‘ಮುಕ್ತ ಮುಕ್ತ’ದಲ್ಲಿ ನನ್ನ ‘ವಿಜಯ ಘೋಷ’ ಚ್ಯಾನಲ್ ಉದ್ಧಾಟನೆ ಆಗಿದೆ. ಶೂಟಿಂಗ್ ದಿನದ ಎರಡು ಫೋಟೋಗಳು….


ಕರ್ನಾಟಕ ಉರ್ದು ಅಕಾಡೆಮಿ, ಉರ್ದು ಭಾಷೆಯನ್ನು ಪ್ರಚುರ ಪಡಿಸುವ ಉದ್ದೇಶದಿಂದ ‘ಡಿಪ್ಲೋಮಾ ಕೋರ್ಸ್ ಇನ್ ಉರ್ದು ಲಾಂಗ್ವೇಜ್’ ಎಂಬ ಕೋರ್ಸ್ ನಡೆಸುತ್ತದೆ. ಪ್ರತಿ ಭಾನುವಾರ ಅಕಾಡೆಮಿಯ ಲೈಬ್ರರಿಯಲ್ಲಿ ಕ್ಲಾಸ್ ಇರುತ್ತದೆ. ನಾನು ಕೂಡ ಈ ಡಿಪ್ಲೋಮಾ ಮಾಡುತ್ತಿದ್ದು, ಕನ್ನಡ, ಉರ್ದು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಅತ್ಯುತ್ತಮ ಪ್ರಭುತ್ವ ಹೊಂದಿರುವ, ಅತ್ಯಂತ ಸೌಮ್ಯ ಸ್ವಭಾವದ ಶ್ರೀ. ಮಾಹೇರ್ ಮನ್ಸೂರ್ ನಮಗೆ ಉರ್ದು ಕಲಿಸಲು ಬರುತ್ತಾರೆ. ಮುಸ್ಲಿಮರು, ಹಿಂದೂಗಳು ಇಬ್ಬರೂ ಕ್ಲಾಸ್ ಅಟೆಂಡ್ ಮಾಡುತ್ತೇವೆ.
ಕ್ಲಾಸಿನ ಮೊದಲ ದಿನವೇ, “ಉರ್ದು ಭಾರತೀಯ ಭಾಷೆ. ಇದು ಭಾರತದಲ್ಲಿಯೇ ಹುಟ್ಟಿದ್ದು, ಉರ್ದು ಕೇವಲ ಮುಸ್ಲಿಮರ ಭಾಷೆ ಅಲ್ಲ, ಹಲವಾರು ಮುಸ್ಲಿಮರ ಮಾತೃಭಾಷೆ ಉರ್ದು ಆಗಿಲ್ಲ, ಕ್ಯಾಲಿಗ್ರಾಫಿಗೆ ಉರ್ದು ಎತ್ತಿದ ಕೈ, ಉರ್ದು ಕಾವ್ಯ ಅತ್ಯಂತ ಸುಮಧುರ” ಎಂಬಿತ್ಯಾದಿ ಅಂಶಗಳನ್ನು ನಮ್ಮ ಗುರುಗಳು ನಮಗೆ ತಿಳಿಸಿದ್ದರು. ಕ್ಲಾಸುಗಳು ಕಳೆದಂತೆ ಎಲ್ಲರ ಪರಿಚಯ ನನಗಾಗತೊಡಗಿತು. ನಾನು ಎಲ್ಲರಿಗೂ “ನೀವೇಕೆ ಉರ್ದು ಕಲಿಯುತ್ತೀದ್ದೀರಿ?” ಎಂದು ಕೇಳುತ್ತಿದ್ದೆ. ಇದಕ್ಕೆ ಹೆಚ್ಚಾಗಿ ಎಲ್ಲರೂ “ಉರ್ದು ನನಗೆ ತುಂಬ ಇಷ್ಟ” ಅಂತಲೋ, “ಉರ್ದು ಕಾವ್ಯ ಇಷ್ಟ” ಅಂತಲೋ, “ನನಗೆ ಹಲವು ಭಾಷೆಗಳನ್ನು ಕಲಿಯುವುದು ಇಷ್ಟ” ಅಂತಲೋ ಉತ್ತರಿಸುತ್ತಿದ್ದರು. ಒಬ್ಬರಂತೂ “ಸಾರ್, ಅದೇನ್ ಬರೀತಾರೆ, ಬರೀ ಕಾಗೇ ಕಾಲು ಗುಬ್ಬಿ ಕಾಲು, ಗೆರೆಗಳು!! ಸಣ್ಣ ಇದ್ದಾಗಿಂದ ನೋಡಿ ನೋಡಿ ತಲೆ ಕೆಟ್ಟು ಹೋಗಿತ್ತು. ಅದೇನು ಅಂತ ಗುರುತಿಸಬೇಕು ಅನ್ನೋ ಹಟ ನನ್ನಲ್ಲಿತ್ತು. ಹೀಗಾಗಿ ಉರ್ದು ಕಲಿಯುತ್ತಿದ್ದೇನೆ” ಎಂದು ಉತ್ತರಿಸಿದ್ದರು. ಆದರೆ ಈ ಎಲ್ಲದ್ದಕ್ಕಿಂತ ಬೇರೆಯದೇ ಉತ್ತರವನ್ನು ಮತ್ತೊಬ್ಬರು ನೀಡಿದ್ದರು. ಅವರು ನೀಡಿದ ಉತ್ತರ ಹೀಗಿತ್ತು. “ನನಗೇನೂ ಉರ್ದು ಕಲಿಯಬೇಕೆಂಬ ಆಸೆ ಇಲ್ಲ. ಆದರೆ ಈ ಭಯೋತ್ಪಾದಕರ ಲಿಟರೇಚರ್ ಎಲ್ಲ ಉರ್ದುದಲ್ಲೇ ಇರತ್ತೆ. ಭಯೋತ್ಪಾದಕರು ವ್ಯವಹರಿಸುವುದು ಉರ್ದುವಿನಲ್ಲೇ. ಅವರ ಕಮ್ಯುನಿಕೇಶನ್ ಕೂಡ ಉರ್ದುವಿನಲ್ಲೇ. ನಮಗೆಲ್ಲ ಅದು ಗೊತ್ತಾಗೋದೇ ಇಲ್ಲ. ನಾವು ಹಿಂದೂಗಳು ಉರ್ದು ಕಲಿತರೆ ‘ಅವರ’ ಚಟುವಟಿಕೆಗಳು, ‘ಅವರ’ ಲಿಟರೇಚರ್ ಎಲ್ಲವೂ ಗೊತ್ತಾಗುತ್ತಲ್ಲ ಸಾರ್ ಅದಕ್ಕೆ ಕಲೀತಿದಿನಿ” ಅಂದ್ರು. ಅವರು ಬಲ ಪಂಥೀಯ ಸಂಘಟನೆಯೊಂದರ ಸಕ್ರೀಯ ಕಾರ್ಯಕರ್ತರು ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ….
ಘಜನಿಯ ಅಮೀರ್
ಪಾ ದ ಅಮಿತಾಭ್
ಮೇರೆ ಅಂಗನೇಮೇ ಯ ಮತ್ತದೇ ಅಮಿತಾಭ್
ಚಾಚಿ ಚಾರ್ಸೋಬೀಸ್ ನ ಕಮಲ್
ಎಲ್ಲ ಫಿಲ್ಮ್ ಗಳ ರಜನಿ
ಅದ್ಭುತ ಎಕ್ಸಪ್ರೆಷನ್ನಿನ ಶ್ರೀದೇವಿ
ಕ್ಲಾಸಿಕ್ ನಟನೆಯ ಸ್ಮಿತಾ ಪಾಟೀಲ್
ಹೀಗೆ ಮೊನ್ನೆ ಎಲ್ಲರನ್ನೂ ನೆನೆಸಿಕೊಂಡು ಬಿಟ್ಟೆ
ಅವರ ನಟನೆಗೆ ಸಲಾಂ ಹೊಡೆದು ಬಿಟ್ಟೆ
ಕಹಾಂ ರಾಜಾಭೋಜ, ಕಹಾಂ ಗಂಗೂತೇಲಿ ಎಂದುಕೊಂಡು ಬಿಟ್ಟೆ
ಕಾರಣ ಇಷ್ಟೆ,
ಮೊನ್ನೆ ‘ಮುಕ್ತ ಮುಕ್ತ’ ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
ಹೆಚ್ಚಿಗೆ ಬಿದಿತ್ತು ಅಷ್ಟೆ……!!
ಸಂದೀಪ್ ಕಾಮತ್….
ಒಳ್ಳೆಯ ಕಥೆ .
ಡಾ. ನಾ. ಸೋಮೇಶ್ವರ………..
…….ಇತ್ತೀಚೆಗಂತೂ ಜೂನಿಯರ್ ಗಾಂಧಿ ಇಬ್ಬರು ಹೆಣ್ಣುಮಕ್ಕಳ ಹೆಗಲ ಮೇಲೆ ಕೈಯಿಟ್ಟುಕೊಂಡು ಬಂದು ವೇದಿಕೆಯೇರತೊಡಗಿದ್ದ…….. “ಮತ್ತೊಂದು ಗಾಂಧಿ ಹತ್ಯೆ” ಎಂಬ ತಲೆಬರಹದಲ್ಲಿ ಗಾಂಧಿಯ ಮೊದಲು ‘ಜೂನಿಯರ್’ ಪದವನ್ನು ಚಿಕ್ಕದಾಗಿ ಪ್ರಕಟಿಸಿತ್ತು.
ಕಥೆಯಲ್ಲಿ ಗಮನ ಸೆಳೆಯುವ ವಾಕ್ಯಗಳು. ಮೇಲೆ ಹತ್ತುವುದು ಮುಖ್ಯ…ಹತ್ತಲು ನೆರವಾದ ಏಣಿಯನ್ನು ಏನು ಹೆಗಲ ಮೇಲೆ ಹಾಕಿಕೊಂಡು ಓಡಾಡಬೇಕೇನು? ಅದನ್ನು ಆ ಕಡೆ ದೂಡಿ ಹೋದರಾಯಿತು ಎನ್ನುವ ಮಾನವ ಸ್ವಭಾವಕ್ಕೆ ಕನ್ನಡಿ ಹಿಡಿದ ಹಾಗಿದೆ.
“”ಜೂನಿಯರ್ ಗಾಂಧಿ ಪಾಪ್ಯುಲರ್ ಆಗುತ್ತಿದ್ದಾನಲ್ಲವೆ. ಹಾಗಿದ್ದರೆ ನಿಜವಾದ ಗಾಂಧಿಯ ಪಾಪ್ಯುಲಾರಿಟಿ ಕಡಿಮೆ ಮಾಡಿದರೆ, ಜೂನಿಯರ್ ಗಾಂಧಿ ಬಾಯಿಬಾಯಿ ಬಡಿದುಕೊಳ್ಳಬೇಕಾಗುತ್ತದೆ”” – ಎಂತಹ ಭಯಂಕರ ಐಡಿಯಾ ಮಾರಾಯ್ರೆ!
– ಕಥೆಯನ್ನು ಮುಂದುವರೆಸಿ. ಅಭಿನಂದನೆಗಳು.
-ನಾಸೋ
ರಂಗಣ್ಣ ಕೆ……..
ಸುಘೋಷ್,
ನೀವು ಯಾರನ್ನಾದ್ರೂ ಉದ್ದೆಶವಾಗಿತ್ತುಕೊಂಡಿದ್ದೀರಾ ಅನ್ಸುತ್ತೆ ನನಗೆ..
ಯಾರಯಾರದೋ ಕುಂಡಿ ಚಿವುಟಿದ್ದೀರಾ………………!
ಅದು ಏನೇ ಇರಲಿ, ಕಥೆ ಚೆನ್ನಾಗಿದೆ……..
ಮಂಜುನಾಥ್ ಎಚ್. ಟಿ. ………..
ಇ೦ದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯ೦ತಿದೆ, ನಿಜವಾದ ಗಾ೦ಧಿ, ಅವರ ತತ್ವಗಳು ಇ೦ದು ಯಾರಿಗೂ ಬೇಕಿಲ್ಲ, ಕೇವಲ ಹೆಸರು ಮಾತ್ರ, ಅದೂ ಅಧಿಕಾರಕ್ಕೇರಲು!
ಜಯದೇವ್…..
It is nice. I read it yesterday in Udayavani and liked it
ಸುನೀತಾ ಬೆಟ್ಕೆರೂರ್…….
a thought provoking
ಉಮೇಶ್ ದೇಸಾಯಿ……..
ನಿಗಳೆಯವರಿಗೆ ಪ್ರಸ್ತುತ ಸನ್ನಿವೇಶಕ್ಕೆ ತಕ್ಕದಾದ ಕತೆ. ಗತಿ ಇದೆ ಮೊನಚಿದೆ ಇದು ಹೀಗೆ ಆದು ಹಾಗೆ ಎಂದು
ಕತೆಗಾರ ಮೂಗು ತೂರಿಸಿ ಹೇಳುವುದಿಲ್ಲ ಇದು ಸಮಾಧಾನದ ಸಂಗತಿ.
ಇನ್ನೂ ಹೆಚ್ಚಿನದನ್ನು ನಿಮ್ಮಿಂದ ಅಪೇಕ್ಷೆ ಮಾಡಬಹುದು. ಶುಭವಾಗಲಿ
ಕೆ. ಎಸ್. ರಾಘವೇಂದ್ರ ನಾವಡ……..
ಗಾ೦ಧಿ ಜಯ೦ತಿಯ೦ದೇ ಅದನ್ನು ಉದಯವಾಣಿಯಲ್ಲಿ ಓದಿದ್ದೆ. ನಾನು ಉದಯವಾಣಿ ಯನ್ನು ಮಾತ್ರವೇ ತರಿಸುವುದು. ಲೇಖಕರ ಹೆಸರು ಓದಿ, ಎಲ್ಲೋ ಕೇಳಿದ ಹಾಗೆ ಇದೆ ಎನ್ನಿಸುತ್ತಿತ್ತು. ಪತ್ತೆ ಹಚ್ಚಲು ಈ ಪ್ರಯೋಗ. ಸಫಲನಾದೆ. ಸು೦ದರ್ ಕಥೆ ಹಾಗೂ ವಿಭಿನ್ನ ರೀತಿಯ ನಿರೂಪಣಾ ಶೈಲಿ. ಮುದ ನೀಡಿತು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ
ಮೋಹನ್ ಹೆಗಡೆ
ಹಾಯ್, ಕಥೆ ಓಳ್ಳೆದಾಗಿದೆ. ಉದಯವಾಣಿ ಪೇಪರ್ ನಲ್ಲಿ ಓದಿದೆ. ಸೊಗದಾಸ ನಿರೂಪಣೆ. ಪ್ರಾಸದ ಪೇಪರ್ ನವರ ಟೈಟಲ್ ಸೂಪರ್.
ಮನಸು….
ಕಥೆ ಇಷ್ಟವಾಯಿತು, ಜೊತೆಗೆ ನಿಮ್ಮ ಬರವಣಿಗೆ ಶೈಲಿ ತುಂಬಾನೇ ಚೆನ್ನಾಗಿದೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು, ಹೀಗೆ ಹಲವು ಕಥೆಗಳು ಮೂಡಿಬರಲೆಂದು ಆಶಿಸುತ್ತೇವೆ.
‘ಅಕ್ಕ’ ಏರ್ಪಡಿಸಿದ್ದ ಕಥಾ ಸ್ಪರ್ಧೆಗೆ ನಾನು ಬರೆದ ಕಥೆ ‘ಗಾಂಧಿ ಹತ್ಯೆ’ ಬೆಸ್ಟ್ 20 ರಲ್ಲಿ ಆಯ್ಕೆಗೊಂಡು, ದೀಪ ತೋರಿದೆಡೆಗೆ ಸಂಕಲನದಲ್ಲಿ ಪ್ರಕಟವಾಗಿರುವುದನ್ನು ತಮಗೆಲ್ಲ ತಿಳಿಸಿದ್ದೇನೆ. ಈ ಕಥೆ ‘ಆ ಮಹಾತ್ಮ’ ಹೆಸರಿನಲ್ಲಿ ನಿನ್ನೆ ಉದಯವಾಣಿಯಲ್ಲಿ ಪ್ರಕಟವಾಗಿದೆ. ಕಥೆ ಓದಲು ಭೇಟಿ ಕೊಡಿ ಅವಧಿ
ಮೊದಲ ಚಿತ್ರ ಇಂದಿನ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಪ್ರಕಟವಾಗಿರುವುದು. ಕಾಮನ್ ವೆಲ್ಸ್ ಕ್ರೀಡಾಕೂಟಗಳಿಗೆ ಆಗಮಿಸಿರುವ ಬ್ರಿಟಿಷ್ ಅಧಿಕಾರಿಯೊಬ್ಬರು ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ. ಎರಡನೇ ಫೋಟೋಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ. ನನ್ನ ಮೇಲ್ ಗೆ ಯಾರೋ ತುಂಬ ಹಿಂದೆ ಕಳಿಸಿದ್ದು ಎರಡನೇ ಫೋಟೋ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ವ್ಯಕ್ತಿಯೊಬ್ಬ ಭಾರತೀಯನಿಂದ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವುದು. ಯಾಕೋ ಏನೋ…..ಈ ಎರಡೂ ಚಿತ್ರಗಳು ಬಹಳಷ್ಟು ಸತ್ಯಗಳನ್ನು ಬಿಚ್ಚಿಡುತ್ತಿವೆ ಎನ್ನಿಸಿತು.