ಲೇಬರ್ ಕ್ಲಾಸ್ ಎಲ್ಲಿದೆ?

‘ಎ’ ಯು ‘ಬಿ’ಯ ಮನೆಗೆ ಬಂದಾಗ ‘ಬಿ’ಯು ಮೊಬೈಲ್ ನಲ್ಲಿ ಮಾತಾಡುತ್ತ, ಕಾಲಮೇಲೆ ಕಾಲುಹಾಕಿಕೊಂಡು ಕುಳಿತು, ಕವಳ ಮೆಲ್ಲುತ್ತ, ಟಿವಿ ನೋಡುತ್ತ ಕುಳಿತಿದ್ದ. ‘ಎ’ಯನ್ನು ನೋಡಿದ ಕೂಡಲೇ ‘ಬಿ’ ಜೋರಾಗಿಯೇ ಹೇಳಿದ.

“ನಿಮಗ್ ಒಂದ್ಸಲ ಹೇಳಿದ್ರೆ ಗೊತ್ತಾಗಲ್ವಾ? ಬುಧವಾರ ಬರ್ತೀನಿ ಅಂತ ಹೇಳಿದ್ನಲ್ಲ. ನೀವ್ ಮತ್ ಮತ್ ನಮ್ ಮನೀಗ್ ಬಂದ್ ಯಾಕ್ ತೊಂದ್ರೆ ಕೊಡಾದು?”

ಇಲ್ಲಿ ‘ಎ’ ಯಾರು ಅಂದರೆ ನಮ್ಮ ಕೊಪ್ಪದಲ್ಲಿನ ಸುಮಾರು 5 ಎಕರೆ ಅಡಿಕೆ ತೋಟವಿರುವ ಮಧ್ಯಮ ಸ್ಥಿತಿಯ ರೈತ. ಹಾಗೂ ‘ಬಿ’ ಅಡಿಕೆ ಕೊನೆ ಕೊಯ್ಯುವವ. ಇದು ನಿಜವಾಗಿ ನಡೆದ ಘಟನೆ. ಇಂತಹದ್ದೇ ಘಟನೆಗಳು ಮಂಗಳೂರು, ಸುಳ್ಯ, ಪುತ್ತೂರು, ಶಿರಸಿ ಮುಂತಾದ ಕಡೆಗಳಲ್ಲಿ ವರದಿಯಾಗುತ್ತಿವೆ ಎಂದು ಕೇಳಿದ್ದೇನೆ. ಇಂದು ಕಾರ್ಮಿಕ ದಿನಾಚರಣೆ….