ಯುಗಾದಿಗೆ ನನ್ನ ವಿಶ್ ಲಿಸ್ಟ್

ಚಿತ್ರಕೃಪೆ - ಇಂಟರ್ನೆಟ್

ಸುಖ ಹೆಚ್ಚಲಿ

 

ದುಃಖ ಬೆಚ್ಚಲಿ

 

ಟೆರರಿಸ್ಟುಗಳು ಸಾಯಲಿ

 

ಸೈನಿಕರ ಆತ್ಮವಿಶ್ವಾಸ ವರ್ಧಿಸಲಿ

 

ಭ್ರಷ್ಟ ರಾಜಕಾರಣಿಗಳು ಠೇವಣಿ ಕಳೆದುಕೊಳ್ಳಲಿ

 

ಆರ್ ಟಿ ಐ ನೆರವು ಜನ ಹೆಚ್ಚು ಹೆಚ್ಚು ಪಡೆದುಕೊಳ್ಳಲಿ

ಕ್ರಿಕೆಟ್ ಆಟಕ್ಕಿಂತ ಕಾಶ್ಮೀರಿನ ವಿಷಯದಲ್ಲಿ ಜನ ಹೆಚ್ಚು ಜಾಗೃತಗೊಳ್ಳಲಿ

ಭಾರತ ಮ್ಯಾಚ್ ಗೆದ್ದಾಗ ಪೂನಮ್ ಪಾಂಡೆ ಬೆತ್ತಲೆ ಓಡದಿರಲಿ

ಹೊಸ ವಧುವರರಿಗೆ ಬರೇ ಹೆಣ್ಣು ಮಕ್ಕಳೇ ಹುಟ್ಟಲಿ

ಟ್ರಾಫಿಕ್ ಪೋಲಿಸ್ ಲಂಚ ಕೇಳುವುದು ಕಡಿಮೆಯಾಗಲಿ

ಕೋಕ್ ಗಿಂತ ಎಳನೀರು ಹೆಚ್ಚು ಮಾರಾಟವಾಗಲಿ

ಸಾವಯವ ಕೃಷಿಗೆ ಜಯವಾಗಲಿ

ಬೆಂಗಳೂರಿನಲ್ಲಿನ ರೌಡಿಗಳು ಪರಸ್ಪರ ಮತ್ತಷ್ಟು ಹೊಡೆದಾಡಿಕೊಳ್ಳಲಿ

ಎಡಪಂಥಿಯರು, ಬಲಪಂಥಿಯರು ತಮ್ಮ ಮಾರ್ಗ ಬಿಡದಿರಲಿ

 

ತೊತ್ತೊಚಾನ್ ನಂತಹ ಶಾಲೆಗಳು ಹೆಚ್ಚಲಿ

ರಿಯಾಲಿಟಿ ಶೋಗಳಲ್ಲಿ ರಾಕ್ಷಸಿಯರು ಮಕ್ಕಳ ಚಡ್ಡಿ ಬಿಚ್ಚದಿರಲಿ

(ಯಂತ್ರಗಳನ್ನು ಕಳಚೋಣ ಬನ್ನಿ, ಚಡ್ಡಿಗಳನ್ನಲ್ಲ)

ಕನ್ನಡ ವಾಹಿನಿಗಳ ಪತ್ರಕರ್ತರ ಕನ್ನಡ ಇನ್ನಾದರೂ ಸುಧಾರಿಸಲಿ

ಟೈಮ್ಸ್ ಆಫ್ ಇಂಡಿಯಾದಲ್ಲಿ “ಶೇಕ್ ಹ್ಯಾಂಡ್ ಹಳೆ ಫ್ಯಾಷನ್, ಮುತ್ತು ಕೊಡುವುದು ಹೊಸ ಫ್ಯಾಷನ್” ನಂತಹ ಲೇಖನಗಳು ಬಾರದಿರಲಿ

ಭಾರತದಲ್ಲಿ ಟಾಯ್ಲೆಟ್ ಗಳ ಸಂಖ್ಯೆ ಹೆಚ್ಚಲಿ

ಗೃಹಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಏರದಿರಲಿ

ಡಾ. ಸುದರ್ಶನ್, ಅಣ್ಣಾ ಹಜಾರೆ, ಮಸಾನಬು ಫುಕುವೋಕಾ ಸಂತತಿ ಹೆಚ್ಚಲಿ

ಲಾಸ್ಟ್ ಬಟ್ ನಾಟ್ ದಿ ಲೀಸ್ಟ್…

ಈ ವಿಶ್ ಲಿಸ್ಟ್ ನ ಎಲ್ಲ ವಿಶ್ ಗಳೂ ಇದೇ ವರ್ಷ ಪೂರ್ಣಗೊಳ್ಳಲಿ….