ನೈಜ ಸುದ್ದಿ ಸಾಯುವುದೇ ಹೀಗೆ

……………

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡರೂ, ಆಲಸಿ ಡಾಕ್ಟರ್, ನರ್ಸ್ ಗೆ ಹೇಳಿ ರಾತ್ರಿಯಿಡೀ ಗರ್ಭಿಣಿಗೆ ಡ್ರಿಪ್ಸ್ ಹಾಕಿಸಿದ್ದಾನೆ. ಬೆಳಿಗ್ಗೆ ಹೆರಿಗೆಯಾದರೂ, ಮಗುವಿನ ದೇಹದಲ್ಲಿ ನೀರು ತುಂಬಿಕೊಂಡದ್ದರಿಂದ ಅದು ಮೃತಪಟ್ಟಿದೆ. ಕೆರಳಿದ ಸಂಬಂಧಿಗಳು ಆಲಸಿ ಡಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯ ಬಾಡಿದ ಮುಖ ಹೇಳಲಾರದ ನೋವನ್ನು ಹೊರಹಾಕುತ್ತಿದೆ. ಇದು ಸುದ್ದಿ.

ಇದಕ್ಕೆ ಸಂಬಂಧಪಟ್ಟಂಟೆ ಆಂಕರ್ ದೂರವಾಣಿ ಮುಖಾಂತರ ಮೃತಪಟ್ಟ ಶಿಶುವಿನ ತಂದೆಯೊಡನೆ ಮಾತನಾಡುತ್ತಿದ್ದಾರೆ. ತಂದೆ, ಸಂಕಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ರಾಜ್ಯದ ಪ್ರಮುಖ ಬರಗೆಟ್ಟ ಪಾರ್ಟಿಯ ಬರಗೆಟ್ಟ, ತಲೆಹಿಡುಕ ರಾಜಕಾರಣಿಯೊಬ್ಬ ಪ್ರೆಸ್ ಕಾನ್ಫರೆನ್ಸ್ ಆರಂಭಿಸುತ್ತಾನೆ. ದಿಢೀರನೇ, ತಂದೆಯ ಫೋನೋ ಕಟ್ ಮಾಡಿ, ಈ ದರಿದ್ರ ರಾಜಕಾರಣಿಯ ಪ್ರೆಸ್ ಕಾನ್ಫರೆನ್ಸ್ ಲೈವ್ ಮಾಡಲಾಗುತ್ತದೆ.

ನೈಜ ಸುದ್ದಿ ಸಾಯುವುದೇ ಹೀಗೆ…