ಆರನೇ ತರಗತಿಯ ಹುಡುಗ ಆ ಸಿಂಬಲ್ ತೋರಿಸಿದನಂತೆ…

picture for representation purpose only

ನನ್ನ ಸ್ಹೇಹಿತೆಯೊಬ್ಬರು ಬೆಂಗಳೂರಿನ ಸೋ ಕಾಲ್ಡ್ ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಕಲಿಸುತ್ತಾರೆ. ಆರನೇ ತರಗತಿಯಲ್ಲಿ ಪಾಠ ಮಾಡುತ್ತಿರಬೇಕಾದರೆ, ಹುಡುಗಿಯೊಬ್ಬಳು ಬಂದು “ಮಿಸ್, ನೋಡಿ ಅವನು ನನಗೆ ‘ಹೀಗೆ’ (ಸಿಂಬಲ್ ತೋರಿಸುತ್ತ) ಮಾಡಿ ತೋರಿಸುತ್ತಿದ್ದಾನೆ” ಎಂದು ಕಂಪ್ಲೇಂಟ್ ಮಾಡಿದಳಂತೆ. ಆಕೆಯ ಸಹಪಾಠಿ ತೋರಿಸಿದ ಸಿಂಬಲ್ ಇಂದು ಸಾಮಾನ್ಯ ಎನ್ನಿಸಿಕೊಂಡಿರುವ FCUK ಸಿಂಬಲ್. ನನ್ನ ಟೀಚರ್ ಸ್ನೇಹಿತೆಯೇನೋ ಹುಡುಗನಿಗೆ ಗದರಿದಳಂತೆ.

ಆದರೆ ಆರನೇ ತರಗತಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಅದೂ ಸೋ ಕಾಲ್ಡ್ ಇಂಟರ್ನಾಷನಲ್ ಶಾಲೆಯಲ್ಲಿ…..? ತಪ್ಪು ಯಾರದ್ದು, ಮಕ್ಕಳಿಗೆ ಬುದ್ಧಿ ಹೇಳಲಾರದ ತಂದೆ-ತಾಯಿಗಳದ್ದಾ? ಲಂಗುಲಗಾಮಿಲ್ಲದೆ ಬೆಳೆಯುತ್ತಿರುವ ಒಟ್ಟಾರೆ ಪರಿಸರದ್ದಾ? ಹುಡುಗರನ್ನು ಹದ್ದುಬಸ್ತಿನಲ್ಲಿಡಲಾರದ ಟೀಚರ್ ಗಳದ್ದಾ? ಶಿಕ್ಷಣ ವ್ಯವಸ್ಥೆಯದ್ದಾ? ಮೌಲ್ಯಗಳನ್ನು ಮರೆತು ಕೇವಲ ಜ್ಞಾನವನ್ನು ತುರುಕುತ್ತಿರುವ ಪದ್ಧತಿಯದ್ದಾ? ಉತ್ತರ ಗೊಜಲುಗೊಜಲಾಗಿದೆ.

Advertisements

6 thoughts on “ಆರನೇ ತರಗತಿಯ ಹುಡುಗ ಆ ಸಿಂಬಲ್ ತೋರಿಸಿದನಂತೆ…

 1. ಎಲ್ಲಾ ವಯಸ್ಸಿನವರಿಗೂ ಸುಲಭವಾಗಿ ಸಿಗುವಂತೆ ಬೇಡದೇ ಇರುವುದನ್ನೆಲ್ಲಾ ತಂದು ಸುರಿಯುತ್ತಿರುವ ಮಾಧ್ಯಮಗಳೂ ಇದಕ್ಕೆ ಕಾರಣ ಅನ್ನಿಸುತ್ತದೆ. ಆತ್ಮವಿಮರ್ಶೆಯ ವಿಷಯ ಇದು ಸುಘೋಷ್ .

 2. ಆಹಾ ಅಜಯ್, ಭಲೇ ಕಣ್ರೀ….ಎಲ್ಲಾ ಅನಿಷ್ಟಕ್ಕೂ ಶನೇಶ್ವರನೇ ಕಾರಣ ಅನ್ನೋ ಹಾಗೆ, ಎಲ್ಲೊ ಒಂದು ಕಡೆ ಮಾಧ್ಯಮವನ್ನು ತುರುಕಬೇಕು ಎಂಬ ತೆವಲು ಯಾಕೆ? ನೀವು ಹೇಳಿದ್ದು ಕರೆಕ್ಟು ಬಿಡಿ. ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು….ನೀವೂ, ನಾವೂ, ಎಲ್ಲರೂ…

  • ಸಂಕೇತ್, ಅದು ತೆವಲಲ್ಲ. ಎಲ್ಲರಿಗೂ ಗೊತ್ತಿರುವ ಸತ್ಯ. ಮಾಧ್ಯಮಗಳೊಂದೇ ಕಾರಣ ಅಂತ ಅಲ್ಲ. ಆದರೆ ಕಾರಣಗಳಲ್ಲಿ ಅವೂ ಒಂದು. ಇಲ್ಲಿ ಮಾಧ್ಯಮ ಅಂದ್ರೆ ಬರೀ ಟೀವಿ, ಪತ್ರಿಕೆಗಳು ಮಾತ್ರ ಅಲ್ಲ. ಇಂಟರ್ನೆಟ್, ಸಿನೆಮಾ ಮುಂತಾದ ಎಲ್ಲವೂ ಬರುತ್ತವೆ.

   ಇಲ್ಲಿ ಸುಘೋಷ್ ಬರೆದಿರುವುದನ್ನೇ ನೋಡಿ. “ಆಕೆಯ ಸಹಪಾಠಿ ತೋರಿಸಿದ ಸಿಂಬಲ್ ಇಂದು ಸಾಮಾನ್ಯ ಎನ್ನಿಸಿಕೊಂಡಿರುವ FCUK ಸಿಂಬಲ್.” ಎಂದು ಬರೆಯುತ್ತಾರೆ. ಅವರು ಹೇಳುವಂತೆ ಈ ಸಿಂಬಲ್ ಯಾವಾಗ ’ಸಾಮಾನ್ಯ’ ಆಯಿತು? ಇದನ್ನು ನೀವು ನಿಮ್ಮ ಮನೆಯಲ್ಲಿ, ಮನೆ ಜನರೊಂದಿಗೆ ಬಳಸುತ್ತೀರಾ? ಸುಘೋಷ್ ಅವರ ಮನೆಯಲ್ಲಿ ಬಳಸುತ್ತಾರಾ? ಆಫೀಸಿನಲ್ಲಿ ಬಳಸುತ್ತಾರಾ? ಯಾರು ಬಳಸುತ್ತಾರೆ? ಇಲ್ಲದಿದ್ದಲ್ಲಿ ಇದು ’ಸಾಮಾನ್ಯ’ ಹೇಗೆ? ಇಲ್ಲಿ ಸಮಾಜದಲ್ಲಿ ಅಸಮ್ಮತವಾದ ನಡವಳಿಕೆಯನ್ನು ’ಇಂದು ಸಾಮಾನ್ಯ ಆಗಿರುವ ಸಿಂಬಲ್’ ಎಂದು ಹಗುರವಾಗಿ ಬರೆಯುತ್ತಾರೆ. ಕೇವಲ ಒಂದು ವರ್ಗದ ಜನರ ತೆವಲುಗಳನ್ನು ನಮ್ಮ ಮಾಧ್ಯಮಗಳು/ಮಾಧ್ಯಮ ವ್ಯಕ್ತಿಗಳು ’ಸಾಮಾನ್ಯ’ ಎಂಬಂತೆ ಎಲ್ಲರ ಮುಂದೆ ತಂದು ಸುರಿದು ಅವುಗಳನ್ನು ಸಾಮಾನ್ಯ ಮಾಡುತ್ತವೆ. ಮಕ್ಕಳು ಅನುಕರಣೆ ಮಾಡುವುದು ಜಾಸ್ತಿ, ಅವರು ಇದನ್ನೇ ಬಲುಬೇಗ ಕಲಿತುಕೊಳ್ಳುತ್ತಾರೆ.

   • ಅಜಯ, ನಿಮಗೆ ಯಾವುದೋ ರೋಗವಿರಬೇಕು. ಮೊಸರಲ್ಲಿ ಕಲ್ಲು ಹುಡುಕುವವರನ್ನು ನೋಡಿದ್ದೇವೆ. ನೀವು ಇಡೀ ಮೊಸರೇ ಕಲ್ಲಿನಿಂದ ಕೂಡಿದೆ ಎಂದು ಹೇಳುತ್ತಿದ್ದೀರಿ. ಯಾವುದೋ ಒಂದು ವಾಕ್ಯವನ್ನು ಹಿಡಿದು, ನಿಮಗೆ ಮನಸ್ಸಿಗೆ ಬಂದಂತೆ ಅದನ್ನು ಅರ್ಥೈಸಿ ಆ ಸಿಂಬಲ್ ಯಾರ ಯಾರ ಮನೆಯಲ್ಲಿ ತೋರಿಸುತ್ತಾರೆ ಅಂತ ನೀವೇ ಕೇಳಿಕೊಂಡು, ಚೀಪ್ ಅನ್ನಿಸಿಕೊಂಡಿದ್ದೀರಿ. ನಿಮ್ಮಂತ ವಿಕೃತ ಮನಸ್ಥಿತಿಯವರಿಗೆ ಧಿಕ್ಕಾರವಿದೆ.

 3. ಸಂಕೇತ್ ಅಂಗಡಿ, ವಿಷಯದ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ವೈಯಕ್ತಿಕ ನಿಂದನೆ ಶುರು ಮಾಡಿ ನಿಮ್ಮ ಬುದ್ದಿಯ ದಿವಾಳಿತನ ಮತ್ತು ದಾರಿದ್ರ್ಯ ತೆರೆದಿಟ್ಟಿದ್ದೀರಿ. ಅದನ್ನು ಕೇಳಿದ ಮಾತ್ರಕ್ಕೇ ನಿಮಗೆ ಇಷ್ಟು ಚೀಪ್ ಅನ್ನಿಸಿದೆ. ಆದರೆ ಅದು ’ಸಾಮಾನ್ಯ ಸಿಂಬಲ್’ ಅಂದಾಗ ಮಾತ್ರ ಚೀಪ್ ಅನ್ನಿಸಲಿಲ್ಲ. ರೋಗ ಯಾರಿಗಿದೆ ಪರೀಕ್ಷೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಮುಂದೊಂದು ದಿನ ನಿಮ್ಮ ಮನೆಯ ಮಕ್ಕಳೇ ಅದು ಸಾಮಾನ್ಯ ಸಿಂಬಲ್ ಎಂದು ತೋರಿಸುವಂತಾದೀತು. ನೆನಪಿರಲಿ. !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s