ರಾಜ್ಯ ರಾಜಕೀಯ ನೋಡಿದ್ರೆ, ಅಸಹ್ಯ ಆಗತ್ತೆ…

ಖುದಾ ಬಚಾಯ್ ಇಸ್ ಜಮೀನ್ ಕೋ

ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯ ನೋಡಿದ್ರೆ ನಿಜಕ್ಕೂ ವಾಕರಿಕೆ ಬರತ್ತೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ನಾವು ಈ ಜನಪ್ರತಿನಿಧಿಗಳನ್ನ ಕಳಿಸಿದ್ರೆ, ಇವ್ರು ಮಾಡ್ತಾ ಇರೋದು ರೆಸಾರ್ಟ್ ರಾಜಕೀಯ, ರಾಜೀನಾಮೆ ಬೆದರಿಕೆ, ಸರ್ಕಾರ ಬೀಳಿಸುವ ಹುನ್ನಾರ. ಈ ಜನ ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಸಮಯ ವ್ಯಯಿಸಿದ್ದು, ರಾಜಕಾರಣಕ್ಕೆ, ಕುರ್ಚಿ ಕಚ್ಚಾಟಕ್ಕೆ. ಇಂತಹವರಿಗೆ ವೋಟ್ ಹಾಕಲು ಅಸಹ್ಯವೆನಿಸುತ್ತದೆ. ಅವಧಿಗೂ ಮೊದಲು ಚುನಾವಣೆಗೆ ಹೋಗಲು ತಹತಹಿಸುತ್ತಿರುವ ಇವರಿಗೆ ಸ್ವಲ್ಪವೂ ನಾಚಿಕೆಯೆನಿಸುವುದಿಲ್ಲವೆ? ಭೀಕರ ಬರಗಾಲ, ಹಾವೇರಿಯ ಕನಕ ಹತ್ತಿ ಬೀಜದ ಗಲಾಟೆ, ಅನಿಯಮಿತ ಲೋಡ್ ಶೆಡ್ಡಿಂಗ್, ಆರ್ ಟಿ ಓ ಗಳಲ್ಲಿ ರಾರಾಜಿಸುತ್ತಿರುವ ಲಂಚಗುಳಿತನ, ರೈತರ ಸರಣಿ ಆತ್ಮಹತ್ಯೆ ಇವ್ಯಾವುದೂ ಇವರ ಪ್ರಯಾರಿಟಿಗಳು ಅಲ್ಲವೆ? ಇನ್ನೂ ಹೆಚ್ಚು ಬೇಜಾರಾಗುವುದು, ಈ ಪಾರ್ಟಿಯವರು ತಾವು ಆರ್ಎಸ್ಎಸ್ ಮೂಲದ ಶಿಸ್ತಿನ ಸಿಪಾಯಿಗಳು ಎಂದು ಬೊಂಬಡಾ ಬಜಾಯಿಸುವುದು.  Shame on these politicians!!

ಮತದಾನದಂದು ವೋಟ್ ಹಾಕದ ನಗರದ ಸೊಫಿಸ್ಟಿಕೇಟೆಡ್ ಜನ, ಹಣಕ್ಕಾಗಿ ತಮ್ಮ ವೋಟ್ ಮಾರಿಕೊಳ್ಳುವ ಹೊಲಸು ಜನರ ಮಧ್ಯೆ ಪ್ರಜಾಪ್ರಭುತ್ವದ ಆಶಯಗಳು ಈಡೇರುವುದೆ?