ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ

ಕ್ಷಮಿಸುವುದಕ್ಕಿಂತ ದೊಡ್ಡ ಗುಣ ಮತ್ತೊಂದಿಲ್ಲ

ದಯವಿಟ್ಟು ಕ್ಷಮಿಸಿ. ದಿಢೀರ್ ಅಂತ ಬ್ಲಾಗ್ ಅಪ್ ಡೇಟ್ ನಿಲ್ಲಿಸಿದ್ದಕ್ಕೆ. ಐತಿಹಾಸಿಕ ಕಾರ್ಯಕ್ರಮವೊಂದರ ತಯಾರಿಗೆಂದು ಪೂರಾ ಪೂರಾ ಬಿಝಿಯಾಗಿದ್ದೇನೆ. ಹೀಗಾಗಿ ಕೊಂಚವೂ ಸಮಯ ಸಿಗುತ್ತಿಲ್ಲ. ಶೀಘ್ರದಲ್ಲಿಯೇ ಮತ್ತೆ ಅಪ್ ಡೇಟ್ ಆರಂಭಿಸುತ್ತೇನೆ. ಅಲ್ಲಿಯವರೆಗೆ ಕ್ಷಮೆಯಿರಲಿ.

 

ಸ್ವಂತ ಕವಿತೆಯ ಓದು

ಕರ್ನಾಟಕ ಸಾಹಿತ್ಯ ಅಕಾಡೆಮಿ “ಸ್ವಂತ ಕವಿತೆಯ ಓದನ್ನು” ತನ್ನ ವೆಬ್ ಸೈಟಿನಲ್ಲಿ ಪರಿಚಯಿಸಿದೆ. ಇಲ್ಲಿ ಕವಿಗಳು ತಮ್ಮ ಕವಿತೆಗಳನ್ನು ತಾವೇ ಓದುತ್ತಾರೆ. ಇದಕ್ಕಾಗಿ ಶ್ರೀ. ಜಿ. ಎನ್. ಮೋಹನ್ ಅವರ ಪ್ರಧಾನ ನಿರ್ದೇಶನದಲ್ಲಿ ನಾನು ಅಂಕೋಲಾದ  ಶ್ರೀ. ವಿಷ್ಣು ನಾಯ್ಕ ಹಾಗೂ ಕುಮಟಾದ ಡಾ. ಬಿ. ಎ. ಸನದಿ ಅವರ ಕವಿತೆಗಳ ಓದಿನ ಸಂಚಿಕೆ ನಿರ್ದೇಶನ ಮಾಡಿದ್ದೇನೆ.  ಅದನ್ನು ಇಲ್ಲಿ ನೋಡಬಹುದು ಹಾಗೂ ಓದಬಹುದು.

.............
...................
.......................
..................
.........................

ಫೆಬ್ರುವರಿ 16 ಕ್ಕೆ ಯೇಗ್ದಾಗೆಲ್ಲ…

ಬನ್ನಿ...
ತಪ್ಪದೇ ಬನ್ನಿ
ಮಿಸ್ ಮಾಡ್ಕೋಳ್ಲೇಬೇಡಿ...

ಹೀಗೆ ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳಬಹುದೆ?

ಫೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ, ಕೊಪ್ಪ.

Yup...I can see that!!

ಮುಖ್ಯಮಂತ್ರಿಯವರಿಗೆ “ಅನಧಿಕೃತ” ನಿವಾಸವೂ ಇದೆ ಅಂದಂಗಾಯ್ತು…

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಎದುರು ತಗಲುಹಾಕಿರುವ ಬೋರ್ಡ್ ಇದು.

© SUGHOSH S. NIGALE

ಈ ಬಾರಿ ಓದಿನರಮನೆಯಲ್ಲಿ ಸೀನಿಯರ್ ಸಿಟಿಜನ್

ನಾಟ್ಕ ಮಾತ್ರ ಎಲ್ರಿಗೂ ಇದೆ!!

UN’s survey

Contributed by – Aneesh Hegade.

UN conducted a survey. The question was “Would you please give your honest opinion about the shortage of food in the rest of the world?”

The survey was a utter failure because,

In Africa people didn’t know what FOOD was.

In China, they didn’t know what OPINION was.

In Europe they didn’t know what SHORTAGE was.

Pakistan didn’t know what HONEST meant.

Saudi Arabia didn’t know what PLEASE was.

In America they didn’t know what REST OF THE WORLD MEANT !!

 

ಬಾಂಬ್ ಹೇಗೆ ಸಿಡಿಯಿತು?

ಪತ್ರಕರ್ತ – (ಬಾಂಬ್ ಸ್ಫೋಟದಲ್ಲಿ ಗಾಯಗೊಂಡವನಿಗೆ) – ಬಾಂಬ್ ಜೋರಾಗಿ ಸಿಡಿಯಿತಾ?

ಗಾಯಾಳು – (ಸಿಟ್ಟಿನಿಂದ) – ಇಲ್ಲ ಕಣ್ರೀ….ಬಾಂಬ್ ನಿಧಾನವಾಗಿ ತೆವಳುತ್ತ ನನ್ನ ಬಳಿಗೆ ಬಂತಾ…ಆಮೇಲೆ…ನಾಚಿಕೆಯಿಂದ ಹೇಳ್ತು – ಧಡಮ್ !!

ಢಂ..ಢಂ..ಢಂ..

ಇದೊಂದು ವಿಶೇಷ ಹೋರ್ಡಿಂಗ್

ಯಾವುದೋ ತಲೆಹಿಡುಕ ರಾಜಕಾರಣಿಯ ಹುಟ್ಟುಹಬ್ಬ, ರೌಡಿ-ಕಮ್-ಕಾರ್ಪೋರೇಟರ್ ನ ಅಕ್ಕನ ತಂಗಿಯ ಮಗಳ ಗಂಡನ ಸೋದರಮಾವನ ಅಳಿಯನ ವಿದೇಶ ಪ್ರಯಾಣ, ಶೇವಿಂಗ್ ಬ್ಲೇಡ್ ಮಾರಲು ಕನಿಷ್ಟ ಬಟ್ಟೆ ತೊಟ್ಟು ನಿಂತ ಹುಡುಗಿ, ಬಾಕ್ಸಾಫೀಸಿನಲ್ಲಿ ತೋಪೆದ್ದು ಹೋಗಿರುವ ಎ ಚಿತ್ರ – ಹೀಗೆ ವಿವಿಧ ಹೋರ್ಡಿಂಗ್ ಗಳು ಬೆಂಗಳೂರಿನಲ್ಲಿ ಸಾಮಾನ್ಯ. ಆದರೆ ಮೊನ್ನೆ ಸ್ವಲ್ಪ ಬೇರೆ ರೀತಿಯ ಹೊರ್ಡಿಂಗ್ ಬೆಂಗಳೂರಿಗರ ಕಣ್ಣಿಗೆ ಬಿತ್ತು. ಸುಭಾಷ್ ಚಂದ್ರ ಬೋಸ್ ಹಾಗೂ ಲಾಲಾ ಲಜಪತ್ ರಾಯ್ ಅವರ ಹುಟ್ಟುಹಬ್ಬಕ್ಕೆ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಮೆಜೆಸ್ಟಿಕ್ ನಲ್ಲಿ ಈ ಹೋರ್ಡಿಂಗ್ ಹಾಕಿತ್ತು. ಹಾಗೆಯೇ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಇಲೆಕ್ಟ್ರಾನಿಕ್ ಹೋರ್ಡಿಂಗ್ ನಲ್ಲಿ ಸುಭಾಷ್ ಹಾಗೂ ಲಾಲಾ ಲಜಪತ್ ರಾಯ್ ರನ್ನು ನೆನಪಿಸುವ ಪ್ರಯತ್ನ ಮಾಡಿತ್ತು. ಪರಿಷತ್ ನ ಸಂಚಾಲಕರಾದ ಶ್ರೀ. ಟಿ. ಎನ್. ರಾಮಕೃಷ್ಣ ಇದರ ರೂವಾರಿ. ದೇಶಭಕ್ತರನ್ನು ಸ್ಮರಿಸುವ ಇದೊಂದು ವಿಭಿನ್ನ ಪ್ರಯತ್ನ ಅಲ್ಲವೆ?

........................
.........................
..........................

ಇಂತಹ ನಿರ್ದಯಿ ಅಧಿಕಾರಿಗೆ ಶಿಕ್ಷೆಯಾಗಲೇಬೇಕು

ನೀನಾರಿಗಾದೆಯೋ ಎಲೆ ಮಾನವ?

ಕೃಪೆ – ವಿನಯ್ ನ, ಪತ್ರಕರ್ತರು, ವಿಜಯ ಕರ್ನಾಟಕ.