗುತ್ತದೆಯೇ?
ಒಟ್ಟಿನಲ್ಲಿ, ಇಂದು ಎಲ್ಲದರಲ್ಲಿಯೂ ನಾವು ಮುಂದೆ ಹೋಗಿ ಹಿಂದೆ ಬರುತ್ತಿದ್ದೇವೆ. ಮುಂದೆ ಹೋದ ಮೇಲೆ, ಹಿಂದಿನದ್ದೇ ಒಳ್ಳೆಯದಿತ್ತು ಎಂದೆನಿಸಿ ಹಿಂದೆ ಬರುವ ಪ್ರಯತ್ನ ಮಾಡುತ್ತಿದ್ದೇವೆ. ಈಗಲಾದರೂ ನಮಗೆ ಜ್ಞಾನೋದಯವಾಗುತ್ತಿರುವುದು ಒಳ್ಳೆಯದೇ. ಆದರೆ, ಹಿಂದಿನ ಕಾಲದಲ್ಲಿದ್ದಂತೆ ಎಲ್ಲವೂ ಇಂದಿಲ್ಲ. ಕೇವಲ ಕೃಷಿ, ಗೋಸಾಕಣೆಯಲ್ಲಿ ಮಾತ್ರ ಹಿಂದೆ ಬಂದರೆ ಸಾಲದು. ಬೇರೆ ಎಲ್ಲದರಲ್ಲೂ ಹಾಗೇ ಆಗಬೇಕು. ಎಲ್ಲರಿಗೂ ೪-೫ ಮಕ್ಕಳ ಕಾಲ ಹೋಗಿ ಒಂದೆರಡು ಮಕ್ಕಳ ಕಾಲ ಬಂದಿದೆ.
ಮಕ್ಕಳು ಕೃಷಿ ಕೆಲಸ ಮಾಡುವುದು ಹೋಗಿ, ಎಲ್ಲರೂ ಆಧುನಿಕ ಶಿಕ್ಷಣ ಪಡೆದು ಪೇಟೆಯಲ್ಲಿ ಕೆಲಸ ಮಾಡುವ ಕಾಲ ಬಂದಿದೆ. ಎಲ್ಲರೂ ಒಟ್ಟಿಗೆ ಇರುವ ಅವಿಭಕ್ತ ಕುಟುಂಬ ಹೋಗಿ, ಸಣ್ಣ ಸಣ್ಣ ಕುಟುಂಬಗಳ ಕಾಲ ಬಂದಿದೆ. ಹೀಗೆ ಒಂದಕ್ಕೊಂದು ಹೊಂದಿ ಕೊಂಡಿರುವ ಸಂಗತಿಗಳೆಲ್ಲ ಬದಲಾಗಿವೆ. ಇದನ್ನೆಲ್ಲವನ್ನು ಹಿಂದೆ ತರಲು ಸಾಧ್ಯವೇ ಎನ್ನುವುದು ಪ್ರಶ್ನೆ. ಇಲ್ಲವಾದಲ್ಲಿ, ಅವೆಲ್ಲಾ ಹೇಗೇ ಇರಲಿ, ಗೋರಕ್ಷಣೆ ಮಾತ್ರ ಮಾಡೋಣವೆಂದರೆ, ಅದಕ್ಕೆ ಪೂರಕವಾದ ಕೃಷಿ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಗೋ ಉತ್ಪನ್ನಗಳ ಉದ್ಯಮ ಬಲಗೊಳ್ಳಬೇಕು. ಅಥವಾ, ಗೋ ಸಾಕಣೆ ಮಾಡುವ ಕೃಷಿಕರಿಗೆ ಸರ್ಕಾರದಿಂದ ಏನಾದರೂ ಪ್ರೋತ್ಸಾಹ ಸಿಗಬೇಕು. ಗೋಸಾಕಣೆ ಮಾಡುವವರಿಗೆ ಸರ್ಕಾರ ಬೆಂಬಲ ಬೆಲೆ ಕೊಡುವುದೋ ಅಥವಾ ನಮಗೆ ಕರೆಂಟ್ ಬಿಲ್, ಫೋನ್ ಬಿಲ್ ಮನ್ನಾ ಮಾಡುವುದೋ ಮಾಡೀತೇ? ಆಗ ಕೃಷಿಕರಿಗೆ ಗೋಸಾಕಣೆ ಮಾಡಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ.
ಇದೆಲ್ಲಾ ಕೆಲವು ಕಾಲ ನಡೆಯ ಬಹುದು. ಆದರೆ, ದೀರ್ಘಾವಧಿಯಲ್ಲಿ ಗೋ ಆಧಾರಿತ ಕೃಷಿ, ಗೋ ಆಧಾರಿತ ಗ್ರಾಮ ಜೀವನ ನಡೆಯುವಂತೆ ಆಗಬೇಕು. ಇಂತಹ ಪ್ರಯತ್ನಗಳು ಎಲ್ಲಿಯಾದರೂ ಆಗಿರ ಬಹುದು. ಅಥವಾ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ನಾಯಕರ, ಚಿಂತಕರ ತಲೆಯಲ್ಲಿ ಯೋಜನೆಗಳಿರಬಹುದು. ಆದರೆ, ಅದ್ಯಾವುದೂ ನನ್ನಂತಹ ಸಾಮಾನ್ಯ ಕೃಷಿಕರಿಗೆ ಗೊತ್ತಿಲ್ಲ. ಎಲ್ಲಿಯೂ ಚರ್ಚೆ ಯಾಗುತ್ತಿಲ್ಲ. ಅಂತಹ ಯೋಜನೆಗಳಿದ್ದರೆ ಅಥವಾ ಪ್ರಾಯೋಗಿಕವಾಗಿ ಎಲ್ಲಿಯಾದರೂ ಜಾರಿಗೊಳಿಸಿದ್ದರೆ ದಯವಿಟ್ಟು ಅದನ್ನು ಎಲ್ಲರೊಂದಿಗೆ ಹಂಚಿಕೊಂಡಲ್ಲಿ ಎಲ್ಲರಿಗೂ ಲಾಭವಾದೀತು. ನಮಗೆ ಕೃಷಿಯ ಜೊತೆಗೆ ಗೋಸಾಕಣೆಯಲ್ಲಿ ಒಂದು ಹೊಸ ಅವಕಾಶ ಸಿಕ್ಕೀತು.

ನನ್ನ ಡೈರಿಯ ಪುಟಗಳು

ನಾನು ಡೈರಿ ಬರೆಯಲು ಆರಂಭಿಸಿದ್ದು 8 ನೇ ತರಗತಿಯಿಂದ. ಮನೆಯಲ್ಲಿ ಅಮ್ಮ ಮೊದಲಿನಿಂದ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದಳು. ಸಹಜವಾಗಿಯೇ ಆ ಅಭ್ಯಾಸ ನನಗೂ ಬಂತು. ಶಾಲಾ ದಿನಗಳಲ್ಲಿ ನಾನು ಬರೆದ ಡೈರಿಯ ಕೆಲ ಆಯ್ದ ಸಾಲುಗಳು ಇಲ್ಲಿವೆ.

ನೆನೆಪಿನ ಪುಟಗಳು

ಶುಕ್ರವಾರ, ಜನವರಿ 1, 1993.

ಬೆಳಿಗ್ಗೆ ನಾನು ಡೈರಿ ತಂದೆ. ಅಮ್ಮನ ಸೀರೆ ಇಸ್ತ್ರಿಗೆ ಕೊಟ್ಟು ಬಂದೆ. ಬ್ಯಾಂಕಿಗೆ 200 ರೂಪಾಯಿ ಇಟ್ಟು ಬಂದೆ. ಇಂದು ದೊಡ್ಡಮ್ಮನ ಪತ್ರ ಬಂದಿತು. 26-12-1992 ರಂದು ಸ್ವಿಟ್ಜರ್ ಲ್ಯಾಂಡಿನ ಬೆಂಕಿಪೊಟ್ಟಿಗೆ ಭಾರತೀಯಕ್ಕ ತಂದು ಕೊಟ್ಟಳು. ಇಂದು ಅಪ್ಪನಿಗೆ ಸ್ವಲ್ಪ ಆರಾಮಿರಲಿಲ್ಲ.

ಭಾನುವಾರ, ಜನವರಿ 3, 1993.

ಇಂದು ಗರುಡರೇಖೆ ಚಿತ್ರವಿತ್ತು. ಅಪ್ಪ ಮಧ್ಯಾಹ್ನ ಖಾನಾಪುರಕ್ಕೆ ಹೋಗಬೇಕೆಂದು ರೈಲ್ವೆ ಸ್ಟೇಷನ್ನಿನಲ್ಲಿ ಅಪ್ಪನ 200 ರೂಪಾಯಿ ಪಿಕ್ ಪಾಕೆಟ್ ಮಾಡಿದರು. ಇವತ್ತು ಪುರಿ ಮಾಡಿದ್ದರು.

ಮಂಗಳವಾರ, ಜನವರಿ 5, 1993.

ಇಂದು ಶಾಲೆಗೆ ಸೈಕಲ್ ಮೇಲೆ ಹೋದೆ. ಇಂದು ಡ್ರಿಲ್ ಇತ್ತು. ಇಂದು ವಿಸರ್ಜನಾಂಗ ಮತ್ತು ಗ್ರಾಫ್ ಹೇಳಿದರು. ಸುಂದರ್ ಸರ್ ಅಬಸೆಂಟ್ ಇದ್ದರು. ಹಳ್ಳಿಕರ್ ಸರ್ ಗೆ ಆರಾಮಿರಲಿಲ್ಲ.

ಗುರುವಾರ, ಜನವರಿ 5, 1995

ಇಂದು ಬೆಳಿಗ್ಗೆ ಲೇಟಾಗಿ ಎದ್ದೆನು. ಆದರೂ ಕ್ಲಾಸಿಗೆ ಹೋಗಿದ್ದೆ. 5.2 ಬಿಡಿಸಿದೆವು. ಇಂದು ಸ್ಪೋರ್ಟ್ಸ್ ಮೀಟ್ ಸಲುವಾಗಿ ಹೆಸರುಗಳನ್ನು ತೆಗೆದುಕೊಂಡರು. ನಾನು 100 ಮೀ, 200 ಮೀ, ಓಟ, ಹಾಕಿ ಬಾಲ್ ಥ್ರೋ ಮತ್ತು ರೀಲೆಗೆ ಹೆಸರು ಕೊಟ್ಟೆನು.

ಶನಿವಾರ, ಜನವರಿ 7, 1995

ಇಂದು ಕ್ಲಾಸಿಗೆ ರಜೆ ಇತ್ತು. ಶಾಲೆಯಲ್ಲಿ ಜಿ. ಬಿ. ಸರ್ ಬಂದಿರಲಿಲ್ಲ. ಶೀತಲ್ ನ ಕಾಲು ಉಳುಕಿದೆ. ಪುಟ್ಟತ್ತೆ ಬಂದಿದ್ದರು. ಸಚಿನ್ ಬೆಲ್ಲದ್ ಶಾಲೆಗೆ ಬಂದಿದ್ದ. ಬೈಲಹೊಂಗಲದಲ್ಲಿ ಇಂದು ಗಲಾಟೆ ನಡೆಯಿತು. ಪ್ರಾಣಹಾನಿ ಇಲ್ಲ.

ಬುಧವಾರ, ಜನವರಿ 11, 1995

ಕ್ಲಾಸಿಗೆ ಹೋಗಿದ್ದೆ. ಪುಟ್ಟತ್ತೆ ಬಂದಿದ್ದರು. ಶಾಲೆಯಲ್ಲಿ ಫಂಕ್ಷನ್ ಇತ್ತು. ಆದರೆ ಯಾವುದೋ ಕಾರಣದಿಂದ ರದ್ದಾಯಿತು. ಜಿ. ಆರ್. ಜೋಷಿ ಸರ್ ನನಗೆ ಭಾಷಣ ಬರೆದುಕೊಟ್ಟರು. (ಸಂಸ್ಕೃತದಲ್ಲಿ). ಶಾಲೆಯಲ್ಲಿ ಬೀಜ ಗಣಿತ ಮುಗಿಯಿತು.

ನೀವ್ಹೇಳಿದ ಸ್ಥಳಕ್ಕೆ ಆಟೋ ಬರದಿದ್ದರೆ…

ಎಲವೋ ಅಂದರೆ ನರಕ, ಅಯ್ಯಾ ಅಂದರೆ ಸ್ವರ್ಗ

Dear Friends,
You are in a hurry to catch the train. You pack all your stuff and frantically run out in the hope of catching an auto. You come out and see 5 autos standing at the corner. You thank God and ask them – “Majestic chaloge kya??” The Answer is “Rs 200 hoga!!”. “Kya?? It just cost Rs 100 till Majestic”. “Bahut rush hai sir!!”. You move on to the next auto, to try your luck and surprisingly, you have the same conversation “Bahut rush hai sir!!”. Finally you give up and bargain the price to Rs 170 and hope you don’t miss your train.

Sounds more than familiar??

You stand on the road and keep on asking the passing autos for a ride to your destination – if it’s not your day, the autos will not even bother to stop; if you’re a bit lucky they might actually slow down to hear your destination’s name and think for a second( i always wonder if they are calculating their net profit) and then speed away. However if you are more lucky, the auto guy might actually quote you an exorbitant price and then speed away. But if it’s your extremely lucky hour of the day, you might end up getting an auto which is ready to take you to the destination at meter price.

In my six years of existence in Bengaluru, these experiences have been really instrumental in teaching me great virtues – Patience and Tolerance. But at what price??? exorbitant rates, extremely rude behavior and what not ……
After years of feeling used, i set out to find the answer for this misery – was there no government system that could bring these auto guys to justice? As a citizen, how can i express my concern?

This search took me to the Koramangala RTO office (BDA complex) and to my surprise i found that there did exist a government system which i believe 99.99% of Bengaluru is unaware of !! 
The System

Note the vehicle number (KA-XX-YY-ZZZZ) and email the details to transcom@kar.nic.in. Based on the prefix XX (for example KA-01), complaint will be sent to one of the ten RTO offices in Bangalore and adjacent taluk areas.
Alternatively, one can also call these offices at the number given below based on the vehicle number prefix and directly lodge a complaint.

Vehicle Prefix (KA-XX) Bangalore location Phone number

 • KA-01 Koramangala 080-25533525
 • KA-02 Rajajinagar 080-23324104
 • KA-03 Indiranagar 080-25254310
 • KA-04 Yeshwantpur 080-23376039
 • KA-05 Jayanagar 080-26630989
 • KA-41 Gyanabharthi 080-28602833
 • KA-50 Yelahanka 080-28561366
 • KA-51 Electronic City 080-25735522
 • KA-52 NeelaMangala 08234-285598
 • KA-53 KR Puram 080-25617951

Once the complaint is received at the corresponding office, a notice is issued to the address of the vehicle’s registered owner, requiring him/her to turn up at the RTO office within 7 working days. Every RTO has about 10 IMV’s (Inspector of Motor Vehicles) who seize the vehicles which don’t report to the RTO.

The penalty levied from the auto-waalas is rs.100 under section 200.

The various offences among others for which one can lodge a complaint

 • Refusal to come to destination (Any destination!!!)
 • Demanding excess fare
 • Using rough language
 • Cheat the public, for e.g. taking longer routes.
 • Faulty Meter

There is also a helpline number – 080-22353785 available Monday – Saturday from 10:00 am – 5:30 pm on which one can call to lodge complaints.

The numbers speak for itself

I was shocked when I found that the Koramangala RTO office received only 5 complaints a month. With over 1,00,000 autos plying on Bangalore roads, shouldn’t it be like 5 complaints a minute?
So, will our impatience always have to take a backseat? Can something be done to improve/compliment the system to make it more effective? Will we get a better platform to raise our voices democratically?