ಕ್ಯಾಮೆರಾ ನೋಡುತ್ತಲೇ ಓಡಿಹೋದವರೆಷ್ಟು ಜನರೋ

ಒಂದೊ ಎರಡೋ, ಅಂಕೆಯ ಹೇಳೋ

ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಅದು ಅಕ್ಟೋಬರ್ 30 ರ ಆಸುಪಾಸು. ಈಟಿವಿ ಕಚೇರಿಯಲ್ಲಿ ಪತ್ರಕರ್ತರ ಮಧ್ಯಾಹ್ನದ ಮೀಟಿಂಗ್ ನಡೆಯುತ್ತಿತ್ತು. ಜಿ. ಎನ್. ಮೋಹನ್ ಮಾತನಾಡುತ್ತ ಪತ್ರಕರ್ತರಿಗೆ ಕೇಳಿದರು, “ಹುಂ…ಈಗ ನವೆಂಬರ್ 1 ಕ್ಕೆ ಸ್ಟೋರಿ ಏನ್ರಪಾ?” ಅಂತ. ಸರಿ ಶುರುವಾಯಿತು ನೋಡಿ ಪ್ರಕಾಂಡ ಪಂಡಿತ ಪತ್ರಕರ್ತರ ಸ್ಟೋರಿ ಐಡಿಯಾಗಳು, “ಸರ್, ಕನ್ನಡ ಧ್ವಜ ಹರಿದುಹೋಗಿರುತ್ತೆ ಅದರ ಬಗ್ಗೆ ಸ್ಟೋರಿ ಮಾಡಬಹುದು”. “ಸರ್, ಇಂದಿನ ಕನ್ನಡದ ಸ್ಥಿತಿ-ಗತಿ ಬಗ್ಗೆ ಸ್ಟೋರಿ ಮಾಡಬಹುದು”, “ಸರ್ ಕನ್ನಡ ಸಂಘಟನೆಗಳ ‘ಖನ್ನಡ’ ಪ್ರೇಮದ ಬಗ್ಗೆ ಸ್ಟೋರಿ ಮಾಡಬಹುದು” ಅಂತೆಲ್ಲ ಹೇಳುತ್ತ ಹೋದೆವು. ಎಲ್ಲ ಸ್ಟೋರಿಗಳನ್ನು ಅದಾಗಲೇ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಮಾಡಿಯಾಗಿತ್ತು. ಹೀಗಾಗಿ ಅವೇ ಘಿಸಾಪಿಟಾ ಸ್ಟೋರಿಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದವು. ಕೇಳುವಷ್ಟು ಕೇಳಿಸಿಕೊಂಡ ಮೋಹನ್ ಸರ್, ಕೊನೆಗೆಂದರು, “ಸರಿ, ನಾನೊಂದು ಸ್ಟೋರಿ ಹೇಳ್ತಿನಿ. ಹೀಗ್ ಮಾಡಿದ್ರೆ ಹೇಗೆ ನೋಡಿ, ಕನ್ನಡ ಅಂಕಿಗಳನ್ನ ಒಂದು ಹಾಳೆ ಮೇಲೆ ಬರ್ಕೊಂಡು ಸುಮ್ನೆ ಜನರಿಗೆ ಕೇಳ್ತಾ ಹೋಗಿ ಇದೆಷ್ಟು ಅಂತ. ನೋಡೋಣ, ಎಷ್ಟು ಜನ ಉತ್ತರಿಸ್ತಾರೆ ಅಂತ” ಅಂದ್ರು.

ಎಲ್ಲರಿಗೂ ಈ ಸ್ಟೋರಿ ಐಡಿಯಾ ಭಯಂಕರ ಇಷ್ಟವಾಗಿ ಹೋಯ್ತು. ಆಮೇಲಿನಿದೆ, 1 ರಿಂದ 9 ರವರೆಗಿನ ಅಂಕೆಗಳನ್ನ ವಿವಿಧ ಹಾಳೆಗಳ ಮೇಲೆ ಪ್ರತ್ಯೇಕವಾಗಿ ಬರೆದು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಪತ್ರಕರ್ತರೆಲ್ಲ ಓಡಿದೆವು. ಅಬ್ಬಾ….ಜನರಿಗೂ ಈ ಅಂಕೆಗಳ ಆಟ ಎಷ್ಟುವಾಯ್ತು ಅಂದ್ರೆ ಜನರೇ ಇದು ಸರಿ ಅದು ಸರಿ ಎಂದು ಬೆಟ್ ಕಟ್ಟಿದರು. ಕೆಲವರಂತೂ ಅಂಕೆ ಗುರುತಿಸಲಾರದೆ ಪ್ಯಾಲಿ ನಗೆ ನಕ್ಕರೆ, ಮತ್ತೆ ಕೆಲವರು ಕನ್ನಡದ 7 ಹಾಗೂ 3 ಅಂಕಿಗಳನ್ನು 2 ಅಂತಲೂ, 9 ನ್ನು 6 ಹಾಗೂ 6 ನ್ನು 9 ಎಂತಲೂ ಓದಿ ‘ಖನ್ನಡ’ ಪ್ರೇಮ ಮೆರೆದರು. ಎಂ.ಜಿ ರೋಡಿನಲ್ಲಂತೂ ಜನ ಮುಖ ತಪ್ಪಿಸಿಕೊಂಡು ಓಡಿದರು. ಬಹುತೇಕ ಕನ್ನಡಿಗರಿಗೆ ಕನ್ನಡ ಅಂಕೆಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಸ್ಟೋರಿ ಅಷ್ಟೇ ಅದ್ಭುತವಾಗಿ ವಿಶೇಷ ಇಫೆಕ್ಟ್ ಮ್ಯೂಸಿಕ್ ನೊಂದಿಗೆ ಎಡಿಟ್ ಆಗಿ ಏರ್ ಆಯಿತು. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೂ ದೊರೆಯಿತು. ಹೆಂಗಿದೆ ಸ್ಟೋರಿ ಐಡಿಯಾ?

 

ಎಲ್ಲದಕ್ಕೂ ಒಂದೇ ಬೆಲೆ

ಕಳಿಸಿಕೊಟ್ಟದ್ದು – ಶ್ರೀ. ಮೋಹನ್ ಹೆಗಡೆ

....................

ಆರಿಸಿಕೊಂಡಿದ್ದು ದೇಶಭಕ್ತಿಯ ಕೆಲಸಕ್ಕಾಗಿ, ಮಾಡಿಸಿದ್ದು ಬೂಟ್ ಪಾಲಿಶ್

Contributed by Anuya Warty

Courtesy – NDTV and Mid Day

ಇಲ್ಲಿ ಓದಿ

.................

100 ಯಡ್ಡಿ = 1 ರೆಡ್ಡಿ

ರಾಜಕೀಯ ಮಾಪಕ

ಹೊಸ ಮೆಟ್ರಿಕ್ ಪದ್ಧತಿಯೊಂದು ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಅವರವರ ವಿಚಾರಧಾರೆ, ಪಕ್ಷನಿಷ್ಠೆಗೆ ಸಂಬಂಧಿಸಿದಂತೆ ಈ ಮಾಪಕ ಬದಲಾಗುತ್ತಿದೆ. ಇದರ ಒಂದು ಸ್ಯಾಂಪಲ್ ಇಲ್ಲಿದೆ.

100 ಕೋಟಿ = 1 ಯಡ್ಡಿ

100 ಯಡ್ಡಿ = 1 ರೆಡ್ಡಿ

100 ರೆಡ್ಡಿ =  1 ರಾಡಿಯಾ

100 ರಾಡಿಯಾ =  1 ಕಲ್ಮಾಡಿ

100 ಕಲ್ಮಾಡಿ =  1 ಪವಾರ್

100 ಪವಾರ್ =  1 ರಾಜಾ

100 ರಾಜಾ =  1 ಸೋನಿಯಾ

 

ಮಲ್ಲಾಡಿಹಳ್ಳಿ ಫೋಟೋಗಳು

ಜನವರಿ 9 ರಿಂದ 13 ರ ವರೆಗೆ ಐದು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ರಾಘವೇಂದ್ರಸ್ವಾಮಿಗಳ ಆಶೀರ್ವಾದದೊಂದಿಗೆ ‘ತಿರುಕರಂಗ ನಾಟಕೋತ್ಸವ’ ನಡೆಯಿತು. ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಮಕ್ಕಳಿಂದಲೇ ಐದು ನಾಟಕಗಳು ಪ್ರದರ್ಶಿಸಲ್ಪಟ್ಟವು. ಮೌನೇಶ್ ಬಡಿಗೇರ್, ಮಂಜುನಾಥ್ ಬಡಿಗೇರ್  ಹಾಗೂ ಬಿ. ವಿ. ರಾಜಾರಾಂ ನಾಟಕಗಳನ್ನು ನಿರ್ದೇಶಿಸಿದ್ದರು. ಜನವರಿ 10 ರಂದು ನಾನು ಹಾಗೂ ಹಿರಿಯ ನಟ ಶಿವರಾಂ ಮುಖ್ಯ ಅತಿಥಿಗಳಗಿ ಹೋಗಿದ್ದೆವು. ಅದರ ಕೆಲವು ಫೋಟೋಗಳು ಇಲ್ಲಿವೆ. ನಾಟಕದ ಫೋಟೋಗಳನ್ನು ಕೂಡ ಸಧ್ಯದಲ್ಲೇ ಪ್ರಕಟಿಸಲಿದ್ದೇನೆ.

ನಾಟಕದ ಬಳಿಕ ನಟ ಶಿವರಾಂ ಮಾತು
ನಾಟಕದ ಬಳಿಕ ಮಕ್ಕಳಿಗೆ ನಾನು ಹೇಳಿದ್ದು "ನಿಮ್ಮಿಂದ ನಾನು ಇಂದು ತುಂಬಾ ಕಲಿತೆ"
ಶಿಕ್ಷಕರ ತರಬೇತಿ ಸಂಸ್ತೆಯ ಹೊರಗಡೆ ಗ್ರುಪ್ ಪೋಟೋ
ಸೇವಾಶ್ರಮದ ಸಮರ್ಥ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲರ ಮಾತು
ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಭಾವಿ ಶಿಕ್ಷಕ-ಕಿಯರೊಂದಿಗೆ ಸಂವಾದ
ನನ್ನ ಬಲಕ್ಕೆ ನಿಂತಿರುವವರು ಆತ್ಮೀಯ ಮಿತ್ರ ಹಾಗೂ ಯೋಗಾಸನ ಶಿಕ್ಷಕ ಸಂತೋಷ್ ಕುಮಾರ್

ಇಂದಿಗೆ ರಾಯನನ್ನು ಗಲ್ಲಿಗೇರಿಸಿ 180 ವರ್ಷ

ಕೃಪೆ – ರುದ್ರೇಶ್ ಸಂಪಗಾವಿ, ಇಟಗಿ ಹಾಗೂ ವಿಜಯ ಕರ್ನಾಟಕ

ಕಿತ್ತೂರ ನಾಡಿನ ಈ ಕಥನ

ನಾನು ಸಿಗರೇಟು ಬಿಟ್ಟು ಒಂದು ವರ್ಷ

ಸಿಗರೇಟು ಸತ್ತಿದೆ

ಕನಸಾ? ನಂಬಲಾಗುತ್ತಿಲ್ಲ. ಆದರೂ ನಿಜ. ನಾನು ಸಿಗರೇಟು ಸೇದುವುದನ್ನು ಬಿಟ್ಟು ಜನವರಿ 20, 2011 ಕ್ಕೆ ಸರಿಯಾಗಿ ಒಂದು ವರ್ಷ. ಹೋದವರ್ಷ ಜನವರಿ 20 ರಂದು ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು, ಮೂತ್ರಪಿಂಡದಲ್ಲಿ ಕಲ್ಲುಕಂಡು ಬಂದು, ಸಿಸ್ಟೋಸ್ಕೋಪಿಯಾಗಿದ್ದು ಎಲ್ಲವೂ ಹಸಿರಾಗಿದೆ. ಸಿಸ್ಟೋಸ್ಕೋಪಿ ಬಳಿಕ ನನ್ನ ದೇಹದ ಬಗ್ಗೆ ನನಗೆ ಅತೀವ ಪ್ರೀತಿ, ಅಭಿಮಾನ, ಗೌರವ ಬೆಳೆದು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟೆ.

1999 ರಿಂದ 2009 ರ ನಡುವಿನ ಅವಧಿಯಲ್ಲಿ ನಾನು ಸೇದಿದ ಸಿಗರೇಟುಗಳ ಸಂಖ್ಯೆ ಸುಮಾರು ಆರು ಸಾವಿರ ಹಾಗೂ ಬೀಡಿಗಳ ಸಂಖ್ಯೆ ನಾಲ್ಕು. ವಿಲ್ಸ್ ನೇವಿಕಟ್, ಗೋಲ್ಡ್ ಫ್ಲೇಕ್ ಕಿಂಗ್, ಸ್ಮಾಲ್, ವಿಲ್ಸ್ ಕ್ಲಾಸಿಕ್, ಮೆಂಥಾಲ್, ಗುಡಂಗ್ ಗರಂ, ಮೋರ್, ಬ್ಲಾಕ್ ಹೀಗೆ ಹಲವು ಬ್ರಾಂಡ್ ಗಳನ್ನು ಸೇದಿದೆ. ತುಂಬಾ ಹೆಚ್ಚು ಸೇದಿದ ಬ್ರಾಂಡ್ ಗೋಲ್ಡ್ ಫ್ಲೇಕ್ ಕಿಂಗ್. ತುಂಬಾ ಇಷ್ಟಪಟ್ಟ ಬ್ರಾಂಡ್ ಬ್ಲಾಕ್. ತುಂಬಾ ಕಿಕ್ ಕೊಟ್ಟ ಬ್ರಾಂಡ್ ಯಾವುದೇ ಸಿಗರೇಟಲ್ಲ, ಅದು ಬೀಡಿ. ಬಹುಶಃ 30 ನಂಬರ್ ಬ್ರಾಂಡ್ ಇರಬೇಕು.  ಬ್ಲಾಕ್ ಹಾಗೂ ಗುಡಂಗ್ ಗರಂ ಸಿಗರೇಟುಗಳಲ್ಲಿ ಲವಂಗ ಹಾಗೂ ಇನ್ನು ಕೆಲವು ಮಸಾಲೆ ಪದಾರ್ಥ ತುಂಬಿರುತ್ತಾರೆ. ಸಿಗರೇಟು ಎಳೆದಾಗ ಚರ್ ಚರ್ ಚಟ್ ಎಂದು ಸದ್ದು ಬರುತ್ತಿತ್ತು.

ಆದರೆ ಇದೀಗ ಎಲ್ಲವನ್ನೂ ಮರೆತಿದ್ದೇನೆ. ಇನ್ನು ಮುಂದೆ ಸಿಗರೇಟು ಸೇದುವುದಿಲ್ಲ ಎಂದು ನಾನೆಂದಿಗೂ ಪ್ರತಿಜ್ಞೆ ಮಾಡಿಲ್ಲ. ಮುಂದೆ ಮತ್ತೆ ಸಿಗರೇಟು ಅಂಟಿಸಿಕೊಳ್ಳುತ್ತೇನೆಯೇ ಗೊತ್ತಿಲ್ಲ. ಇಂದು ಮಾತ್ರ ಸಿಗರೇಟು ಬೇಡವೆನಿಸುತ್ತದೆ. ಸಿಗರೇಟು ಬಿಟ್ಟು ಒಂದು ವರ್ಷದ ಬಳಿಕ ನನಗೆ ನನ್ನ ಬಗ್ಗೆಯೇ ಹೆಮ್ಮೆಯಿದೆ. ಸಿಗರೇಟು ಹೊಗೆಯಿಂದ ವಾತಾವಾರಣವನ್ನು ಕಾಪಾಡಿದ್ದಕ್ಕೆ, ನನ್ನ ಮುದ್ದಿನ ದೇಹವನ್ನು ಶೋಷಿಸದಿದ್ದಕ್ಕೆ, ಹಣ ಹಾಗೂ ಸಮಯ ಉಳಿಸಿಕೊಂಡಿದ್ದಕ್ಕೆ.

ಆದರೆ ಸಿಗಾರ್ ಸೇದುವ ಕನಸು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಬಹುಶಃ ಇನ್ನೆಂದಿಗೂ ಆ ಕನಸು ನನಸಾಗಲಾರದು ಎನಿಸುತ್ತದೆ. ಕೆಲವು ಕನಸುಗಳು ನನಸಾಗದಿದ್ದರೇ ಚೆನ್ನ.

ಎನಿ ವೇ, ವಿಶ್ ಮಿ…..