ಸ್ಯಾಂಡ್ವಿಚ್

...................

“ನಮ್ಮ ಅಪ್ಪ-ಅಮ್ಮ ಭಾರಿ ಆರ್ಥೋಡಾಕ್ಸ, ಟ್ರೆಡಿಷನಲ್ಲ. ಇನ್ನು ನನ್ನ ಮಕ್ಳ, ಭಾರಿ ಫಾಸ್ಟ, ಮಾಡರ್ನ. ನಿಮಗ ಸಣ್ಣ ವಿಷಯ ಹೇಳ್ತೆ. ನಾ ಏನಾರ ಶರ್ಟು, ಬಟ್ಟೆ ಪ್ಯಾಂಟು ಹಾಕ್ಕಂಡೆ ಅಂದ್ರೆ, ಮಗ ಕೇಳ್ತ, ಅಪ್ಪ ಎಂತ ಇದು? ಈಗೆಲ್ಲ ಹಿಂಗ್ ಹಾಕ್ಕೊಳ್ಳುದಿಲ್ಲ, ಜೀನ್ಸ್ ಹಾಕ್ಕೋ ಅಂತಾನೆ. ನಾ ಜೀನ್ಸ್ ಹಾಕ್ಕಂಡ್ರೆ, ನನ್ನ ಅಮ್ಮ, ಎಂತ ಇದು ನೀ ಏನ್ ಸಣ್ಣ ಕೂಸ ಇಂತದ್ದೆಲ್ಲ ಹಾಕ್ಕೊಳ್ಳಿಕ್ಕೆ, ಕಾಲೇಜ್ ಲೆಕ್ಚರರು, ಲೆಕ್ಚರರ್ ತರಾನೆ ಇರ್ಬೇಕು. ಮಕ್ಕಳ ಥರ ಅಲ್ಯೆ ಅಂತಾಳೆ. ಅಲ್ಲ, ಇದು ನಿಮಗ ಸಣ್ಣ ವಿಷ್ಯ ಅನ್ನಸಬಹುದು. ನಮಗೆ ದಿನಾ ಇಂತ ನೂರು ಕಿರಿಕಿರಿ ಮಾರ್ರೆ”

Advertisements

12 thoughts on “ಸ್ಯಾಂಡ್ವಿಚ್

  • ಯಾಕೋ ಕುತೂಹಲ ಆಗೋತು…
   ಕೇಳ್ತ, ಅಲ್ಯೆ ಇಂಥ ಪ್ರಯೋಗಗಳಿರೋದು ಕಾರವಾರ, ಸಾಗರ, ಭಟ್ಕಳ, ಹೊನ್ನಾವರ, ಬೈನ್ದೂರು ಮುನ್ತಾದ ಊರುಗಳಲ್ಲಿ. ಆದರೆ ಫಾಸ್ಟ, ಮಾಡರ್ನ ಇಂಥ ಪ್ರಯೋಗಗಳಿರೋದ್ರಿನ್ದ ಸಾಗರವೇ ಆಗಿರಬಹುದೆನ್ನೋ ಊಹೆ. ನಾನು ಕಣ್ಡನ್ತೆ ಸಾಗರದವರು ಆ ರೀತಿಯಲ್ಲಿ ಮಾತನಾಡರು. ಆದರೆ ಮೇಲಿನ ಊರುಗಳಲ್ಲಿ ಇರುವುದರಲ್ಲಿ ಉತ್ತರದ ತುದಿಯನ್ನು ಮುಟ್ಟಿ ‘ಸಾಗರವೇ’ ಎನ್ದು ಊಹಿಸಿದೆನು. ಹೇೞಿಬಿಡಪ್ಪ ಕಾಷಿಯಸ್ ಮೈಣ್ಡು, ಏನು ಎತ್ತ ಅನ್ದುಬಿಟ್ಟು…

 1. ಆಹಾ ಅದೇನ್ ಕನ್ನಡಾನೋ….ದೇವ್ರೇ ಕಾಪಾಡಬೇಕು. ಇಂಟರ್ನೆಟ್ ನಲ್ಲಿ ಮೊದಲೇ ಜನರಿಗೆ ಕನ್ನಡ ಬರಿಯಕ್ಕೆ ಬರಲ್ಲ, ಅಂಥಾದ್ರಲ್ಲಿ ಮೈಣ್ಡು, ಅನ್ದುಬಿಟ್ಟು ಅಂತೆಲ್ಲ ಬರದ್ರೆ ಮುಗದೋಯ್ತು.

  • ಇಲ್ಲಾ ಕಣ್ರೀ, ಅದರಲ್ಲೇನ್ತಪ್ಪಿದೆ? ಅದು ಸರಿಯಾಗಿಯೇ ಇದೆ. ಜನ ಬರೆಯುವುದಿರಲಿ, ಮೊದಲು ಓದಲು ಕಲಿಯಬೇಕಷ್ಟೆ… ಕೃಷ್ಣಪ್ರಕಾಶ್ ಬೊಳುಮ್ಬುರೇ, ನೀವು ಹಾಗೇ ಬರೆಯಿರಿ (ಟೈಪಿಸಿ 🙂 )

   • ಮೊದಲಿಗೆ ರಮೇಶ್ ಕುಲಕರ್ಣಿಯೆನ್ದರೆ ಯಾರೆನ್ದು ನನಗೆ ತಿಳಿಯದು. ಆದರೆ ಈತನಿಗೆ ಕನ್ನಡ ಭಾಷೆಯಲ್ಲಿ ಆಗುತ್ತಿರುವ ಬದಲಾವಣೆಗಳೂ ಬೆಳೆವಣಿಗೆಗಳೂ ಗಮನಕ್ಕೆ ಬನ್ದನ್ತಿಲ್ಲ. ಆದರೂ ವಿವರಿಸುವ ಪ್ರಯತ್ನ ಮಾಡುವೆನು, ಅಷ್ಟಾದರೂ ತಿಳಿದುಕೊಣ್ಡರೆ ನನ್ನ ಉದ್ದೇಶ ಸಾರ್ಥಕವಾಗುವುದು.
    “ಮೈಣ್ಡು, ಅನ್ದುಬಿಟ್ಟು”

    ೧. ಕಾಷಿಯಸ್ ಮೈಣ್ಡು – ಸುಘೋಷನ ಬ್ಲೋಗದ ಹೆಸರೇ ಅದು, ನಾನು ಇಟ್ಟದ್ದಲ್ಲ.
    ೨. ಹಳ್ಳೀಮಾತಿನ ಸೊಗಡು ನೀವು ಇಲ್ಲಿ ಬರೆದಿರುವ ಕನ್ನಡದಲ್ಲಿ “ಇಲ್ಲ”, ಅದನ್ನು ತಿಳಿಸಲು ವಿಷಾದಿಸುವೆನು. ನೀವು ಉಲಿಯುತ್ತಿರುವ ಕನ್ನಡ ಯಾವುದೂ ಅಲ್ಲದ ಏನೋ ಒನ್ದಾಗಿದೆ.

    ಇನ್ನು, ಟೀಕೆ ನಾನು ಬರೆದಿರುವ ರೀತಿಯ ಕುಱಿತಾಗಿದ್ದರೆ – ನೀವು ‘ಕಿಟ್ಟೆಲ್ ನಿಘಣ್ಟು’, ಕೊಳಂಬೆ ಪುಟ್ಟಣ್ಣ ಗೌಡರ ‘ಅಚ್ಚಗನ್ನಡ ನುಡಿಕೋಶ’ ಇವನ್ನೆಲ್ಲ ನೋಡಿರುವನ್ತಿಲ್ಲ. ಬಿಟ್ಟುಬಿಡಿ, ನಿಮಗೇಕೆ ಬೇಕು?
    ಬಿನ್ದು, ಕನ್ದ, ತುಣ್ಡು – ಹೀಗೆ ಬರೆದರೆ ತಪ್ಪೆನ್ನುವುದು ನಿಮ್ಮ ಪೆರಮೆ. (ಭ್ರಮೆ)
    http://megamedianews.in/20.01.10UdupiParyaya.htm
    http://shivallibrahmins.com/kn/about-us/
    ಈ ಎರಡು ತಾಣಗಳಲ್ಲಿ ‘ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜ’ ಎನ್ದು ಬರೆದಿರುವುದನ್ನು ಗಮನಿಸಿರಿ. ಅಲ್ಲಿ “ವಸನ್ತ” ಎನ್ದಿರುವುದು ಟೈಪಿಂಗ್ ಎಱರ್ ಅಲ್ಲ. ತಮ್ಮ ಪುಸ್ತಕಗಳಲ್ಲೂ ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜರು ಆ ರೀತಿಯಲ್ಲೇ ಬರೆದಿರುವುದು ಕಾಣಬಹುದು. (ಅಚ್ಚು ಹಾಕಿಸಿರುವುದನ್ನು – ತೃಪ್ತಿಯಾಯಿತೇ ಸುಘೋಷ!) ಅಷ್ಟಲ್ಲದೆ ನಾನೂ ಹತ್ತು ವರ್ಷಗಳ ಕಾಲ ಕನ್ನಡ ಕಲಿತಿದ್ದೇನೆ. ಏನಾದರೂ ಕಲಿಸುವ ಇರಾದೆಯಿದ್ದರೆ ಸರಿಯಾಗಿ ತಿಳಿದುಕೊಣ್ಡು ಮಾಡಿರಿ.

    “ಹ್ಹ…ಹ್ಹಾ…ಚೆನ್ನಾಗಿದೆ”
    ಯಾವುದು? ‘ಬರಿಯಕ್ಕೆ ಬರಲ್ಲ’ ಸರಿಯಾದ ಪ್ರಯೋಗವೇ?
    ಕನ್ನಡದ ಭಾಷಾಪ್ರಯೋಗ, ಅಕ್ಷರಶುದ್ಧಿ ಮುನ್ತಾದ ವಿಷಯಗಳ ಕುಱಿತು ( ಱಿ – ಈ ಅಕ್ಷರವ ಎಲ್ಲಿಯಾದರೂ ನೋಡಿರುವಿರಾ?) ಸಂಪದದಲ್ಲಿ (ಅಂಥದ್ದು ಒನ್ದು ಇದೆ!) ಕೞೆದ ಮೂಱು ವರುಷಗಳಿನ್ದ ಚರ್ಚೆ ನಡೆಯುತ್ತಿದೆ. ಇನ್ನೂ ಅನುಮಾನಗಳಿದ್ದರೆ ನಾನು “ಬರೆದಿರುವ” (ತೃಪ್ತಿಯಾಯಿತೇ ಸುಘೋಷ!) ಬ್ಲೋಗಗಳನ್ನು ಓದಬಹುದು. ಅಲ್ಲಿ ನನ್ನ ಉದ್ದೇಶಗಳನ್ನು ತಿಳಿಸಿರುವೆನು. ಇವು ನನ್ನ ಬ್ಲೋಗಗಳು:
    http://maathupallata.blogspot.com/
    http://mozhimaattram.blogspot.com/

    ಇಷ್ಟೆಲ್ಲಾ ಆದರೂ ‘ಮೈಣ್ಡು, ಅನ್ದುಬಿಟ್ಟು’ ಯಾಕೆ ತಪ್ಪು; ಮತ್ತೂ ಆ ವಿಷಯವಾಗಿ ನಿಮ್ಮದು ಕೇವಲ ಅಭಿಪ್ರಾಯವೋ ಅಥವಾ ಮಹಾನ್ ಎನ್ನಬಹುದಾದ ಉದ್ದೇಶವೋ ಇದ್ದರೆ ತಿಳಿಸಿರಿ.

    ಈಚೆಗೆ ಮಹಾಪ್ರಾಣಗಳ ಬಿಟ್ಟುಬಿಡುವ ವಾದ ರೂಢಿಗೆ ಬರುತ್ತಿದೆ. ‘ಮೈಣ್ಡು, ಅನ್ದುಬಿಟ್ಟು’ ಎಂಬನ್ತೆ ಬರೆಯುವುದು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲದೆ ರೂಢಿ ಹೇಗಿದೆಯೆಂಬುದಲ್ಲ. (ಇವೆಲ್ಲಾ ನಿಮ್ಮ ಗಮನಕ್ಕೆ ಬನ್ದಿದ್ದರೆ ನನ್ನ ಸಮಯ ವ್ಯಯವಾದುದಕ್ಕೂ ಅರ್ಥವಿರುತ್ತಿತ್ತು. )

    “ಕೃಶ್ಣಪ್ರಕಾಷ”, “ಬೊಳುಮ್ಬು” ಎಂಬನ್ತೆ ನಾನು ಬರೆಯಲಿಲ್ಲ. ನೀವು ತಿಳಿದುಕೊಣ್ಡರೆ ಒಳ್ಳೆಯದು (ಹೌದು, ನಿಮಗೇ…). “ಕೃಷ್ಣಪ್ರಕಾಶ ಬೊಳುಂಬು” ನನಗೇನೋ ಸ್ಪಷ್ಟವಾಗಿ ಕಾಣುತ್ತಿದೆ, ನಿಮಗೆ? ಅನ್ದಹಾಗೆ ನಿಮ್ಮ ವಯಸ್ಸು?

    “ಆಗೋತು” ನಿಮ್ಮ ಮಟ್ಟಿಗೆ ಹೊಸ ಪ್ರಯೋಗವಾಗಿರಬಹುದು, ಆದರೆ ಕನ್ನಡದಲ್ಲಿ ಅದು ಹಿನ್ದಿನಿನ್ದಲೂ ಇದೆ. ಇನ್ನು ತಪ್ಪು ಯಾವುದು? “ಕನ್ನಡಾನೋ” ಅಲ್ಲಿ ಕನ್ನಡಾ ಎಂಬ ದೀರ್ಘ ಯಾಕೆ ಬನ್ತು?
    ೞ, ಱ ಎಂಬ ಎರಡು ಅಕ್ಷರಗಳು ಕನ್ನಡದಲ್ಲಿ ಇರುವ ವಾಸ್ತವ ನಿಮಗೆ ತಿಳಿದಿದೆಯೇ?

    – ಕೃಷ್ಣಪ್ರಕಾಶ ಬೊಳುಂಬು.

 2. ಹ್ಹ…ಹ್ಹಾ…ಚೆನ್ನಾಗಿದೆ. ಬೊಳುಂಬುನಾ ಅಥವಾ ಬೊಳುಮ್ಬುನಾ? ನೀವೇ ಹೇಳಿಬಿಡಿ ಕೃಶ್ಣಪ್ರಕಾಷ…

  • “ಮೈಣ್ಡು, ಅನ್ದುಬಿಟ್ಟು”

 3. ಬೊಳಂಬು,
  ವಿಷಯ ತುಂಬ ಸಿಂಪಲ್ ಆಗಿದೆ. ಸುಮ್ನೆ ತಲೆ ಕೆಡಿಸಿಕೊಂಡಿದ್ದೀರಿ. ನಾನು ನಿಮ್ಮನ್ನು ಪ್ರೊವೋಕೇಟ್ ಮಾಡುತ್ತಿಲ್ಲ. ನೀವೇ ಪ್ರೊವೋಕೇಟ್ ಆಗುತ್ತಿದ್ದರೆ, ನಿಮ್ಮ ಹಣೆಬರಹ. ನಾನೇನೂ ಮಾಡಲಾಗುವುದಿಲ್ಲ.
  ನನ್ನ ಅಭಿಪ್ರಾಯ ಇಷ್ಟೆ. ಕನ್ನಡ ತುಂಬಾ ಸರಳವಾಗಿದೆ. ಸುಲಿದ ಬಾಳೆಯ ಹಣ್ಣಿನಂದದಿ…..ಅದನ್ನ ಕಬ್ಬಿಣದ ಕಡಲೆಕಾಯಿ ಮಾಡಬೇಡಿ. ಕನ್ನಡ ಬೆಳೆಯಬೇಕಾಗಿರುವುದು ಶ್ರೀಸಾಮಾನ್ಯ ಕನ್ನಡಿಗನ ನಡುವೆ. ಯಾವುದೋ ನಿಘಂಟಿನಲ್ಲೋ, ನೀವು ಹೇಳಿರುವ ವೆಬ್ ಸೈಟ್ ಗಳಲ್ಲೋ ಅಲ್ಲ. ಹಾಸನದಲ್ಲಿ ಹಾದರದ ಸ್ವಾಗತ ಎಂದು ಬರೆಯುವ ಕನ್ನಡಿಗರಿರುವಾಗ, ಅವರಿಗೆ ನೀವು ಹೇಳುವ ಮಾತುಗಳನ್ನು ಹೇಳಿದರೆ, ಯಾರಿಗೂ ಅರ್ಥವಾಗುವುದಿಲ್ಲ. ಮೊದಲು ಸರಳ ಕನ್ನಡ ಬರೆಯಿರಿ, ಮಾತನಾಡಿರಿ, ಓದಿರಿ. ಅದು ಬಿಟ್ಟು ಅದೇನೋ ಹೋಗದ ಬಾಯೋಳಗೆ ಅದೇನೋ ತುರುಕಿದರು ಎಂಬಂತೆ ಕನ್ನಡ ಬರೆಯಬೇಡಿ. ತಾವೇನೋ ಮಹಾಜ್ಞಾನಿಗಳು ಸ್ವಾಮಿ. ತಮಗೆ ಕನ್ನಡ ಹೇಗೆಲ್ಲ ಬರೆಯಲು ಬರುತ್ತದೆ, ಅಷ್ಟೇ ಅಲ್ಲ ಆ ಎರಡು ಅಕ್ಷರಗಳನ್ನು (ರ ಮತ್ತ ಳ – ಅವು ನನ್ನ ಸಾಫ್ಟ್ ವೇರ್ ನಲ್ಲಿ ಇಲ್ಲ ಬಿಡಿ, ಬದುಕ್ಕೊಂಡೆ) ಮತ್ತೆ ಮತ್ತೆ ಬಳಸಲು ಬರುತ್ತದೆ. ಆದರೆ ನಾವು ಪಾಮರರು ಸ್ವಾಮಿ. ಇಂಗ್ಲೀಷ್ ಮೀಡಿಯಂ ನಲ್ಲಿ ಕಲಿತ ಪಾಪಿಗಳು. ನಮಗೆ ಕನ್ನಡ ಸರಳ, ಸುಲಭವಾಗಿದ್ದರೇ ಚೆನ್ನ. ನೀವು ಬರೆದ ಕನ್ನಡ ಕಬ್ಬಿನಾಲೆ ವಸನ್ತ ಭಾರದ್ವಾಜ, ಕೊಳಂಬೆ ಪುಟ್ಟಣ್ಣ ಗೌಡ ಅಂಥವರಿಗೆ ಪ್ರಿಯ. ಅವರೊಡನೆ ಅದೇ ಕನ್ನಡದಲ್ಲಿ ವ್ಯವಹರಿಸಿ. ನನ್ನಂಥ ಕನ್ನಡದ ಅಲ್ಪಜ್ಞಾನವಿರುವ ವ್ಯಕ್ತಿಯೊಡನೆ ದಯವಿಟ್ಟು ಸರಳ ಕನ್ನಡವನ್ನೇ ಬರೆಯಿರಿ. ನಿಮ್ಮ ಕನ್ನಡ ಓದಲು ಹಿಂಸೆಯಾಗುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.
  ಅಂದಹಾಗೆ ನನ್ನ ವಯಸ್ಸು….ನಿಮಗೆ ಸಂಬಂಧಪಟ್ಟಿದ್ದಲ್ಲ ಬಿಡಿ.

 4. ರಮೇಶ್ ಕುಲಕರ್ಣಿಯವರೇ, ತಲೆಕೆಡಿಸಿಕೊಳ್ಳಬೇಡಿ, ಅವರ ಭಾಷಾ ಪ್ರಯೋಗದಲ್ಲಿ ಯಾವ ತಪ್ಪೂ ಇಲ್ಲ. ನಾವೇ ಹಳೆಗನ್ನಡ, ವ್ಯಾಕರಣಗಳನ್ನು ಬಿಟ್ಟು, ಕನ್ನಡ ಭಾಷೆ ಬಳಸಲು ಹಿಂಜರಿಯುತ್ತಿದ್ದೇವೆ. ಇದು ನಮ್ಮ ತಪ್ಪು ಹೌದೇ… ಇನ್ನಾದರೂ ನಾವು ಅದನ್ನು ಬಳಸಲು ಪ್ರಯತ್ನಿಸಬಹುದು.

  ರೀ, ಕೃಷ್ಣಪ್ರಕಾಶರೇ, ಯಾಕಿಷ್ಟು ಸಿಟ್ಟು? ( 🙂 ) ‘ನಾವು ಹೀಗೆ’ ಅನ್ನುವುದಕ್ಕೆ ಭಾರೀ ಸಮರ್ಥನೆ ಬೇಕಿಲ್ಲ. ಆನೆ ಹೋಗ್ತಾ ಇದ್ದರೆ ಸಾಕು… ದಾರಿ ತಾನಾಗಿಯೇ ಆಗುತ್ತದೆ 😉

 5. I’m totally confused. Both ramesh kulkarni and bolumbu are correct in their own ways. By the way what is correct ಬೊಳುಂಬು or ಬೊಳುಮ್ಬು or both? and respect everyone, what is this aane hogta iddare saaku? Comparing Boumbu to Aane is too much when he himself has given examples of many ‘aanes’ like ‘ಕಿಟ್ಟೆಲ್, ಕೊಳಂಬೆ ಪುಟ್ಟಣ್ಣ ಗೌಡ etc.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s