ಕನಸು ಪೂರ್ಣಗೊಳ್ಳಲು 8 ವರ್ಷಗಳು ಬೇಕಾದವು

ಅದು 2003. ಬೆಳಗಾವಿಯಿಂದ ಬೆಂಗಳೂರಿಗೆ ಪಿ.ಜಿ. ಮಾಡಲು ಬಂದಿದ್ದೆ. ಬೆಂಗಳೂರಿನ ಥಳಕು ಬಳುಕಿನ ಬದುಕು ಅಕ್ಷರಶಃ ನನ್ನನ್ನು ಕಂಗೆಡಿಸಿತ್ತು. ಇಲ್ಲಿನ ಜನ, ರಸ್ತೆಗಳು, ಮಾತು, ಲೈಟುಕಂಬ, ನನಗೆ ಹಾಡಹಗಲೇ ಅಣಕಿಸಿದ್ದವು. ಬೆಂಗಳೂರು ನನ್ನನ್ನು ಹೀರಿಕೊಳ್ಳಲು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವರ್ಷ. ಭಾರತೀಯ ವಿದ್ಯಾಭವನದಲ್ಲಿ ಪಿ. ಜಿ. ಡಿಪ್ಲೋಮಾ ಇನ್ ಮಾಸ್ ಕಮ್ನೂನಿಕೇಷನ್ ಆಗ ತಾನೇ ಮುಗಿಸಿದ್ದೆ. ಮಾಧ್ಯಮ ರಂಗ ಪ್ರವೇಶಿಸಿಲು ಉತ್ಸುಕನಾಗಿದ್ದೆ. ನ್ಯೂಸ್ ಆಂಕರ್ ಆಗಬೇಕೆಂಬುದು ನನ್ನ ಮಹೋನ್ನತ ಕನಸುಗಳಲ್ಲಿ ಒಂದಾಗಿತ್ತು. ಯಾರೋ ಹೇಳಿದರು, “ಇದಕ್ಕೆಲ್ಲ ಮೊದಲು ಪೋರ್ಟ್ ಫೋಲಿಯೋ ಮಾಡಿಸ್ಕೊಳ್ಳಬೇಕು ಕಣಯ್ಯ” ಅಂತ. ಯಾವುದು ಬೆಸ್ಟ್ ಸ್ಟುಡಿಯೋ ಎಂದು ವಿಚಾರಿಸಿದಾಗ ಎಲ್ಲರಿಂದಲೂ ಒಮ್ಮೆಲೇ ಬಂದ ಹೆಸರು ಜಿ. ಕೆ. ವೇಲ್. ಸರಿ ನಾನು ಹಾಗೂ ದೀಪು (ದೀಪು ಈಗ ಸ್ಟಾಂಡರ್ಜ್ ಚಾರ್ಟರ್ಡ್ ಬ್ಯಾಂಕ್ ನಲ್ಲಿ ಬ್ರಾಂಚ್ ಮ್ಯಾನೇಜರ್) ಜೇಬು ತಡಕಾಡಿಕೊಂಡು ಎಂ. ಜಿ. ರೋಡ್ ನಲ್ಲಿದ್ದ ಜಿ. ಕೆ. ವೇಲ್ ಗೆ ಹೋದೆವು. ನಾನು ಹಿಂಗಿಂಗೆ ನ್ಯೂಸ್ ಆಂಕರ್ ಆಗ್ಬೇಕು ಅಂತಿದ್ದೀನಿ. ಅದಕ್ಕೆ ತಕ್ಕ ಹಾಗೆ ಫೋಟೋ ಬೇಕು ಅಂದೆ. ಓ ಯಸ್ ಅಂದವರೇ, ನನ್ನನ್ನು ಸ್ಟುಡಿಯೋಗೆ ಕಳುಹಿಸಿದರು. ಶಿವು ಎಂಬ ಫೋಟೋಗ್ರಾಫರ್ ನನ್ನ ಫೋಟೋಗಳನ್ನು ತೆಗೆದರು. ನಿಜಕ್ಕೂ ಆ ಫೋಟೋದಲ್ಲಿ ನಾನು ಅಪ್ಪಟ ಆಂಕರ್ ಥರಾನೇ ಕಾಣಿಸ್ತಿದ್ದೆ. ಆದರೆ, ಈ ಫೋಟೋಗಳನ್ನು ಹಿಡಿದುಕೊಂಡು ಅಲೆಯುವ ಪ್ರಸಂಗವೇ ಬರಲಿಲ್ಲ. ಯಾಕೆಂದರೆ ಆಗ ಇದ್ದಿದ್ದೇ ಎರಡು ಚ್ಯಾನಲ್. ಒಂದು ಈ ಟಿವಿ, ಮತ್ತೊಂದು ಉದಯ. ಈ ಟಿವಿಯಲ್ಲಿ ಆಂಕರ್ ಆಗಬೇಕೆಂದರೆ ಹೈದ್ರಾಬಾದ್ ನಲ್ಲಿ ಕೆಲಸ ಮಾಡಬೇಕು. ಆದರೆ ಈಟಿವಿ ಸೇರಿದ ಆರೇ ತಿಂಗಳಿಗೆ ನನ್ನನ್ನು ಬೆಂಗಳೂರಿಗೆ ಎತ್ತಿ ಹಾಕಿದ್ದರು. ಮುಂದೆ ರಿಪೋರ್ಟಿಂಗ್ ನಲ್ಲಿ ಕಳೆದುಹೋಗಿಬಿಟ್ಟೆ. ಈ ಮಧ್ಯೆ ಸೀರಿಯಲ್ ಕೈಹಿಡಿಯಿತು. ನ್ಯೂಸ್ ಆಂಕರ್ ಗಿಂತ ಹತ್ತು ಪಟ್ಟು ಕೀರ್ತಿಯನ್ನು ತಂದು ಕಣ್ಮುಂದೆ ಕೆಡವಿತು. ನಂತರ ‘ಸಮಯ’ ಸೇರಿ ಮತ್ತೆ ಮಾಧ್ಯಮ ರಂಗ ಮರುಪ್ರವೇಸಿಸಿದಾಗ ಅಂತೂ ಇಂತೂ ಆಂಕರ್ ಆದೆ. ಅಂದು ಜಿ. ಕೆ. ವೇಲ್ ಸ್ಟುಡಿಯೋದಲ್ಲಿ ಹಾಕಿಕೊಂಡಿದ್ದ ಅದೇ ಕೋಟ್ ಹಾಕಿಕೊಂಡು 8 ವರ್ಷಗಳ ಬಳಿಕ ನ್ಯೂಸ್ ರೀಡಿಂಗ್ ಮಾಡಿದಾಗ, “ಆಜ್ ಮೈ ಊಪರ್ ಆಸಮಾಂ ನೀಚೆ” ಅನುಭವ. ಆ ಎರಡೂ ಫೋಟೋಗಳು ಇಲ್ಲಿವೆ. ಅಫ್ ಕೋರ್ಸ್ ಅದೇ ಕೋಟಿನೊಂದಿಗೆ….

(ಅಂದ ಹಾಗೆ ಈ ಕೋಟ್ ಕೂಡ ನನ್ನ ಕಸಿನ್ ಅಣ್ಣ ವಿವೇಕ್ ಹಳಬೆ ನೀಡಿದ್ದು. “ಕೋಟು ಹಳೆಯದಾದರೇನು, ಲುಕ್ಕು ನವನವೀನ…”)

2003 ರಲ್ಲಿ ಜಿ. ಕೆ. ವೇಲ್ ಸ್ಟುಡಿಯೋದಲ್ಲಿ
2012 ರಲ್ಲಿ ಸಮಯ ಸ್ಟುಡಿಯೋದಲ್ಲಿ
Advertisements

10 thoughts on “ಕನಸು ಪೂರ್ಣಗೊಳ್ಳಲು 8 ವರ್ಷಗಳು ಬೇಕಾದವು

  1. ಕನಸಿನ ಮೂಟೆ ಹೊತ್ತು ಮಾಯಾನಗರಿ ಬೆಂಗಳೂರಿಗೆ ಬರುವ ಅನೇಕರಿಗೆ ಈ ಅನುಭವ ಆಗಿರುತ್ತೆ. ಕನಸು ಕೆಲವರಿಗೆ ಬೇಗನೇ ನನಸಾದರೆ, ಇನ್ನೂ ಕೆಲವರಿಗೆ ಸ್ವಲ್ಪ ತಡ… 8 ವರ್ಷಗಳಲ್ಲಿ ಇಷ್ಟೊಂದು ಅನುಭವ ಸಿಕ್ಕಿದೆ ಅಂದ್ರೆ ಅದೇ ಸಂತೋಷ. ಖಂಡಿತಾ ನಿಮ್ಮ ನ್ಯೂಸ್ ಪಿಂಟ್ ಓದುತ್ತೇನೆ. ವೃತ್ತಿ ಬದುಕಲ್ಲಿ ಮತ್ತಷ್ಟು ಉನ್ನತಕ್ಕೇರುವಂತಾಗಲಿ

  2. ಬರೀ ಕೋಟು ಹಾಕಿಕೊಂಡರೆ ಬೆಳೆದಂತೆ ಆಗುವುದಿಲ್ಲ. ಯೋಚನೆಯಲ್ಲೂ, ಕೆಲಸದಲ್ಲೂ ಜವಾಬ್ದಾರಿ, ಪ್ರೌಢಿಮೆ, ನೈತಿಕತೆ ಬೆಳೆಯಬೇಕು. ಆಗ ಅದು ಕನಸ್ಸಿನ ಯಶಸ್ಸು. ಒಳ್ಳೆಯದಾಗಲಿ ನಿಮಗೆ.

    • ಬರೀ ಕೋಟು ಹಾಕಿಕೊಂಡರೆ ಬೆಳೆದಂತೆ ಆಗುವುದಿಲ್ಲ ಎಂಬುದು ನನಗೂ ಗೊತ್ತಿದೆ. ಆ ಅರಿವಿದ್ದರಿಂದಲೇ ಇಷ್ಟು ಬೆಳೆದಿದ್ದೇನೆ, ಇನ್ನೂ ಬೆಳೆಯುತ್ತಿದ್ದೇನೆ ಮುಂದೆ ಇನ್ನೂ ಬೆಳೆಯುವವನಿದ್ದೇನೆ. ಧನ್ಯವಾದ ನಿಮಗೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s