ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….

ನಿಜ. ಕಳೆದ ಸುಮಾರು ಐದು ತಿಂಗಳಿನಿಂದ ಬ್ಲಾಗ್ ಅಪ್ಡೇಡ್ ಮಾಡಲು ಆಗಲಿಲ್ಲ. ಕಾರಣ ಇಷ್ಟೇ. ಚ್ಯಾನಲ್ ನಲ್ಲಿ ತುಂಬಾ ತುಂಬಾ ತುಂಬಾ ಕೆಲಸವಿತ್ತು. ಈಗ ಇಲ್ಲ ಅಂತಲ್ಲ. ಈಗಲೂ ಇದೆ. ಆದರೆ ಅದರ ನಡುವೆಯೇ ಹೇಗೋ ಸಮಯ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ದೇವರಾಣೆಗೂ ನಿತ್ಯವೂ ಬ್ಲಾಗ್ ಅಪ್ ಡೇಟ್ ಮಾಡುತ್ತೇನೆ ಎಂದು ಖಂಡಿತ ಹೇಳುವುದಿಲ್ಲ.

ನಾನು ಮೊದಲು ಅಂದುಕೊಂಡಿದ್ದು ಮೇನ್ ಸ್ಟ್ರೀಮ್ ಜರ್ನಲಿಸಂನಿಂದ 1 ವರ್ಷ ಬ್ರೇಕ್ ತೆಗೆದುಕೊಳ್ಳುತ್ತೇನೆ ಅಂದು. ಆದರೆ ಒಟ್ಟು ಬ್ರೇಕ್ ತೆಗೆದುಕೊಂಡಿದ್ದು ಸುಮಾರು ಎರಡೂವರೆ ವರ್ಷ. ಈ ಎರಡೂವರೆ ವರ್ಷದ ಅವಧಿಯಲ್ಲಿ ಮಾಧ್ಯಮ ತುಂಬಾ ತುಂಬಾ ಬದಲಾಗಿದೆ ಹಾಗೂ ಈ ಬದಲಾವಣೆ ನನಗೆ ತೀವ್ರ ಬೇಸರ ತಂದಿದೆ. ಕಾರಣ ಇಷ್ಟೇ, ಬದಲಾವಣೆ ಒಳ್ಳೆಯಾದಾಗಿದ್ದರೆ ಎಂದಿಗೂ ಸ್ವಾಗತಾರ್ಹವೆ. ಆದರೆ ಈಗ ಮಾಧ್ಯಮದಲ್ಲಿ ಆಗಿರುವ ಮತ್ತು ಆಗುತ್ತಿರುವ ಬದಲಾವಣೆ ದಿಗ್ಭ್ರಮೆ ಮೂಡಿಸಿದೆ. ಒಟ್ಟಿನಲ್ಲಿ ಮಾಧ್ಯಮದ ಪರಿಸ್ಥಿತಿ ಎಲ್ಲ ದೃಷ್ಟಿಯಿಂದಲೂ ಗೊಂದಲಮಯವಾಗಿದೆ. ಎಷ್ಟು ಗೊಂದಲವಾಗಿದೆಯೆಂದರೆ, ಯಾವುದನ್ನು ಬರೆಯಲಿ, ಯಾವುದನ್ನು ಬಿಡಲಿ ಎಂಬುದು ನನಗೇ ಗೊತ್ತಾಗ್ತಾ ಇಲ್ಲ. ಏನು ಬರೆದರೂ ತಪ್ಪಾಗಬಹುದು, ಬರೆಯದಿದ್ದರೆ ನನಗೆ ಸಮಾಧಾನವಿಲ್ಲ.

ಕೊನೆಯಲ್ಲಿ ನಾನು ಹೇಳಬಹುದಾದುದಿಷ್ಟೇ…..

ಕುರುಡು ಕಾಂಚಾಣ ಕುಣಿಯುತ್ತಲಿತ್ತು ಕಾಲಿಗೆ ಬಿದ್ದವ್ರ ತುಳಿಯುತ್ತಲಿತ್ತು….

ಕುರುಡು ನಾಯಿ ತಾ ಸಂತೆಗೆ ಬಂತಂತೆ…

ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….

ಸ್ನೇಹ ಮಾಡಬೇಕಿಂಥವಳ…

ಸೋರುತಿಹುದು ಮನೆಯ ಮಾಳಿಗೆ….

ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ….

ಎನಗೂ ಆಣೆ ರಂಗ ನಿನಗೂ ಆಣೆ….

ನಂಬರು ನಚ್ಚರು ಬರಿದೇ ಕರೆವರು….

ಹಜಾರೊಂ ಖ್ವಾಂಯಿಷೇ ಐಸೀ ಕೆ ಹರ್ ಖ್ವಾಯಿಷ್ ಪೆ ದಮ್ ನಿಕಲೆ….

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ….

ಆಗಾಗ ಬರೆಯುತ್ತಿರುತ್ತೇನೆ……

ವಿಶ್ವಾಸಿ

ಸುಘೋಷ್

Advertisements

3 thoughts on “ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ….

  1. ಸುಘೋಷ್, ತಾವೇ ಹೇಳಿರೋ ಹಾಗೆ ಏನ್ ಬರೆದರೂ ತಪ್ಪಾಗಬಹುದು. ಹಾಗಿದ್ಮೇಲೆ ಗೊಂದಲ ಯಾಕೆ..? ಏನೇ ಬರೆದರೂ ತಪ್ಪು ಹುಡುಕೋರು ಇದ್ದೇ ಇರ್ತಾರೆ.. ನೀವು ಸತ್ಯ ಏನಿದೆ ಅದನ್ನೇ ಬರಿಯೋದು ಸರಿಯಲ್ವ.? ಅದರರ್ಥ ತಾವು ಸುಳ್ಳನ್ನ ಬರಿತಿರಿ ಅಂತಲ್ಲ… ಸತ್ಯವನ್ನ ಮರೆಯಲ್ಲಿಟ್ಟು ಮನಸ್ಸಿಗೆ ಅಸಮಾಧಾನ ಮಾಡುವ ಬದಲು ನಿಜವೆನಿಸಿದ್ದನ್ನ ಬರೆದು ಸತ್ಯವನ್ನ ನಮಗೆ ತೋರಿಸುವುದು ನಿಮ್ಮ ಮನಸ್ಸಿಗೂ ಸಮಾಧಾನ ಮಾಡಿಕೊಳ್ಳುವುದು ಉತ್ತಮ ಎಂದು ನನ್ನ ಅನಿಸಿಕೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s