ದೀಪಾವಳಿಯ ಮಾರನೇ ದಿನ, ನಮ್ಮ ಗಲ್ಲಿಯ ರಸ್ತೆ

ಕೆಂಪಾದವೋ ಎಲ್ಲ ಕೆಂಪಾದವೋ

3 thoughts on “ದೀಪಾವಳಿಯ ಮಾರನೇ ದಿನ, ನಮ್ಮ ಗಲ್ಲಿಯ ರಸ್ತೆ

 1. ಪ್ರಿಯರೇ,

  ಈ ಚಿತ್ರವನ್ನು ಯಾವ ಉದ್ದೇಶದಿಂದ ಇಲ್ಲಿ ಪ್ರಕಟಿಸಿದ್ದೀರೋ ತಿಳಿಯುತ್ತಿಲ್ಲ.

  ೧. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದೇ? ಅಥವಾ
  ೨. ನಮ್ಮ ಜನರು ಎಷ್ಟು ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದ್ದಾರೆ ಎಂದೇ? ಅಥವಾ
  ೩. ಜನರಿಗೆ ಎಲ್ಲೆಂದರಲ್ಲಿ ಕಸ ಹಾಕಬಾರದೆಂದು ಗೊತ್ತಿಲ್ಲ ಎಂದೇ? ಅಥವಾ
  ೪. ದೀಪಾವಳಿ ಆಚರಿಸುವುದರಿಂದ ಮಾಲಿನ್ಯ ಆಗುತ್ತಿದೆ ಎಂದೇ? ಅಥವಾ
  ೫. ಈ ವರ್ಷ ಪಟಾಕಿ ಬೆಲೆ ಭಾರಿ ಹೆಚ್ಚಾಗಿ ಇಷ್ಟೇ ಪಟಾಕಿ ಹಚ್ಚಿದ್ದು ಎಂದೇ? ಅಥವಾ
  ಇನ್ನಾವುದಾದರೂ ಕಾರಣಗಳೇ?

  ಮಾಲಿನ್ಯವಾಗುತ್ತದೆ ಎಂದಾದರೆ ಅದು ದೀಪಾವಳಿಗೆ ಮಾತ್ರ ಸೀಮಿತವೇಕೆ? ಬೇರೆ ಸಮಾರಂಭಗಳ, ಕ್ರೀಡಾಕೂಟಗಳ ಅಥವಾ ಇನ್ನಾವುದೋ ಸಂಭ್ರಮಾಚರಣೆಗಳ ಕೊನೆಯಲ್ಲಿ ಸುಡಲ್ಪಡುವ ಸುಡು-ಸಿಡಿಮದ್ದುಗಳಿಂದ ಮಾಲಿನ್ಯವಾಗುವುದಿಲ್ಲವೇ? ಪತ್ರಿಕೆಗಳಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ಮಾಲಿನ್ಯ ಮಾಡಬೇಡಿ ಎಂದು ‘ಕಥೆ’ ಹೇಳುವವರು, ಇಂಥಾ ಸಮಾರಂಭಗಳ ಪಟಾಕಿ ಪ್ರದರ್ಶನವು ‘ರಂಗು ರಂಗಾಗಿತ್ತು’ ಎಂದು ವೈಭವಿಸುವುದು ನಗು ತರುತ್ತದೆ. ಪಕ್ಕದ ಮನೆಗೆ ಹೋಗಲೂ, ಅಂಗಡಿಯಿಂದ ಉಪ್ಪು ತರಲೂ ಬೈಕ್ ಉಪಯೋಗಿಸುವುದು ನಮಗೆ ಮಾಲಿನ್ಯ ಎನಿಸುವುದೇ ಇಲ್ಲ.

  ಕಣ್ಣಿಗೆ ಕಾಣದ ಯಾವುದೋ ಶಕ್ತಿ ಹಬ್ಬದ ಆಚರಣೆಗಳ ಲಗಾಮು ಹಿಡಿದಂತಿದೆ.

 2. ರಿಸ್ಪೆಕ್ಟ್ ಎವ್ರಿವನ್…..
  ಸಣ್ಣ ವಿಚಾರಕ್ಕೆ ತುಂಬಾ ತಲೆಕೆಡಿಸಿಕೊಂಡಂತಿದೆ. ಜಸ್ಟ್ ಚಿಲ್ ಗುರುಗಳೇ….ಕೂಲ್ ಆಗಿರಿ. ನಿಮ್ಮ ಪ್ರಶ್ನೆಗಳು ಎಷ್ಟು ಬಾಲಿಶವಾಗಿದೆಯೆಂದರೆ ಅದನ್ನು ನೋಡಿ ನಗು ಬಂತು.
  ಹೌದು. ಪರಿಸರ ಮಾಲಿನ್ಯವಾಗುತ್ತಿದೆ ಅಂತಾನೇ ಈ ಫೋಟೋ ಹಾಕಿದ್ದಾರೆ ಅಂತಿಟ್ಕೊಳ್ಳಿ…ತಪ್ಪಾ? ಪರಿಸರ ಮಾಲಿನ್ಯದ ಜೊತೆಗೆ ಸಾಕುಪ್ರಾಣಿಗಳು ಕೂಗಾಡೋದು ದೀಪಾವಳಿ ಟೈಮಲ್ಲೇ ಸ್ವಾಮಿ. ನಮ್ಮ ಬೀದಿನಲ್ಲಿ ಮೂರು ತಾಯಂದಿರು ಜಸ್ಟ್ ಬಾಣಂತಿಯರು. ಈ ಬಾರಿ ಅವರ ಗೋಳಂತೂ ಹೇಳತೀರದು. ನಾನೇನಾದರೂ ನಮ್ಮ ಬೀದಿ ಫೋಟೋ ನೀಡಿದ್ದರೆ, ರಸ್ತೆಯ ಗುರುತು ಕೂಡ ಸಿಕ್ಕುತ್ತಿರಲಿಲ್ಲ.
  ಹೌದು. ಜನ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತಪ್ಪಾ? ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲ ಹಬ್ಬಗಳನ್ನು ಅವರವರ ಇಷ್ಟಕ್ಕೆ ತಕ್ಕಂತೆ ಮತ್ತೊಬ್ಬರಿಗೆ ತೊಂದರೆಯಾಗದಂತೆ ಆಚರಿಸುವ ಹಕ್ಕಿದೆ ಅಲ್ವರಾ?
  ಹೌದು. ಜನರೂ ಫೂಲ್ ಗಳು. ಅವರಿಗೆ ಎಲ್ಲೆಂದರಲ್ಲಿ ಕಸ ಹಾಕಬಾರೆಂದು ಗೊತ್ತಿಲ್ಲ. ಪಟಾಕಿ ಹೊಡೆದಾದ ಮೇಲೆ ಮುಚ್ಕೊಂಡು ಕಸ ಎತ್ತಿದ್ರೆ ಈ ಪಾಟಿ ರಸ್ತೆ ಗಬ್ಬೇಳ್ತಿರ್ಲಿಲ್ಲಾ ಅಲ್ವಾ? ರಸ್ತೆ ಕ್ಲೀನ್ ಮಾಡೋದು ಬರೀ ಪೌರನಾಗರಿಕರ ಕೆಲ್ಸ ಅಷ್ಟೇನಾ?
  ಹೌದು. ದೀಪಾವಳಿ ಆಚರಿಸುವುದರಿಂದ ಮಾಲಿನ್ಯ ಆಗುತ್ತಿದೆ. ಸ್ವಲ್ಪ ಗೂಗಲ್ ಸರ್ಚ್ ಮಾಡಿ. ದೀಪಾವಳಿ ಟೈಮ್ ನಲ್ಲಿ ಮಾಲಿನ್ಯ ಏರಿಕೆಯಾದ ಪ್ರಮಾಣದ ಬಗ್ಗೆ ಫುಲ್ ಡೀಟೇಲ್ಸ್ ಸಿಗತ್ತೆ.
  ಇನ್ನು ನಿಮ್ಮ ಐದನೇ ಪ್ರಶ್ನೆ, ಕೇಳಕ್ಕೆ ಬೇರೆ ಯಾವ್ದೂ ಬಾಲಿಶ ಪ್ರಶ್ನೆ ಸಿಗದ ಕಾರಣಕ್ಕೆ ತುರುಕಿದಂತಿದೆ. ರೇಟ್ ಪ್ರತಿವರ್ಷಾನೂ ಏರ್ತಾನೇ ಇದ್ಯಲ್ಲ ರಿಸ್ಪೆಕ್ಟು….ಹೊಸದಾಗಿ ಏನ್ ಹೇಳ್ತಿದಿರಾ?
  ಇನ್ನು ಉಳಿದ ಕಾರಣಗಳನ್ನ ನೀವೇ ಹುಡ್ಕೊಳ್ಳಿ ಎವ್ರಿವನ್ನು…
  ತಗಳಪಾ……ರೀ ಸುಘೋಷ್ ನೀವೂ ಸೋಮಾರಿ ಕಣ್ರೀ….ನಿಮಗೆ ಬರೇ ದೀಪವಳಿ ಅಷ್ಟೇ ಸಿಕ್ತಾ? ಇನ್ನು ಮೇಲೆ ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಅಷ್ಟೇ ಯಾಕೆ ಇಡೀ ದೇಶದಲ್ಲಿ ನಡೆಯುವ ಎಲ್ಲ ಸಮಾರಂಭಗಳ, ಕ್ರೀಡಾಕೂಟಗಳ ಅಥವಾ ಇನ್ಯಾವುದೇ ಸಂಭ್ರಮಾಚರಣೆಗಳ ಟೈಮ್ ನಲ್ಲಿ ಹಾರಿಸುವ ಪಟಾಕಿ ಫೋಟೋ ತಕಂದು ಬ್ಲಾಗಲ್ಲಿ ಹಾಕಿ. ಮತ್ತೆ ರಿಸ್ಪೆಕ್ಟು ಅವರು ಹೇಳ್ತಾ ಇಲ್ವಾ….ಎಲ್ಲಾದ್ರಿಂದ ಮಾಲಿನ್ಯ ಆಗತ್ತೆ ಅಂತ…ನಿಮ್ಮ ಸೀರಿಯಲ್ಲೂ ಪಾರಿಯಲ್ಲೂ ಎಲ್ಲಾ ಬಿಟ್ಟು ಇದೇ ಕೆಲ್ಸ ಮಾಡಿ ಆಯ್ತಾ? ತುಂಬಾ ಪರ್ಪೆಕ್ಟ್ ಆಗಿದೆ ರಿಸ್ಪೆಕ್ಟು ನಿಮ್ಮ ಸಜೆಷನ್ನು.
  ಇನ್ನು ನಿಮ್ಮ ಕೊನೆ ಪಾಯಿಂಟ್ ಒಪ್ಕೊಂಡಿ ಬಿಡ್ರಿ…
  ಆದ್ರೂ ಇಷ್ಟು ಸಣ್ಣ ವಿಷಯಕ್ಕೆ ಟೆನ್ಶನ್ ತಗೋಬೇಡಿ. ಈಗ ನೋಡಿ ನಿಮ್ಮ ಕಾಮೆಂಟಿಗೆ ನಾನು ತಗೊಂಡ ಹಾಗೆ. (ಈ ಕಮೆಂಟನ್ನು ಬರೆದ ನಂತರ ಈ ಕಮೆಂಟನ್ನು ಬರೆದ ಮಹಾತ್ಮನು ಅನಾಸಿನ್ ಗುಳಿಗೆಯನ್ನು ತರಲು ಮೆಡಿಕೆಲ್ ಶಾಪಿಗೆ ಹೋದನು).

 3. ಪ್ರಿಯ ಗಣೇಶರೇ,
  ಸುಘೋಷರು ಅಷ್ಟೊಂಡು ಸೀರಿಯಸ್ ಆಗಿ ಆ ಚಿತ್ರ ಪ್ರಕಟಿಸಿದ್ದಾರೆ, ನೀವು ಅದನ್ನ ಸಣ್ಣ ವಿಚಾರ ಅಂದ್ರಲ್ಲಾ…! 😉

  ಇಲ್ಲಾ, ನಾನು ಈ ಪ್ರತಿಕ್ರಿಯೆ ಬರೆಯುವಾಗ, ಅಷ್ಟು ಸೀರಿಯಸ್ಸಾಗಿರಲಿಲ್ಲ. (ಈ “ಸೀರಿಯಸ್”ಗೆ ಕನ್ನಡ ಪದ ಹುಡುಕಿ ಹುಡುಕಿ ಸಾಕಾಯ್ತು 🙂 ) ಆದರೆ ಅದರ ಕೊನೆಯ ಸಾಲು ಬರೆಯುವಾಗ ಯಾಕೆ ಎಲ್ಲರೂ ದೀಪಾವಳಿಯನ್ನೇ ಗುರಿಯಾಗಿಟ್ಟುಕೊಂಡಿದ್ದಾರೆ ಅನ್ನಿಸಿತು. ದೀಪಾವಳಿಯ ಹೊತ್ತಿನಲ್ಲಿ ಪಟಾಕಿಯಿಂದ ಮಾಲಿನ್ಯವಾಗುತ್ತಿರುವುದು ಸರಿಯೇ. (ಕಣ್ಣಿಗೆ ಕಾಣುತ್ತಿರುವುದಕ್ಕೆ ಗೂಗಲ್ ಯಾಕೆ?) ಆದರೆ ಬೇರೆ ಎಲ್ಲ ಹೊತ್ತಿಗಿಂತ ದೀಪಾವಳಿಯ ಸಮಯದಲ್ಲೇ ಹೆಚ್ಚು ಪರಿಸರ ಜಾಗೃತಿ ಉಂಟಾಗುವುದು ಆಶ್ಚರ್ಯ.

  ಇನ್ನೊಂದು, ಗೂಗಲ್-ನಲ್ಲಿ ದೊರಕುವ ದೀಪಾವಳಿಯ ಸಮಯದಲ್ಲೂ, ಕ್ರಿಸ್ಮಸ್ ಸಮಯದಲ್ಲೂ ಉಂಟಾಗುವ ಮಾಲಿನ್ಯಗಳ ಅಂಕಿ ಅಂಶಗಳ ತುಲನೆ ಮಾಡಿ. ಮತ್ತು ಕ್ರಿಸ್ಮಸ್ ಸಮಯದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ ಎನ್ನುವವರು ಬೆರಳೆಣಿಕೆಯಷ್ಟು ಮಾತ್ರ.

  ಹಬ್ಬ ಆಚರಿಸುವಾಗ ನಮಗೆ ಪರಿಸರ ಕಾಳಜಿ ಇದ್ದರೆ ಸಾಕು. ಅದನ್ನು ಬೇರೆಯವರು ಬ್ರಹ್ಮಾಸ್ತ್ರದಂತೆ ಬಳಸಬೇಕಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.