ಇದೊಂದು ವಿಶೇಷ ಹೋರ್ಡಿಂಗ್

ಯಾವುದೋ ತಲೆಹಿಡುಕ ರಾಜಕಾರಣಿಯ ಹುಟ್ಟುಹಬ್ಬ, ರೌಡಿ-ಕಮ್-ಕಾರ್ಪೋರೇಟರ್ ನ ಅಕ್ಕನ ತಂಗಿಯ ಮಗಳ ಗಂಡನ ಸೋದರಮಾವನ ಅಳಿಯನ ವಿದೇಶ ಪ್ರಯಾಣ, ಶೇವಿಂಗ್ ಬ್ಲೇಡ್ ಮಾರಲು ಕನಿಷ್ಟ ಬಟ್ಟೆ ತೊಟ್ಟು ನಿಂತ ಹುಡುಗಿ, ಬಾಕ್ಸಾಫೀಸಿನಲ್ಲಿ ತೋಪೆದ್ದು ಹೋಗಿರುವ ಎ ಚಿತ್ರ – ಹೀಗೆ ವಿವಿಧ ಹೋರ್ಡಿಂಗ್ ಗಳು ಬೆಂಗಳೂರಿನಲ್ಲಿ ಸಾಮಾನ್ಯ. ಆದರೆ ಮೊನ್ನೆ ಸ್ವಲ್ಪ ಬೇರೆ ರೀತಿಯ ಹೊರ್ಡಿಂಗ್ ಬೆಂಗಳೂರಿಗರ ಕಣ್ಣಿಗೆ ಬಿತ್ತು. ಸುಭಾಷ್ ಚಂದ್ರ ಬೋಸ್ ಹಾಗೂ ಲಾಲಾ ಲಜಪತ್ ರಾಯ್ ಅವರ ಹುಟ್ಟುಹಬ್ಬಕ್ಕೆ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಮೆಜೆಸ್ಟಿಕ್ ನಲ್ಲಿ ಈ ಹೋರ್ಡಿಂಗ್ ಹಾಕಿತ್ತು. ಹಾಗೆಯೇ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಇಲೆಕ್ಟ್ರಾನಿಕ್ ಹೋರ್ಡಿಂಗ್ ನಲ್ಲಿ ಸುಭಾಷ್ ಹಾಗೂ ಲಾಲಾ ಲಜಪತ್ ರಾಯ್ ರನ್ನು ನೆನಪಿಸುವ ಪ್ರಯತ್ನ ಮಾಡಿತ್ತು. ಪರಿಷತ್ ನ ಸಂಚಾಲಕರಾದ ಶ್ರೀ. ಟಿ. ಎನ್. ರಾಮಕೃಷ್ಣ ಇದರ ರೂವಾರಿ. ದೇಶಭಕ್ತರನ್ನು ಸ್ಮರಿಸುವ ಇದೊಂದು ವಿಭಿನ್ನ ಪ್ರಯತ್ನ ಅಲ್ಲವೆ?

........................
.........................
..........................
Advertisements

4 thoughts on “ಇದೊಂದು ವಿಶೇಷ ಹೋರ್ಡಿಂಗ್

 1. ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳನ್ನು ತಪ್ಪು ತಪ್ಪಾಗಿ ಬಳಸಿರುವರಾದರೂ, ಭಾವನೆಗಳನ್ನು ಮಾತ್ರ ಮೆಚ್ಚಬೇಕು.
  ಶ್ರೀ ಟಿ ಎನ್ ರಾಮಕೃಷ್ಣರವರಿಗೆ ನನ್ನ ಅಭಿವಂದನೆಗಳು!

   • ಧನ್ಯವಾದಗಳು ರಾಮಕೃಷ್ಣರವರೇ,

    Immenfed – Wrong
    Immense – Correct

    Greatful – Wrong
    Grateful – Correct

    Occassion – Wrong
    Occasion – Correct

    ಹಾರ್ಧಿಕ – ತಪ್ಪು
    ಹಾರ್ದಿಕ – ಒಪ್ಪು

    114ನೇ ಜನ್ಮ ದಿನದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥಾಪಕ – ತಪ್ಪು
    114ನೇ ಜನ್ಮ ದಿನದ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥಾಪಕ – ಒಪ್ಪು

 2. ಹೌದು! ನೀವು ಹೇಳುವ ಹಾಗಿನ typical ಹೋರ್ಡಿಂಗ್ ಗಳನ್ನು ನೋಡಿ ನೋಡಿ, ಇಂತಹ ವಿಶೇಷ itemಗಳು ಕಣ್ಣಿಗೆ ಬೀಳುವುದಿಲ್ಲವೆಂಬುದು ವಿಪರ್ಯಾಸ. ರಾಮಕೃಷ್ಣರಿಗೆ ಒಳ್ಳೆಯದಾಗಲಿ. 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s