ನನ್ನ “ಸಾಮ್ರಾಟ” ಇನ್ನಿಲ್ಲ

ನನ್ನ ಹಾಗೂ ಸಾಮ್ರಾಟನ ಭೇಟಿಯ ಕುರಿತ ಲೇಖನ ನಾಳೆ….

ಸುದ್ದಿ ಕೃಪೆ - ವಿಕ

ಮುಂಬೈ ದಾಳಿಗೆ ಇಂದಿಗೆ ಎರಡು ವರ್ಷ

ಪಾಕಿಸ್ತಾನದ ಹತ್ತು ಜನ ಪಾತಕಿಗಳು ಮುಂಬೈ ಮೇಲೆ ದಾಳಿ ನಡೆಸಿದ ಕರಾಳ ದಿನಕ್ಕೆ ಇಂದು ಎರಡು ವರ್ಷ. ಆ ಘಟನೆಯನ್ನು ನೆನೆಸಿಕೊಂಡರೆ ನನಗಿನ್ನೂ ರಕ್ತ ಕುದಿಯುತ್ತದೆ, ಸಂದೀಪ ಉನ್ನಿಕೃಷ್ಣನ್ ರ ವೀರ ಮರಣ ಮೈಮೇಲೆ ಮುಳ್ಳು ಬರುವಂತೆ ಮಾಡುತ್ತದೆ. ಮುಂಬೈ ದಾಳಿಯಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದ ನೂರಾರು ಕಮಾಂಡೋಗಳಿಗೆ ಶತಶಃ ಪ್ರಣಾಮಗಳು….

ಚಿತ್ರಕೃಪೆ – ಇಂಟರ್ನೆಟ್ ಹಾಗೂ ಸಂದೇಶ ಪತ್ರಿಕೆ.

.....................
........................
.........................
.......................
..........................
.....................
.....................
...................
....................
.................
.................
.....................
....................
..................
.....................
.....................
.......................
.........................
.....................

ಅಯ್ಯೋ ಮಲೆಯಾಳಿ ಕನ್ನಡವೇ….

ಪೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ.

ನೋಣ್ವೇಜು ರುಂಬಾ ಸೆನ್ನಾಗಿದೆ....

ಸುಧಾದಲ್ಲಿ ನನ್ನ ‘ಅತ್ತೆ’ಯ ಸಂದರ್ಶನ

ಈ ಬಾರಿಯ ಸುಧಾ ದಲ್ಲಿ ಮುಕ್ತ ಮುಕ್ತ ಧಾರಾವಾಹಿಯಲ್ಲಿ ನನ್ನ ಅತ್ತೆ ಪಾತ್ರ ಮಾಡುತ್ತಿರುವ ವಿದ್ಯಾ ಮೂರ್ತಿ ಅವರ ಸಂದರ್ಶನ ಪ್ರಕಟವಾಗಿದೆ.

ಧವಳಗಿರಿ ಗುರುಗಳ ಆಶೀವ್ರಾದ ಇದ್ದಿದ್ದಕ್ಕೇ ಇದು ಪ್ರಕಟವಾಗಿದ್ದು...

ಇದ್ಯಾಕೋ ತುಂಬಾ ಡೈರೆಕ್ಟ್ ರಿಪೋರ್ಟಿಂಗ್ ಅನ್ನಿಸಿತು

ಕೃಪೆ - ವಿಕ

ಬಳಸಿದ ಭಾಷೆ ತುಂಬಾ ಡೈರೆಕ್ಟ್ ಎನ್ನಿಸಿತು. ವಿಷಯವನ್ನು ಹಾಗೆಯೇ ಇಟ್ಟು ಧರ್ಮಸೂಕ್ಷ್ಮ ಪದಗಳನ್ನು ಇನ್ನೂ ವಿವೇಚನೆಯಿಂದ ಬಳಸಬಹುದಿತ್ತಾ?

ಮಣಿಕರ್ಣಿಕಾ ಉರ್ಫ್ ಝಾನ್ಸಿರಾಣಿ ಲಕ್ಷ್ಮೀಬಾಯಿಯವರ 175 ನೇ ಜನ್ಮದಿನ ಇಂದು

ಆವೋಂ ಬಚ್ಚೋ ತುಮ್ಹೆ ದಿಖಾಯೇ....

ಕೃಪೆ – ವಿಕ ಮತ್ತು ಶ್ರೀ. ಟಿ. ಎನ್. ರಾಮಕೃಷ್ಣ.

ಕೆಪಿಪೂ ಅವರ ಮಾಯಾಮೃಗ ನೋಡಲು ಬನ್ನಿ

ಮಾಯಾಮೃಗ, ಮಾಯಮೃಗ, ಮಾಯಾಮೃಗ

ಮನುಷ್ಯ ಸುಮ್ಮನೆ ಕೂರ್ತಾನೆ. ದೇವರು ಯಾಕೆ ಸುಮ್ನಿರ್ತಾನೆ?

ನೀರ ಮೇಲಣ ಗುಳ್ಲೆ ನಿಜವಲ್ಲ ಹರಿಯೆ...

ಕಿರುತೆರೆಯಲ್ಲಿ ನಟಿಯಾಗಿರುವ ನನ್ನ ಸ್ನೇಹಿತೆಯೊಬ್ಬಳು ಹೇಳಿದ ಘಟನೆ ಇದು……

ನಟನೆ ಎನ್ನುವುದು ನೀರ ಮೇಲಣ ಗುಳ್ಳೆ. ಅದು ಕಿರುತೆರೆಯಾಗಿರಬಹುದು ಅಥವಾ ಬೆಳ್ಳಿತೆರೆಯಾಗಿರಬಹುದು. ಒಂದು ಕಾಲದಲ್ಲಿ ಮಿರಿಮಿರಿ ಮಿಂಚಿದ್ದ ಎಷ್ಟೋ ಜನ ನಟ-ನಟಿಯರು ಕೊನೆ ದಿನಗಳಲ್ಲಿ ಒಪ್ಪೊತ್ತು ಊಟಕ್ಕೂ ಪರದಾಡಿ, ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿ, ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸಾವಿನ ಸುದ್ದಿ ಮಾಡಿ ಸತ್ತು ಹೋಗಿದ್ದಾರೆ. ಆದರೆ ಇಷ್ಟೆಲ್ಲ ಇದ್ದರೂ ನಮ್ಮ ನಟರಿಗೆ ಬುದ್ಧಿ ಅನ್ನೋದು ಬರೋದೇ ಇಲ್ವಾ ಅನ್ಸತ್ತೆ.

ಒಬ್ಬ ನಟರಿದ್ದಾರೆ ಸುಘೋಷ್. ತುಂಬಾ ಹಿರಿಯ ನಟರು. ಅವರ ಆಕ್ಟಿಂಗ್ ಬಗ್ಗೆ ಎರಡು ಮಾತಿಲ್ಲ ನೋಡು. ಸಿಂಗಲ್ ಟೇಕ್ ಆರ್ಟಿಸ್ಟ್. ಔಟ್ ಪುಟ್ ಅದ್ಭುತವಾಗಿದೆ. ಆ ಯಪ್ಪಾ ಕ್ಯಾಮರೆ ಮುಂದೆ ನಿಂತ್ರೆ, ಡೈರೆಕ್ಟರ್ ಆದವನು ಎಪಿಸೋಡ್ ಗಟ್ಲೆ ಸುತ್ತಬಹುದು.

ಆದರೆ……

ಅದೇ ಎಟಿಟ್ಯೂಡ್ ವಿಷಯಕ್ಕೆ ಬಂದ್ರೆ ಕನ್ನಿಂಗು, ದುರಹಂಕಾರ, ನನ್ನ ಬಿಟ್ರೆ ಬೇರೆ ಆಕ್ಟರ್ ಗಳೇ ಇಲ್ಲ ಅನ್ನೊ ಕೊಬ್ಬು. ತಮ್ಮ ನಡತೆಯಲ್ಲಿ, ಮಾತಿನಲ್ಲಿ ಸದಾ ಇದನ್ನೇ ತೋರಿಸೋರು. ಸಹ ನಟರ ಎದುರಿಗೇ ಗಾಂಚಾಲಿ ಮಾಡುತ್ತಿದ್ದ ಮನುಷ್ಯ ಇನ್ನು ಸೆಟ್ ಹುಡುಗರನ್ನು ಬಿಟ್ಟಾರೆಯೆ? ನಾವು ಮನೆ ನಾಯಿಯನ್ನೂ ಆ ರೀತಿ ನಡೆಸಿಕೊಳ್ಳುವುದಿಲ್ಲ ಸುಘೋಷ್, ಹಾಗೆ ನಡೆಸಿಕೊಳ್ಳೋರು.

ಒಂದಿನ ಸೆಟ್ ನಲ್ಲಿ ಊಟ ಮಾಡ್ತಾ ಇದ್ವಿ. ನನ್ನ ಪಕ್ಕಾನೇ ಸಾಹೇಬ್ರು ಊಟ ಮಾಡ್ತಾ ಕೂತ್ಕೊಂಡಿದ್ರು. ಅವರ ಊಟ ಮುಗೀತು. ನಾವೆಲ್ಲ ಊಟ ಮುಗಿದ್ರೆ, ನಲ್ಲಿ ಹತ್ರ ಪ್ಲೇಟ್ ಇಟ್ಟು, ಅಲ್ಲೇ ಕೈತೊಳ್ಕೊಂಡು ಬರ್ತಿವಿ. ಆಮೇಲೆ ಬಾಳೆ ಹಣ್ಣು ಇಟ್ಟಿರ್ತಾರೆ. ಅದನ್ನ ತಿಂತೀವಿ. ಆದರೆ ಈ ಯಪ್ಪಾ ಊಟ ಮುಗಿದ ಬಳಿಕ, ಊಟದ ಹುಡಗನ್ನ “ಏ ಬಾರೋ ಇಲ್ಲಿ” ಎಂದು ದರ್ಪದಿಂದ ಕರೆದರು. ಆತ “ಏನ್ ಸಾರ್?” ಎಂದು ಇವರ ಬಳಿ ಬಂದ. ಆತನ ಕೈಗೆ ತಮ್ಮ ತಟ್ಟೆ ಇಟ್ಟರು. ಅದನ್ನು ಇನ್ನೇನು ಹುಡುಗ ತೆಗೆದುಕೊಂಡು ಹೋಗಬೇಕು. ಅಷ್ಟರಲ್ಲಿ “ಏ…..ನಿಲ್ಲೋ ಒಂಚೂರು. ಎಲ್ಲಿ ಓಡಿ ಹೋಗ್ತಿಯಾ?” ಎಂದವರೇ ಆತನ ಕೈಯಲ್ಲಿ ತಟ್ಟೆ ಇರುವಂತೆಯೇ ಅದರಲ್ಲಿ ತಮ್ಮ ಕೈ ತೊಳೆದುಕೊಂಡರು. ಹುಡುಗನಿಗೆ ಒಂಥರಾ ಆಯಿತು. ಆದರೂ ಪಾಪ ಸುಮ್ಮನಿದ್ದ. ಅವರದ್ದು ಕೈ ತೊಳೆದು ಮುಗಿಯಿತು. ಹುಡುಗ ಇನ್ನೇನು ಹೋಗಬೇಕು, ಮತ್ತೆ ತಡೆದು “ಏ……… ಬರೀ ಅರ್ಜಂಟ್ ಮಾಡ್ತಿ ಕಣಯ್ಯಾ ನೀನು. ಏನ್ ಎಲ್ಲಾದ್ರೂ ಹೋಗ್ಬೇಕಾ?” ಎಂದವರೇ ಅಲ್ಲೇ ಇಟ್ಟಿದ್ದ ಬಾಳೆಹಣ್ಣು ತಗೊಂಡು ಸಿಪ್ಪೆ ಸುಲಿದು ಅದನ್ನು ತಟ್ಟೆಯಲ್ಲಿ ಹಾಕಿ “ಹಂ…ನಡಿ” ಎಂದರು ಸೊಕ್ಕಿನಿಂದ. ನಾನು ಸೇರಿದಂತೆ ಅಲ್ಲಿದ್ದ ಹಲವರಿಗೆ ಈ ನಟರ ನಡವಳಿಕೆ ವಾಕರಿಕೆ ಹುಟ್ಟಿಸಿತು. ಆದರೆ ಏನೂ ಅನ್ನುವ ಹಾಗಿಲ್ಲ. ಹಿರಿಯ ನಟರಲ್ಲವೆ? ಹುಡುಗನಿಗೆ ಊಟ ಮಾಡಿದ ತಟ್ಟೆ ಕೊಟ್ಟು ಅದರಲ್ಲಿ ಕೈತೊಳೆದುಕೊಳ್ಳುವುದು ಅನೇಕಬಾರಿ ನಡೆದಿತ್ತು.

ಮನುಷ್ಯರು ಸುಮ್ಮನಿರಬಹುದು. ಆದರೆ ದೇವರು ಸುಮ್ಮನಿರುತ್ತಾನೆಯೆ? ಕರ್ಮಕ್ಕೆ ತಕ್ಕ ಹಾಗೆ ಫಲ.

ಮುಂದೊಂದು ದಿನ ಈ ಹಿರಿಯ ನಟರಿಗೆ ಆಕ್ಡಿಡೆಂಟ್ ಆಗಿ ಎರಡೂ ಕಾಲೂ ಫ್ರಾಕ್ಚರ್ ಆಯಿತು. ಅವರು ಆಕ್ಸಿಡೆಂಟ್ ನಲ್ಲಿ ಉಳಿದದ್ದೇ ಹೆಚ್ಚು. ಆದರೆ ಆಕ್ಸಿಡೆಂಟ್ ಎಂದು ಶೂಟಿಂಗ್ ನಿಲ್ಲಿಸುವಂತಿರಲಿಲ್ಲ. ತುಂಬಾ ಮುಖ್ಯವಾದ ಕ್ಯಾರೆಕ್ಟರ್ ಮಾಡುತ್ತಿದ್ದರು. ಹೀಗಾಗಿ ಕೆಲವೇ ದಿನಗಳ ಬಳಿಕ ಇನ್ನೂ ಕಾಲುಗಳಿಗೆ ಪ್ಲಾಸ್ಟರ್ ಇರುವಂತೆಯೇ ಏನೇನೋ ಪ್ರಯಾಸ ಪಟ್ಟು ಅವರನ್ನು ಶೂಟಿಂಗ್ ಗೆ ಕರೆತರಲಾಯಿತು. ಆಗ ನೋಡಬೇಕಾಗಿತ್ತು ಸೀನು, ಹಿರಿಯ ನಟರಿಗೆ ಕನಿಷ್ಠ ಇಬ್ಬರ ಸಹಾಯವಿಲ್ಲದೆ ನಡೆಯಲು ಬರುತ್ತಿರಲಿಲ್ಲ. ಆ ಕಡೆ ಈ ಕಡೆ ಇಬ್ಬರ ಹೆಗಲ ಮೇಲೆ ಕೈಹಾಕಿ ನಿಧಾನವಾಗಿ ನಡೆದುಕೊಂಡು ಬರಬೇಕಿತ್ತು. ಆದರೆ ಸೆಟ್ ನಲ್ಲಿ ಒಬ್ನೇ ಒಬ್ಬ ಹುಡುಗ ಕೂಡ ಅವರನ್ನ ಕಾರಿನಿಂದ ಇಳಿಸಿಕೊಳ್ಳುವುದಕ್ಕೆ ಬರಲಿಲ್ಲ. ಎಲ್ಲರೂ ಬೇಕೆಂದೇ ಮುಖ ತಪ್ಪಿಸಿಕೊಂಡು ಓಡಾಡುವವರೇ. ಕಾರಿನ ಡ್ರೈವರ್ ಹುಡುಗರನ್ನು ಕರೆದರೂ, ಕುಂಟು ನೆಪ ಹೇಳಿಯೋ, ತಮಗೆ ಬೇರೆ ಕೆಲಸವಿದೆಯೆಂದೋ ಮಾಯವಾದರು. ಆಗ ನಾವೇ ಕೆಲ ಕಲಾವಿದರು ಸೇರಿ ಅವರನ್ನು ಮೇಕಪ್ ರೂಂಗೆ ಕರೆದುಕೊಂಡು ಹೋಗಬೇಕಾಯಿತು. ಈಗೇನೋ ಅವರ ಪ್ಲಾಸ್ಟರ್ ತೆಗೆಯಲಾಗಿದೆ. ಆದರೆ ಪ್ಲಾಸ್ಟರ್ ಹಾಕಿಕೊಂಡೇ ಶೂಟಿಂಗ್ ಬರುತ್ತಿದ್ದಾಗ ಸೆಟ್ ನಲ್ಲಿ ಹುಡುಗರು ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಜನರ ಪ್ರೀತಿ ಗಳಿಸಿಕೊಳ್ಳದೇ ಇದ್ರೆ ಏನು ಮಾಡಿ ಏನ್ ಬಂತು ಅಲ್ವಾ?

 

 

ಕವಿವಿ 5 ನೇ ವಲಯ ಮಟ್ಟದ ಯುವಜನೋತ್ಸವ ಉದ್ಘಾಟನೆ

ಲೋಕಧ್ವನಿಯಲ್ಲಿ ಪ್ರಕಟವಾಗಿರುವ ಸುದ್ದಿ ಕಳಿಸಿಕೊಟ್ಟವರು ಶ್ರೀ. ಮೋಹನ್ ಹೆಗಡೆ.

ಸುದ್ದಿ ಕೃಪೆ - ಲೋಕಧ್ವನಿ

 

 

 

70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ

ಆಖಿರ್ ಇಸ್ ದರ್ದ್ ಕೀ ದವಾ ಕ್ಯಾ ಹೈ?

ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.

“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”

“ಹೌದೇನೋ? ಎಲ್ಲಿ ಜಾತ್ರೆ?”

“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”

“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”

“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”

“ಯಾಕೆ ಏನಾಯ್ತು?”

“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”

 

ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಹೀಗೊಂದು ಪತ್ರ

ಟಿ. ಎನ್. ರಾಮಕೃಷ್ಣ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ನ ಸಂಚಾಲಕರು. ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅವರು ನನ್ನೊಂದಿಗೆ ಹಂಚಿಕೊಂಡ ಒಂದು ಪ್ರಸಂಗ ಇಲ್ಲಿದೆ.

ಫೋಟೋ ಕೃಪೆ - ದಿ ಹಿಂದೂ

Dear Sughosh,

In continuation to my telecon of day before yesterday, I would like to inform you that the Rajyostsava award is loosing its importance and many undeserving people are getting the same due to caste, influence, political connections as also other criteria.

I have tried to get the Rajyostava award to Centenarian freedom fighter Pandit Sudhakar Chaturvedi. Some of the important facts about Sri. Chaturvedi are as below.

*Born on Ramnavami day of 1897, he is the sole surviving eye witness for Jalian Wala Bagh massacre

*He is a bachelor who has adopted a Harijan as son

*Though he is eligible for both Central and State pention given to freedom fighters, he has not accepted it.

*He had participated in the freedom movement actively and had sufferred imprisonment for 13 years

*He was a contemporary of Gandhiji, Subhas, Nehru, and had associated with Tilak, Lajpat Rai, Bhagat Singh, Chandarshekara Azad, Savarkar,Bipin Chandra pal and many other such towerly extraordinary personalities of freedom movement.

*He has translated Vedas to Kannada and delivers speech on Vedas daily.

The above is only a brief biodata of Sri. Chaturvedi.

I have personally spoken to JAYANAGAR MLA. Sri Chaturvedi lives at 5th Block, Jayanagar, Had also spoken to Malleswaram MLA personally and to an MLC over phone. Had also given letter to CM and to the director of Kannada & Culture Manu Baligar, but all in vain. Also other attempts are also made through a powerful organisation which has got influence on the present state government and sorry to state that even this effort also did not suceed.

Regards

T N Ramakrishna.

 

1981 ವೀನಸ್ ಸರ್ಕಸ್ ದುರುಂತ – ಮುಂದೇನಾಯಿತು?

ಎಲ್ಲದಕೂ ಕಾರಣನು ಶ್ರೀಕೃಷ್ಣ ಪರಮಾತ್ಮ....

‘ಮುಕ್ತ ಮುಕ್ತ’ ದ ಸಂಚಿಕೆ ನಿರ್ದೇಶಕ ವಿನೋದ್ ಧೋಂಡಾಳೆ, ಆ ದುರಂತದ ಸಂದರ್ಭದಲ್ಲಿ ನಡೆದ ಮೈಜುಮ್ಮೆನುವ ಘಟನೆ ಹೇಳಿದರು.

“ಸುಘೋಷ್, ಆ ದಿನ ನನಗೆ ಚೆನ್ನಾಗಿ ನೆನಪಿದೆ ಕಣ್ರೀ. ನಾನಾಗ ಒಂದನೇ ಕ್ಲಾಸೋ, ಎರಡನೇ ಕ್ಲಾಸೋ ಇದ್ದೆ. ಅವತ್ತು ಸರ್ಕಸ್ ನೋಡೋದಿಕ್ಕೆ ಅಂತ ಹೋದ ಮಕ್ಕಳಲ್ಲಿ ನಾನೂ ಒಬ್ಬ. ಆದರೆ ಆ ಬೆಂಕಿಗೆ ನಾನಷ್ಟೇ ಅಲ್ಲ ನಮ್ಮ ಶಾಲೆಯ ಮಕ್ಕಳ್ಯಾರೂ ಬಲಿಯಾಗಲಿಲ್ಲ. ಅದಕ್ಕೆಲ್ಲ ಕಾರಣ ನಮ್ಮ ಸರ್ರು. ಬೆಂಕಿ ಹತ್ತಿಕೊಂಡದ್ದು ಸರ್ಕಸ್ ಮುಗಿದ ಬಳಿಕ. ಆದರೆ ಸರ್ಕಸ್ ಮುಗೀಲಿಕ್ಕೆ ಇನ್ನೂ 15 ನಿಮಿಷ ಬಾಕಿ ಇದೆ ಅನ್ನೋವಾಗ, ಸುಮ್ನೆ ಮಕ್ಕಳೆಲ್ಲ ಒಂದೇ ಸಾರಿ ಹೊರಗೆ ಹೋಗೋದಕ್ಕೆ ನೋಡಿ ಗಲಾಟೆ ಮಾಡ್ತಾರೆ ಅಂತ, ನಮ್ಮ ಸರ್ರು ಹುಂ…ನಡೀರಿ ನಡೀರಿ ಸರ್ಕಸ್ ಮುಗೀತು ಅಂತ ನಮ್ಮನ್ನೆಲ್ಲ ಹೊರಗ್ ಕರ್ಕೊಂಡು ಬಂದು ಬಿಟ್ಟಿದ್ರು. ಅಷ್ಟು ದೂರ ಹೋದ ಮೇಲೆ ಹಿಂತಿರುಗಿ ನೋಡ್ತಿವಿ, ಬೆಂಕಿ ಭಗ ಭಗ ಅಂತ ಉರೀತಾ ಇತ್ತು. ನೋಡಿ, ಟೈಮ್ ಹೇಗೆಲ್ಲ ಇರತ್ತೆ ಅಂತ. ನಮ್ಮ ಸರ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು. ಅಲ್ವಾ ”

 

1981 ವೀನಸ್ ಸರ್ಕಸ್ ದುರಂತ….

ಖ್ಯಾತ ವಕೀಲ ಸಿ. ಎಚ್. ಹನುಮಂತರಾಯ ಅವರ ವಕೀಲರೊಬ್ಬರ ವಗೈರೆಗಳು ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದೆ. 1981 ರಲ್ಲಿ ಬೆಂಗಳೂರಿನ ರೈಲು ನಿಲ್ದಾಣದ ಸಮೀಪ ನಡೆದ ವೀನಸ್ ಸರ್ಕಸ್ ನ ಭೀಕರ ಬೆಂಕಿ ದುರಂತದ ಬಗ್ಗೆ ಹನುಮಂತರಾಯರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಛೆ...

ಅದು ವೀನಸ್ ಸರ್ಕಸ್ ನ ಕೊನೆಯ ದಿನವಾಗಿತ್ತು. ರೈಲ್ವೆನಿಲ್ದಾಣದ ಕಡೆಯಿಂದ ಸುಜಾತಾ ಥೇಟರ್ ಗೆ ಹೋಗುವ ದಾರಿಯಲ್ಲಿ ಎಡಕ್ಕೆ ರಸ್ತೆಯ ಮೇಲೆಯೇ ಒಂದು ದೇವಸ್ಥಾನವಿದೆ. ಅಲ್ಲಿಯೇ ರೈಲ್ವೇ ಓವರ್ ಬ್ರಿಜ್ ಕೂಡ ಹಾದು ಹೋಗುತ್ತದೆ. ಅದರ ಪಕ್ಕದಲ್ಲಿ ವೀನಸ್ ಸರ್ಕಸ್ ಬಂದಿತ್ತು. ಕೊನೆಯ ದಿನ ಶಾಲಾ ವಿದ್ಯಾರ್ಥಿಗಳಿಗೆಂದು ರಿಯಾಯತಿ ದರದಲ್ಲಿ ಶೋ ಏರ್ಪಡಿಸಲಾಗಿತ್ತು. ಹೀಗಾಗಿ ವಿವಿಧ ಶಾಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸರ್ಕಸ್ ನೋಡಲು ಬಂದಿದ್ದರು. ಆದರೆ ಶೋ ಮುಗಿಯುವ ಸಂದರ್ಭದಲ್ಲಿ ಅಚಾನಕ್ಕಾಗಿ ಸರ್ಕಸ್ ಟೆಂಟ್ ಗೆ ಬೆಂಕಿ ಹತ್ತಿಕೊಂಡು ಸುಮಾರು 200 ಮಕ್ಕಳು ಪ್ರಾಣಕಳೆದುಕೊಂಡರು. ಬೆಂಕಿ ಮತ್ತು ಕಾಲ್ತುಳಿತ ಮಕ್ಕಳನ್ನು ಬಲಿತೆಗೆದುಕೊಂಡಿತು. ನೂರಾರು ಮಕ್ಕಳು ಗಾಯಗೊಂಡರು. ಬೆಂಕಿಯಿಂದ ಬೆದರಿದ ಸರ್ಕಸ್ ಪ್ರಾಣಿಗಳು ತಪ್ಪಿಸಿಕೊಂಡು ರಸ್ತೆಗೆ ಬಂದು ಸಿಕ್ಕಸಿಕ್ಕಲ್ಲಿ ಓಡಲಾರಂಭಿಸಿದ್ದರಿಂದ, ಮಕ್ಕಳನ್ನು ರಕ್ಷಿಸುವುದು ಮತ್ತಷ್ಟು ಕಷ್ಟವಾಯಿತು. ಹನುಮಂತರಾಯರು ತಮ್ಮ ಪುಸ್ತಕದಲ್ಲಿ ಈ ಘಟನೆಯ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. ಅಂದು ಮಕ್ಕಳನ್ನು ರಕ್ಷಿಸುವುದರಲ್ಲಿ ರಾಯರ ಪಾತ್ರ ಕೂಡ ಇತ್ತು.

ಬೆಂಕಿ ಹತ್ತಿಕೊಳ್ಳಲು ಕಾರಣ, ಬೃಹತ್ ಗಾತ್ರದ ಸರ್ಕಸ್ ಟೆಂಟ್ ಮೇಲೆ ಹಾಯ್ದು ಹೋಗಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗಳು. ಆ ವಿದ್ಯುತ್ ತಂತಿಗಳನ್ನು ಮುಟ್ಟುವ ಅವಶ್ಯಕತೆಯೇ ಇಲ್ಲ. ಹತ್ತಿರ ಹೋದರೂ ಸಾಕು, ಝಳ ಸರಿಯಾಗಿಯೇ ತಟ್ಟುತ್ತದೆ. ವಾಸ್ತವವಾಗಿ ರೈಲ್ವೆ ಟ್ರಾಕ್ ಸಮೀಪ, ಹೈ ಟೆನ್ಶನ್ ತಂತಿಗಳು ಹಾದು ಹೋಗಿರುವ ಸಮೀಪ ಈ ರೀತಿ ಸರ್ಕಸ್ ಟೆಂಟ್ ಹಾಕಲು ಅವಕಾಶ ನೀಡುವಂತೆಯೇ ಇಲ್ಲ. ಆದರೆ ರೈಲ್ವೆ ಅಧಿಕಾರಿಗಳು ಸೇರಿದಂತೆ ಎನ್ ಓ ಸಿ ನೀಡಬೇಕಾಗಿದ್ದ ಅಧಿಕಾರಿಗಳು ಹೇಲು ತಿಂದು ಅನುಮತಿ ನೀಡಿದ್ದರು. ಅವರ ಆ ನೀಚ ಕೆಲಸಕ್ಕಾಗಿ 200 ಮಕ್ಕಳು ಕರಕಲಾಗಿದ್ದರು. ಶ್ರೀಮಾನ್ ಗುಂಡೂರಾಯರು ಆಗ ರಾಜ್ಯವನ್ನು ‘ಮುನ್ನಡೆಸುತ್ತಿದ್ದರು’. ಆ ಇಡೀ ಘಟನೆಯಲ್ಲಿ ಯಾವೊಬ್ಬ ಅಧಿಕಾರಿಗಾಗಲಿ, ಸರ್ಕಸ್ ಕಂಪನಿಯ ಮಾಲೀಕರಿಗಾಗಲಿ ಶಿಕ್ಷೆಯಾಗದೇ ಹೋಗಿದ್ದು ಮಾತ್ರ ವಿಪರ್ಯಾಸ.

ಈ ಘಟನೆಯನ್ನು ‘ಮುಕ್ತ ಮುಕ್ತ’ ದ ಸಂಚಿಕೆ ನಿರ್ದೇಶಕ ವಿನೋದ್ ಧೋಂಡಾಳೆ ಅವರೊಡನೆ ಚರ್ಚಿಸುತ್ತಿದ್ದಾಗ, ಆ ಸಂದರ್ಭದಲ್ಲಿ ನಡೆದ ಕುತೂಹಲ ಘಟನೆಯೊಂದನ್ನು ವಿನೋದ್ ನೆನಪಿಸಿಕೊಂಡರು. ಅದನ್ನು ನಾಳೆ ಬರೆಯುತ್ತೇನೆ.

 

 

ಅರುಂಧತಿಗೆ ಕಾರ್ನಾಡ್ ಬೆಂಬಲ

ಕೃಪೆ - ವಿಕ (05/11/2010)

ದೀಪ್ ದೀಪಾವಳ್ಯೋ, ಹಬ್ಬಕ್ಕೆಲ್ಲ ಹೋಳಗ್ಯೋ….

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ಹೃದಯದಲ್ಲಿನ ದೀಪ, ಸದಾ ಜಾಜ್ವಲ್ಯಮಾನವಾಗಿ ಉರಿಯುತ್ತಿರಲಿ. ಈ ಬಾರಿಯ ದೀಪಾವಳಿಯಲ್ಲಾದರೂ ಮಕ್ಕಳ ಕಣ್ಣುಗಳಿಗೆ ಹಾನಿಯಾಗದಿರಲಿ. ಹಾಗೆಯೇ ಪಟಾಕಿ ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ದುಡಿಯುವುದು ಇನ್ನಾದರೂ ನಿಲ್ಲಲಿ….

ಅಸತೋಮಾ ಸದ್ಗಮಯ...

ಹುಡುಗ ಹುಡುಗನ್ನೇ ಮದುವೆ ಆಗೋ ಈ ಕಾಲ್ದಲ್ಲೂ….

ನಿರ್ವಿಘ್ನಂ ಕುರುಮೇ ದೇವ....

ಟ್ರಿಣ್ ಟ್ರಿಣ್, ಟ್ರಿಣ್ ಟ್ರಿಣ್, ಟ್ರಿ…..

ಹಲೋ….

ಹಲೋ ಸರ್ ನಮಸ್ಕಾರ.

ನಮಸ್ಕಾರ. ಯಾರ್ ಮಾತಾಡೋದು?

ಸರ್, ನಾನು ಹಯವದನ.

ಓಹ್…ಹಯವದನ್. ಏನ್ರೀ ಪತ್ತೇನೇ ಇಲ್ವಲ್ರಿ….ಒಂದು ಫೋನ್ ಇಲ್ಲ, ಒಂದೇ ಮೆಸೇಜ್ ಇಲ್ಲ. ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದ್ರೆ ಸ್ವಿಚ್ ಆಫ್ ಅಂತ ಬರ್ತಾ ಇತ್ತು….ಹಂ ಇರ್ಲಿ ಬಿಡಿ. ಎಲ್ಲಿ ಇದೀರಾ? ಏನ್ ಮಾಡ್ತಾ ಇದೀರಾ?

ಇಲ್ಲೇ ಬೆಂಗ್ಳೂರಲ್ಲೇ ಇದೀನಿ ಸರ್. ಅದೇ ಸಾಫ್ಟ್ ವೇರ್ ಕಂಪ್ನೀನಲ್ಲೇ ಕೆಲಸ ಮಾಡ್ತಾ ಇದೀನಿ. ಒಂದು ಗುಡ್ ನ್ಯೂಸ್ ಕೋಡೋಣ ಅಂತ ಪೋನ್ ಮಾಡ್ದೆ. ತಾವು ಬಯ್ಯಬಾರ್ದು.

ನೀವು ಗುಡ್ ನ್ಯೂಸ್ ಕೊಟ್ರೆ ನಾನ್ ಯಾಕ್ರೀ ಬೈಲಿ? ಏನು ಗುಡ್ ನ್ಯೂಸು?

ನನ್ನ ಮದುವೆ ಆಯ್ತು ಸರ್.

ಏನು? ಮದುವೆ ಮಾಡ್ಕೊಂಡ್ರಾ? ಹೇ…ಕಾಂಗ್ರಾಚುಲೇಷನ್ಸ್. ಮತ್ತೆ ನಮಗೆಲ್ಲ ಊಟಕ್ಕ್ ಕರೀಲೇ ಇಲ್ಲ. ಹೋಗ್ಲಿ ಇನ್ಫಾರ್ಮೂ ಮಾಡ್ಲಿಲ್ಲ. ಇದು ಅನ್ಯಾಯ ಕಣ್ರೀ….ಅಂದ ಹಾಗೆ ಹುಡುಗಿ ನಾಗವೇಣಿನೇ ತಾನೆ?

ಹೌದು ಸಾರ್. ಅವಳ್ ಜೊತೆನೇ ಮದ್ವೇ ಆಯ್ತು. ನಾಲ್ಕು ವರ್ಷದ ಪ್ರೇಮ. ನಿಮಗ್ ಗೊತ್ತಿಲ್ದೇ ಇದ್ದಿದ್ದು ಏನಿದೆ? ಆದ್ರೆ ಸಾರಿ ಸರ್. ಯಾರಿಗೂ ಇನ್ಫಾರ್ಮ್ ಮಾಡ್ಲಿಕ್ಕೆ ಆಗ್ಲಿಲ್ಲ. ತುಂಬ ಅರ್ಜೆಂಟ್ ಅರ್ಜೆಂಟಲ್ಲಿ ಮದುವೆ ಆಯ್ತು. ಅದೂ ರಿಜಿಸ್ಟರ್ ಮ್ಯಾರೇಜ್ ಸರ್.

ಓಹ್ ಹೌದಾ…..ಯಾಕೆ ಏನಾದ್ರೂ ಪ್ರಾಬ್ಲಂ ಆಯ್ತಾ?

ಪ್ಲಾಬ್ಲಂ ಆಗ್ಲಿಲ್ಲ ಸರ್. ಪ್ಲಾಬ್ಲಂ ಆಗೋ ಹಾಗೆ ಮಾಡಿದ್ರು. ನಾವು ಅಯ್ಯರ್ಸು. ನಾಗವೇಣಿ ಅಯ್ಯಂಗಾರ್ಸು. ನಮ್ ನಮ್ ಪೇರೆಂಟ್ಸ್ ಎಲ್ಲಾ ಒಪ್ಕೊಂಡಿದ್ರು. ಕೊನೆಗೆ ಇಬ್ರದ್ದು ಬೇರೆ ಬೇರೆ ಕಾಸ್ಟು ಅಂತ ಎರಡ ಕಡೆನೂ ಬೇಡ ಅಂದ್ಬಿಟ್ರು.

ಏನ್ ಹಯವದನ….ಈ ಕಾಲ್ದಲ್ಲೂ ಇದೆಲ್ಲ….

ಈ ಕಾಲ್ದಲ್ಲೇ ಹೆಚ್ಚಾಗಿದೆ ಸರ್. ಹುಡುಗ ಹುಡಗನ ಜೊತೆ, ಹುಡುಗಿ ಹುಡುಗಿ ಜೊತೆ ಮದುವೆ ಆಗ್ತಾ ಇರೋ ಇವತ್ತಿನ ಕಾಲದಲ್ಲೂ ಹೀಗೆಲ್ಲ ಆಗತ್ತೆ ಅಂದ್ರೆ ನಂಬಕ್ಕಾಗಲ್ಲ. ಅಲ್ವಾ ಸರ್? ಈಗ ಎರಡೂ ಕಡೆಯವರ ವಿರೋಧ ಕಟ್ಟಿಕೊಂಡೇ ಮದುವೆ ಆಗೀದಿವಿ. ನಿಮ್ಮ ಆಶೀರ್ವಾದ ಬೇಕು ಸರ್.

ಖಂಡಿತ ನನ್ನ ಆಶೀರ್ವಾದ ಇದೆ. ಅಂದ ಹಾಗೆ ಬರೋ ಭಾನುವಾರ ಏನ್ ಮಾಡ್ತಾ ಇದೀರಿ?

ವಿಶೇಷ ಏನೂ ಇಲ್ಲ ಸರ್.

ಹಾಗೆದ್ರೆ ಹೊಸ ಗಂಡ ಹೆಂಡತಿ ನಮ್ಮ ಮನೆಗೆ ಊಟಕ್ಕೆ ಬನ್ನಿ. ಆಮೇಲೆ ಮಾತಾಡೋಣ.

ಸರಿ ಸರ್. ಒನ್ಸ್ ಅಗೇನ್ ಸಾರಿ ಸರ್. ಮದುವೆಗೆ ಕರೀಯೋದಕ್ಕೆ ಆಗ್ದೇ ಇದ್ದದ್ದಕ್ಕೆ.

ನೋ ಇಶ್ಯೂಸ್ ಹಯವದನ. ವಿಶ್ ಯೂ ಎ ಹ್ಯಾಪಿ ಮ್ಯಾರೀಡ್ ಲೈಫ್. ಟೇಕ್ ಕೇರ್. ಬೈ.

ಬೈ. ಥ್ಯಾಂಕ್ಯೂ ಸರ್. ಇಡ್ತೀನಿ.

ಟೀಂ….ಟೀಂ….ಟೀಂ……

 

ಬೆಳ್ಳಿ ಪರದೆಯ ಬಣ್ಣದ ಪ್ರತಿಭೆ ಮೇಕಪ್ ಚಂದ್ರಣ್ಣ

ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….

ಚಿತ್ರ
1
2

ಕನ್ನಡ ರಾಜ್ಯೋತ್ಸವದ ಹಾರೈಕೆಗಳು….

ಕನ್ನಡದ ಕೆಲಸ, ದೇವರ ಕೆಲಸ.

ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಗೆ ಬರಲಿ

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯವಷ್ಟೇ ಮೆರೆಯಲಿ

‘ನುಡಿಸಿರಿ’ಯಲ್ಲಿ ಪುಸ್ತಕಗಳಿಗೂ ‘ಲಿಫ್ಟ್’ ಸಿಗಲಿ

ಕನ್ನಡದ ಹೆಸರಿನಲ್ಲಿ ರೋಲ್ ಕಾಲ್ ದಂಧೆ ನಡೆಯದಿರಲಿ

ಎಂ ಜಿ ರೋಡಿನಲ್ಲಿ, ಫೋರಂ ಮಾಲ್ ನಲ್ಲಿ, ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಕನ್ನಡಿಗ

ಕನ್ನಡವನ್ನೇ ಮಾತಾಡಲಿ

ಕನ್ನಡ ನಾಯಕರು ಕ್ಯಾಮೆರಾಗೆ ಮಾತಾಡುವಾಗ ಮೈಕ್ ಹಿಡಿದುಕೊಂಡಿರುವ ರಿಪೋರ್ಟರ್ ಮೇಲೆ

ಉಗುಳು ಹಾರಿಸದಿರಲಿ

ಹಾಗೆಯೇ, ಅಲ್ಪಪ್ರಾಣ, ಮಹಾಪ್ರಾಣಗಳ ಪ್ರಾಣ ತೆಗೆಯದಿರಲಿ

ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗಷ್ಟೇ ಸಿಗಲಿ

ಅದರ ಮೌಲ್ಯ ಮತ್ತಷ್ಟು ಹೆಚ್ಚಲಿ

ಮತ್ತೊಬ್ಬ ತೇಜಸ್ವಿ ಹುಟ್ಟಿಬರಲಿ

ಕನ್ನಡ ಪತ್ರಿಕೆಗಳ ಸಂಪಾದಕೀಯ ವಿಭಾಗ ವಾರಕ್ಕೊಮ್ಮೆಯಾದರೂ ಮೇಲ್ ಚೆಕ್ ಮಾಡಲಿ

ಗ್ರಂಥಾಲಯಗಳಿಗೆ ಕಿಲೋ ಲೆಕ್ಕದಲ್ಲಿ ಪುಸ್ತಕಗಳು ಖರೀದಿಯಾಗುವುದು ನಿಲ್ಲಲಿ

ಅಂಕಿತ ಪುಸ್ತಕ ಪ್ರತಿ ಭಾನುವಾರ ಇಡ್ಲಿ ವಡೆ ಕೊಡಿಸುತ್ತಿರಲಿ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ