ಪೆಟ್ರೋಲ್ ದರ ಹೆಚ್ಚಾಗಿದೆ ನಿಜ, ಆದರೆ ಬಸ್ ಸುಡೋದು ಯಾವ ನ್ಯಾಯ?

representation purpose only

ಹದಿನಾರಾಣೆ ಸತ್ಯ. ಪೆಟ್ರೋಲ್ ದರ ಏರಿಸಿರುವುದು ಖಂಡಿತ ಖಂಡನೀಯ. ಕೇಂದ್ರ ಸರ್ಕಾರದ ದರಿದ್ರ ಧೋರಣೆ, ಜನರನ್ನು ಮೂರ್ಖರನ್ನಾಗಿಸುವ ರಾಜ್ಯಸರ್ಕಾರಗಳ ತೆರಿಗೆ ನೀತಿ ಎರಡಕ್ಕೂ ವಿರೋಧವಿದೆ. ಆದರೆ, ಬಂದ್ ಹೆಸರಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಮೂರು ಬಸ್ ಗಳನ್ನು ಸುಡಲಾಗಿದೆ. ಬಸ್ ನಲ್ಲಿ ಮಲಗಿದ್ದ ಮಹ್ಮದ್ ಹನೀಫ್ ಎಂಬ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಬಸ್ ಗೆ ಕಲ್ಲು ತೂರಲಾಗಿದೆ. ಬಂದ್ ಮಾಡಿದರೇ ಸಾಕು, ಆದ್ರೆ ಬಂದ್ ಹಿಂಸಾತ್ಮಕವಾಗಿ ಏಕಿರಬೇಕು? ಹಿಂಸಾತ್ಮಕವಾಗಿ ಬಂದ್ ಆದರೆ ಮಾತ್ರ ಬಂದ್ ಸಫಲ ಎಂಬ ಮನೋಭಾವವೇಕೆ? ಬಂದ್ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂತಿದ್ದರೂ, ಮಧ್ಯರಾತ್ರಿಯೇ ಬಸ್ ಸುಟ್ಟಿರುವ ಮರ್ಮವಾದರೂ ಏನು? ಆಕ್ರೋಶ ಕೇಂದ್ರ ಸರ್ಕಾರದ ರಾಜಕೀಯ, ರಾಜ್ಯ ಸರ್ಕಾರಗಳ ಜಾಣ ಕುರುಡಿನ ಬಗ್ಗೆಯಿರಲಿ. ಬಸ್ ಗಳ ಮೇಲೆ ಅಲ್ಲ….

ಈ ಉತ್ತರಗಳಿಂದ ಆನಂದವಾಯಿತು

…………….

ಇತ್ತೀಚೆಗೆ ಸಿರಸಿಯಲ್ಲಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಟಾಪರ್ ಗಳ ಜೊತೆ ಸಂವಾದ ನಡೆಸುವ ಅವಕಾಶ ಒದಗಿತ್ತು. ನಾನು ಮಾತನಾಡುತ್ತ, “ಕೇವಲ ಮೆಡಿಕಲ್, ಇಂಜಿನಿಯರಿಂಗ್ ಫೀಲ್ಡ್ ಗಳು ಮಾತ್ರವಲ್ಲ, ಬೇರೇ ಫೀಲ್ಡ್ ಗಳೂ ಇವೆ. ನಿಮಗೆ ಡಾಕ್ಟರ್, ಇಂಜಿನಿಯರ್ ಆಗ್ಬೇಕು ಅಂತಿದ್ರೆ ಖಂಡಿತ ಆಗಿ. ಆದ್ರೆ, ನಿಮ್ಮ ಪಕ್ಕದ ಮನೆಯವ ಅದನ್ನ ಆಯ್ಕೆ ಮಾಡಿಕೊಳ್ಳುತ್ತಾನೆಂದೋ ಅಥವಾ ನಿಮ್ಮ ಸ್ನೇಹಿತರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂದೊ, ನೀವು ಕುರಿಯಂತೆ ಮಂದೆಯನ್ನು ಅನುಸರಿಸಬೇಡಿ. ಥ್ರೀ ಈಡಿಯಟ್ಸ್ ನಲ್ಲಿಯ ಚತುರ್ ರಾಮಲಿಂಗಂ ಕಥೆ ನಿಮ್ಮದಾಗದಿರಲಿ. ಫುಂಗ್ ಸುಕ್ ವಾಂಗ್ಡು ಆಗಿ, ಸತ್ಯಮೇವ ಜಯತೇ ನಿರ್ದೇಶಿಸಿ” ಅಂದೆ.

ಆನಂದದ ಸಂಗತಿ ಅಂದರೆ, ಸುಮಾರು 12 ವಿದ್ಯಾರ್ಥಿಗಳಲ್ಲಿ, ಮೂವರು ಜರ್ನಲಿಸ್ಟ್, ಸಿಎ ಹಾಗೂ ವಿಜ್ಞಾನಿ ಆಗುವ ಗುರಿ ಇದೆ ಅಂದ್ರು. ಉತ್ತರ ಕೇಳಿ ಆನಂದವಾಯಿತು.

Infertility gene may lead to pill for men

LONDON: Scottish scientists have discovered a gene that plays a key role in production of healthy sperm, a breakthrough that could soon pave the way for developing a new contraceptive pill for men.

In experiments on mice, researchers at the Centre for Reproductive Health at the University of Edinburgh found a gene, called Katnal1, which was vital for the final stages of sperm production.

Detailing their findings in the journal PLos Genetics, the team said a drug which interrupts Katnal1 could be a reversible contraceptive.

They were investigating the causes of male infertility, for which they randomly altered the genetic code of mice to see which became infertile . They traced the mutations causing infertility, which led them to find Katnal 1. It contains the blueprints for a protein which is important in cells that support sperm making. Without the protein, sperm do not fully form and the body disposes of them.

They hoped they would be able to perform a similar trick in humans to stop sperm developing, without causing lasting damage.

(ಇಂಟರ್ನೆಟ್ ಕೃಪೆ)

ಕೊಡಗಿನಲ್ಲಿ ಕುಂಡೆ ಹಬ್ಬ

ಕೊಡಗಿನ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಗಿರಿಜನರು ಆಚರಿಸುವ ಕುಂಡೆ ಹಬ್ಬ ನಿನ್ನೆ ನಡೆಯಿತು. ಈ ಹಬ್ಬದಲ್ಲಿ ಗಂಡಸರು ಹೆಂಗಸಿನ ವೇಷ ತೊಡ್ತಾರೆ. ಕೈಯಲ್ಲಿ ಒಂದು ಬುರುಡೆ ಹಿಡಿದು ಕುಂಡೆ ಹಾಡನ್ನ ಹಾಡ್ತಾ ಎಲ್ಲರಿಂದಲೂ ಹಣ ವಸೂಲಿ ಮಾಡ್ತಾರೆ. ಹಣ ನೀಡದಿದ್ದಲ್ಲಿ ಅವರಿಗೆ ಬೈಗುಳದ ಸುರಿಮಳೆ. ಹೀಗಾಗಿ ಇದು ಬೈಗುಳದ ಹಬ್ಬ ಅಂತಲೂ ಫೇಮಸ್. ಸಾವಿರಾರು ಗಿರಿಜನರು ಸೇರಿ ಈ ಹಬ್ಬವನ್ನ ಆಚರಿಸಿದ್ರು.

(ಇಂದು ಸಮಯ ದಲ್ಲಿ ಪ್ರಸಾರವಾದ ಸುದ್ದಿ)

 

ಆಂಧ್ರದ ಪೆನುಗೊಂಡದಲ್ಲಿ ರೈಲು ಅಪಘಾತ, ತುರ್ತು ಸಂಪರ್ಕ ಸಂಖ್ಯೆ ಇಲ್ಲಿದೆ

 

ಆಂಧ್ರದ ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಮುಂಜಾನೆ ೩.೪೫ ಕ್ಕೆ ಹಂಪಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದೆ. ತುರ್ತು ಸಂಪರ್ಕ ಸಂಖ್ಯೆ ಹೀಗಿದೆ –

ಬೆಂಗಳೂರು – 080 – 22321166, 22156653

ಹುಬ್ಬಳ್ಳಿ – 0836 – 2345338, 2346141, 2289826

ಬಳ್ಳಾರಿ – 08392 – 277704

ಹೊಸಪೇಟೆ – 08394-2217881

ನೈಜ ಸುದ್ದಿ ಸಾಯುವುದೇ ಹೀಗೆ

……………

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡರೂ, ಆಲಸಿ ಡಾಕ್ಟರ್, ನರ್ಸ್ ಗೆ ಹೇಳಿ ರಾತ್ರಿಯಿಡೀ ಗರ್ಭಿಣಿಗೆ ಡ್ರಿಪ್ಸ್ ಹಾಕಿಸಿದ್ದಾನೆ. ಬೆಳಿಗ್ಗೆ ಹೆರಿಗೆಯಾದರೂ, ಮಗುವಿನ ದೇಹದಲ್ಲಿ ನೀರು ತುಂಬಿಕೊಂಡದ್ದರಿಂದ ಅದು ಮೃತಪಟ್ಟಿದೆ. ಕೆರಳಿದ ಸಂಬಂಧಿಗಳು ಆಲಸಿ ಡಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯ ಬಾಡಿದ ಮುಖ ಹೇಳಲಾರದ ನೋವನ್ನು ಹೊರಹಾಕುತ್ತಿದೆ. ಇದು ಸುದ್ದಿ.

ಇದಕ್ಕೆ ಸಂಬಂಧಪಟ್ಟಂಟೆ ಆಂಕರ್ ದೂರವಾಣಿ ಮುಖಾಂತರ ಮೃತಪಟ್ಟ ಶಿಶುವಿನ ತಂದೆಯೊಡನೆ ಮಾತನಾಡುತ್ತಿದ್ದಾರೆ. ತಂದೆ, ಸಂಕಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ರಾಜ್ಯದ ಪ್ರಮುಖ ಬರಗೆಟ್ಟ ಪಾರ್ಟಿಯ ಬರಗೆಟ್ಟ, ತಲೆಹಿಡುಕ ರಾಜಕಾರಣಿಯೊಬ್ಬ ಪ್ರೆಸ್ ಕಾನ್ಫರೆನ್ಸ್ ಆರಂಭಿಸುತ್ತಾನೆ. ದಿಢೀರನೇ, ತಂದೆಯ ಫೋನೋ ಕಟ್ ಮಾಡಿ, ಈ ದರಿದ್ರ ರಾಜಕಾರಣಿಯ ಪ್ರೆಸ್ ಕಾನ್ಫರೆನ್ಸ್ ಲೈವ್ ಮಾಡಲಾಗುತ್ತದೆ.

ನೈಜ ಸುದ್ದಿ ಸಾಯುವುದೇ ಹೀಗೆ…

ಇಂದು ಎಸ್ಎಸ್ಎಲ್ಸಿ ಫಲಿತಾಂಶ, ಬೇಡ ಯಾವುದೇ ದುಗುಡ-ಕ್ಲೇಶ

Every cloud has sliver lining….

ಇಂದು ಎಸ್ಎಸ್ಎಲ್ಸಿ ಫಲಿತಾಂಶ. ಟೀನೇಜ್ ಹೃದಯಗಳಲ್ಲಿ ಹೇಳಿಕೊಳ್ಳಲಾಗದ ತಳಮಳ. ಎಲ್ಲರಿಗೂ ಆಲ್ ದಿ ಬೆಸ್ಟ್. ಜೊತೆಗೆ ಒಂದು ಸ್ಮಾಲ್ ರಿಕ್ವೆಸ್ಟ್.

ನೆಚ್ಚಿನ ವಿದ್ಯಾರ್ಥಿಗಳಿಗೆ – ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿಗೆ ಮಾರ್ಕ್ಸ್ ಬಂದರೆ, ನೀವು ನಡೆಸುವ ಪಾರ್ಟಿಗೆ ನನ್ನನ್ನೂ ಕರೆಯಿರಿ. ಕಡಿಮೆ ಮಾರ್ಕ್ಸ್ ಬಂದರೆ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಿರಿ. ಹತ್ತನೆ ತರಗತಿ ಬದುಕಿನ ಒಂದು ಘಟ್ಟವೇ ಹೊರತು, ಸಂಪೂರ್ಣ ಬದುಕಲ್ಲ. ನಮಗೆ ಸಿಕ್ಕಿರುವ ಅತ್ಯಂತ ದೊಡ್ಡ, ಮನಮೋಹಕ, ಅಮೂಲ್ಯ ಗಿಫ್ಟ್ ಅಂದರೆ ಅಧು ಬದುಕು. ಇಂತಹ ಗಿಫ್ಟ್ ಅನ್ನು ಕಳೆದುಕೊಳ್ಳುವ ಯೋಚನೆನ್ನೂ ಮಾಡಬೇಡಿ. ಗೆಳೆಯರು, ತಂದೆ-ತಾಯಿಗಳ, ಬಂಧುಗಳ ಒತ್ತಾಯಕ್ಕೆ ಮಣಿದು ಯಾವುದೋ ಒಂದು ಕೋರ್ಸ್ ಗೆ ಜೋತು ಬೀಳದಿರಿ. ನಿಮಗೆ ವಿಜ್ಞಾನ ಬೇಕಿದ್ದರೆ ಖಂಡಿತ ಆಯ್ಕೆ ಮಾಡಿಕೊಳ್ಳಿ. ಆದರೆ ಕಲೆ, ವಾಣಿಜ್ಯ, ಡಿಪ್ಲೋಮಾದಲ್ಲಿ ವಿಜ್ಞಾನಕ್ಕಿಂತ ಚೆಂದವಾದ ಸಬ್ಜೆಕ್ಟ್ ಗಳಿವೆ ಎಂಬುದು ಗಮನದಲ್ಲಿರಲಿ. ಆಲ್ ದಿ ಬೆಸ್ಟ್…!

ತಂದೆ-ತಾಯಿಗಳಿಗೆ – ದಯವಿಟ್ಟು ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಅವಮಾನ ಮಾಡಬೇಡಿ. ಹಾಗೆಯೇ ಇದೇ ಕೋರ್ಸ್ ತೆಗೆದುಕೊ ಇಂದು ಬಲವಂತ ಮಾಡಬೇಡಿ. ಮಕ್ಕಳ ಮನಸ್ಸು ಹೂವಿದ್ದ ಹಾಗೆ. ಒಮ್ಮೆ ಮುದುಡಿದರೆ, ಮತ್ತೆ ಅರಳುವುದು ತೀರ ಕಠಿಣ. ನೀವು ಸಾಧಿಸಿದ್ದನ್ನು ನಿಮ್ಮ ಮಗ/ಮಗಳು ಸಾಧಿಸದಿರಲಿ. ಬದಲಾಗಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲಿ.

ಬದುಕು ಹಿಮ್ಮುಖವಾಗಿ ಹರಿಯದಿರಲಿ.

 

ಹೊಲಸು ರಾಜಕೀಯದಲ್ಲಿ ಬಿಝಿಯಾಗಿರುವಾಗ ಇದೆಲ್ಲ ಗಮನಕ್ಕೆ ಬರುತ್ತದೆಯೆ?

…………..

ಇಂದು ‘ಸಮಯ’ದಲ್ಲಿ ಪ್ರಸಾರವಾದ ಸುದ್ದಿ ಇದು.

ಗುಲ್ಬರ್ಗಾದಲ್ಲಿ ಪಿಡಿಓ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಂಚಾಯತಿ ಸದಸ್ಯರು ಹಾಗೂ ಶಾಸಕರ ಕಿರುಕುಳ ತಾಳಲಾರದೆ ಸೇಡಂ ತಾಲೂಕಿನ ಕಾನಾಗಡ್ಡ ಗ್ರಾಮದಲ್ಲಿ ಪಿಡಿಓ ಪ್ರಸನ್ನಾತ್ಮ ಆತ್ಮಹತ್ಯೆಗೆ ಮುಂದಾಗಿದ್ರು ಉದ್ಯೋಗ ಖಾತ್ರಿ ಯೋಜನೆಯನ್ನುಯಶಸ್ವಿಗೊಳಿಸಲು, ಪಿಡಿಓ ಪ್ರಸನ್ನಾತ್ಮ ಅನೇಕಬಾರಿ ಪಂಚಾಯತಿ ಸದಸ್ಯರಿಗೆ ಹೇಳಿದ್ರು. ಆದ್ರೆ, ಅದಕ್ಕೆ ಒಪ್ಪದಸದಸ್ಯರು ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಕೆಲಸ ಮಾಡುವಂತೆಪೀಡಿಸುತ್ತಿದ್ದರಂತೆ. ಕೆಲವರು ಪ್ರಾಣ ಬೆದರಿಕೆಕೂಡ ಹಾಕಿದ್ದರಂತೆ. ಇದರಿಂದ ನೊಂದ ಪ್ರಸನ್ನಾತ್ಮ, ನಿನ್ನೆ ಪತ್ರ ಬರೆದಿಟ್ಟು ನಿದ್ದೆ ಮಾತ್ರೆ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸನ್ನಾತ್ಮ ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಧೋಳ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ರಾಜಕೀಯ ನೋಡಿದ್ರೆ, ಅಸಹ್ಯ ಆಗತ್ತೆ…

ಖುದಾ ಬಚಾಯ್ ಇಸ್ ಜಮೀನ್ ಕೋ

ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯ ನೋಡಿದ್ರೆ ನಿಜಕ್ಕೂ ವಾಕರಿಕೆ ಬರತ್ತೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ನಾವು ಈ ಜನಪ್ರತಿನಿಧಿಗಳನ್ನ ಕಳಿಸಿದ್ರೆ, ಇವ್ರು ಮಾಡ್ತಾ ಇರೋದು ರೆಸಾರ್ಟ್ ರಾಜಕೀಯ, ರಾಜೀನಾಮೆ ಬೆದರಿಕೆ, ಸರ್ಕಾರ ಬೀಳಿಸುವ ಹುನ್ನಾರ. ಈ ಜನ ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಸಮಯ ವ್ಯಯಿಸಿದ್ದು, ರಾಜಕಾರಣಕ್ಕೆ, ಕುರ್ಚಿ ಕಚ್ಚಾಟಕ್ಕೆ. ಇಂತಹವರಿಗೆ ವೋಟ್ ಹಾಕಲು ಅಸಹ್ಯವೆನಿಸುತ್ತದೆ. ಅವಧಿಗೂ ಮೊದಲು ಚುನಾವಣೆಗೆ ಹೋಗಲು ತಹತಹಿಸುತ್ತಿರುವ ಇವರಿಗೆ ಸ್ವಲ್ಪವೂ ನಾಚಿಕೆಯೆನಿಸುವುದಿಲ್ಲವೆ? ಭೀಕರ ಬರಗಾಲ, ಹಾವೇರಿಯ ಕನಕ ಹತ್ತಿ ಬೀಜದ ಗಲಾಟೆ, ಅನಿಯಮಿತ ಲೋಡ್ ಶೆಡ್ಡಿಂಗ್, ಆರ್ ಟಿ ಓ ಗಳಲ್ಲಿ ರಾರಾಜಿಸುತ್ತಿರುವ ಲಂಚಗುಳಿತನ, ರೈತರ ಸರಣಿ ಆತ್ಮಹತ್ಯೆ ಇವ್ಯಾವುದೂ ಇವರ ಪ್ರಯಾರಿಟಿಗಳು ಅಲ್ಲವೆ? ಇನ್ನೂ ಹೆಚ್ಚು ಬೇಜಾರಾಗುವುದು, ಈ ಪಾರ್ಟಿಯವರು ತಾವು ಆರ್ಎಸ್ಎಸ್ ಮೂಲದ ಶಿಸ್ತಿನ ಸಿಪಾಯಿಗಳು ಎಂದು ಬೊಂಬಡಾ ಬಜಾಯಿಸುವುದು.  Shame on these politicians!!

ಮತದಾನದಂದು ವೋಟ್ ಹಾಕದ ನಗರದ ಸೊಫಿಸ್ಟಿಕೇಟೆಡ್ ಜನ, ಹಣಕ್ಕಾಗಿ ತಮ್ಮ ವೋಟ್ ಮಾರಿಕೊಳ್ಳುವ ಹೊಲಸು ಜನರ ಮಧ್ಯೆ ಪ್ರಜಾಪ್ರಭುತ್ವದ ಆಶಯಗಳು ಈಡೇರುವುದೆ?

ವಿಜಯನಗರ ಬಿಂಬದ ಚಿಣ್ಣರ ಚಾವಡಿಯ ಒಂದು ಕ್ಷಣ

ವಿಜಯನಗರ ಬಿಂಬದಲ್ಲಿ ಮೂರುದಿನಗಳ ಮೀಡಿಯಾ ಹಬ್ಬ ನಡೆಯಿತು. ಪ್ರಿಂಟ್  ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಬಗ್ಗೆ ಮಕ್ಕಳ ಜೊತೆ ಚರ್ಚಿಸಿದೆ. ಅದರ ಒಂದು ಫೋಟೋ ಇಲ್ಲಿದೆ. ಇನ್ನಷ್ಟು ಫೋಟೋಗಳು ಶೀಘ್ರದಲ್ಲಿಯೇ.

lights…camera…action

ಆಂಕರ್ ಗಳು ಹೀಗೂ ಪ್ರಶ್ನೆ ಕೇಳುತ್ತಾರೆ…

ಕನ್ನಡ ನ್ಯೂಸ್ ಚ್ಯಾನಲ್ ಗಳ ಕೆಲ ಆಂಕರ್ ಗಳ ಲೆವೆಲ್ ಹೇಗಿದೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಸೋ ಕಾಲ್ಡ್ ಅತ್ಯಂತ ಪ್ರಖ್ಯಾತ ಚ್ಯಾನಲ್ ನಲ್ಲಿ ಕ್ರೈಮ್ ಗೆ ಸಂಬಂಧಪಟ್ಟ ಬ್ರೇಕಿಂಗ್ ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ರಿಪೋರ್ಟರ್ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದ. ಆಗ ಫಿಮೇಲ್ ಆಂಕರ್ ಆತನಿಗೆ ಕೇಳಿದ ಪ್ರಶ್ನೆ, “ಓಕೆ, ಈಗ ಹೆಣದ ಪರಿಸ್ಥಿತಿ ಹೇಗಿದೆ?”

 

ನೀರಿನ ರುಚಿ ಬದಲಾಗಿದೆ

ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದೆ. ನಾನು ಅಲ್ಲಿ ಕಳೆದಿರುವುದು ಸುಮಾರು 22 ವರ್ಷ. ಬೆಳಗಾವಿ ನೀರು ಕುಡಿದು ಬೆಳೆದವನು. ಸದಾ ಸಿಹಿ ಸಿಹಿಯಾಗಿರುತ್ತಿದ್ದ ನೀರು ಈ ಬಾರಿ ಮಾತ್ರ ಯಾಕೋ ಸ್ವಲ್ಪ ಬೇರೆಯಾಗಿದೆ ಅನಿಸಿತು. ರುಚಿಯಲ್ಲಿ ಏನೋ ವ್ಯತ್ಯಾಸ. ಸಿಹಿ ಕಡಿಮೆಯಾದ ಅನುಭವ. ಸ್ನೇಹಿತನ್ನ ಕಾರಣವೇನೆಂದು ಕೇಳಿದೆ, “ಇಲ್ಲೀಮಟ ರಾಕಸ್ಕೋಪ್ ನೀರ್ ಕೊಡ್ತಿದ್ರು. ಈಗ ಚೋವೀಸ್ ತಾಸ್ ಪಾಣಿ (24 ಗಂಟೆ ನೀರು) ಅಂತ ಹೇಳಿ ಹಿಡಕಲ್ ಡ್ಯಾಮ್ ನೀರ್ ಬಿಡಾಕ್ ಹತ್ಯಾರ. ನೀ ಈಗ ಕುಡದದ್ದು ಹಿಡಕಲ್ ಡ್ಯಾಮ್ ನೀರು” ಅಂದ. ಬೆಳಗಾವಿಯಲ್ಲಿ ನೀರು ಸರಬರಾಜು ಖಾಸಗೀಕರಣಗೊಂಡಿದೆ. ಸಧ್ಯಕ್ಕೇನೋ ಚೋವೀಸ್ ತಾಸ್ ಪಾಣಿ ಬರುತ್ತಿದೆ. ಆದರೆ, ನೀರು ಸರಬರಾಜು ಖಾಸಗೀಕರಣಗೊಂಡಿರುವುದರಿಂದ ಮುಂದೆ ಇದೇ ರೀತಿ ನೀರು ಬರುತ್ತದೆಯೆಂಬ ಗ್ಯಾರಂಟಿ ಮಾತ್ರ ಕೊಂಚವೂ ಇಲ್ಲ. ಬೆಳಗಾವಿ ಬದಲಾಗುತ್ತಿದೆ. ಆ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ.