ಕಿರುತೆರೆ ನಟನಿಗೆ ಹೀಗೊಂದು ಚಮಕ್

...........

‘ಮುಕ್ತ ಮುಕ್ತ’ದಲ್ಲಿ ನಟಿಸುತ್ತಿರುವ ಈ ಸಂದರ್ಭದಲ್ಲಿ ಜನರ ಮಧ್ಯೆ ತಿರುಗಾಡುವಾಗ ನಡೆಯುವ ಸ್ವಾರಸ್ಯಕರ ಘಟನೆಗಳನ್ನು ಆಗಾಗ ಬರೆಯುತ್ತಿದ್ದೆನೆ. ಮೊನ್ನೆ ನಮ್ಮ ಮನೆ ಸಮೀಪದ ಪಾರ್ಕ್ ನಲ್ಲಿ ನಡೆದ ಘಟನೆಯೊಂದು ಹೀಗಿದೆ.

ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ‘ಮುಕ್ತ ಮುಕ್ತ’ ಧಾರಾವಾಹಿಯ ವಿಶೇಷ ಅಭಿಮಾನಿಗಳು. 2 ವರ್ಷದ ಮಕ್ಕಳೂ ಮುಕ್ತ ಮುಕ್ತ ಟೈಟಲ್ ಸಾಂಗ್ ಬಂದಾಕ್ಷಣ ತದೇಕಚಿತ್ತರಾಗಿ ನೋಡುತ್ತಾರೆ ಎಂದು ನನಗೆ ಅನೇಕರು ಹೇಳಿದ್ದಾರೆ. ಇನ್ನು ಮಹಿಳೆಯರಂತೂ ಸರಿಯೇ ಸರಿ. ಮನೆಯ ಸಮೀಪದ ಪಾರ್ಕ್ ಗೆ ಮಗ ಉದಾತ್ತನೊಂದಿಗೆ ಹೋಗಿದ್ದೆ. ಪಾರ್ಕ್ ಪ್ರವೇಶಿಸಿದಾಕ್ಷಣ ದುರುಗುಟ್ಟಿ ನೋಡುವಿಕೆ ಆರಂಭವಾಯಿತು. ನನಗಿದು ಸಾಮಾನ್ಯ. ಉದಾತ್ತನ್ನು ಪಾರ್ಕ್ ನಲ್ಲಿದ್ದ ಜಾರುಗುಂಡಿಯ ಮೇಲೆ ಆಡಿಸತೊಡಗಿದೆ. ಅಲ್ಲಿ ವಿವಿಧ ವಯೋಮಾನದ ಹಲವಾರು ಮಕ್ಕಳು ಕೂಡ ಆಡುತ್ತಿದ್ದರು. ಕೆಲ ಕ್ಷಣ ಕಳೆದ ಬಳಿಕ ಮಹಿಳೆಯೊಬ್ಬರು ನನ್ನ ಬಳಿ ಬಂದು “ಸಾರ್ ನೀವು ದೇವಾನಂದ ಸ್ವಾಮಿ ಅಲ್ವಾ?” ಎಂದರು. “ಹೌದು” ಎಂದು ತಲೆಯಾಡಿಸಿದೆ. “ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಸಾರ್” ಎಂದು ಮಾತಿಗಾರಂಭಿಸದರು. ಟಿಎನ್ಎಸ್ ನಿರ್ದೇಶನ, ನಿವೇದಿತಾಳ ತನ್ಮಯತೆ, ಶಾರದಮ್ಮನ ವಾಹ್ ಅನ್ನಿಸುವಂತಹ ನಟನೆ, ಮಧುಸೂದನ್ ನ ಮ್ಯಾನರಿಸಂ ಎಲ್ಲದರ ಬಗ್ಗೆ ಮಾತುಕತೆ ಸಾಗುತ್ತಿತ್ತು. ಈ ಮಾತುಕತೆ ನಡೆಯುವಾಗ ನನ್ನ ಪಕ್ಕದಲ್ಲಿ ಹುಡುಗನೊಬ್ಬ ಬಂದು ನಿಂತುಕೊಂಡಿದ್ದ. ನನ್ನ ಅಭಿಮಾನಿಯಿರಬೇಕು ಎಂದು ನಾನು ಕೂಡ ಸುಮ್ಮನಿದ್ದೆ. ಆತನನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ಆದರೆ ಆ ಹುಡುಗನಲ್ಲಿ ಏನೋ ಒಂದು ರೀತಿಯ ಚಡಪಡಿಕೆ ಇರುವುದನ್ನು ಗುರುತಿಸಿದೆ. ಬಹುಶಃ ಈತನೂ ನನ್ನನ್ನು ಮಾತನಾಡಿಸಲು ಹವಣಿಸುತ್ತಿರಬೇಕು ಎಂದುಕೊಂಡೆ. ನನ್ನ ಹಾಗೂ ಆ ಮಹಿಳೆಯ ಮಾತು ಮುಂದುವರೆಯುತ್ತಿತ್ತು. ಹುಡುಗನ ಚಡಪಡಿಕೆ ಹೆಚ್ಚುತ್ತಿತ್ತು.

ಹುಡುಗ ಕೊನೆಗೆ ನಮ್ಮಿಬ್ಬರ ಮಾತನ್ನು ತುಂಡರಿಸಿ ಕೇಳಿಯೇ ಬಿಟ್ಟ, “ಅಂಕಲ್, ಸ್ವಲ್ಪ ಆ ಕಡೆ ನಿಂತು ಮಾತಾಡ್ತೀರಾ? ನಮಗಿಲ್ಲಿ ಆಟ ಆಡ್ಬೇಕು”

ಹೇಗಿದೆ ಚಮಕ್?

11 thoughts on “ಕಿರುತೆರೆ ನಟನಿಗೆ ಹೀಗೊಂದು ಚಮಕ್

 1. ರಾಜೇಶ್ ಖನ್ನಾ ಸೂಪರ್ ಸ್ಟಾರ್ ಆಗಿದ್ದ ಸಮಯವದು.
  ಅನೇಕ ಅಭಿಮಾನಿಗಳು ಆತನ ಒಂದು ದರುಶನಕ್ಕಾಗಿ,ಹುಡುಗೀರು ಆತನ ಒಂದೇ ಒಂದು
  ಸ್ಮೈಲ್ ಗಾಗಿ ಮುಗಿಬೀಳುತ್ತಿದ್ದ ಕಾಲ.ಹಾಗಿದ್ದಾಗ ರಾಜೇಶ್ ಖನ್ನಾ ಒಂದು ಪಾರ್ಟಿಗೆ
  ಆಗಮಿಸುತ್ತಾನೆ.ಯಥಾಪ್ರಕಾರ ಫೋಟೋ ಫ್ಲಾಶ್,ಆಟೋಗ್ರಾಪ್ ಮತ್ತು ಹುಡ್ಗೀರ ಮುತ್ತುವಿಕೆ!
  ಅಷ್ಟರಲ್ಲಿ ಪರಿಚಯದವರೊಬ್ಬರು ರಾಜೇಶ್ ಖನ್ನಾಗೆ ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಂದಿಗೆ
  ಪರಿಚಯ ಮಾಡಿಸ್ತಾರೆ.ಈ ಹೊಸದಾಗಿ ಪರಿಚಯಗೊಂಡ ಅಪರಿಚಿತ ವ್ಯಕ್ತಿ ರಾಜೇಶ್ ಖನ್ನಾ ಜೊತೆ ಅದೂ ಇದೂ
  ಮಾತಾಡುತ್ತ ಕೊನೆಗೆ “ನೀವೇನು ಮಾಡ್ಕೊಂದಿದೀರಿ ಮಿ.ರಾಜೇಶ್..?” ಅಂತ ಕೇಳಿ ಬಿಡೋದೇ..
  ಸೂಪರ್ ಸ್ಟಾರ್ ಸುಸ್ತು.
  ಇದನ್ನೆಲ್ಲ ಗಮನಿಸುತ್ತಿದ್ದ ಪರಿಚಯ ಮಾಡಿಸಿ ಕೊಟ್ಟ ವ್ಯಕ್ತಿ ತೀವ್ರ ಮುಜುಗರಕ್ಕೀಡಾಗಿ
  ಏನು ಹೇಳಬೇಕೆಂದು ಒದ್ದಾಡುತ್ತಿದ್ದಾಗ,ಕೊನೆಗೆ ರಾಜೇಶ್ ಖನ್ನಾನೇ ಅವನಿಗೆ ಸಮಾಧಾನ ಪಡಿಸುತ್ತಾ ಹೇಳಿದನಂತೆ:
  “ಹೋಗ್ಲಿ ಬಿಡಿ ಕಣ್ರೀ..ಅವಾಗಾವಾಗ ನಮಗೆಲ್ಲ ಇಂಥ ಅನುಭವ ಆಗ್ತಾ ಇರಬೇಕು..ಆವಾಗಲೇ ನಾವು ಇನ್ನೂ ಇಲ್ಲೇ ಇದೀವಿ ಅನ್ನೋದು ನಮಗೇ ಗೊತ್ತಾಗ್ತಾ ಇರುತ್ತೆ..”
  🙂
  ನಿಮ್ಮ ಪ್ರಾಮಾಣಿಕ ಅನಿಸಿಕೆ ಓದಿದಾಗ ಇದು ನೆನಪಿಗೆ ಬಂತು.ಇಷ್ಟವಾಯ್ತು ನಿಮ್ಮ ಪುಟ್ಟ ಬರಹ…
  May god bless you.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.