ಮುಖ್ಯಮಂತ್ರಿ v/s ಗವರ್ನರ್ ಯುದ್ಧದಲ್ಲಿ ಬಸ್ಸಿಗೆ ಕಲ್ಲು ಬೇಡ

ರಾಜ್ಯಕ್ಕೆ ಈಗಾಗಲೇ ಹಾಸಿ ಹೊದ್ದುಕೊಂಡು ಮಚ್ಚರ್ ದಾನಿ ಕಟ್ಟಿಕೊಳ್ಳುವಷ್ಟು ಸಮಸ್ಯೆಗಳಿಗೆ. ಇದೂ ಸಾಲದೆಂಬಂತೆ ಇದೀಗ ಯಡ್ಡಿ ವರ್ಸಸ್ ಹಂಸ್ ಗಲಾಟೆ ಶುರುವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ನಿಷ್ಪಾಪಿ ಬಸ್ಸುಗಳು ಏಟು ತಿಂದಿವೆ. ಮತ್ತೆ ಕೆಲವು ಬೆಂಕಿಗೆ ಆಹುತಿಯಾಗಿವೆ. ಅಭಿವೃದ್ಧಿಯ ಮಂತ್ರ ಜಪಿಸುವ ಯಡಿಯೂರಪ್ಪ ಅಭಿಮಾನಿಗಳೇ, ಇದೆಂಥ ಪ್ರತಿಭಟನೆ? ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಗುವುದು ಬೇಡ.

ಇದಂ ಮಮ