ಸ್ಯಾಂಡ್ವಿಚ್

...................

“ನಮ್ಮ ಅಪ್ಪ-ಅಮ್ಮ ಭಾರಿ ಆರ್ಥೋಡಾಕ್ಸ, ಟ್ರೆಡಿಷನಲ್ಲ. ಇನ್ನು ನನ್ನ ಮಕ್ಳ, ಭಾರಿ ಫಾಸ್ಟ, ಮಾಡರ್ನ. ನಿಮಗ ಸಣ್ಣ ವಿಷಯ ಹೇಳ್ತೆ. ನಾ ಏನಾರ ಶರ್ಟು, ಬಟ್ಟೆ ಪ್ಯಾಂಟು ಹಾಕ್ಕಂಡೆ ಅಂದ್ರೆ, ಮಗ ಕೇಳ್ತ, ಅಪ್ಪ ಎಂತ ಇದು? ಈಗೆಲ್ಲ ಹಿಂಗ್ ಹಾಕ್ಕೊಳ್ಳುದಿಲ್ಲ, ಜೀನ್ಸ್ ಹಾಕ್ಕೋ ಅಂತಾನೆ. ನಾ ಜೀನ್ಸ್ ಹಾಕ್ಕಂಡ್ರೆ, ನನ್ನ ಅಮ್ಮ, ಎಂತ ಇದು ನೀ ಏನ್ ಸಣ್ಣ ಕೂಸ ಇಂತದ್ದೆಲ್ಲ ಹಾಕ್ಕೊಳ್ಳಿಕ್ಕೆ, ಕಾಲೇಜ್ ಲೆಕ್ಚರರು, ಲೆಕ್ಚರರ್ ತರಾನೆ ಇರ್ಬೇಕು. ಮಕ್ಕಳ ಥರ ಅಲ್ಯೆ ಅಂತಾಳೆ. ಅಲ್ಲ, ಇದು ನಿಮಗ ಸಣ್ಣ ವಿಷ್ಯ ಅನ್ನಸಬಹುದು. ನಮಗೆ ದಿನಾ ಇಂತ ನೂರು ಕಿರಿಕಿರಿ ಮಾರ್ರೆ”