ಇಂದು ಎಸ್ಎಸ್ಎಲ್ಸಿ ಫಲಿತಾಂಶ, ಬೇಡ ಯಾವುದೇ ದುಗುಡ-ಕ್ಲೇಶ

Every cloud has sliver lining….

ಇಂದು ಎಸ್ಎಸ್ಎಲ್ಸಿ ಫಲಿತಾಂಶ. ಟೀನೇಜ್ ಹೃದಯಗಳಲ್ಲಿ ಹೇಳಿಕೊಳ್ಳಲಾಗದ ತಳಮಳ. ಎಲ್ಲರಿಗೂ ಆಲ್ ದಿ ಬೆಸ್ಟ್. ಜೊತೆಗೆ ಒಂದು ಸ್ಮಾಲ್ ರಿಕ್ವೆಸ್ಟ್.

ನೆಚ್ಚಿನ ವಿದ್ಯಾರ್ಥಿಗಳಿಗೆ – ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿಗೆ ಮಾರ್ಕ್ಸ್ ಬಂದರೆ, ನೀವು ನಡೆಸುವ ಪಾರ್ಟಿಗೆ ನನ್ನನ್ನೂ ಕರೆಯಿರಿ. ಕಡಿಮೆ ಮಾರ್ಕ್ಸ್ ಬಂದರೆ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಿರಿ. ಹತ್ತನೆ ತರಗತಿ ಬದುಕಿನ ಒಂದು ಘಟ್ಟವೇ ಹೊರತು, ಸಂಪೂರ್ಣ ಬದುಕಲ್ಲ. ನಮಗೆ ಸಿಕ್ಕಿರುವ ಅತ್ಯಂತ ದೊಡ್ಡ, ಮನಮೋಹಕ, ಅಮೂಲ್ಯ ಗಿಫ್ಟ್ ಅಂದರೆ ಅಧು ಬದುಕು. ಇಂತಹ ಗಿಫ್ಟ್ ಅನ್ನು ಕಳೆದುಕೊಳ್ಳುವ ಯೋಚನೆನ್ನೂ ಮಾಡಬೇಡಿ. ಗೆಳೆಯರು, ತಂದೆ-ತಾಯಿಗಳ, ಬಂಧುಗಳ ಒತ್ತಾಯಕ್ಕೆ ಮಣಿದು ಯಾವುದೋ ಒಂದು ಕೋರ್ಸ್ ಗೆ ಜೋತು ಬೀಳದಿರಿ. ನಿಮಗೆ ವಿಜ್ಞಾನ ಬೇಕಿದ್ದರೆ ಖಂಡಿತ ಆಯ್ಕೆ ಮಾಡಿಕೊಳ್ಳಿ. ಆದರೆ ಕಲೆ, ವಾಣಿಜ್ಯ, ಡಿಪ್ಲೋಮಾದಲ್ಲಿ ವಿಜ್ಞಾನಕ್ಕಿಂತ ಚೆಂದವಾದ ಸಬ್ಜೆಕ್ಟ್ ಗಳಿವೆ ಎಂಬುದು ಗಮನದಲ್ಲಿರಲಿ. ಆಲ್ ದಿ ಬೆಸ್ಟ್…!

ತಂದೆ-ತಾಯಿಗಳಿಗೆ – ದಯವಿಟ್ಟು ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಅವಮಾನ ಮಾಡಬೇಡಿ. ಹಾಗೆಯೇ ಇದೇ ಕೋರ್ಸ್ ತೆಗೆದುಕೊ ಇಂದು ಬಲವಂತ ಮಾಡಬೇಡಿ. ಮಕ್ಕಳ ಮನಸ್ಸು ಹೂವಿದ್ದ ಹಾಗೆ. ಒಮ್ಮೆ ಮುದುಡಿದರೆ, ಮತ್ತೆ ಅರಳುವುದು ತೀರ ಕಠಿಣ. ನೀವು ಸಾಧಿಸಿದ್ದನ್ನು ನಿಮ್ಮ ಮಗ/ಮಗಳು ಸಾಧಿಸದಿರಲಿ. ಬದಲಾಗಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲಿ.

ಬದುಕು ಹಿಮ್ಮುಖವಾಗಿ ಹರಿಯದಿರಲಿ.