ಕಾಗುಣಿತ ನೆನಪಿದೆಯೆ?

ವಿದ್ಯಾ ಮೂರ್ತಿ

ಮುಕ್ತ ಮುಕ್ತ ಧಾರಾವಾಹಿಯಲ್ಲಿನ ಧವಳಗಿರಿ ಗುರುಗಳ ಪರಮ ಭಕ್ತೆ ಹಾಗೂ ನನ್ನ(ದೇವಾನಂದಸ್ವಾಮಿ) ಅತ್ತೆ ಶಾರದಾ ಶ್ರೀಕಂಠ ಮೂರ್ತಿ ಎಲ್ಲರಿಗೂ ಪರಿಚಯ. ಶಾರದಾ ಶ್ರೀಕಂಠಮೂರ್ತಿ ನಿಜವಾದ ಹೆಸರು ವಿದ್ಯಾ ಮೂರ್ತಿ. ಕಿರಿ-ಹಿರಿ ತೆರೆಯೆರಡರಲ್ಲೂ ಅತ್ಯುತ್ತಮ ನಟಿ. ಅವರೊಡನೆ ಮೊನ್ನೆ ಶೂಟಿಂಗ್ ನಲ್ಲಿ ಮಾತಾಡುತ್ತಿರುವಾಗ ಯಾವುದೋ ವಿಷಯ ಪ್ರಸ್ತಾಪವಾಗಿ ಎಲ್ಲಿಗೋ ಹೋಗಿ, ಕೊನೆಗೆ ಅವರು ಕನ್ನಡ ಕಾಗುಣಿತ ರಾಗವಾಗಿ ಹೇಳಿದರು.

ನಾನು ಚಿಕ್ಕಂದಿನಲ್ಲಿ ಕನ್ನಡ ಕಾಗುಣಿತ ಕಲಿತಿಲ್ಲ. ಇಂದಿನ ಮಕ್ಕಳೂ ಕಲಿಯುತ್ತಿಲ್ಲ. ಆದರೆ ಹಿಂದೆ ಕನ್ನಡ ಕಾಗುಣಿತ ಕಡ್ಡಾಯವಾಗಿತ್ತು. ಕಾಗುಣಿತವನ್ನು ವಿದ್ಯಾ ಮೂರ್ತಿ ಮತ್ತೆ ನೆನಪು ಮಾಡಿಕೊಟ್ಟರು. ಅದು ಇಲ್ಲಿದೆ. ಥ್ಯಾಂಕ್ಸ್ ವಿದ್ಯಮ್ಮ…

 

ಕ ತಲಕಟ್ಟು ಕ

ಕ ದೀರ್ಘ ಕಾ

ಕ ಕೊಂದು ಸುಳಿ ಕಿ

ಕಿ ದೀರ್ಘ ಕೀ

ಕ ಕೊಂಬು ಕು

ಕು ದೀರ್ಘ ಕೂ

ಕ ಏತ್ವಾ ಕೆ

ಕೆ ಕೊಂದು ದೀರ್ಘ ಕೇ

ಕ ಐತ್ವಾ ಕೈ

ಕ ಓತ್ವಾ ಕೊ

ಕೋ ಕೊಂದು ದೀರ್ಘ ಕೋ

ಕ ಔತ್ವಾ ಕೌ

ಕ ಸೊನ್ನೆ ಕಂ

ಕ ಎರಡ ಸೊನ್ನೆ ಕಃ

 

Advertisements