ಇದಪ್ಪಾ ಕ್ಯಾಪ್ಶನ್ ಅಂದ್ರೆ….

ನನ್ನ ಫೋಟೋ “ಹೀಗೊಬ್ಬವನು” ಗೆ ರಿಸ್ಪೆಕ್ಟ್ ಎವ್ರಿವನ್ ನೀಡಿರುವ ಕ್ಯಾಪ್ಶನ್ ಇಲ್ಲಿದೆ. ನಿಮ್ಮ ಕ್ಯಾಪ್ಶನ್ ತುಂಬ ಇಷ್ಟವಾಯಿತು ರಿಸ್ಪೆಕ್ಟ್ ಎವ್ರಿವನ್…..

ಇದಪ್ಪಾ ಕ್ಯಾಪ್ಶನ್ ಅಂದ್ರೆ

“ಮೊಬೈಲು ಇಂಟರ್ನೆಟ್ ಫೋನು ಗ್ಯಾಸು MP3 ಡೌನುಲೋಡು ಡ್ಯುಯಲ್ ಸಿಮ್ಮು ನೆಟ್ವರ್ಕು ಶೇರು ಏರು ಇಳಿ ಶೇಂದಿ ಸರಕಾರ ಯಡ್ಡಿ ರೆಡ್ಡಿ ಒಬಾಮ ಚುನಾವಣೆ ದೇವರು ದಿಂಡಿರು ಬೈಕು ಕಾರು ಲಾರಿ ರಸ್ತೆ ವಿಮಾನ ಪೆಟ್ರೋಲು ಡೀಸೆಲು global warmingಉ ಪ್ಲಾಸ್ಟಿಕ್ಕು ಪಟಾಕಿ ಏಸಿ ನುಸಿ ಸೊಳ್ಳೆ ಆರೋಗ್ಯ ಖಾಯಿಲೆ ಕಸಾಲೆ ಶಾಲೆ ಶಿಕ್ಷಣ ರಕ್ಷಣೆ ಮಿಲಿಟರಿ ಭಯೋತ್ಪಾದಕರು ಎಣ್ಣೆ ಹಾಕುವವರು ಬತ್ತಿ ಇಡುವವರು ರೈಲು ಬಿಡುವವರು ಆಡುವವರು ಹಾಡುವವರು ಕುಣಿಯುವವರು ಕಸ ಕಡ್ಡಿ ಕೂಲಿ ಕಾಳು ಶ್ರೀ ೧೦೮ ಮೈನ್ಸು ಕೋರ್ಟು ಲಂಚ  ಬ್ಯಾಂಕು ಲೋನು ದುಡ್ಡು ಕಾಸು ಮಕ್ಕಳು ಮರಿ ಕಾನ್ವೆಂಟು ಇಂಗ್ಲೀಷು ಫಾರಿನ್ನು ಚಂದ್ರಲೋಕ, ಮಂಗಳನಲ್ಲಿ ನೀರು ಕರೆಂಟು ಪಾರ್ಕು ಪಬ್ಬು ಹಬ್ಬ ಬ್ಲಾಗು ಕಾಮೆಂಟು ಇನ್ನೂ ಏನೇನೇನೇನೇನೋ…..ಇವೆಲ್ಲ ನಿಮ್ಮ ಕರ್ಮ, ನನ್ನ ತಪಸ್ಸಿಗೇನೂ ಭಂಗವಿಲ್ಲ”