ಕನ್ನಡ ರಾಜ್ಯೋತ್ಸವದ ಹಾರೈಕೆಗಳು….

ಕನ್ನಡದ ಕೆಲಸ, ದೇವರ ಕೆಲಸ.

ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಗೆ ಬರಲಿ

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯವಷ್ಟೇ ಮೆರೆಯಲಿ

‘ನುಡಿಸಿರಿ’ಯಲ್ಲಿ ಪುಸ್ತಕಗಳಿಗೂ ‘ಲಿಫ್ಟ್’ ಸಿಗಲಿ

ಕನ್ನಡದ ಹೆಸರಿನಲ್ಲಿ ರೋಲ್ ಕಾಲ್ ದಂಧೆ ನಡೆಯದಿರಲಿ

ಎಂ ಜಿ ರೋಡಿನಲ್ಲಿ, ಫೋರಂ ಮಾಲ್ ನಲ್ಲಿ, ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಕನ್ನಡಿಗ

ಕನ್ನಡವನ್ನೇ ಮಾತಾಡಲಿ

ಕನ್ನಡ ನಾಯಕರು ಕ್ಯಾಮೆರಾಗೆ ಮಾತಾಡುವಾಗ ಮೈಕ್ ಹಿಡಿದುಕೊಂಡಿರುವ ರಿಪೋರ್ಟರ್ ಮೇಲೆ

ಉಗುಳು ಹಾರಿಸದಿರಲಿ

ಹಾಗೆಯೇ, ಅಲ್ಪಪ್ರಾಣ, ಮಹಾಪ್ರಾಣಗಳ ಪ್ರಾಣ ತೆಗೆಯದಿರಲಿ

ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗಷ್ಟೇ ಸಿಗಲಿ

ಅದರ ಮೌಲ್ಯ ಮತ್ತಷ್ಟು ಹೆಚ್ಚಲಿ

ಮತ್ತೊಬ್ಬ ತೇಜಸ್ವಿ ಹುಟ್ಟಿಬರಲಿ

ಕನ್ನಡ ಪತ್ರಿಕೆಗಳ ಸಂಪಾದಕೀಯ ವಿಭಾಗ ವಾರಕ್ಕೊಮ್ಮೆಯಾದರೂ ಮೇಲ್ ಚೆಕ್ ಮಾಡಲಿ

ಗ್ರಂಥಾಲಯಗಳಿಗೆ ಕಿಲೋ ಲೆಕ್ಕದಲ್ಲಿ ಪುಸ್ತಕಗಳು ಖರೀದಿಯಾಗುವುದು ನಿಲ್ಲಲಿ

ಅಂಕಿತ ಪುಸ್ತಕ ಪ್ರತಿ ಭಾನುವಾರ ಇಡ್ಲಿ ವಡೆ ಕೊಡಿಸುತ್ತಿರಲಿ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ